Breaking News

2 ತಿಂಗಳ ಕಾಲ ಕೇರಳಕ್ಕೆ ಹೋಗುವುದು, ಬರುವುದಕ್ಕೆ ಸಂಪೂರ್ಣ ನಿಷೇಧ ➤ ದ.ಕ. ಜಿಲ್ಲಾಧಿಕಾರಿ ಆದೇಶ

ಮಂಗಳೂರು, ಸೆ.09. ನೆರೆ ರಾಜ್ಯ ಕೇರಳದಲ್ಲಿ ಕೊರೋನಾ ಮತ್ತು ನಿಫಾ ವೈರಸ್ ಹರಡುತ್ತಿರುವುದರಿಂದ ಕೇರಳ ಕಡೆಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸುವವರನ್ನು ಮತ್ತು ಅಲ್ಲಿಗೆ ತೆರಳುವವರನ್ನು ಮುಂದಿನ ಎರಡು ತಿಂಗಳ ಕಾಲ ನಿರ್ಬಂಧಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಆದೇಶ ಹೊರಡಿಸಿದ್ದಾರೆ. ಪ್ಯಾರಾ ಮೆಡಿಕಲ್, ನರ್ಸಿಂಗ್ ಇನ್ನಿತರ ಉದ್ದೇಶಕ್ಕಾಗಿ ಕೇರಳದಿಂದ ಜಿಲ್ಲೆಗೆ ಬರುವ ವಿದ್ಯಾರ್ಥಿಗಳು ಅಕ್ಟೋಬರ್ ಅಂತ್ಯದ ವರೆಗೆ ಮಂಗಳೂರಿಗೆ ಬಾರದಂತೆ ಆಯಾ ಶಿಕ್ಷಣ ಸಂಸ್ಥೆಗಳಿಗೆ ಜಿಲ್ಲಾಧಿಕಾರಿ ನಿರ್ದೇಶನ …

Read More »

ಅಭಿಮನ್ಯು ಹೆಗಲಿಗೆ ಅಂಬಾರಿ, 157 ವೃತ್ತಗಳಲ್ಲಿ ದೀಪಾಲಂಕಾರ -ಹೇಗಿರಲಿದೆ ಮೈಸೂರು ದಸರಾ..?

‘ಮೈಸೂರು ದಸರಾ’ ಸಂಬಂಧ ಇಂದು ಕಾರ್ಯಕಾರಿ ಸಮಿತಿ ಸಭೆ ನಡೆಯಿತು. ಸಭೆ ಬಳಿಕ ಏನೆಲ್ಲಾ ತೀರ್ಮಾನ ಮಾಡಲಾಯಿತು ಅನ್ನೋದ್ರ ಬಗ್ಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದರು.     8 ಆನೆಗಳು ಭಾಗಿ ವೀರನಹೊಸಹಳ್ಳಿಯಿಂದ ಎಂಟು ಆನೆ ಕರೆ ತರುತ್ತೇವೆ. ಸೆಪ್ಟೆಂಬರ್ 13 ರಂದು ಬೆಳಗ್ಗೆ 9.30ಕ್ಕೆ ಗಜಪಡೆ ಪೂಜೆ, 16 ರಂದು ಅರಮನೆ ಬಳಿ ಗಜಪಡೆ ಸ್ವಾಗತ ನೀಡಲಾಗುತ್ತದೆ. ಅಕ್ಟೋಬರ್ 16 …

Read More »

ಎಣ್ಣೆಪ್ರಿಯರಿಗೆ ಹೊಡೆತ ಕೊಟ್ಟ ನಿಫಾ ವೈರಸ್​; ಮಂಗಳೂರಲ್ಲಿ 31 ಮದ್ಯದಂಗಡಿ ಬಂದ್

ಬೆಂಗಳೂರು: ಕೇರಳದಲ್ಲಿ ಮಹಾಮಾರಿ ಕೊರೊನಾ ಸೋಂಕಿನ ಕಾಟ ಒಂದೆಡೆಯಾದ್ರೆ, ನಿಫಾ ವೈರಸ್​ನ ಭೀತಿ ಮತ್ತೊಂದೆಡೆಯಾಗಿದೆ. ಈ ಸಂಬಂಧ ಕೇರಳದಿಂದ ಕರ್ನಾಟಕಕ್ಕೂ ನಿಫಾ ವೈರಸ್​ನ ಕಂಟಕ ಎದುರಾಗಿದೆ. ಈ ಹಿನ್ನೆಲೆ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲು ರಾಜ್ಯ ಸರ್ಕಾರ ಸೂಚನೆ ನೀಡಿದೆ. ಇನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಆರೋಗ್ಯ ಇಲಾಖೆಯು ಸೂಚನೆ ನೀಡಿದ್ದು, ಜಿಲ್ಲೆಯಲ್ಲಿ ನಿಫಾ ಅಲರ್ಟ್​ ಘೋಷಣೆ ಮಾಡಲಾಗಿದೆ. ಈ ಸಂಬಂಧ ಚಿಕಿತ್ಸೆಗಾಗಿ ಜಿಲ್ಲೆಯ ಆಸ್ಪತ್ರೆಗೆ ಬರುವ ರೋಗಿಗಗಳ ಮೇಲೆ …

Read More »

ಭ್ರಷ್ಟಚಾರ ಕೇಸಲ್ಲಿ ಸಿಕ್ಕಿಬಿದ್ದ ಅಧಿಕಾರಿ; ಎಸಿಬಿಗೆ ಮಾಹಿತಿ ನೀಡ್ತೀರಾ? ಎಂದು ಪಕ್ಕದ ಮನೆಯವ್ರ ಮೇಲೆ ಹಲ್ಲೆ

ದಾವಣಗೆರೆ: ಎಸಿಬಿ ದಾಳಿಗೆ ಮಾಹಿತಿ‌ ನೀಡಿದ್ದಾರೆ ಎಂಬ ಆರೋಪ ಮಾಡಿ ಸರ್ಕಾರ ಅಧಿಕಾರಿ ಹಾಗೂ ಸಂಬಂಧಿಕರು ಪಕ್ಕದ ಮನೆಯವರ ಮೇಲೆ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕು ದೇವರಹಳ್ಳಿ ಗ್ರಾಮದಲ್ಲಿ ನಡೆದಿದೆ. ಕೋಲಾರ ಜಿಲ್ಲೆಯ ಮಾಲೂರು ನಗರಸಭೆಯ ಯೋಜನಾ ನಿರ್ದೇಶಕ ಎಚ್.ಕೆ.ಕೃಷ್ಣಪ್ಪ ಹಾಗೂ ಸಂಬಂಧಿಕರು ಹಲ್ಲೆ ಮಾಡಿದ್ದಾರೆ ಅಂತ ಇದೇ ಗ್ರಾಮದ ಎಚ್.ಜೆ.ಗಣೇಶ ಅವರ ಕುಟುಂಬಸ್ಥರಯ ಆರೋಪ ಮಾಡಿದ್ದಾರೆ. ಈ ಸಂಬಂಧ ಚನ್ನಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. …

Read More »

ಅರ್ಕಾವತಿ ಹಗರಣ ಪ್ರಕರಣ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್​ ನೋಟಿಸ್​​​

ಬೆಂಗಳೂರು: ಅರ್ಕಾವತಿ ಲೇಔಟ್ ಭೂ ಅವ್ಯವಹಾರ ಹಗರಣ ಕೇಸ್​ಗೆ ಸಂಬಂಧಿಸಿದಂತೆ ಹೈಕೋರ್ಟ್ ವಿಭಾಗೀಯ ಪೀಠ ರಾಜ್ಯ ಸರ್ಕಾರಕ್ಕೆ ನೊಟೀಸ್ ಜಾರಿ ಮಾಡಿದೆ. ಹಂಗಾಮಿ ಸಿಜೆ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾ. ಸಚಿನ್​ ಶಂಕರ್​ ಮಗದುಮ್ ನೇತೃತ್ವದ ವಿಭಾಗೀಯ ಪೀಠದಿಂದ ನೊಟೀಸ್ ಜಾರಿ ಮಾಡಲಾಗಿದ್ದು, ಈ ಮನವಿ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಲಾಗಿದೆ. ಆಕ್ಷೇಪಣೆ ಬಳಿಕ ನವೆಂಬರ್ 15ಕ್ಕೆ ಅರ್ಜಿ ವಿಚಾರಣೆ ನಡೆಸುವುದಾಗಿ ವಿಭಾಗೀಯ ಪೀಠ …

Read More »

ಕೆಎಂಸಿ ಚುನಾವಣೆ ರದ್ದು ಆದೇಶಕ್ಕೆ ತಡೆ

ಬೆಂಗಳೂರು: ಕರ್ನಾಟಕ ವೈದ್ಯಕೀಯ ಪರಿಷತ್ತಿಗೆ (ಕೆಎಂಸಿ) ನಡೆದಿದ್ದ ಚುನಾವಣೆ ರದ್ದುಗೊಳಿಸಿರುವ ಹೈಕೋರ್ಟ್‌ ಏಕ ಸದಸ್ಯ ಪೀಠದ ಆದೇಶಕ್ಕೆ ವಿಭಾಗೀಯ ಪೀಠ ತಡೆ ನೀಡಿದೆ. ಡಾ.ಮಧುಸೂಧನ ಕರಿಗನೂರು ಮತ್ತು ಇತರರು ಸಲ್ಲಿಸಿದ್ದ ರಿಟ್ ಮೇಲ್ಮನವಿ ಪರಿಶೀಲಿಸಿದ ನ್ಯಾಯಮೂರ್ತಿ ಕೆ.ಎಸ್. ಮುದಗಲ್ ನೇತೃತ್ವದ ವಿಭಾಗೀಯ ಪೀಠ, ಮಧ್ಯಂತರ ಆದೇಶ ನೀಡಿದೆ. ಈ ವಿಷಯದ ಬಗ್ಗೆ ವಿವರಣೆ ಅಗತ್ಯವಿದೆ ಎಂದು ತಿಳಿಸಿದ ಪೀಠ, ಕೆಎಂಸಿ ರಿಜಿಸ್ಟ್ರಾರ್ ಅವರಿಗೆ ನೋಟಿಸ್ ನೀಡಲು ಆದೇಶಿಸಿತು. ‘2020ರ ಜನವರಿ …

Read More »

ಕನ್ನಡ ಹೇವರಿಕೆ ಭಾಷೆ ಕೇಸ್: ಹೈಕೋರ್ಟಲ್ಲಿ ಕ್ಷಮೆ ಕೋರಿದ ಗೂಗಲ್

ಬೆಂಗಳೂರು, ಸೆಪ್ಟೆಂಬರ್ 08: ಸರ್ಚ್ ಇಂಜಿನ್ ದೈತ್ಯ ಗೂಗಲ್ ಸಂಸ್ಥೆ ಮತ್ತೊಮ್ಮೆ ಕನ್ನಡ ಭಾಷೆ ಸರ್ಚ್ ಬಗ್ಗೆ ಉಂಟಾಗಿದ್ದ ವಿವಾದಕ್ಕೆ ಸಂಬಂಧಿಸಿದಂತೆ ಮತ್ತೊಮ್ಮೆ ಕ್ಷಮೆಯಾಚಿಸಿದೆ. ಕನ್ನಡವನ್ನು ಹೇವರಿಕೆ ಭಾಷೆ ಎಂದು ತೋರಿಸಿದ್ದ ಜಾಗತಿಕ ದೈತ್ಯ ಟೆಕ್‌ ಕಂಪೆನಿ ಹೈಕೋರ್ಟಲ್ಲಿ ಕ್ಷಮೆಯಾಚಿಸಿದ್ದರಿಂದ ಗೂಗಲ್‌ ವಿರುದ್ಧ ಕಾನೂನು ಪ್ರಕ್ರಿಯೆ ಆರಂಭಿಸುವಂತೆ ಕೋರಿದ್ದ ಮನವಿಯನ್ನು ವಜಾಗೊಳಿಸಲಾಗಿದೆ. ಗೂಗಲ್ ವಿರುದ್ಧ ಲೀಗಲ್‌ ಅಟಾರ್ನೀಸ್‌ ಮತ್ತು ಬ್ಯಾರಿಸ್ಟರ್ಸ್‌ ಸಂಸ್ಥೆಯ ಮೂಲಕ ಭಾರತೀಯ ಭ್ರಷ್ಟಾಚಾರ ವಿರೋಧಿ ಮಂಡಳಿ ಟ್ರಸ್ಟ್ …

Read More »

ಮಕ್ಕಳ ಬ್ಯಾಗ್ ಮೇಲೆ ರಾಜಕೀಯ ನಾಯಕರ ಚಿತ್ರ ಮುದ್ರಿಸುವಂತಿಲ್ಲ: ಹೈಕೋರ್ಟ್

ಮದ್ರಾಸ್ : ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಸರ್ಕಾರ ಉಚಿತವಾಗಿ ಬ್ಯಾಗ್, ಪಠ್ಯ ಪುಸ್ತಕಗಳನ್ನು ವಿತರಿಸುತ್ತದೆ. ಈ ಸಾಮಾಗ್ರಿಗಳ ಮೇಲೆ ಮುಖ್ಯಮಂತ್ರಿ ಅಥವಾ ಇನ್ಯಾರೇ ರಾಜಕೀಯ ನಾಯಕರ ಚಿತ್ರಗಳನ್ನು ಮುದ್ರಿಸಬಾರದು ಎಂದು ತಮಿಳುನಾಡು ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ಆದೇಶ ನೀಡಿದೆ. ಈ ಕುರಿತು ಸಲ್ಲಿಕೆಯಾಗಿದ್ದ ಪಿಐಎಲ್ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಪಿ.ಟಿ ಆದಿಕೇಶವಲು ಅವರ ನ್ಯಾಯಪೀಠವು ಆದೇಶ ಹೊರಡಿಸಿದೆ. ಮಕ್ಕಳಿಗೆ ಮತದಾನದ ಹಕ್ಕು ಇರುವುದಿಲ್ಲ. …

Read More »

ಕೃಷ್ಣಾ ಮೇಲ್ದಂಡೆ ಯೋಜನೆ 3 ಹಂತ ಅನುಷ್ಠಾನಗೊಳಿಸಲು ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಪ್ರತಿಭಟನೆ

ಬಾಗಲಕೋಟೆ : ಕೃಷ್ಣಾ ಮೇಲ್ದಂಡೆ ಯೋಜನೆ 3 ಹಂತ ಅನುಷ್ಠಾನಗೊಳಿಸಬೇಕು, ಪ್ರವಾಹ ಸಂತ್ರಸ್ತರಿಗೆ ಶಾಶ್ವತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಿಲ್ಲಾಡಳಿತ ಭವನ ತಲುಪಿತು. ನಂತರ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

Read More »

ಹೊಂದಾಣಿಕೆ ಕೊರತೆ, 8 ಸ್ಥಾನ ಕಳೆದುಕೊಂಡ ಕಾಂಗ್ರೆಸ್: ಸತೀಶ್ ಜಾರಕಿಹೊಳಿ

ಬೆಳಗಾವಿ: ಪಾಲಿಕೆ ಚುನಾವಣೆಯಲ್ಲಿ ಆಂತರಿಕ ಹೊಂದಾಣಿಕೆ ಇಲ್ಲದೇ ಕೆಲವು ಸ್ಥಾನ ಕಳೆದುಕೊಳ್ಳಬೇಕಾಯಿತು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಮೊದಲೇ ಹೈಕಮಾಂಡ್ ಗೆ ತಿಳಿಸಿದಂತೆ ನಮ್ಮ ನಿಗದಿತ 15 ಸ್ಥಾನಗಳಲ್ಲಿ ಕಾಂಗ್ರೆಸ್ ಹಾಗೂ 5 ಸ್ಥಾನಗಳಲ್ಲಿ ಪಕ್ಷೇತರರು ಗೆಲ್ಲುವುದಾಗಿ ಹೇಳಿದ್ದೆವು. ಹಾಗಾಗಿ ನಮ್ಮ ಗೆಲುವು ನಮಗೆ ತೃಪ್ತಿ ತಂದಿದೆ. ಆದರೆ ನಗರದ ಉತ್ತರ ಕ್ಷೇತ್ರದಲ್ಲಿ ನಮ್ಮ ಆಂತರಿಕ ಹೊಂದಾಣಿಕೆ ಕಾರಣದಿಂದಾಗಿ …

Read More »