ನವದೆಹಲಿ:ಭಾರತದಲ್ಲಿ ನಿರುದ್ಯೋಗ ದರವು ಆಗಸ್ಟ್‌ನಲ್ಲಿ ಏರಿದೆ ಮತ್ತು ಜುಲೈನಲ್ಲಿದ್ದ 7% ಕ್ಕೆ ಹೋಲಿಸಿದರೆ 8.3% ಕ್ಕೆ ತಲುಪಿದೆ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ಪ್ರಕಾರ, ಔಪಚಾರಿಕ ಮತ್ತು ಅನೌಪಚಾರಿಕ ವಲಯಗಳ 1.9 ದಶಲಕ್ಷಕ್ಕೂ ಹೆಚ್ಚು ಜನರು ಆಗಸ್ಟ್‌ನಲ್ಲಿ ಉದ್ಯೋಗ ಕಳೆದುಕೊಂಡರು. ಉದ್ಯೋಗ ದರವು ಜುಲೈನಲ್ಲಿ 37.5% ರಿಂದ ಆಗಸ್ಟ್ನಲ್ಲಿ 37.2% ಕ್ಕೆ ಇಳಿದಿದೆ,ಜುಲೈನಲ್ಲಿ 399.7 ದಶಲಕ್ಷಕ್ಕೆ ಹೋಲಿಸಿದರೆ, ಸಂಪೂರ್ಣ ಉದ್ಯೋಗವು 397.8 ದಶಲಕ್ಷಕ್ಕೆ ಇಳಿದಿದೆ, ಸಂಸ್ಥೆ ಹೇಳಿದೆ. ‘ನಷ್ಟವು …
Read More »ಕೇಂದ್ರ ಸರಕಾರಕ್ಕೆ ಜನರ ಕಷ್ಟ ಅರ್ಥವಾಗುತ್ತಿಲ್ಲ: ಖರ್ಗೆ
ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಏರಿಕೆ ಬಗ್ಗೆ ಕೇಂದ್ರ ಸರಕಾರ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಸಂಸತ್ತಿನ ಒಳಗೆ ಮತ್ತು ಹೊರಗೆ ನಾವು ಹೋರಾಟ ಮಾಡಿದರೂ ಆಡಳಿತಾರೂಢ ಬಿಜೆಪಿಗೆ ಸಮಸ್ಯೆ ಯಾಕೆ ಅರ್ಥವಾಗುತ್ತಿಲ್ಲವೋ ಗೊತ್ತಿಲ್ಲ ಎಂದು ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು, ಬೆಲೆ ಏರಿಕೆ ಬಗ್ಗೆ ಸೈಕಲ್ ರ್‍ಯಾಲಿ ನಡೆಸಿದ್ದೇವೆ. ಪೆಟ್ರೋಲ್ ಬಂಕ್‌ಗಳ ಮುಂದೆ ಧರಣಿ ಕೂತಿದ್ದೇವೆ, ರಾಜಭವನ ಚಲೋ ಮಾಡಿದ್ದೇವೆ. ಇನ್ನೇನು …
Read More »‘ನಾನು ಎಲ್ಲೂ ಓಡಿ ಹೋಗಿಲ್ಲ..’ ಮುಂಬೈನಿಂದ ಬೆಂಗಳೂರಿಗೆ ವಾಪಸ್ಸಾದ ಅನುಶ್ರೀ.. ಹೇಳಿದ್ದಿದು.!
ಬೆಂಗಳೂರು: ಡ್ರಗ್ ಕೇಸ್ಗೆ ಸಂಬಂಧಿಸಿದಂತೆ ನಿರೂಪಕಿ ಅವರ ಹೆಸರು ಮತ್ತೊಮ್ಮೆ ಚರ್ಚೆಗೆ ಬಂದ ಬೆನ್ನಲ್ಲೇ ಅನುಶ್ರೀ ಮುಂಬೈಗೆ ಹೋಗಿದ್ದರು. ಇದೀಗ ಮುಂಬೈನಿಂದ ಅನುಶ್ರೀ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಬೆಂಗಳೂರಿಗೆ ಬರುತ್ತಲೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅನುಶ್ರೀ.. ನಾನು ಎಲ್ಲಿಯೂ ಓಡಿ ಹೋಗಿಲ್ಲ ಎಂದಿದ್ದಾರೆ. ಮುಂಬೈನಿಂದ ಬೆಂಗಳೂರಿನ ಕಮಲಮ್ಮನ ಗುಂಡಿ ಬಳಿ ಇರುವ ನಿವಾಸಕ್ಕೆ ವಾಪಸ್ಸಾದ ಅನುಶ್ರೀ.. ಪ್ರಶಾಂತ್ ಸಂಬರ್ಗಿ ಅವರು ಕಾನೂನು ಮೂಲಕ ಹೋಗಲಿ.. ನಮ್ಮ ಸಮಾಜದಲ್ಲಿ ಕಾನೂನು ಅಂತ ಇದೆ.. ನಾನು …
Read More »ಮತದಾನದ ವೇಳೆ ವಿವಿ ಪ್ಯಾಟ್ ಹಾಕದೇ ಚುನಾವಣೆ ನಡೆಸಲಾಗಿದೆ ಚುನಾವಣೆಯಲ್ಲಿ ಅಕ್ರಮ ನಡೆದಿದೆ , ಪರಾಭವಗೊಂಡ 310 ಅಭ್ಯರ್ಥಿಗಳಿಂದ ಪ್ರತಿಭಟನೆ ಆರೋಪ:
ಬೆಳಗಾವಿ: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದಡಿಯಲ್ಲಿ ಚುನಾವಣೆಯಲ್ಲಿ ಪರಾಭವಗೊಂಡ 310 ಅಭ್ಯರ್ಥಿಗಳಿಂದ ಪ್ರತಿಭಟನೆ ಕೈಗೊಳ್ಳಲಾಗಿದೆ. ಪರಾಭವಗೊಂಡ ಎಲ್ಲ ಪಕ್ಷಗಳ ಅಭ್ಯರ್ಥಿಗಳು ಪ್ರತಿಭಟನೆ ಕೈಗೊಂಡು ಮರುಚುನಾವಣೆ ನಡೆಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಸುಪ್ರೀಂಕೋರ್ಟ್ ಆದೇಶ ಉಲ್ಲಂಘಿಸಿ ಚುನಾವಣೆ ನಡೆಸಲಾಗಿದೆ ಎಂದು ಆರೋಪಿಸಿರುವ ಪ್ರತಿಭಟನಾಕಾರರು, ಮರುಚುನಾವಣೆ ನಡೆಸಬೇಕು. ನಡೆಸದಿದ್ದರೆ ಸುಪ್ರೀಂಕೋರ್ಟ್ ಮೊರೆ ಹೋಗುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತದಾನದ ವೇಳೆ ವಿವಿ ಪ್ಯಾಟ್ ಹಾಕದೇ ಚುನಾವಣೆ ನಡೆಸಲಾಗಿದೆ, …
Read More »ದಾರುಣ ಘಟನೆ: ನಾಪತ್ತೆಯಾದ ಅಪ್ಪನ ಹುಡುಕುತ್ತಾ ಮಸಣ ಸೇರಿದ ಮಗ..
ಬಳ್ಳಾರಿ: ಕಾಣೆಯಾದ ತಂದೆಯನ್ನ ಹುಡುಕಲು ಹೋದ ಮಗ ಭೀಕರ ಅಪಘಾತ ಸಂಭವಿಸಿ ಮೃತಪಟ್ಟ ದಾರುಣ ಘಟನೆ ಜಿಲ್ಲೆಯ ಕೊಳಗಲ್ ಗ್ರಾಮದ ಬಳಿ ನಡೆದಿದೆ. ತಿಪ್ಪೇಸ್ವಾಮಿ (40) ಮೃತಪಟ್ಟ ದುರ್ದೈವಿ. ನಗರದ ಕರಿಮಾರೆಮ್ಮ ಕಾಲೋನಿ ನಿವಾಸಿ ತಿಪ್ಪೇಸ್ವಾಮಿ ನಾಪತ್ತೆಯಾದ ತಂದೆಯನ್ನು ಹುಡುಕಿಕೊಂಡು ದ್ವಿಚಕ್ರ ವಾಹನದಲ್ಲಿ ಹೋಗುತ್ತಿರುವಾಗ ರಸ್ತೆ ಮಧ್ಯೆ ಅಪಘಾತ ಸಂಭವಿಸಿ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.
Read More »ಡ್ರಗ್ಸ್ ಆರೋಪಕ್ಕೆ ಅನುಶ್ರೀ ಮೊದಲ ಪ್ರತಿಕ್ರಿಯೆ: ಸಂಬರಗಿ ಬಗ್ಗೆ ಏನೆಂದರು?
ಡ್ರಗ್ಸ್ ಕೇಸ್ಗೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಚಾರ್ಜ್ಶೀಟ್ ಸಲ್ಲಿಕೆ ಮಾಡಿದ ಬೆನ್ನಲ್ಲೇ ಅನುಶ್ರೀ ಹೆಸರು ಮುನ್ನೆಲೆಗೆ ಬಂದಿದೆ. ಅಲ್ಲದೆ, ಅವರು ಮುಂಬೈಗೆ ಹಾರಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಅನುಶ್ರೀ ಸ್ಪಷ್ಟನೆ ನೀಡಿದ್ದಾರೆ. ಅನುಶ್ರೀ ವಿರುದ್ಧ ಬಿಗ್ ಬಾಸ್ ಸ್ಪರ್ಧಿ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಸಾಕಷ್ಟು ರೀತಿಯಲ್ಲಿ ಹೇಳಿಕೆಗಳನ್ನು ನೀಡಿದ್ದರು. ಈ ವಿಚಾರದಲ್ಲಿ ಅನುಶ್ರೀ ಸ್ಪಷ್ಟನೆ ನೀಡಿದ್ದಾರೆ. ‘ಪ್ರಶಾಂತ್ ಸಂಬರಗಿ …
Read More »ಕಾಂಗ್ರೆಸ್‌ನ ಸತ್ಯ ಶೋಧನ ವರದಿ : ಅತ್ಯಾಚಾರಕ್ಕೆ ಪೊಲೀಸ್ ವೈಫಲ್ಯ ಕಾರಣ: ತನ್ವೀರ್ ಸೇಠ್
ಮೈಸೂರು: ನಗರದಲ್ಲಿ ಇತ್ತೀಚೆಗೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಗೃಹ ಸಚಿವರು ಹಾಗೂ ಪೊಲೀಸ್ ಇಲಾಖೆಯ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಶಾಸಕ ತನ್ವೀರ್ ಸೇಠ್ ಹೇಳಿದರು. ನಗರದ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು, ಅತ್ಯಾಚಾರ ಪ್ರಕರಣ ಸಂಬಂಧ ಕಾಂಗ್ರೆಸ್‌ನಿಂದ ನೇಮಕವಾಗಿದ್ದ ಸತ್ಯಶೋಧನ ಸಮಿತಿಯ ವರದಿಯನ್ನು ಬಿಡುಗಡೆ ಮಾಡಿ ಮಾತನಾಡಿದರು. ಅತ್ಯಾಚಾರ ಪ್ರಕರಣ ಸಂಬಂಧ ಸತ್ಯಶೋಧನ ಸಮಿತಿ ಸಂಪೂರ್ಣ ಮಾಹಿತಿ ಕಲೆ ಹಾಕಿ ವರದಿ ಸಿದ್ಧಪಡಿಸಿ, ಹಲವು ಶಿಫಾರಸುಗಳನ್ನು …
Read More »ಅನರ್ಹ ಪಡಿತರ ಚೀಟಿದಾರರಿಗೆ ಬಿಗ್ ಶಾಕ್ : ರಾಜ್ಯದಲ್ಲಿ 1.72 ಲಕ್ಷ `BPL’ ಕಾರ್ಡ್ ರದ್ದು
ಬೆಂಗಳೂರು : ಅನರ್ಹ ಪಡಿತರ ಚೀಟಿದಾರರಿಗೆ ಆಹಾರ ಇಲಾಖೆ ಬಿಗ್ ಶಾಕ್ ನೀಡಿದ್ದು, ತೆರಿಗೆ ಪಾವತಿದಾರರಾಗಿದ್ದರೂ ಸುಳ್ಳು ದಾಖಲೆ ನೀಡಿ ಬಿಪಿಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿ ಪಡೆದಿದ್ದ 1.72 ಲಕ್ಷ ಪಡಿತರ ಚೀಟಿಗಳನ್ನು ಆಹಾರ ಇಲಾಖೆ ರದ್ದು ಮಾಡಿದೆ. ಆಹಾರ ಇಲಾಖೆಯು 2021 ರ ಜನವರಿ 1 ರಿಂದ ಸೆ. 1 ರವರೆಗೆ 1,69,400 ಬಿಪಿಎಲ್ ಕಾರ್ಡ್ ಗಳು, 3080 ಅಂತ್ಯೋದಯ ಪಡಿತರ ಚೀಟಿ ಸೇರಿದಂತೆ ಒಟ್ಟು 1,72,480 ಪಡಿತರಚೀಟಿ …
Read More »ಭಾರೀ ಮಳೆಯಿಂದ ಡ್ಯಾಂಗಳಲ್ಲಿ ನೀರು ಏರಿಕೆ;
ಕರಾವಳಿ ಮತ್ತು ಮಲೆನಾಡಿನಲ್ಲಿ ಇಂದಿನಿಂದ 4 ದಿನ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟದ ಬಗ್ಗೆ ಮಾಹಿತಿ ಇಲ್ಲಿದೆ. Karnataka Rain: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಕರ್ನಾಟಕದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಸೆ. 13ರವರೆಗೂ ಮಳೆಯ ಆರ್ಭಟ ಮುಂದುವರೆಯಲಿದೆ. ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸೆ. 13ರವರೆಗೆ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ, ಕರಾವಳಿ …
Read More »ಕೇಂದ್ರದಿಂದ ಕರ್ನಾಟಕಕ್ಕೆ ಮತ್ತೊಂದು ಸಿಹಿಸುದ್ದಿ : ಕೇಂದ್ರ ಹಣಕಾಸು ಸಚಿವಾಲಯದಿಂದ 136 ಕೋಟಿ ರೂ. ಬಿಡುಗಡೆ
ನವದೆಹಲಿ : ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಕೇಂದ್ರ ಹಣಕಾಸು ಸಚಿವಾಲಯ 6ನೇ ಕಂತಿನಲ್ಲಿ 135.92 ಕೋಟಿ ರೂ. ಅನುದಾನವನ್ನು ರಾಜ್ಯಕ್ಕೆ ನೀಡಿದೆ. ಕೇಂದ್ರ ಸರ್ಕಾರವು ಕರ್ನಾಟಕ ಸೇರಿದಂತೆ 17 ರಾಜ್ಯಗಳಿಗೆ ಒಟ್ಟು 9,871 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿದೆ. ಸಂವಿಧಾನದ 27 ನೇ ವಿಧಿಯ ಅನುಸಾರ 15 ನೇ ಹಣಕಾಸು ಆಯೋಗದ ಶಿಫಾರಸಿನಂತೆ 2021-22 ನೇ ಸಾಲಿನ ಆರನೇ ಕಂತಿನ ಪಿಆರ್ ಡಿಪಿ ಅನುದಾನವನ್ನು …
Read More »