ದಾಂಡೇಲಿ : ಸರಕು ತುಂಬಿಕೊಂಡು ಬಂದಿದ್ದ ಟ್ರಕ್ಕನ್ನು ನಿಲ್ಲಿಸಿ, ಸರಕು ಕೆಳಗಿಳಿಸಲು ಕಟ್ಟಲಾದ ಹಗ್ಗವನ್ನು ತೆಗೆಯಲು ಟ್ರಕ್ಕಿನ ಮೇಲೆ ಹತ್ತಿದ್ದ ಚಾಲಕ ಮೇಲಿನಿಂದ ಆಯತಪ್ಪಿ ಬಿದ್ದು ಗಾಯಗೊಂಡ ಘಟನೆ ನಗರದ ವೆಸ್ಟ್ ಕೊಸ್ಟ್ ಕಾಗದ ಕಾರ್ಖಾನೆಯ ಟಿಂಬರ್ ವಾರ್ಡಿನಲ್ಲಿ ಗುರುವಾರ ರಾತ್ರಿ ನಡೆದಿದೆ. ವೆಸ್ಟ್ ಕೊಸ್ಟ್ ಕಾಗದ ಕಾರ್ಖಾನೆಯ ಟಿಂಬರ್ ವಾರ್ಡಿಗೆ ಪೋಲ್ಸ್ ತುಂಬಿಕೊಂಡು ಬಂದಿದ್ದ ಟ್ರಕ್ಕಿನಲ್ಲಿ ಸರಕಿಗೆ ಕಟ್ಟಲಾಗಿದ್ದ ಹಗ್ಗವನ್ನು ಬಿಚ್ಚಲು ಹೋದ ಟ್ರಕ್ಕಿನ ಚಾಲಕ, ಶಿವಮೊಗ್ಗ ಜಿಲ್ಲೆಯ …
Read More »2 ಕೆಎಸ್ಆರ್ಟಿಸಿ ಬಸ್, 1 ವಾಯವ್ಯ ಸಾರಿಗೆ ಬಸ್ ನಡುವೆ ಅಪಘಾತವಾಗಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಗಳೂರು: ಮೂರು ಸರ್ಕಾರಿ ಬಸ್ಗಳು ಡಿಕ್ಕಿ ಹೊಡೆದು, ಬಸ್ಗಳಲ್ಲಿದ್ದ ಪ್ರಯಾಣಿಕರಿಗೆ ಗಾಯವಾದ ಘಟನೆ ಬೆಂಗಳೂರು ನಗರದ ರಾಜ್ಕುಮಾರ್ ರಸ್ತೆಯಲ್ಲಿ ಸಂಭವಿಸಿದೆ. 2 ಕೆಎಸ್ಆರ್ಟಿಸಿ ಬಸ್, 1 ವಾಯವ್ಯ ಸಾರಿಗೆ ಬಸ್ ನಡುವೆ ಅಪಘಾತವಾಗಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಗಲಕೋಟೆ: ಚಿಕ್ಕಪಡಸಲಗಿ ಸೇತುವೆಯ ಮೇಲೆ ಕಾರು ಅಪಘಾತ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಸೇತುವೆ ಮೇಲೆ ಕಾರು ಅಪಘಾತ ಸಂಭವಿಸಿದೆ. ತಡೆಗೋಡೆ ಮಧ್ಯೆ ಸಿಲುಕಿ ಕಾರು ನೇತಾಡುತ್ತಿದ್ದು, ಕಾರಿನ …
Read More »ಮಾರಾಟಕ್ಕಿವೆ ಈ 13 ವಿಮಾನ ನಿಲ್ದಾಣಗಳು : ದುಡ್ಡಿದ್ರೆ, ನೀವು ಖರೀದಿಸ್ಬೋದು ನೋಡಿ.!!
ದೇಶದ ವಿಮಾನಯಾನ ವಲಯದಲ್ಲಿನ ನಷ್ಟವನ್ನ ಸರಿದೂಗಿಸಲು ಭಾರತ ಸರ್ಕಾರವು ವಿಮಾನ ನಿಲ್ದಾಣಗಳನ್ನ ಮಾರಾಟಕ್ಕೆ ಇರಿಸಿದೆ. ಕ್ರಮೇಣವಾಗಿ ಆಯ್ದ ವಿಮಾನ ನಿಲ್ದಾಣಗಳನ್ನ ಖಾಸಗಿ ವ್ಯಕ್ತಿಗಳ ಕೈಗೆ ನೀಡಲು ಸಿದ್ಧತೆ ನಡೆಸಿದೆ. ಬೃಹತ್ ಹಣ ಸಂಗ್ರಹಣೆಯ ಭಾಗವಾಗಿ ಕೇಂದ್ರ ಸರ್ಕಾರವು ಇತ್ತೀಚೆಗೆ ಹಣಗಳಿಕೆಯ ಯೋಜನೆಯನ್ನು ಘೋಷಿಸಿತು. ಇದರ ಭಾಗವಾಗಿ, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು (AAI) ಮುಂದಿನ ವರ್ಷದೊಳಗೆ 13 ವಿಮಾನ ನಿಲ್ದಾಣಗಳನ್ನ ಖಾಸಗೀಕರಣಗೊಳಿಸಲು ಒಪ್ಪಿಕೊಂಡಿದೆ. ಅಂದ್ಹಾಗೆ, ಇದು ಆರು ಪ್ರಮುಖ ವಿಮಾನ …
Read More »ಸಚಿವ ಗೋವಿಂದ ಕಾರಜೋಳ ಮತ್ತು ಅವರ ಕಾರು ಚಾಲಕ ಸೇರಿ ಸರ್ಕಾರಕ್ಕೆ ದೊಡ್ಡ ಪ್ರಮಾಣದಲ್ಲಿ ಮೋಸ ಮಾಡಿದ್ದಾರೆ. : ಆರ್.ಬಿ. ತಿಮ್ಮಾಪುರ
ಬಾಗಲಕೋಟೆ: ಸಚಿವ ಗೋವಿಂದ ಕಾರಜೋಳ ಮತ್ತು ಅವರ ಕಾರು ಚಾಲಕ ಸೇರಿ ಸರ್ಕಾರದ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆಂದು ವಿಧಾನ ಪರಿಷತ್ ಸದಸ್ಯ ಆರ್.ಬಿ. ತಿಮ್ಮಾಪುರ ಆರೋಪಿಸಿದರು. ಗುರುವಾರ ನವನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರು ಚಾಲಕ ಮತ್ತು ಸಚಿವರು ಸೇರಿ ಸರ್ಕಾರಕ್ಕೆ ದೊಡ್ಡ ಪ್ರಮಾಣದಲ್ಲಿ ಮೋಸ ಮಾಡಿದ್ದಾರೆ. ತಮ್ಮ ವಾಹನ ಚಾಲಕನಿಗೆ ಕಳೆದ 17 ವರ್ಷಗಳ ಕಾಲ ಕಾರ್ಖಾನೆಯಿಂದ ತೆಗೆದುಕೊಂಡು ವೇತನ ಹಾಗೂ ಸರಕಾರಿ ವತಿಯಿಂದ ವೇತನ …
Read More »ಬನಹಟ್ಟಿ : ಚಿಮ್ಮಡ ಬಳಿ ರಸ್ತೆ ಅಪಘಾತ ಯುವಕ ಸಾವು
ಬನಹಟ್ಟಿ : ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಮಹಾಲಿಂಗಪೂರ ರಬಕವಿ ರಸ್ತೆಯ ಚಿಮ್ಮಡ ಹದ್ದಿಯ ಮುಘಳಖೋಡ ಬಳಿ ನಡೆದ ರಸ್ತೆ ಅಪಘಾತದಲ್ಲಿ ಯುವನೋರ್ವ ಸಾವನ್ನಪಿದ ಘಟನೆ ಬನಹಟ್ಟಿ ಪೋಲಿಸ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆಯಲ್ಲಿ ಬನಹಟ್ಟಿಯ ಸೋಮವಾರ ಪೇಟೆಯ ನಿವಾಸಿ ಬಾಳಯ್ಯ ಕಾಡಯ್ಯ ಕತ್ತಿ(27) ಮೃತ ದುರ್ದೈವಿ. ಬಾಳಯ್ಯ ಅವರು ಗುರುವಾರ ರಾತ್ರಿ ತನ್ನ ಬೈಕನ್ನು ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ನಿಯಂತ್ರಣ ಕಳೆದುಕೊಂಡು ಬಿದ್ದ ಪರಿಣಾಮ ಗಂಭೀರ ಗಾಯಗೊಂಡು ಚಿಕಿತ್ಸೆಗಾಗಿ …
Read More »ಟೆಂಪೊದಲ್ಲಿ ಮಹಿಳೆ ಅತ್ಯಾಚಾರ; ಖಾಸಗಿ ಭಾಗಕ್ಕೆ ರಾಡ್ ತುರುಕಿ ಚಿತ್ರಹಿಂಸೆ!
ಮಧ್ಯವಯಸ್ಕ ಮಹಿಳೆಯೊಬ್ಬರನ್ನು ರಸ್ತೆ ಬದಿಯಲ್ಲಿದ್ದ ಟೆಂಪೊದೊಳಗೆ ಅತ್ಯಾಚಾರ ನಡೆಸಿ ಖಾಸಗಿ ಭಾಗಕ್ಕೆ ಕಬ್ಬಿಣದ ರಾಡ್ ತುರುಕಿ ಚಿತ್ರಹಿಂಸೆ ನೀಡಿದ ಆಘಾತಕಾರಿ ಘಟನೆ ವಾಣಿಜ್ಯ ನಗರಿ ಮುಂಬೈನಲ್ಲಿ ನಡೆದಿದೆ. ಘಟನೆಯಲ್ಲಿ ಮಹಿಳೆ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೇ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಮೋಹನ್ ಚೌಹಾಣ್ (45) ನನ್ನು ಬಂಧಿಸಲಾಗಿದೆ. ಕೈರಾನಿ ರಸ್ತೆಯಲ್ಲಿ ಮಹಿಳೆಯೊಬ್ಬರಿಗೆ ವ್ಯಕ್ತಿಯೊಬ್ಬ ಹಲ್ಲೆ ನಡೆಸುತ್ತಿದ್ದಾರೆ ಎಂದು ದೂರವಾಣಿ ಕರೆ ಸ್ವೀಕರಿಸಿದ ಪೊಲೀಸರು ತಕ್ಷಣವೇ ಕ್ರಮ ಕೈಗೊಂಡಿದ್ದಾರೆ. …
Read More »ಮಗುವಿಗೆ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ
ಮೈಸೂರು: ಮೂರೂವರೆ ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಸಾಬೀತಾಗಿದ್ದು, 45 ವರ್ಷದ ಜಗದೀಶ್ ಎಂಬಾತನಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 50 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಮೈಸೂರಿನ ಪೋಕ್ಸೋ ವಿಶೇಷ ನ್ಯಾಯಾಲಯ ಈ ಆದೇಶ ನೀಡಿದೆ. ನ್ಯಾಯಾಧೀಶೆ ಶ್ಯಾಮಾಕಂರೋಸ್ ತೀರ್ಪು ನೀಡಿದ್ದಾರೆ. 2019ರಲ್ಲಿ ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮದಲ್ಲಿ ಪ್ರಕರಣ ನಡೆದಿತ್ತು. ಆಟವಾಡುತ್ತಿದ್ದ ಮಗುವಿನ …
Read More »ವಿವಿಧ ವಸತಿ ಯೋಜನೆಗಳಡಿ 4 ಲಕ್ಷ ಮನೆಗಳಿಗೆ ಅರ್ಹ ಫಲಾನುಭವಿಗಳ ಆಯ್ಕೆ: ಬಸವರಾಜ ಬೊಮ್ಮಾಯಿ
ಬೆಂಗಳೂರು: ವಿವಿಧ ವಸತಿ ಯೋಜನೆಗಳಡಿ 4 ಲಕ್ಷ ಮನೆಗಳಿಗೆ ಅರ್ಹ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯನ್ನು ಕೂಡಲೇ ಪ್ರಾರಂಭಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೂಚಿಸಿದ್ದಾರೆ. ಈ ಬಗ್ಗೆ ಸರ್ಕಾರಿ ಆದೇಶ ಹೊರಡಿಸಲಾಗಿದ್ದು, ಕೇಂದ್ರ ಸರ್ಕಾರದಿಂದ 4 ಲಕ್ಷ ಹೊಸ ಮನೆಗಳ ಗುರಿಗೆ ಅನುಮೋದನೆ ದೊರೆಯದಿದ್ದಲ್ಲಿ ಅಥವಾ ಅದಕ್ಕಿಂತ ಕಡಿಮೆ ಮನೆಗಳಿಗೆ ಅನುಮೋದನೆ ದೊರೆತಲ್ಲಿ ಉಳಿದ ಮನೆಗಳನ್ನು ರಾಜ್ಯದ ವಸತಿ ಯೋಜನೆಗಳಡಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಗಿತ್ತು. ಅದರಂತೆ ರಾಜ್ಯದಾದ್ಯಂತ ನಗರ …
Read More »ಮಹಾಲಿಂಗೇಶ್ವರ ನಗರ ಗೋಕಾಕ ನಲ್ಲಿ ಬಸವರಾಜ ಸಾಯನ್ನವರ ಅವರಿಂದ ಸರಳ ರೀತಿಯಲ್ಲಿ ಗಣೇಶ್ ಉತ್ಸವ ಆಚರಣೆ
ಗೋಕಾಕ : ಗೋಕಾಕನಲ್ಲಿ ಪ್ರತಿಯೊಂದು ವಿಶೇಷತೆ ಇದೆ ಗೋಕಾಕ ಜಲಪಾತ ಹಿಡಿದು , ಲಕ್ಷ್ಮಿ ದೇವಿ ಗುಡಿ , ಹಾಗೂ ರಾಜಕಾರಣಕ್ಕೆ ಮುಖ್ಯ ಬುಲಂದಿಯೆ ಗೋಕಾಕ , ಗೋಕಾಕ ಕರದಂಟು ಎಷ್ಟು ಫೇಮಸ್ ಇದೆಯೋ ಅದೇ ರೀತಿ ಗೋಕಾಕ ನಗರದ ಮಹಾಲಿಂಗೇಶ್ವರ ನಗರದ ಗಣಪತಿ ಉತ್ಸವ ಕೂಡ ಅಷ್ಟೇ ಜೋರಾಗಿ ವಿಜೃಂಭಣೆ ಯಿಂದ ಮಾಡುತ್ತ ಬಂದಿದ್ದಾರೆ . ಬಸವರಾಜ ಸಾಯನ್ನವರ ಅವರು.ಇವರು ಎ. ಪಿ.ಎಂ.ಸಿ.ನಿರ್ದೇಶಕರು ಕೂಡ ಹೌದು. ಈ ಬಾರಿ …
Read More »ಮಾನನಷ್ಟ ಮೊಕದ್ದಮೆ ಹಾಕುವ ಎಚ್ಚರಿಕೆ ಕೊಟ್ಟ ಬಿ ಸಿ ಪಾಟೀಲ
ಹಾವೇರಿ: ಕೃಷಿ ಸಚಿವ ಬಿ.ಸಿ ಪಾಟೀಲ್ ತಮ್ಮ ವಿರುದ್ಧ ಕೇಳಿ ಬಂದಿರುವ 210 ಕೋಟಿ ರೂಪಾಯಿ ಭ್ರಷ್ಟಾಚಾರ ಆರೋಪವನ್ನು ತಿರಸ್ಕರಿಸಿದ್ದು, ತಮ್ಮ ಮೇಲಿನ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಹೇಳಿದ್ದಾರೆ. ಹಿರೇಕೆರೂರಿನ ಸ್ವ-ಗೃಹದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಿ.ಸಿ ಪಾಟೀಲ್ ಅವರು, ಭ್ರಷ್ಟಾಚಾರ ಆರೋಪ ಸತ್ಯಕ್ಕೆ ದೂರವಾದದ್ದು. ನಮ್ಮ ಇಲಾಖೆಯಲ್ಲಿ ಮೈಕ್ರೋ ಇರಿಗೇಶನ್ ಇರಬಹುದು ಮ್ಯಾಕಿನಿಷನ್ ಇರಬಹುದು ಅತ್ಯಂತ ಪಾರದರ್ಶಕತೆಯನ್ನು ಕಾಪಾಡಿಕೊಂಡು ಬಂದಿದ್ದೇವೆ. ಕೃಷಿ ಇಲಾಖೆ ಮಾತ್ರ ರಾಜ್ಯ ಸರ್ಕಾರದಲ್ಲಿ ಎಲ್ಲದರಲ್ಲೂ …
Read More »