ಹಾವೇರಿ: ಬಿಜೆಪಿ ಶಾಸಕ ನೆಹರು ಓಲೇಕಾರ್ ಅವರ ಅಕ್ಕನ ಇಬ್ಬರು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಬ್ಯಾಡಗಿ ಪಟ್ಟಣದಲ್ಲಿ ನಡೆದಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಅಕ್ಕ ಹಾಗೂ ತಮ್ಮ ಇಬ್ಬರೂ ನೇಣು ಬಿಗಿದುಕೊಂಡು ಆತ್ಮಹಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಮೊದಲು ತಮ್ಮ ಆತ್ಮಹತ್ಯೆಗೆ ಶರಣಾಗಿದ್ದು, ಸುದ್ದಿ ಕೇಳಿ ಮನನೊಂದ ಅಕ್ಕ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.
Read More »ಕಲಬುರಗಿ ಪಾಲಿಕೆ ಆಯುಕ್ತ ಸ್ನೇಹಲ್ ಲೋಖಂಡೆ ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ್ದಾರೆ ಎಂದು ಆರೋಪಿಸಿ ದೆಹಲಿ ಮೂಲದ ಯುವತಿ
ಕಲಬುರ್ಗಿ: ಕಲಬುರಗಿ ಪಾಲಿಕೆ ಆಯುಕ್ತ ಸ್ನೇಹಲ್ ಲೋಖಂಡೆ ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ್ದಾರೆ ಎಂದು ಆರೋಪಿಸಿ ದೆಹಲಿ ಮೂಲದ ಯುವತಿಯೊಬ್ಬಳು ಸಿಎಂ ಬಸವರಾಜ್ ಬೊಮ್ಮಾಯಿಗೆ ದೂರು ನೀಡಿದ್ದಾಳೆ. ಸಾಮಾಜಿಕ ಜಾಲತಾಣಗಳ ಮೂಲಕ ಯುವತಿ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ದೂರು ನೀಡಿದ್ದು, ಯುವತಿಯ ಪತ್ರ ವೈರಲ್ ಆಗಿದೆ. ಆದರೆ ಈ ಬಗ್ಗೆ ಯುವತಿ ಯಾವುದೇ ಪೊಲೀಸ್ ಠಾಣೆಯಲ್ಲಿ ದೂರು ನೀಡಿಲ್ಲ. ಕಲಬುರ್ಗಿ ಆಯುಕ್ತ ಸ್ನೇಹಲ್ ಹಾಗೂ ಯುವತಿ ನಡುವಿನ ವಾಟ್ಸಪ್ ಚಾಟಿಂಗ್, …
Read More »ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಸಿಎಂ ಬಸವರಾಜ್ ಬೊಮ್ಮಾಯಿ ಮಹತ್ವದ ಸಭೆ
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂದು ಸಂಜೆ 4 ಗಂಟೆಗೆ ಜಿಲ್ಲಾಧಿಕಾರಿಗಳು ಹಾಗೂ ಆರೋಗ್ಯಧಿಕಾರಿಗಳ ಮಹತ್ವದ ಸಭೆ ಕರೆಯಲಾಗಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ, ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಹಲವೆಡೆ ಮತ್ತೆ ಕೊರೊನಾ ಸೋಂಕು ಹೆಚ್ಚುತಿದೆ. ಶಾಲಾ-ಕಾಲೇಜುಗಳಲ್ಲಿ ಹಾಗೂ ಧಾರವಾಡ ಎಸ್ ಡಿಎಂ ವೈದ್ಯಕೀಯ ಕಾಲೇಜಿನಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಿರುವ ಬಗ್ಗೆ ವರದಿಯಾಗಿದೆ. ಅಲ್ಲದೇ ಹೊಸ ರೂಪಾಂತರ ವೈರಸ್ ಬಗ್ಗೆಯೂ ಎಚ್ಚರಿಕೆ ವಹಿಸುವ …
Read More »ಮದ್ಯದ ಅಮಲಿನಲ್ಲಿ ಭಿಕ್ಷುಕಿ ಮೇಲೆ ಅತ್ಯಾಚಾರವೆಸಗಿದ ಕಾಮಾಂದ
ಯಾದಗಿರಿ: ಮದ್ಯದ ಅಮಲಿನಲ್ಲಿ ಭಿಕ್ಷುಕಿ ಮೇಲೆ ಅತ್ಯಾಚಾರವೆಸಗಿದ ಕಾಮಾಂದ ಬಳಿಕ ಪ್ರಶ್ನಿಸಿದರೆ ಭಿಕ್ಷುಕಿ ತನ್ನ ಪತ್ನಿಯಾಗಬೇಕು ಎಂದು ನಾಟಕವಾಡಿದ ಘಟನೆ ಯಾದಗಿರಿಯ ಹಳೇ ಬಸ್ ನಿಲ್ದಾಣದಲ್ಲಿ ನಡೆದಿದೆ. ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸಂಕನೂರ ಗ್ರಾಮದ ಕಾಮುಕ ಹನುಮಂತ (40) ಬಂಧಿತ ಆರೋಪಿ. ಭಿಕ್ಷುಕಿಗೆ ಕಂಠಪೂರ್ತಿ ಮದ್ಯ ಕುಡಿಸಿ ಬಳಿಕ ತಾನೂ ಕುಡಿದು ಭಿಕ್ಷುಕಿ ಮೇಲೆ ಹಲ್ಲೆ ನಡೆಸಿ, ಅತ್ಯಾಚಾರವೆಸಗಿದ್ದಾನೆ. ಇದನ್ನು ಸ್ಥಳೀಯರು ಪ್ರಶ್ನಿಸಿದಾಗ ಆಕೆ ನನ್ನ ಹೆಂಡತಿಯಾಗಬೇಕು ನಾಟಕ ಮಾಡಿದ್ದಾನೆ. …
Read More »ಗುಜನಾಳ ಗ್ರಾಮದ ಬೂತ್ ಗೆ ಶಾಸಕ ಸತೀಶ್ ಜಾರಕಿಹೊಳಿ, ಕೊಣ್ಣೂರ ಗ್ರಾಮಕ್ಕೆ ರಾಹುಲ್ , ಸಿಂದಿಕುರಭೇಟ ಪ್ರಿಯಾಂಕಾ ಜಾರಕಿಹೊಳಿ,: ಬೂತ್ ಏಜೆಂಟ
ಗೋಕಾಕ್ : ಗೋಕಾಕ ತಾಲ್ಲೂಕಿನ ಗುಜನಾಳ ಮತಗಟ್ಟೆಗೆ ನಾನೇ ಬೂತ್ ಮಟ್ಟದ ಏಜೆಂಟರಾಗಿ ಕಾರ್ಯ ನಿರ್ವಹಿಸುತ್ತೇನೆಂದು ಸ್ವತ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಘೋಷಿಸಿದ್ದಾರೆ. ವಿಧಾನಪರಿಷತ್ ಚುನಾವಣೆ ಹಿನ್ನೆಲೆ ಗೋಕಾಕ ಹಿಲ್ ಗಾರ್ಡನ್ ಕಚೇರಿಯಲ್ಲಿ ಶನಿವಾರ ಬೂತ್ ಮಟ್ಟದ ಏಜೆಂಟರುಗಳ ಆಯ್ಕೆ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಬಗ್ಗೆ ತಿಳಿಸಿದ್ದಾರೆ. ಗುಜನಾಳ ಮತಗಟ್ಟೆಯಲ್ಲಿ ಪ್ರತಿ ಬಾರಿಯೂ ರಮೇಶ್ ಜಾರಕಿಹೊಳಿ ಬೆಂಬಲಿಗರ ಪ್ರಭಾವ ಹೆಚ್ಚಾಗಿರುತ್ತದೆ. ಈ ಕಾರಣದಿಂದ ಸತೀಶ್ ಅವರು ಈ …
Read More »ಎರಡೂ ಡೋಸ್ ಕೋವಿಡ್ ಲಸಿಕೆ ಪಡೆದವರಿಗೆ ಮಾತ್ರ ಆಸ್ಪತ್ರೆಗೆ ಎಂಟ್ರಿ!
ಹುಬ್ಬಳ್ಳಿ: ಧಾರವಾಡದ ಎಸ್ಡಿಎಂ ಮೆಡಿಕಲ್ ಕಾಲೇಜಿನಲ್ಲಿ ಕೊರೊನಾ ಸ್ಫೋಟದ ಬೆನ್ನಲ್ಲೇ ವಾಣಿಜ್ಯನಗರಿ ಹುಬ್ಬಳ್ಳಿ ಕಿಮ್ಸ್ ಅಲರ್ಟ್ ಆಗಿದ್ದು, ಎರಡೂ ಡೋಸ್ ಕೊರೊನಾ ಲಸಿಕೆ ಪಡೆದವರಿಗಷ್ಟೇ ಕಿಮ್ಸ್ ಪ್ರವೇಶಕ್ಕೆ ಅನುಮತಿ ನೀಡಲು ನಿರ್ಧರಿಸಲಾಗಿದೆ. ಎಸ್ಡಿಎಂ ಮೆಡಿಕಲ್ ಕಾಲೇಜಿನ 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ಬಂದಿರುವ ಬೆನ್ನಲ್ಲೇ ಈ ನಿರ್ಧಾರ ಕೈಗೊಳ್ಳಲಾಗಿದೆ. ಎರಡೂ ಡೋಸ್ ಪಡೆದ ರೋಗಿಗಳು ಮತ್ತು ಸಂಬಂಧಿಕರಿಗೆ ಮಾತ್ರ ಪ್ರವೇಶ ಕಲ್ಪಿಸಿ ಕಿಮ್ಸ್ ಆಡಳಿತ ಮಂಡಳಿ ಆದೇಶ ಹೊರಡಿಸಿದೆ. ಕಿಮ್ಸ್ …
Read More »ಬಾಗಲಕೋಟೆಯಲ್ಲಿ ಬ್ಲ್ಯಾಕ್ಮೇಲ್ ಮಾಡಿ 13 ಲಕ್ಷ ರೂ. ದೋಚಿದ್ದ ಖದೀಮ ಅರೆಸ್ಟ್
ಬಾಗಲಕೋಟೆ: ಕುಟುಂಬವೊಂದಕ್ಕೆ ಬ್ಲ್ಯಾಕ್ ಮೇಲ್ ಮಾಡಿ 13 ಲಕ್ಷ ರೂ. ದೋಚಿದ್ದ ಖತರ್ನಾಕ್ ಕಿಲಾಡಿ ಯುವಕನನ್ನು ಬಂಧಿಸುವಲ್ಲಿ ಇಲಕಲ್ಲ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. 18 ವರ್ಷದ ಯುವಕ ಸುಲೇಮಾನ್ ಮೇಕಮುಂಗಲಿ ಬಂಧಿತ ಆರೋಪಿ. ಈತ ಇಲಕಲ್ಲ ನಗರದ ಸೀರೆ ವ್ಯಾಪಾರಿ ಸುಜಿತ್ ಎಂಬುವರ ಮಗನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಹಣ ವಸೂಲಿ ಮಾಡಿದ್ದ. ಸದ್ಯ ಆರೋಪಿ ಪೊಲೀಸ್ ವಶದಲ್ಲಿದ್ದಾನೆ. ಇಲಕಲ್ ನಗರದ ಸುಜಿತ್ ಎಂಬ ಸೀರೆ ವ್ಯಾಪಾರಸ್ಥರ 14 ವಯಸ್ಸಿನ …
Read More »ತಾವೇ ಬೂತ್ ಎಜೇಂಟ್ ಆಗ್ತಾರಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ,
ತಾವೇ ಬೂತ್ ಎಜೇಂಟ್ ಆಗ್ತಾರಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಗೋಕಾಕ ಚುನಾವಣಾ ವ್ಯವಸ್ಥೆ ಹೇಗಿದೆ ಎಲ್ಲರಿಗೂ ಗೊತ್ತೆ ಇದೆ, ಹೀಗಾಗಿ ನಾನೇ ಬೂತ್ ಎಜೆಂಟ್ ಆಗಿ ಚುನಾವಣೆಯ ದಿನ ಕೂರುತ್ತೆನೆ ಎಂದ ಸತೀಶ್, ಗೋಕಾಕದ ಹಿಲ್ ಗಾರ್ಡನ್ ನಲ್ಲಿ ಮಾಧ್ಯಮಗಳಿಗೆ ಸತೀಶ್ ಹೇಳಿಕೆ, ಗುಜನಾಳ ಗ್ರಾಂ ಪಂ ನಲ್ಲಿ ನಾನೇ ಬೂತ್ ಎಜೆಂಟ್ ಆಗುವೆ, ಪೂಜಾರಿ ಮಮದಾಪೂರ ದಲ್ಲಿ ಬೂತ್ ಏಜೆಂಟ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದ …
Read More »ನಾನು ಲೋಕಸಭಾ ಚುನಾವಣೆಯಲ್ಲಿ ನನ್ನ ತಮ್ಮ ನನ್ನ ಸೋಲಿಸಿ ಮಂಗಳಾ ಅಂಗಡಿಯನ್ನು ಗೆಲ್ಲಿಸಿ ತಂದಿದ್ದೇನೆ
ಬೆಳಗಾವಿ- ಇತ್ತೀಚಿಗೆ ನಡೆದ ಬೆಳಗಾವಿ ಲೋಕಸಭಾ ಮತಕ್ಷೇತ್ರದ ಉಪ ಚುನಾವಣೆಯಲ್ಲಿ ನನ್ನ ಸ್ವಂತ ತಮ್ಮ ಸತೀಶ್ ಜಾರಕಿಹೊಳಿ ಅವರನ್ನು ಸೋಲಿಸಿ,ಲಿಂಗಾಯತ ಸಮುದಾಯದ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಅವರನ್ನು ಗೆಲ್ಲಿಸಿದ್ದು ನಾನೇ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು. ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿರೇಬಾಗೇವಾಡಿಯಲ್ಲಿ ಬಿಜೆಪಿ ಅಭ್ಯರ್ಥಿ ಮಹಾಂತೇಶ್ ಕವಟಗಠ ಅವರ ಪರವಾಗಿ ಮತಯಾಚಿಸಿದ ಅವರು ಪಕ್ಷದ ವಿಚಾರ ಬಂದಾಗ ನಾನೆಂದಿಗೂ ಕುಟುಂಬ ನೋಡಿಲ್ಲ,ನನಗೆ ಪಕ್ಷದ ಗೆಲುವೇ ಮುಖ್ಯವಾಗಿದ್ದು,ನಾನು …
Read More »ಅಕ್ರಮವಾಗಿ ಪಡಿತರ ಸಾಗಿಸುತ್ತಿದ್ದ ಲಾರಿಗಳನ್ನ ವಶಕ್ಕೆ ಪಡೆದ ಪೊಲೀಸರು..
ಅಕ್ರಮವಾಗಿ ಅಕ್ಕಿ ಚೀಲಗಳನ್ನು ಹೊತ್ತು ಗುರುಮಠಕಲ್ ಕಡೆಯಿಂದ ಗುಜರಾತಿನ ಅಹಮದಾಬಾದ್ ಕಡೆಗೆ ಲಾರಿಗಳು ತೆರಳುತ್ತಿದ್ದವು. ಈ ಕುರಿತಂತೆ ಖಚಿತ ಮಾಹಿತಿ ಪಡೆದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಮೂರು ಲಾರಿಗಳಿಂದ ಒಟ್ಟು 21.62 ಲಕ್ಷ ರೂ. ಮೌಲ್ಯದ ( 50 ಕೆಜಿ ತೂಕದ) 1,962 ಅಕ್ಕಿ ಚೀಲಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಭೀಮರಾಯನಗುಡಿಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಅಧಿಕಾರಿಗಳ ಕಾರ್ಯಕ್ಕೆ ಎಸ್ಪಿ ಡಾ. …
Read More »
Laxmi News 24×7