ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಭಾನುವಾರ ನಗರದಲ್ಲಿ ಬೆಳಗ್ಗೆಯಿಂದಲೇ ಮಳೆ ಸುರಿದ ಕಾರಣ ವೀಕ್‌ಎಂಡ್ ಹುಮಸ್ಸಿನಲ್ಲಿದ್ದವರಿಗೆ ಕಿರಿಕಿರಿ ಉಂಟು ಮಾಡಿತು. ಮಳೆಯಿಂದಗಾಗಿ ರಾಜಧಾನಿಯ ರಸ್ತೆಗಳು ಜಲಾವೃತಗೊಂಡಿದ್ದವು. ಜತೆಗೆ ಮ್ಯಾನ್ ಹೋಲ್‌ಗಳು ಕೂಡ ಉಕ್ಕಿಹರಿದ ಹಿನ್ನೆಲೆಯಲ್ಲಿ ವಾಹನ ಸವಾರರು ಪರದಾಡುವಂತಾಯಿತು. ಗಾಳಿಸಹಿತ ಮಳೆ ಸುರಿದ ಹಿನ್ನೆಲೆಯಲ್ಲಿ ತಿಪ್ಪಸಂದ್ರ, ಪುಷ್ಪಾಂಜಲಿ ಚಿತ್ರಮಂದಿರ, ಕರಿರೇನಹಳ್ಳಿ, ಮತ್ತು ವೆಸ್ಟ್ ಆಫ್ ಕಾರ್ಡ್ ರಸ್ತೆಗಳಲ್ಲಿ ಮರಗಳು ಉರುಳಿ ಬಿದ್ದಿದ್ದು ಬಿಬಿಎಂಪಿ ಅಧಿಕಾರಿಗಳು ಮರಗಳ ತೆರವು …
Read More »ಇದು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದಂತಾಯಿತು: ದಿನೇಶ್ ಗುಂಡೂರಾವ್
ಬೆಂಗಳೂರು: ದೇಶದೆಲ್ಲೆಡೆ ಏಕಾಏಕಿ ಕಲ್ಲಿದ್ದಲು ಕೊರತೆ ಉಂಟಾಗಿರುವುದು ಆಶ್ಚರ್ಯಕರ. ಕಲ್ಲಿದ್ದಿಲಿನ ಅಭಾವ ರಾಜ್ಯದ ಮೇಲೂ ತಟ್ಟಿದೆ ರಾಜ್ಯದ ಮೂರು ವಿದ್ಯುತ್ ಕೇಂದ್ರಗಳು ಅವಲಂಬಿತವಾಗಿರುವುದು ಕಲ್ಲಿದ್ದಿಲಿನ ಮೇಲೆ. ಈ ವಿದ್ಯುತ್ ಕೇಂದ್ರಗಳಿಗೆ ಕಲ್ಲಿದ್ದಿಲು ಪೂರೈಕೆಯಾಗದಿದ್ದರೆ, ಉತ್ಪಾದನೆ ಸ್ಥಗಿತಗೊಳ್ಳಲಿದೆ. ಆಗ ರಾಜ್ಯ ಕತ್ತಲಲ್ಲಿ ಮುಳುಗುವುದು ನಿಶ್ಚಿತ ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ರಾಜ್ಯ ಸರ್ಕಾರ ತನಗೆಷ್ಟು ಕಲ್ಲಿದ್ದಲು ಬೇಕು ಎಂದು ಅಂದಾಜಿಸಿ ಮುಂಜಾಗ್ರತಾ …
Read More »ಕಲ್ಲಿದ್ದಲು ಕೊರತೆಯಿಂದ ಮಹಾರಾಷ್ಟ್ರದ 7 ಸ್ಥಾವರಗಳ 13 ಘಟಕಗಳು ಬಂದ್
ಮುಂಬೈ: ಕಲ್ಲಿದ್ದಲು ಕೊರತೆಯಿಂದ ಮಹಾರಾಷ್ಟ್ರ ರಾಜ್ಯ ವಿದ್ಯುತ್ ವಿತರಣಾ ಕಂಪೆನಿ ನಿಯಮಿತ ಇದಕ್ಕೆ ವಿದ್ಯುತ್ ಪೂರೈಸುವ ಏಳು ಕಲ್ಲಿದ್ದಲು ಸ್ಥಾವರಗಳ 13 ಘಟಕಗಳು ಮುಚ್ಚಿವೆ. ರಾಜ್ಯದಲ್ಲಿ 3,300 ಮೆವಾ ವಿದ್ಯುತ್ ಕೊರತೆಯಿದೆಯೆನ್ನಲಾಗಿದ್ದು, ರವಿವಾರ ಮುಂಬೈ ನಗರವೊಂದರ ವಿದ್ಯುತ್ ಬೇಡಿಕೆಯೇ 18,000 ಮೆವಾ ಆಗಿದೆ. ಸದ್ಯ ಕಲ್ಲಿದ್ದಲು ಕೊರತೆಯಿಂದ ಚಂದ್ರಾಪುರ, ನಾಸಿಕ್ ಹಾಗೂ ಭುಸವಲ್ ಇಲ್ಲಿನ ಘಟಕಗಳು ಕಾರ್ಯಾಚರಿಸುತ್ತಿಲ್ಲ. ಇದೊಂದು ರಾಷ್ಟ್ರೀಯ ಸಮಸ್ಯೆಯಾಗಿದೆ, ಆದರೆ ಯಾವುದೇ ವಿದ್ಯುತ್ ಕಡಿತವಿಲ್ಲದೆ ಸಮಸ್ಯೆ ನಿಭಾಯಿಸಲು …
Read More »ರಾಜ್ಯಕ್ಕೆ ಕಲ್ಲಿದ್ದಲು ಸಿಕ್ಕಿದೆ, ವಿದ್ಯುತ್ ಅಭಾವ ಸೃಷ್ಟಿಯಾಗದು: ಸಚಿವ ಸುನಿಲ್ ಕುಮಾರ್
ಬೆಂಗಳೂರು : ರಾಜ್ಯದಲ್ಲಿ ಕಲ್ಲಿದ್ದಲು ಕೊರತೆಯಾಗದು ಮತ್ತು ವಿದ್ಯುತ್ ಅಭಾವ ಸೃಷ್ಟಿಯಾಗದು ಎಂದು ಇಂಧನ ಸಚಿವ ಸುನಿಲ್ ಕುಮಾರ್ ಅವರು ಸೋಮವಾರ ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರ ಮುತುವರ್ಜಿಯಿಂದ ರಾಜ್ಯಕ್ಕೆ ಹಂಚಿಕೆಯಾಗಬೇಕಿದ್ದ ಕಲ್ಲಿದ್ದಲು ಸಿಕ್ಕಿದೆ ಎಂದರು. ದೇಶದಲ್ಲಿ ವಿದ್ಯುತ್ ಪೂರೈಕೆ ಸರಾಗವಾಗಿದ್ದು, ಕೊರತೆ ಉಂಟಾಗುವ ಯಾವುದೇ ಸ್ಥಿತಿಯಿಲ್ಲ. ಕೋಲ್ ಇಂಡಿಯಾ ಲಿ.ನಲ್ಲಿ ಸಾಕಷ್ಟು ಕಲ್ಲಿದ್ದಲು ದಾಸ್ತಾನು …
Read More »ಹಾಫ್ ಮೆಂಟ್ಲು ಚಿತ್ರದ ನಿರ್ಮಾಪಕ ಅರೆಸ್ಟ್
: ಸಿನಿಮಾ ಸ್ಟೈಲ್ ನಲ್ಲೇ ಕಿಡ್ನ್ಯಾಪ್ ಮಾಡಲು ಹೋಗಿ ನಿರ್ಮಾಪಕನೊಬ್ಬ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಬೆಳಕಿಗೆ ಬಂದಿದೆ. ಹಾಫ್ ಮೆಂಟ್ಲು ಸಿನಿಮಾ ನಿರ್ಮಾಪಕ ಶಶಿಕುಮಾರ್ ಬಂಧಿತ ಆರೋಪಿ. ಐಟಿ ಅಧಿಕಾರಿಗಳೆಂದು ಹೇಳಿ ಈರುಳ್ಳಿ ವ್ಯಾಪಾರಿ ಶ್ರೀನಿವಾಸ್ ಎಂಬುವವರನ್ನು ಶಶಿಕುಮಾರ್ ಹಾಗೂ ಗ್ಯಾಂಗ್ ಕಿಡ್ನ್ಯಾಪ್ ಮಾಡಿತ್ತು. 50 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಹಣ ಕೊಡದಿದ್ದಾಗ ಶ್ರೀನಿವಾಸ್ ಮೇಲೆ ಹಲ್ಲೆ ನಡೆಸಿ ಬೆಂಗಳೂರಿನ ಮೇಖ್ರಿ ಸರ್ಕಲ್ ಬಳಿ ಬಿಟ್ಟು ಹೋಗಿದ್ದರು. …
Read More »ಶ್ರೀ ಸಿದ್ಧೇಶ್ವರ ಮಂದಿರ ಪುನರೊದ್ಧಾರ ಹಾಗೂ ಪ್ರವಾಸಿ ತಾಣವಾಗಿ ಮಾರ್ಪಡಿಸಲು ಮನವಿ
ಬೆಳಗಾವಿ: ಬೆಳಗಾವಿಗೆ ಭೇಟಿ ನೀಡಿದ ಪ್ರವಾಸೋದ್ಯಮ, ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ರಾಜ್ಯ ಸಚಿವ ಶ್ರೀಪಾದ ನಾಯ್ಕರವರನ್ನು ಉತ್ತರ ಮತಕ್ಷೇತ್ರದ ಶಾಸಕರಾದ ಅನಿಲ ಬೆನಕೆ ರವರು ಭೇಟಿ ಮಾಡಿ ಕಣಬರ್ಗಿಯಲ್ಲಿರುವ ಶ್ರೀ ಸಿದ್ಧೇಶ್ವರ ಮಂದಿರದ ಪುನರೊದ್ಧಾರ ಹಾಗೂ ಮಂದಿರದ ಪರಿಸರವನ್ನು ಪ್ರವಾಸಿ ಸ್ಥಾನವಾಗಿ ಮಾರ್ಪಡಿಸುವಂತೆ ಮನವಿ ಪತ್ರ ಸಲ್ಲಿಸಿದರು. ಚೋಳ ಸಾಮ್ರಾಜ್ಯದ ವಾಸ್ತು ಶೀಲ್ಪದ ಉದಹಾರಣೆಯಾಗಿರುವ ಈ ಭವ್ಯ ಹಾಗೂ ಶ್ರದ್ಧೆ ಪ್ರತೀಕವಾಗಿರುವ ಈ ಐತಿಹಾಸಿಕ ದೇವಸ್ಥಾನದ ಪುನರೊದ್ಧಾರದಿಂದ ಉತ್ತರಕರ್ನಾಟಕ, …
Read More »ಮಾತುಕತೆ ವೇಳೆಯೂ ಚೀನಾ ಉದ್ಧಟತನ.. ಯಾವುದೇ ಸಲಹೆ ಒಪ್ಪಿಕೊಳ್ಳದ ಡ್ರ್ಯಾಗನ್
ನವದೆಹಲಿ: ಅರುಣಾಚಲ ಪ್ರದೇಶದ ಗಡಿಯಲ್ಲಿ ಡ್ರ್ಯಾಗನ್ ಮತ್ತೆ ಕಿರಿಕ್ ಮಾಡಿದ ಬೆನ್ನಲ್ಲೇ, ಭಾರತ ಮತ್ತು ಚೀನಾ ಮಧ್ಯೆ 13ನೇ ಬಾರಿಗೆ ಕಮಾಂಡರ್ ಮಟ್ಟದಲ್ಲಿ ಮಾತುಕತೆ ನಡೆದಿದೆ. ಪೂರ್ವ ಲಡಾಖ್ನ ಲೈನ್ ಆಫ್ ಆಯಕ್ಚುವಲ್ ಕಂಟ್ರೋಲ್ನಲ್ಲಿ ಇರುವ ಸಮಸ್ಯೆಗಳನ್ನ ಪರಿಹರಿಸುವ ಸಂಬಂಧ ನಿನ್ನೆ ಎರಡೂ ದೇಶಗಳ ಕಮಾಂಡರ್ಗಳು ಮುಖಾಮುಖಿಯಾಗಿದ್ದವು. ಆದರೆ ಈ ಮಾತುಕತೆಯಲ್ಲಿ ಸಮಸ್ಯೆಗಳನ್ನ ಪರಿಹರಿಸಿಕೊಳ್ಳಲು ನಾವು ನೀಡಿದ ಸಲಹೆಯನ್ನ ಚೀನಾ ಒಪ್ಪಿಕೊಳ್ಳಲಿಲ್ಲ ಎಂದು ಭಾರತ ಹೇಳಿದೆ. ಈ …
Read More »ಮೃತದೇಹ ಹೊರತೆಗೆದು ಮರಣೋತ್ತರ ಪರೀಕ್ಷೆ
ವಿಜಯಪುರ: ಪೋಕ್ಸೋ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಡಿಎನ್‌ಎ. ಪರೀಕ್ಷೆಗಾಗಿ ತಿಪ್ಪೆ ಗುಂಡಿಯಲ್ಲಿ ಹೂತಿದ್ದ ಮಗುವಿನ ಮೃತ ದೇಹವನ್ನು ಉಪವಿಭಾಗಾಧಿಕಾರಿ ಅನುಮತಿ ಪಡೆದು ತಹಶೀಲ್ದಾರ್ ಸಮ್ಮುಖದಲ್ಲಿ ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಸರ್ಕಲ್ ಇನ್‌ಸ್ಪೆಕ್ಟರ್ ಟಿ.ಶ್ರೀನಿವಾಸ್ ಮಾಹಿತಿ ನೀಡಿದರು. ಪಟ್ಟಣ ಸಮೀಪದ ಹಳಿಯೂರು ಗ್ರಾಮದಲ್ಲಿ ಗಾರೆ ಕೆಲಸಕ್ಕೆಂದು ಬಂದಿದ್ದ ಚಿಂತಾಮಣಿ ತಾಲೂಕಿನ ಯುವಕನೊಬ್ಬ ಇದೇ ಗ್ರಾಮದ ಅಪ್ರಾಪ್ತ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ, ಆಕೆಯೊಂದಿಗೆ ದೈಹಿಕ ಸಂಪರ್ಕ ವಿಟ್ಟುಕೊಂಡು ಪರಾರಿಯಾಗಿರುವ ಘಟನೆ …
Read More »ಒಂದೇ ರೀತಿ ಚೀಟಿ ಬರೆದಿಟ್ಟು ಕಾಣೆಯಾಗಿದ್ದ ಮೂವರು ಮಕ್ಕಳ ರಕ್ಷಣೆ -ಎಲ್ಲಿಗೆ ಹೋಗ್ತಿದ್ರು ಗೊತ್ತಾ ಕಿಲಾಡಿಗಳು..?
ಬೆಂಗಳೂರು: ಬಾಗಲುಗುಂಟೆ ಠಾಣೆ ವ್ಯಾಪ್ತಿಯಲ್ಲಿ ಕಾಣೆಯಾಗಿದ್ದ ಮೂವರು ಮಕ್ಕಳು ಪತ್ತೆಯಾಗಿದ್ದಾರೆ. ನಿಗೂಢವಾಗಿ ನಾಪತ್ತೆಯಾಗಿದ್ದ ಬಾಗಲುಗುಂಟೆಯಮಕ್ಕಳನ್ನ ಉಪ್ಪಾರಪೇಟೆ ಠಾಣೆ ಪೊಲೀಸರು ರಕ್ಷಿಸಿ, ಪೋಷಕರ ಆತಂಕ ದೂರ ಮಾಡಿದ್ದಾರೆ. ಪೊಲೀಸರಿಗೆ ಸುಳಿವು ಕೊಟ್ಟ ಚಿಂದಿ ಆಯುವ ವ್ಯಕ್ತಿ ನಂದನ್, ಕಿರಣ್, ಪರೀಕ್ಷಿತ್ ಎಂಬ ಮೂವರು ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಲಾಗಿದೆ. ಈ ಮೂವರು ವಿದ್ಯಾರ್ಥಿಗಳು SSLC ವ್ಯಾಸಾಂಗ ಮಾಡುತ್ತಿದ್ದಾರೆ. ಆನಂದ್ ರಾವ್ ಸರ್ಕಲ್ ಬಳಿ ತೆರಳುತ್ತಿದ್ದ ಮಕ್ಕಳನ್ನ ಚಿಂದಿ ಆಯುವ ವ್ಯಕ್ತಿಯೊಬ್ಬ ನೋಡಿದ್ದಾನೆ ಎನ್ನಲಾಗಿದೆ. …
Read More »ಜೂಜು ಅಡ್ಡೆ ಮೇಲೆ ಪೊಲೀಸ್ ದಾಳಿ -ತಪ್ಪಿಸಿಕೊಳ್ಳಲು ನೀರಿಗೆ ಹಾರಿದ್ದ ವ್ಯಕ್ತಿ ಸಾವು
ಮೈಸೂರು: ಜೂಜು ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ ಸಂದರ್ಭದಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿ ನೀರಿಗೆ ಜಿಗುದಿದ್ದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ನಂಜನಗೂಡು ತಾಲೂಕು ಹದಿನಾರು ಗ್ರಾಮದಲ್ಲಿ ನಡೆದಿದೆ. ನಂಜುಂಡ (37) ಮೃತ ವ್ಯಕ್ತಿಯಾಗಿದ್ದು, ನಿನ್ನೆ ಸಂಜೆ 6.00 ಗಂಟೆ ಸಮಯದಲ್ಲಿ 5 ರಿಂದ 6 ಜನ ಸೇರಿ ಜೂಜು ಆಡುತ್ತಿದ್ದಾಗ ಪೊಲೀಸರ ದಾಳಿ ನಡೆಸಿದ್ದರು. ಈ ವೇಳೆ ಆತಂಕಗೊಂಡ ಎಲ್ಲರೂ ತಲಾ ಒಂದು ದಿಕ್ಕಿಗೆ ಓಡಿ ಪರಾರಿಯಾಗಲು …
Read More »