Breaking News

ನಾನು ಶಾಶ್ವತ ಸಿಎಂ ಆಕಾಂಕ್ಷಿ: ಉಮೇಶ್ ಕತ್ತಿ

ನನಗೆ ಈಗ 60 ವರ್ಷ. ಆದರೂ ನಾನು ಶಾಶ್ವಮುಖ್ಯಮಂತ್ರಿ ಆಕಾಂಕ್ಷಿ ಅರಣ್ಯ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ. ಚಾಮರಾಜನಗರದ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾರೆ, ಅವರ ನೇತೃತ್ವದಲ್ಲಿ ಸಚಿವನಾಗಿರುವುದು ಖುಷಿ ಇದೆ. ನಾನು ಕೂಡ ಮುಖ್ಯಮಂತ್ರಿ ಆಕಾಂಕ್ಷಿಯಾಗಿದ್ದೆ. ಈಗಲೂ ಆಕಾಂಕ್ಷಿಯಾಗಿದ್ದೇನೆ ಎಂದರು. ನನಗೆ ಈಗ 60 ವರ್ಷ. ಹಾಗಾಗಿ ಸಿಎಂ ಆಗಲು ಇನ್ನೂ 15 ವರ್ಷ ಸಮಯ ಇದೆ. ಮುಂದೇ …

Read More »

ಗೋವಾದಲ್ಲಿ ಕಾಂಗ್ರೆಸ್ ಮೈತ್ರಿ ? ಕುತೂಹಲ ಹೆಚ್ಚಿಸಿದ ಚಿದಂಬರಂ ನೇತೃತ್ವದ ಸಭೆ

ಪಣಜಿ : ಗೋವಾ ವಿಧಾನ ಸಭಾ ಚುನಾವಣೆಗೆ ಗೋವಾಕ್ಕೆ ಆಗಮಿಸಿರುವ ಕಾಂಗ್ರೇಸ್ ರಾಷ್ಟ್ರೀಯ ನಾಯಕ ಪಿ.ಚಿದಂಬರಂ ರವರು ಪಣಜಿಯ ಖಾಸಗಿ ಹೋಟೆಲ್‍ ವೊಂದರಲ್ಲಿ ರಾಜ್ಯ ಕಾಂಗ್ರೇಸ್ ಶಾಸಕರು, ಸಂಸದರು, ಮಾಜಿ ಶಾಸಕರೊಂದಿಗೆ ಸಭೆ ನಡೆಸಿ ಚರ್ಚೆ ನಡೆಸಿದ್ದಾರೆ. ಗೋವಾ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆದು ಗೋವಾದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಗೋವಾದ ಸ್ಥಳೀಯ ಪಕ್ಷಗಳೊಂದಿಗೆ ಕಾಂಗ್ರೇಸ್ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯಿದೆ ಎಂದೇ ಹೇಳಲಾಗುತ್ತಿದೆ. ಈ ನಿಟ್ಟಿನಲ್ಲಿ ಪಿ.ಚಿದಂಬರಂ ರವರು ಚರ್ಚೆ …

Read More »

BJPಗೆ ಅತ್ಯಾಚಾರಿಗಳೆಂದರೆ ಹೆಚ್ಚು ಪ್ರೀತಿ, ಅತ್ಯಾಚಾರಿಗಳ ರಕ್ಷಣೆ ಮಾಡುವಂತಿದೆ: ಕಾಂಗ್ರೆಸ್

ಬೆಂಗಳೂರು: ಯುವತಿಯನ್ನು ಅತ್ಯಾಚಾರವೆಸಗಿದ ಮಾಜಿ ಸಚಿವರ ರಕ್ಷಣೆ ನಿಂತಂತೆ ಮೈಸೂರಿನ ಅತ್ಯಾಚಾರಿಗಳ ರಕ್ಷಣೆಯನ್ನೂ ಮಾಡುವಂತಿದೆ ಬಿಜೆಪಿ ಸರ್ಕಾರ. ಅತ್ಯಾಚಾರಿ ಶಾಸಕ, ಮಾಜಿ ಸಚಿವರನ್ನು ಹೊಂದಿದ ಬಿಜೆಪಿಗೆ ಅತ್ಯಾಚಾರಿಗಳೆಂದರೆ ಹೆಚ್ಚು ಪ್ರೀತಿ! ಸಿದ್ದು ಸವದಿಯನ್ನ ರಕ್ಷಿಸಿದ ಮಹಿಳಾ ವಿರೋಧಿ ಬಿಜೆಪಿಯಿಂದ ಮಹಿಳೆಯರು ರಕ್ಷಣೆ ಬಯಸುವುದು ವ್ಯರ್ಥ ಎಂದು ರಾಜ್ಯ ಕಾಂಗ್ರೆಸ್ ಕಿಡಿಕಾರಿದೆ. ಟ್ವಿಟ್ಟರ್ ನಲ್ಲಿ ಬಿಜೆಪಿ ಸರ್ಕಾರದ ಮೇಲೆ ಕಾಂಗ್ರೆಸ್ ಟೀಕೆ ಮಾಡಿದೆ. ಮೈಸೂರಿನಂತಹ ನಗರದಲ್ಲಿ ಅತ್ಯಾಚಾರ ಪ್ರಕರಣ ನಡೆದು 24 …

Read More »

ರೈತ ಹೋರಾಟಕ್ಕೆ 9 ತಿಂಗಳು; ಸಿಂಘು ಗಡಿಯಲ್ಲಿ ಎರಡು ದಿನಗಳ ರೈತ ಸಮಾವೇಶ

ನವದೆಹಲಿ: ಕೇಂದ್ರ ಸರ್ಕಾರದ ವಿವಾದಾತ್ಮಕ ಮೂರು ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯ ಸಿಂಘು ಗಡಿ ಭಾಗದಲ್ಲಿ ರೈತರು ಹೋರಾಟ ಆರಂಭಿಸಿ ಒಂಬತ್ತು ತಿಂಗಳು ಪೂರ್ಣಗೊಂಡಿದ್ದು, ಇದರ ಅಂಗವಾಗಿ ವಿವಿಧ ರೈತ ಸಂಘಟನೆಗಳು ಪ್ರತಿಭಟನಾ ಸ್ಥಳದಲ್ಲೇ ಗುರುವಾರದಿಂದ ಎರಡು ದಿನಗಳ ಕಾಲ ‘ರಾಷ್ಟ್ರೀಯ ಸಮಾವೇಶ’ವನ್ನು ಹಮ್ಮಿಕೊಂಡಿವೆ. ಈ ಸಮಾವೇಶದಲ್ಲಿ ಮಹಿಳೆ, ರೈತರು, ಯುವ ಹಾಗೂ ಕಾರ್ಮಿಕ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳಿಂದ 1500 ಪ್ರತಿನಿಧಿಗಳು ಭಾಗವಹಿಸಿದ್ದಾರೆ. ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ …

Read More »

ನರೇಗಾದಲ್ಲಿ ಜೆಸಿಬಿ ಬಳಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದ ರೈತನಿಗೆ ಥಳಿತ; ನೊಂದು ಅನ್ನದಾತ ಆತ್ಮಹತ್ಯೆ

ಹಾವೇರಿ: ನರೇಗಾ ಕಾಮಾಗಾರಿ ವೇಳೆ ಜೆಸಿಬಿ ಬಳಕೆಗೆ ಆಕ್ಷೇಪ ವ್ಯಕ್ತಪಡಿಸಿದ ರೈತನನ್ನು ಏಜೆಂಟರು ಥಳಿಸಿದ ಪರಿಣಾಮ ಮನನೊಂದ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ನೀರಲಗಿ ಗ್ರಾಮದಲ್ಲಿ ನಡೆದಿದೆ.   ಶಿವಪ್ಪ ಪುಟ್ಟಪ್ಪ ಈರಪ್ಪನವರ (60) ಆತ್ಮಹತ್ಯೆಗೆ ಶರಣಾದ ರೈತ. ನರೇಗಾ ಕಾಮಗಾರಿಯಲ್ಲಿ ಸರ್ಕಾರದ ನಿಯಮ ಮೀರಿ ಜೆಸಿಬಿ ಬಳಕೆಗೆ ಮೃತ ರೈತ ಆಕ್ಷೇಪ ವ್ಯಕ್ತಪಡಿಸಿದ್ದ ಎನ್ನಲಾಗಿದೆ. ಇದಕ್ಕೆ ಕೋಪಗೊಂಡ ನರೇಗಾ ಕಾಮಗಾರಿಯ ಏಜೆಂಟರಾದ ಮಂಜಪ್ಪ ಹಳೆಮನಿ …

Read More »

ಅತ್ಯಾಚಾರ ಯುವತಿ ಬಗ್ಗೆ ಆಕ್ಷೇಪಾರ್ಹ ಹೇಳಿಕೆ; ಹೇಳಿಕೆ ಹಿಂಪಡೆದ ಗೃಹ ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು: ಅತ್ಯಾಚಾರ ಯುವತಿಯ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆಯನ್ನು ವಾಪಸ್ಸು ಪಡೆದಿರುವುದಾಗಿ ಹೇಳಿದ್ದಾರೆ. ನಗರದ ಪರಪ್ಪನ ಅಗ್ರಹಾರ ಭೇಟಿಯ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯುವತಿಯ ಹೇಳಿಕೆ ಬಗ್ಗೆ ವಿಷಾದ ವ್ಯಕ್ತಪಡಿಸಿ, ನನಗೂ ಆ ಹೇಳಿಕೆ ನೀಡಿದ ಬಳಿಕ ತುಂಬಾ ನೋವಾಗಿದೆ, ಬೊಮ್ಮಾಯಿಯಯವರ ಸರ್ಕಾರ ಎಲ್ಲ ಹೆಣ್ಣು ಮಕ್ಕಳ ಪ್ರಾಣ ಮಾನ ಕಾಪಾಡುವ ಬದ್ಧತೆ ಹೊಂದಿದೆ, ಎಂದು ಹೇಳಿ ಹೇಳಿಕೆ ವಾಪಸ್ಸು ಪಡೆದಿರುವುದಾಗಿ …

Read More »

ಮೈಸೂರು ಪ್ರಕರಣದ ತಪ್ಪಿತಸ್ಥರಿಗೆ ಶೀಘ್ರವೇ ಶಿಕ್ಷೆ ಆಗಲಿದೆ : ಸಚಿವೆ ಜೊಲ್ಲೆ

ಮೈಸೂರು : ಮೈಸೂರಿನಲ್ಲಿ ನಡೆದ ಅತ್ಯಾಚಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ತಪ್ಪಿತಸ್ಥರನ್ನು ಪತ್ತೆಹಚ್ಚಿ ಅವರಿಗೆ ಶಿಕ್ಷೆ ವಿಧಿಸಲಾಗುವುದು ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ. ಪತ್ರಕರ್ತರೊಂದಿಗೆ ಮಾತನಾಡಿದ ಸಚಿವೆ ನಮ್ಮ ಸರಕಾರ ಈ ಕೇಸನ್ನು ಗಂಭೀರವಾಗಿ ಪರಿಗಣಿಸಿದೆ, ಶೀಘ್ರವೇ ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತದೆ, ಅಲ್ಲದೆ ಹೆಣ್ಣು ಮಕ್ಕಳ ಸುರಕ್ಷತೆಗೆ ಇನ್ನೂ ಹೆಚ್ಚಿನ ಗಮನಹರಿಸಲಾಗುವುದು ಏನದು ಹೇಳಿದರು. ಬಳಿಕ ಮಾತನಾಡಿದ ಅವರು ನಾನು ಇನ್ನೂ ಎರಡು ದಿನ ಯಾರ ಜೊತೆಯೂ …

Read More »

ಕರಡಿ ಸಫಾರಿ ಮಾಡುವ ಮೂಲಕ ಪ್ರವಾಸಿಗರು ಕರಡಿಗಳನ್ನು ಹತ್ತಿರದಿಂದ ಕಣ್ತುಂಬಿಕೊಳ್ಳಬಹುದು.

ಹೊಸಪೇಟೆ : ಹುಲಿ-ಸಿಂಹಗಳ ಸಫಾರಿಯಂತೆ ಇನ್ಮುಂದೆ ಕರಡಿ ಸಫಾರಿ ಮಾಡುವ ಮೂಲಕ ಪ್ರವಾಸಿಗರು ಕರಡಿಗಳನ್ನು ಹತ್ತಿರದಿಂದ ಕಣ್ತುಂಬಿಕೊಳ್ಳಬಹುದು. ಹೌದು! ವಿಶ್ವವಿಖ್ಯಾತ ಹಂಪಿಗೆ ಭೇಟಿ ನೀಡುವ ದೇಶ-ವಿದೇಶಿ ಪ್ರವಾಸಿಗರು, ತಾಲ್ಲೂಕಿನ ಕಮಲಾಪುರ ಸಮೀಪದ ದರೋಜಿ ಕರಡಿಧಾಮಕ್ಕೆ ಭೇಟಿ ನೀಡಿ, ಸಫಾರಿ ಮೂಲಕ ಕರಡಿಗಳ ಚಲನವಲನವನ್ನು ಹತ್ತಿರದಿಂದ ಕಣ್ತುಂಬಿಕೊಳ್ಳಬಹುದು. ಏಷ್ಯಾ ಖಂಡದ ಮೊಟ್ಟಮೊದಲ ಕರಡಿಧಾಮದತ್ತ ಪ್ರವಾಸಿಗರನ್ನು ಸೆಳೆಯಲು ಅರಣ್ಯ ಇಲಾಖೆ ಹೊಸ ಪ್ರಯತ್ನ ನಡೆಸಿ. ಕರಡಿ ಸಫಾರಿ ಯೋಜನೆ ತಯಾರು ಮಾಡಿದೆ. ಹಂಪಿ …

Read More »

ಲವ್‌ ಯೂ ರಚ್ಚು’ ದುರಂತ: ಅಜಯ್‌ ರಾವ್‌ ಸೇರಿ ಚಿತ್ರತಂಡದ 6 ಮಂದಿಗೆ ಜಾಮೀನು

ರಾಮನಗರ: ‘ಲವ್‌ ಯೂ ರಚ್ಚು’ ಚಿತ್ರ ತಂಡದ ಆರು ಮಂದಿಗೆ ಇಲ್ಲಿನ ಜಿಲ್ಲಾ ಮೂರನೇ ಹೆಚ್ಚುವರಿ ಮತ್ತು ಸೆಷನ್ಸ್ ನ್ಯಾಯಾಲಯವು ಗುರುವಾರ ಜಾಮೀನು ಮಂಜೂರು ಮಾಡಿತು. ಚಿತ್ರದ ನಿರ್ದೇಶಕ ಶಂಕರ್, ನಿರ್ಮಾಪಕ ಗುರು ದೇಶಪಾಂಡೆ, ನಾಯಕ ಅಜಯ್‌ ರಾವ್‌, ಸಾಹಸ ನಿರ್ದೇಶಕ ವಿನೋದ್‌ಕುಮಾರ್, ಪ್ರೊಡಕ್ಷನ್‌ ಮ್ಯಾನೇಜರ್‌ ಫರ್ನಾಂಡೀಸ್‌ ಹಾಗೂ ಕ್ರೇನ್‌ ಚಾಲಕ ಮಹದೇವ ಅವರಿಗೆ ನ್ಯಾಯಾಧೀಶ ಸಿದ್ಧಲಿಂಗಪ್ರಭು ಜಾಮೀನು ನೀಡಿ ಆದೇಶಿಸಿದರು. ಇದೇ ತಿಂಗಳ 9ರಂದು ಬಿಡದಿಯ ಜೋಗರಪಾಳ್ಯ ಸಮೀಪ …

Read More »

ಎಸ್‌ಐ ಮೂತ್ರ ನೆಕ್ಕಿಸಿದ ಪ್ರಕರಣ ನಿರೀಕ್ಷಣ ಜಾಮೀನು ನಿರಾಕರಣೆ

ಬೆಂಗಳೂರು: ಪ್ರಕರಣವೊಂದರಲ್ಲಿ ಪರಿಶಿಷ್ಟ ಜಾತಿಯ ಯುವಕನನ್ನು ಠಾಣೆಗೆ ಕರೆದೊಯ್ದು ಹಲ್ಲೆ ನಡೆಸಿದಲ್ಲದೆ, ಮೂತ್ರ ನೆಕ್ಕಿಸಿದ ಆರೋಪ ಹೊತ್ತಿರುವ ಚಿಕ್ಕಮಗಳೂರು ಜಿಲ್ಲೆ ಗೋಣಿಬೀಡು ಪೊಲೀಸ್‌ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಆಗಿದ್ದ ಅರ್ಜುನ್‌ಗೆ ನಿರೀಕ್ಷಣ ಜಾಮೀನು ನೀಡಲು ಹೈಕೋರ್ಟಿನ ನ್ಯಾಯಮೂರ್ತಿ ಶ್ರೀನಿವಾಸ್‌ ಹರೀಶ್‌ಕುಮಾರ್‌ ಅವರ ಏಕ ಸದಸ್ಯ ನ್ಯಾಯಪೀಠ ನಿರಾಕರಿಸಿತು. ಆರೋಪಿಯ ಕೃತ್ಯ ಹೀನಾಯ ವಾಗಿದೆ. ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ಈ ಹಂತದಲ್ಲಿ ಜಾಮೀನು ನೀಡಲಾಗದು ಎಂದು ನ್ಯಾಯಪೀಠ ಹೇಳಿದೆ. ಎಸ್‌ಐ ವಿರುದ್ಧ …

Read More »