Breaking News

ಛತ್ರಪತಿ ಶಿವಾಜಿ ಮೂರ್ತಿ ನಿರ್ಮಾಣ ಕಾಮಗಾರಿಗೆ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಚಾಲನೆ ನೀಡಿದರು

ಬೆಳಗಾವಿ: ಹೊನಗಾ ಗ್ರಾಮದಲ್ಲಿ ಪ್ರತಿಷ್ಠಾಪಿಸಲು ಉದ್ದೇಶಿಸಲಾಗಿರುವ ಛತ್ರಪತಿ ಶಿವಾಜಿ ಮೂರ್ತಿ ನಿರ್ಮಾಣ ಕಾಮಗಾರಿಗೆ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಇಂದು ಚಾಲನೆ ನೀಡಿದರು. ಮೂರ್ತಿ ಪ್ರತಿಷ್ಠಾಪಿಸಲು ಕಟ್ಟೆ ಹಾಗೂ ಸುತ್ತಲೂ ಉದ್ಯಾನ ನಿರ್ಮಿಸಲಾಗುತ್ತಿದ್ದು, ಇದಕ್ಕೆ ರಾಹುಲ್ ಅವರು ಇಂದು ಪೂಜೆ ನೆರವೇರಿಸಿದರು. ಈ ಕಾಮಗಾರಿಗೆ ಕೆಲವು ತಿಂಗಳ ಹಿಂದೆ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ಸತೀಶ ಜಾರಕಿಹೊಳಿ ಅವರು ಭೂಮಿಪೂಜೆ ನೆರವೇರಿಸಿ, ಚಾಲನೆ ನೀಡಿದ್ದರು. ಕಾಮಗಾರಿಗೆ ಈಗಾಗಲೇ ಅಡಿಪಾಯ ಹಾಕಲಾಗಿದ್ದು, …

Read More »

ದಿನಬಳಕೆ ವಸ್ತುಗಳ ಬೆಲೆ ವಿಪರೀತ ಏರಿದೆ. ಇದೇನಾ ಮೋದಿ ಹೇಳಿದ ಅಚ್ಚೇ ದಿನ್

ಬೆಂಗಳೂರು : ಇಂದಿನಿಂದ ಹಾನಗಲ್ ಸಿಂದಗಿ ಉಪಚುನಾವಣಾ ಅಬ್ಬರ ಶುರುವಾಗಿದೆ. ಇಂದು ಹಾನಗಲ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಪರ ಪ್ರಚಾರ ನಡೆಸಿದರು. ಪ್ರಚಾರದ ವೇಳೆ ಕೇಂದ್ರ ಸರ್ಕಾರ, ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಮೋದಿ ಆಳ್ವಿಕೆಯಲ್ಲಿ ದಿನಬಳಕೆ ವಸ್ತುಗಳ ಬೆಲೆ ವಿಪರೀತ ಏರಿದೆ. ಇದೇನಾ ಮೋದಿ ಹೇಳಿದ ಅಚ್ಚೇ ದಿನ್.? ನಾನು ಸತ್ಯ ಹೇಳ್ತೀನಿ ಎಂದು ಕೆಲವರು ನನ್ನ ಕಂಡರೆ ಭಯಪಡುತ್ತಾರೆ’ ಎಂದಿದ್ದಾರೆ.

Read More »

ಕೊಟ್ಟಿಗೊಬ್ಬ 3ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ಗಂಭೀರ ಆರೋಪ

ಆಯುಧಪೂಜೆ ದಿನವಾದ ಅಕ್ಟೋಬರ್ 14 ರಂದು ‘ಕೋಟಿಗೊಬ್ಬ 3’ ಸಿನಿಮಾ ಬಿಡುಗಡೆಯಾಗಬೇಕಿತ್ತು. ಆದರೆ, ಕೆಲವು ವಿತರಕರು ಸಂಚು ಮಾಡಿದ್ದರಿಂದ ವಿತರಣೆ ಒಂದು ದಿನ ವಿಳಂಬವಾಗಿದೆ. ಸಂಚು ಮಾಡಿದ ವಿತರಕರ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಎಂದು ನಿರ್ಮಾಪಕ ಸೂರಪ್ಪ ಬಾಬು ಹೇಳಿದ್ದಾರೆ. ಆದರೆ, ಸೂರಪ್ಪ ಬಾಬು ಅವರ ವಿರುದ್ಧವೇ ವಿತರಕ ಖಾಜಾಪೀರ್ ಗಂಭೀರ ಆರೋಪ ಮಾಡಿದ್ದಾರೆ. ನೀಡಿದ ಹಣವನ್ನು ವಾಪಸ್ ಕೊಡದೆ ಸೂರಪ್ಪಬಾಬು ಕೊಲೆ ಬೆದರಿಕೆ ಹಾಕಿರುವುದಾಗಿ ಚಿತ್ರದುರ್ಗದ ಸಿನಿಮಾ …

Read More »

ಜಿಲ್ಲಾಧಿಕಾರಿ ನಡೆ ಹಳ್ಳಿಗಳ ಕಡೆ

ಬೆಳಗಾವಿ: ಜಿಲ್ಲಾಧಿಕಾರಿ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮದ ಅಂಗವಾಗಿ ಚನ್ನಮ್ಮನ ಕಿತ್ತೂರು ತಾಲ್ಲೂಕಿನ ವೀರಾಪುರ ಗ್ರಾಮಕ್ಕೆ ಶನಿವಾರ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಗೆ ಶಿಥಿಲಗೊಂಡ ಮನೆಗಳು, ರಸ್ತೆ, ಚರಂಡಿ ಮೊದಲಾದ ಮೂಲಸೌಕರ್ಯಗಳ ಕೊರತೆಗಳು ಸ್ವಾಗತ ಕೋರಿದವು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಬಳಿಯಿಂದ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಎನ್‌ಡಬ್ಲ್ಯುಕೆಆರ್‌ಟಿಸಿ ಬಸ್‌ನಲ್ಲಿ ತೆರಳಿದ ಅವರನ್ನು ಗ್ರಾಮಸ್ಥರು ಸಂಭ್ರಮದಿಂದ ಬರಮಾಡಿಕೊಂಡರು. ಬಳಿಕ ಜಿಲ್ಲಾಧಿಕಾರಿ ಸೇರಿದಂತೆ ಅಧಿಕಾರಿಗಳಿಗೆ ‘ಸಮಸ್ಯೆಗಳ ಗುಡ್ಡ’ವೇ ಎದುರಾಯಿತು. ಒಂದೊಂದು …

Read More »

ಮುಂಗಾರು ಅಧಿವೇಶನ ವೇಳೆ ಪ್ರತಿಭಟನೆ ನಡೆಸಲು ಸಂಸದ ಬದಲು ಬೇರೆ ಸ್ಥಳ ಆಯ್ಕೆ ಮಾಡಿ : ರೈತರರಿಗೆ ಪೊಲೀಸ್ ರಿಂದ ಸಲಹೆ

40 ಕ್ಕೂ ಹೆಚ್ಚು ರೈತ ಸಂಘಗಳ ಒಕ್ಕೂಟವಾದ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಪ್ರತಿದಿನ ಸಂಸತ್ತಿನ ಹೊರಗೆ 200 ರೈತರನ್ನು ಒಳಗೊಂಡ ಪ್ರತಿಭಟನೆಯನ್ನು ಯೋಜಿಸಿದೆ. ಬಲ್ಬೀರ್ ಸಿಂಗ್ ರಾಜೇವಾಲ್, ದರ್ಶನ್ ಪಾಲ್, ಹನ್ನನ್ ಮೊಲ್ಲಾ, ಜೋಗಿಂದರ್ ಸಿಂಗ್ ಉಗ್ರಾಹನ್, ಮತ್ತು ಯೋಗೇಂದ್ರ ಯಾದವ್ ಸೇರಿದಂತೆ ಮೋರ್ಚಾದ ಹಲವಾರು ಸದಸ್ಯರು ಶನಿವಾರ ಲೋಕಸಭೆ ಮತ್ತು ರಾಜ್ಯಸಭಾ ಸದಸ್ಯರಿಗೆ , ರೈತರ ಬೇಡಿಕೆಗೆ ದನಿಯಾಗಬೇಕು ಮತ್ತು ಅಧಿವೇಶನದಿಂದ ಹೊರನಡೆಯಬೇಕು ಎಂದು ರೈತ ಮುಖಂಡರು …

Read More »

ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ಭಾರೀ ಅವ್ಯವಹಾರ

ಬೆಂಗಳೂರು : 4 ಸಾವಿರ ಸಿವಿಲ್ ಸರ್ವೆಂಟ್‌ಗಳು ಬಿಜೆಪಿಯ ಕಾರ್ಯಕರ್ತರು ಇದ್ದಾರೆ. ವಿಶ್ವವಿದ್ಯಾಯಲಗಳಲ್ಲಿ ಆರ್‌ಎಸ್‌ಎಸ್‌ನವರನ್ನು ಸಿಂಡಿಕೇಟ್‌ ಸದಸ್ಯದರನ್ನಾಗಿ ನೇಮಕ ಮಾಡಿದ್ದಾರೆ ಎಂದು ಆರೋಪಿಸಿದ್ದ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಇದೀಗ ರಾಮಮಂದಿರ ಬಗ್ಗೆ ಗಂಭೀರ ಆರೋಪಿಸಿದ್ದಾರೆ. ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ಭಾರೀ ಅವ್ಯವಹಾರ ಆಗಿದೆ. ರಾಮನ ಹೆಸರಲ್ಲಿ ಹಣ ದುರುಪಯೋಗ ಆಗಿದೆ ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಬಾಂಬ್ ಸಿಡಿಸಿದ್ದಾರೆ.

Read More »

ಆಯುಧ ಪೂಜೆಗೆ ನಗರಸಭೆ ಸದಸ್ಯೆಗೆ ಆಹ್ವಾನ ನೀಡದ್ದಕ್ಕೆ ಮಾರಾಮಾರಿ..9 ಮಂದಿಗೆ ಗಾಯ

ಯಾದಗಿರಿ: ನಗರಸಭೆ ಸದಸ್ಯೆಗೆ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಎಂದು ಬೆಂಬಲಿಗರು ಮತ್ತು ಆಯೋಜಕರ ನಡುವೆ ಮಾರಾಮಾರಿ ನಡೆದ ಘಟನೆ ನಗರದ ಲಾಡಿಸ್ ಗಲ್ಲಿಯ ಭವಾನಿ ಮಂದಿರದ ಬಳಿ ನಡೆದಿದೆ. ವಿಜಯದಶಮಿ ನಿಮಿತ್ತ ಆಯುಧ ಪೂಜೆ ಹಿನ್ನೆಲೆಯಲ್ಲಿ ಲಾಡಿಸ್ ಗಲ್ಲಿಯ ಭವಾನಿ ಮಂದಿರದ ಬಳಿ ಹಿಂದೂ ಸೇವಾ ಸಮಿತಿಯಿಂದ ಕಾರ್ಯಕ್ರಮವನ್ನ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮಕ್ಕೆ ನಗರಸಭೆ ಸದಸ್ಯೆ ಜಯಮ್ಮ ಅವರಿಗೆ ಆಹ್ವಾನ ನೀಡಿಲ್ಲ ಎಂಬ ವಿಚಾರವಾಗಿ ನಗರಸಭೆ ಸದಸ್ಯೆ ಬೆಂಬಲಿಗರು ಮತ್ತು …

Read More »

ಭೀಕರ ಅಪಘಾತದಲ್ಲಿ ಲಾರಿ ಪಲ್ಟಿ: ಚಾಲಕ ಸಾವು, ಕ್ಲೀನರ್​ ಕಾಲು ಕಟ್

ಹಾಸನ: ಸಿಮೆಂಟ್ ತುಂಬಿದ್ದ ಲಾರಿಯೊಂದು ಪಲ್ಟಿಯಾಗಿ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಸಕಲೇಶಪುರ ಶಿರಾಡಿಘಾಟ್ ಮಾರನಹಳ್ಳಿ ಬಳಿ ನಡೆದಿದೆ. ಮಂಜುನಾಥ್, ಮೃತ ದುರ್ದೈವಿ. ಮೃತ ವ್ಯಕ್ತಿ ಮಂಜುನಾಥ್ ಗೌರಿಬಿದನೂರು ಮೂಲದವರು ಎನ್ನಲಾಗಿದೆ. ಇನ್ನು ಲಾರಿಯಲ್ಲಿದ್ದ ಕ್ಲೀನರ್ ಕಾಲು ಕಟ್ ಆಗಿದೆ. ಮೃತ ದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ಸಕಲೇಶಪುರ ತಾಲ್ಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ವಾಕ್ಸಮರ,ಸಿದ್ದುಗೆ ತಿರುಗೇಟು ಕೊಟ್ಟ ಹೆಚ್ಡಿಕೆ

ಬೆಂಗಳೂರು: ಉಪ ಚುನಾವಣೆಗಳ ಬೆನ್ನಲ್ಲೇ ಶುರುವಾಗಿರುವ ಮಾಜಿ ಮುಖ್ಯಮಂತ್ರಿಗಳ ನಡುವಿನ ವಾಕ್ಸಮರ ಮುಂದುವರಿದಿದೆ. ಸಿಂದಗಿ ಮತ್ತು ಹಾನಗಲ್ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ವಿಚಾರವಾಗಿ ಜೆಡಿಎಸ್ ವಿರುದ್ಧ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಮಾಡಿರುವ ಆರೋಪಗಳಿಗೆ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಅಲ್ಪಸಂಖ್ಯಾತರನ್ನು ಪೇಟೆಂಟ್ ತೆಗೆದುಕೊಂಡವರಂತೆ ಬಿಂಬಿಸಿಕೊಳ್ಳುವ ಸಿದ್ದರಾಮಯ್ಯ, ತಮ್ಮದೇ ಪಕ್ಷದಲ್ಲಿ ಮುಸ್ಲಿಂ ನಾಯಕರನ್ನು ಮುಳುಗಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಸಿದ್ದರಾಮಯ್ಯ ಅವರು ಸ್ವಪಕ್ಷದಲ್ಲಿರುವ ಮುಸ್ಲಿಂ ಮುಖಂಡರನ್ನು ಸೋಲಿಸಲು …

Read More »

ಬಟ್ಟೆ ತೊಳೆಯಲು ಹೋಗಿದ್ದ ಇಬ್ಬರು ಮಹಿಳೆಯರ ಸಾವು: ಮೀನುಗಾರರ ಸಮಯಪ್ರಜ್ಞೆಯಿಂದ ಬದುಕಿದ ಐವರು!

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡದ ಗಂಜಿಕೆರೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ. ಲಲಿತಾ ಕತ್ತಿ(37) ಮತ್ತು ಅನುಪಮಾ ದೊಡ್ಡಮನಿ(20) ಜಲಸಮಾಧಿಯಾದವರು. ಕೆರೆಯಲ್ಲಿ ಬಿದ್ದ ಮಹಿಳೆಯನ್ನು ರಕ್ಷಿಸಲು ಹೋಗಿದ್ದ ಆರು ಜನ‌‌ರನ್ನು ಸ್ಥಳೀಯರು ಮತ್ತು ಮೀನುಗಾರರಿಂದ ಐವರ ರಕ್ಷಣೆಯಾಗಿದೆ. ಒಂದೇ ಕುಟುಂಬದ ವ್ಯಕ್ತಿ, ನಾಲ್ವರು ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ. ಗುಳೇದಗುಡ್ಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಗುಳೇದಗುಡ್ಡ ಪಟ್ಟಣದ ಗಂಜಿಕೆರೆಯಲ್ಲಿ ಬಟ್ಟೆ ತೊಳೆಯಲು ಹೋದ ಲಲಿತಾ ಕತ್ತಿ …

Read More »