Breaking News

ಅಡುಗೆ ಅನಿಲ ದರ ಮತ್ತಷ್ಟು ಏರಿಕೆ

ನವದೆಹಲಿ: ಪೆಟ್ರೋಲ್-ಡೀಸೆಲ್ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನರಿಗೆ ಇದೀಗ ಎಲ್ ಪಿಜಿ ಶಾಕ್ ನೀಡಿದೆ. ಅಡುಗೆ ಅನಿಲ ದರ ಮತ್ತಷ್ಟು ಏರಿಕೆಯಾಗಿದ್ದು ದೇಶಾದ್ಯಂತ ಹೊಸ ಪರಿಷ್ಕೃತ ಸಿಲಿಂಡಿರ್ ದರ ಇಂದಿನಿಂದಲೇ ಜಾರಿಗೆ ಬರಲಿದೆ. ಇತ್ತೀಚೆಗಷ್ಟೇ ಅಡುಗೆ ಅನಿಲ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಗ್ರಾಹಕರಿಗೆ ಇದೀಗ ಮತ್ತೆ ಬೆಲೆ ಏರಿಕೆ ಬಿಸಿ ಕೈಸುಟ್ಟುಕೊಳ್ಳುವಂತಾಗಿದ್ದು, ಗ್ಯಾಸ್ ಸಿಲಿಂಡರ್ ದರ 15 ರೂಪಾಯಿ ಹೆಚ್ಚಳ ಮಾಡಲಾಗಿದೆ. ಬೆಲೆ ಏರಿಕೆ ಬಳಿಕ ಕರ್ನಾಟಕದಲ್ಲಿ …

Read More »

ಆನ್‌ಲೈನ್ ಜೂಜಾಟವನ್ನು ನಿಷೇಧಿಸುವ ಕಾನೂನನ್ನು ಕರ್ನಾಟಕ ಅಧಿಸೂಚನೆ

ಬೆಂಗಳೂರು: ಆನ್‌ಲೈನ್‌ ಜೂಜು ಮತ್ತು ಬೆಟ್ಟಿಂಗ್ ನಿಷೇಧಿಸುವ ಕರ್ನಾಟಕ ಪೊಲೀಸ್ ಕಾಯ್ದೆಗೆ ತಿದ್ದುಪಡಿಗಳನ್ನು ರಾಜ್ಯ ಸರ್ಕಾರ ಮಂಗಳವಾರ ಸೂಚಿಸಿದೆ.ಇತ್ತೀಚೆಗೆ ಮುಕ್ತಾಯಗೊಂಡ ಮುಂಗಾರು ಅಧಿವೇಶನದಲ್ಲಿ ಕರ್ನಾಟಕ ಶಾಸಕಾಂಗದ ಉಭಯ ಸದನಗಳಲ್ಲಿ ಅಂಗೀಕರಿಸಲ್ಪಟ್ಟ ಕಾನೂನು, ಉಲ್ಲಂಘನೆಗಾಗಿ ಗರಿಷ್ಠ ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು 1 ಲಕ್ಷದವರೆಗೆ ದಂಡವನ್ನು ಒದಗಿಸುತ್ತದೆ. ಈ ಕಾನೂನು ಗೇಮಿಂಗ್ ಉದ್ಯಮದಲ್ಲಿ ಗಂಭೀರ ಕಳವಳವನ್ನು ಹುಟ್ಟುಹಾಕಿದೆ, ಮತ್ತು ನ್ಯಾಯಾಲಯಗಳಲ್ಲಿ ಪ್ರಶ್ನಿಸುವ ಸಾಧ್ಯತೆಯಿದೆ, ಏಕೆಂದರೆ ನೆರೆಯ ತಮಿಳುನಾಡಿನಿಂದ ಕೂಡ ಇದೇ …

Read More »

ರಾಜ್ಯ ಸರ್ಕಾರದಿಂದ ಫ್ಲ್ಯಾಟ್ ಖರೀದಿ ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ : ಮುದ್ರಾಂಕ ಶುಲ್ಕ ಶೇ.5 ರಿಂದ 3ಕ್ಕೆ ಇಳಿಕೆರಾಜ್ಯ ಸರ್ಕಾರದಿಂದ ಫ್ಲ್ಯಾಟ್ ಖರೀದಿ ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ : ಮುದ್ರಾಂಕ ಶುಲ್ಕ ಶೇ.5 ರಿಂದ 3ಕ್ಕೆ ಇಳಿಕೆ

ಬೆಂಗಳೂರು : ರಾಜ್ಯ ಸರ್ಕಾರವು (Karnataka Government) ಫ್ಲ್ಯಾಟ್ (Flat) ಖರೀದಿದಾರರಿಗೆ ಸಿಹಿಸುದ್ದಿ ನೀಡಿದ್ದು, 2020-21 ನೇ ಸಾಲಿನ ಬಜೆಟ್ ನಲ್ಲಿ ಘೋಷಿಸಿದ್ದಂತೆ 35 ಲಕ್ಷ ರೂ.ನಿಂದ 45 ಲಕ್ಷ ರೂ. ವರೆಗಿನ ಫ್ಲ್ಯಾಟ್ ಗಳ ಮೊದಲನೇ ನೋಂದಣಿಗೆ ಮುದ್ರಾಂಕ ಶುಲ್ಕವನ್ನು (Stamp fee) ಶೇ. 5 ರಿಂದ 3 ಕ್ಕೆ ಇಳಿಕೆ ಮಾಡಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.   ಬೆಂಗಳೂರು ನಗರ, ಬೆಂಗಳೂರು ಹೊರವಲಯ ಸೇರಿದಂತೆ ರಾಜ್ಯದ …

Read More »

ಸಂತಸ ವ್ಯಕಪಡಿಸಿದ ಶಿವರಾಮ್ ಹೆಬ್ಬಾರ್

ಶಿರಸಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಉತ್ತರ ಕನ್ನಡ‌ ಜಿಲ್ಲೆಗೆ ಹಲವು ರೀತಿಯ ನೆರವಿನ ಯೋಜನೆ ನೀಡಿದ್ದಕ್ಕೆ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಸಂತಸ ವ್ಯಕ್ತಪಡಿಸಿದ್ದಾರೆ‌. ಕುಮಟಾ, ಕಾರವಾರ ಹಾಗೂ ಭಟ್ಕಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕರಾವಳಿ ಪ್ರದೇಶದಲ್ಲಿ ಪ್ರವಾಹ ಮತ್ತು ಭಾರಿ ಅಲೆಗಳಿಂದ ಉಪ್ಪುನೀರು ಹಿಮ್ಮುಖವಾಗಿ ನುಗ್ಗುವುದನ್ನು ತಡೆಗಟ್ಟುವ ಖಾರ್​ಲ್ಯಾಂಡ್​ ಯೋಜನೆಗೆ 300 ಕೋಟಿ ರೂ‌.ಗಳ ಅಂದಾಜು ಮೊತ್ತದಲ್ಲಿ ಕಾಮಗಾರಿಗಳ …

Read More »

S.T.ಶೇ.7.5 ರಷ್ಟು ಮೀಸಲಾತಿ ಕಲ್ಪಿಸಲು ಸಿಎಂ ಬೊಮ್ಮಾಯಿ ಶೀಘ್ರ ಕ್ರಮ ಕೈಗೊಳ್ಳಲಿ

ಗೋಕಾಕ: ಎಸ್ಟಿ ಸಮುದಾಯಕ್ಕೆ ಶೇ.7.5 ರಷ್ಟು ಮೀಸಲಾತಿ ಕಲ್ಪಿಸಲು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಒತ್ತಾಯಿಸಿದರು. ಇಲ್ಲಿನ ಹಿಲ್ ಗಾರ್ಡನ್ ಗೃಹಕಚೇರಿಯಲ್ಲಿ ಇಂದು (ಮಂಗಳವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸಲು ಪೂರಕವಾದ ವರದಿ, ದಾಖಲಾತಿ ಹಾಗೂ ಅಂಕಿಅಂಶಗಳು ಸರ್ಕಾರದ ಮುಂದಿವೆ. ಸರ್ಕಾರ ಸಂವಿಧಾನಾತ್ಮಕವಾಗಿ ನೀಡಬೇಕಾದ ಹಕ್ಕು ಇದಾಗಿದೆ. ಹೀಗಾಗಿ, ಮತ್ತೆ ವಿಳಂಬ ಮಾಡದೇ ಶೀಘ್ರ …

Read More »

ಅಕ್ರಮ ಕಡವೆ ಮಾಂಸ ಸಾಗಾಟ: ಇಬ್ಬರು ಆರೋಪಿಗಳ ಬಂಧನ

ಬೈಂದೂರು, ಅ.5: ಬೈಂದೂರು ತಾಲೂಕಿನ ಯಡ್ತರೆ ಗ್ರಾಮದ ಮದ್ದೋಡಿ ಸಮೀಪದ ಕುಂಜಳ್ಳಿಗೆ ಹೋಗುವ ರಸ್ತೆಯಲ್ಲಿ ಕಡವೆ ಮಾಂಸವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಯಡ್ತರೆ ನಿವಾಸಿ ಮಮ್ಮಿಶಾಹ್ ಪೈಝಲ್ ಹಾಗೂ ಖರುರಿ ನಿಝಾಮುದ್ದೀನ್ ಬಂಧಿತ ಆರೋಪಿಗಳು. ಈ ಕೃತ್ಯದಲ್ಲಿ ಭಾಗಿಯಾಗಿರುವ ಕುಂಜಳ್ಳಿಯ ಹೆರಿಯಣ್ಣ ಶೆಟ್ಟಿ, ಎಂ.ಆರ್. ಪ್ರವೀಣ್ ಶೆಟ್ಟಿ ಹಾಗೂ ಇತರರು ತಲೆಮರೆಸಿ ಕೊಂಡಿದ್ದಾರೆ. ಬಂಧಿತರಿಂದ ಎರಡು ದ್ವಿಚಕ್ರ ವಾಹನ, ಕಡವೆ ಮಾಂಸ ಹಾಗೂ ಎರಡು ಮೊಬೈಲ್‌ಗಳನ್ನು …

Read More »

ವಾಮಾಚಾರ’ ನೆಪದಲ್ಲಿ ₹4.41 ಕೋಟಿ ವಂಚನೆ

ಬೆಂಗಳೂರು: ‘ವಾಮಾಚಾರ ಮಾಡಿಸಿದರೆ ಎಲ್ಲ ಸಮಸ್ಯೆಗಳು ಪರಿಹಾರವಾಗುತ್ತವೆ’ ಎಂಬುದಾಗಿ ಹೇಳಿ ಪೂಜೆ ನೆಪದಲ್ಲಿ ₹ 4.41 ಕೋಟಿ ಪಡೆದು ವಂಚಿಸಿರುವ ಆರೋಪದಡಿ ಮಹಿಳೆ ಸೇರಿ ಇಬ್ಬರನ್ನು ಬಸವನಗುಡಿ ಪೊಲೀಸರು ಬಂಧಿಸಿದ್ದಾರೆ. ‘ತ್ಯಾಗರಾಜನಗರದ ನಿವಾಸಿ ಗೀತಾ ಗುರುದೇವ್ ಎಂಬುವರು ತಮಗಾದ ವಂಚನೆ ಬಗ್ಗೆ ದೂರು ನೀಡಿದ್ದರು. ಆರೋಪಿಗಳಾದ ಜಯಶ್ರೀ ಹಾಗೂ ರಾಕೇಶ್‌ ಎಂಬುವರನ್ನು ಬಂಧಿಸಲಾಗಿದೆ. ಅವರಿಬ್ಬರಿಂದ 1 ಕೆ.ಜಿ‌ ಚಿನ್ನ ಹಾಗೂ ₹ 10 ಲಕ್ಷ ನಗದು ಜಪ್ತಿ ಮಾಡಲಾಗಿದೆ’ ಎಂದು …

Read More »

ಹಿಂಸಾಚಾರ ಸಹಿಸಲು ಸಾಧ್ಯವಿಲ್ಲ: ಅಮಿತ್ ಶಾ ಭೇಟಿ ಬಳಿಕ ಚನ್ನಿ ಹೇಳಿಕೆ

ನವದೆಹಲಿ, ಅಕ್ಟೋಬರ್‌ 06: ಪಂಜಾಬ್‌ ಮುಖ್ಯಮಂತ್ರಿ ಚರಣ್‌ಜೀತ್‌ ಸಿಂಗ್‌ ಚನ್ನಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾರನ್ನು ದೆಹಲಿಯ ನಿವಾಸದಲ್ಲಿ ಮಂಗಳವಾರ ಭೇಟಿಯಾಗಿದ್ದು, ಉತ್ತರ ಪ್ರದೇಶದಲ್ಲಿ ನಡೆದ ಹಿಂಸಾಚಾರದ ಬಗ್ಗೆ ಹಾಗೂ ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಯ ಬಗ್ಗೆ ಮಾತನಾಡಿದ್ದಾರೆ. ಈ ಬಗ್ಗೆ ಸಭೆಯ ನಂತರ ಮಾತನಾಡಿದ ಪಂಜಾಬ್‌ ಮುಖ್ಯಮಂತ್ರಿ ಚರಣ್‌ಜೀತ್‌ ಸಿಂಗ್‌ ಚನ್ನಿ, “ನಾನು ಕೇಂದ್ರ ಗೃಹ ಸಚಿವ ಅಮಿತ್‌ ಶಾರನ್ನು ಭೇಟಿಯಾದೆ. ಕೇಂದ್ರ ಸರ್ಕಾರದ ಮೂರು …

Read More »

“ಜಲಿಯನ್ ವಾಲಾಬಾಗ್’ ಪ್ರಸ್ತಾಪಿಸಲು ಪರದಾಟ! ಡಿಕೆಶಿ ಮಾತನಾಡಿದ್ದ ವಿಡಿಯೋ ವೈರಲ್!

ಬೆಂಗಳೂರು, ಅ. 05: ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ನಡೆದ ರೈತರ ಹತ್ಯೆಯನ್ನು ಕಾಂಗ್ರೆಸ್ ಪಕ್ಷ ಉಗ್ರವಾಗಿ ವಿರೋಧಿಸಿದೆ. ಘಟನೆ ಖಂಡಿಸಿ ಕಾಂಗ್ರೆಸ್ ನಾಯಕರು ದೇಶದಾದ್ಯಂತ ಬೀದಿಗಿಳಿದು ಪ್ರತಿಭಟನೆ ಮಾಡಿದ್ದಾರೆ. ರೈತರ ಕುಟುಂಬಗಳಿಗೆ ಸಾಂತ್ವಾನ ಹೇಳಲು ಪಂಜಿನ ಮೆರವಣಿಗೆಯನ್ನು ಬೆಂಗಳೂರಿನಲ್ಲಿ ಮಾಡಲಾಗಿದೆ. ಜೊತೆಗೆ ರಾಜ್ಯಪಾಲರ ಮೂಲಕ ರಾಷ್ಟ್ರಪತಿಗಳಿಗೆ ಕಾಂಗ್ರೆಸ್ ನಾಯಕರು ಮನವಿಯನ್ನೂ ಸಲ್ಲಿಸಿದ್ದಾರೆ. ಆ ಮೂಲಕ ಕೇಂದ್ರ ಬಿಜೆಪಿ ಸರ್ಕಾರ ರೈತ ವಿರೋಧಿ ಕಾನೂನುಗಳನ್ನು ಬಲವಂತವಾಗಿ ಹೇರಲು ಪ್ರಯತ್ನಿಸುತ್ತಿದೆ ಎಂಬ …

Read More »

ಹಾನಗಲ್‌, ಸಿಂದಗಿ ಉಪ ಚುನಾವಣ: ಶ್ರೀನಿವಾಸ ಮಾನೆ, ಮನಗೂಳಿಗೆ ಕಾಂಗ್ರೆಸ್‌ ಟಿಕೆಟ್

ನವದೆಹಲಿ: ರಾಜ್ಯದ ಹಾನಗಲ್‌ ಮತ್ತು ಸಿಂದಗಿ ವಿಧಾನಸಭೆ ಕ್ಷೇತ್ರಗಳಿಗೆ ಅಕ್ಟೋಬರ್‌ 30ರಂದು ನಡೆಯಲಿರುವ ಉಪ ಚುನಾವಣೆಗೆ ತನ್ನ ಅಭ್ಯರ್ಥಿಗಳನ್ನು ಕಾಂಗ್ರೆಸ್‌ ಮಂಗಳವಾರ ಸಂಜೆ ಘೋಷಿಸಿದೆ. ಹಾನಗಲ್‌ನಿಂದ ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ ಹಾಗೂ ಸಿಂದಗಿಯಿಂದ ಅಶೋಕ ಮನಗೂಳಿ ಅವರಿಗೆ ಟಿಕೆಟ್‌ ನೀಡಲಾಗಿದೆ. ಸಿಂದಗಿ ಕ್ಷೇತ್ರದ ಜೆಡಿಎಸ್‌ ಶಾಸಕರಾಗಿದ್ದ ಎಂ.ಸಿ. ಮನಗೂಳಿ ಅವರ ಪುತ್ರ ಅಶೋಕ ಮನಗೂಳಿ ಅವರೇ ಪಕ್ಷದ ಅಭ್ಯರ್ಥಿ ಎಂದು ಈ ಮೊದಲೇ ಮೌಖಿಕವಾಗಿ ಘೋಷಿಸಲಾಗಿತ್ತಾದರೂ, ಇದೀಗ …

Read More »