Breaking News

ವಿಜಯಪುರ : ನೀರಾವರಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಹೆದ್ದಾರಿ ತಡೆದು ಪ್ರತಿಭಟನೆ

ವಿಜಯಪುರ : ರೇವಣಸಿದ್ಧೇಶರ ಏತ ನೀರಾವರಿ ಸೇರಿದಂತೆ ಇಂಡಿ ಕ್ಷೇತ್ರದ ಸಮಗ್ರ ನೀರಾವರಿ ಯೋಜನೆಗಳ ಅನುಷ್ಟಾನಕ್ಕೆ ಆಗ್ರಹಿಸಿ ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ನಡೆಸಲಾಗುತ್ತಿದೆ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹೊರ್ತಿ ಗ್ರಾಮದ ಬಳಿ ಜೆಡಿಎಸ್ ನೇತೃತ್ವದಲ್ಲಿ ರೈತರು ರಾಷ್ಟ್ರೀಯ ಹೆದ್ದಾರಿ- 50 ಸಂಚಾರ ಬಂದ್ ಮಾಡಿ ಹೋರಾಟ ನಡೆಸಿದ್ದಾರೆ. ಬಿ.ಡಿ.ಪಾಟೀಲ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಗಾರರು ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಗೆ ಚಾಲನೆ ನೀಡಬೇಕು, ಇಂಡಿ ತಾಲೂಕಿನ ಕೆರೆಗಳಿಗೆ ನೀರು ತುಂಬಿಸೋ ಕಾಮಗಾರಿಗೆ …

Read More »

ಮೈಸೂರು ಗ್ಯಾಂಗ್ ರೇಪ್ ಪ್ರಕರಣ, ವಿಶೇಷ ಪ್ಯಾಸಿಕ್ಯೂಟರ್ ನೇಮಕ

ಶಿವಮೊಗ್ಗ : ಮೈಸೂರು ಗ್ಯಾಂಗ್ ರೇಪ್ ಪ್ರಕರಣದ ಬಗ್ಗೆ ಶೀಘ್ರ ತನಿಖೆ ನಡೆಸಲು ವಿಶೇಷ ಪ್ಯಾಸಿಕ್ಯೂಟರ್ ನೇಮಕ ಮಾಡಲಾಗುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಇಂದು ಸುದ್ದಿಗಾರರ ಜೊತೆ ಮಾತನಾಡಿದ ಸಂತ್ರಸ್ತೆ ಪೋಷಕರ ಮನವೊಲಿಸುವ ಕೆಲಸ ಮಾಡಲಾಗುತ್ತಿದೆ. ಅಗತ್ಯಬಿದ್ದರೆ ಪ್ಯಾಸಿಕ್ಯೂಟರುಗಳ ನೇಮಕ ಮಾಡಲಾಗುತ್ತದೆ. ಈ ಕುರಿತು ತನಿಖೆ ನಡೆಸಲು ಮುಂದಿನ ದಿನಗಳಲ್ಲಿ ವಿಶೇಷ ಪ್ಯಾಸಿಕ್ಯೂಟರುಗಳ ನೇಮಕ ಮಾಡಲಾಗುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

Read More »

ಶ್ರೀಮಂತ ಪಾಟೀಲ್ ಗೆ ಆಮಿಷವೊಡ್ಡಿದ್ದು ಯಾರೆಂದು ಪರಿಶೀಲನೆ ಆಗಬೇಕು : ಲಕ್ಷ್ಮಣ ಸವದಿ

ಬೆಳಗಾವಿ : ಮಾಜಿ ಸಚಿವ ಶ್ರೀಮಂತ ಪಾಟೀಲ್ ಅವರಿಗೆ ಹಣದ ಆಮಿಷವೊಡ್ಡಿದ್ದು ಯಾರೆಂದು ಪರಿಶೀಲನೆ ಆಗಬೇಕೆಂದು ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಒತ್ತಾಯಿಸಿದ್ದಾರೆ.   ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀಮಂತ ಪಾಟೀಲ್ ರನ್ನು ಈ ಬಗ್ಗೆ ನಾನು ಭೇಟಿ ಮಾಡಿಲ್ಲ. ಅವರಿಗೆ ಯಾರು ಹಣ ಕೊಡಲು ತೆರಳಿದ್ದರು, ಯಾರು ಆಮಿಷವೊಡ್ಡಿದ್ದರೆಂದು ಪರಿಶೀಲನೆ ಆಗಬೇಕೆಂದು ಆಗ್ರಹಿಸಿದರು. ಇನ್ನು ಅಧಿಕಾರ ಶಾಶ್ವತವಲ್ಲ. ತು ಅವಕಾಶ ಕೊಟ್ಟಾಗ ಸದ್ಬಳಕೆ ಮಾಡಿಕೊಳ್ಳಬೇಕು. ಶ್ರೀಮಂತ ಪಾಟೀಲ್ …

Read More »

ಧಾರವಾಡಿ ಎಮ್ಮೆ ತಳಿಗೆ ಸಿಕ್ಕಿತು ರಾಷ್ಟ್ರೀಯ ಮಾನ್ಯತೆ; ಈ ಎಮ್ಮೆಗೆ ಎಷ್ಟೆಲ್ಲಾ ವೈಶಿಷ್ಟ್ಯಗಳಿವೆ ಗೊತ್ತಾ?

ಧಾರವಾಡ(ಸೆ.12): ಧಾರವಾಡ ಪೇಡಾ ಅಂದ್ರೆ ಸಾಕು ಎಲ್ಲರ ಬಾಯಲ್ಲೂ ನೀರು ಬರುತ್ತೆ. ಇದರಿಂದಲ್ಲದೇ ಇಂದು ಧಾರವಾಡ ಪೇಡಾದ ಖ್ಯಾತಿ ವಿಶ್ವಮಟ್ಟಕ್ಕೇರಿದೆ. ಈ ಪೇಡಾ ಸ್ವಾದಿಷ್ಟಕ್ಕೆ ಕಾರಣವೇ ಧಾರವಾಡದ ಎಮ್ಮೆಯ ಹಾಲು. ಧಾರವಾಡ ಪೇಡಾದಂತೆಯೇ ಧಾರವಾಡದ ಎಮ್ಮೆಗೂ ರಾಷ್ಟ್ರಮಟ್ಟದಲ್ಲಿ ಮಾನ್ಯತೆ ಸಿಕ್ಕಿದೆ. ಹೌದು, ಇಷ್ಟು ದಿನ ಕೇವಲ ಧಾರವಾಡಕ್ಕೆ ಮಾತ್ರವೇ ಸೀಮಿತವಾಗಿದ್ದ ಧಾರವಾಡದ ಸ್ಥಳೀಯ ಎಮ್ಮೆ ತಳಿಗೆ ಈಗ ದೇಸಿ ತಳಿಯ ಸ್ಥಾನಮಾನ ನೀಡಲಾಗಿದೆ. ವಿಶೇಷ ತಳಿಗಳಿಗೆ ರಾಷ್ಟ್ರ ಮಟ್ಟದಲ್ಲಿ ಮಾನ್ಯತೆ ಸಿಕ್ಕಾಗ …

Read More »

ಕಾಂಗ್ರೆಸಿಗರು 2 ದಶಕ ಅಧಿಕಾರಕ್ಕೆ ಬರುವ ಕನಸು ಕಾಣಬೇಡಿ: ನಳಿನ್‌

ಬೆಳ್ತಂಗಡಿ: ಕಾಂಗ್ರೆಸ್ಸಿಗರು ಇನ್ನೆರಡು ದಶಕಗಳ ಕಾಲ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಕನಸನ್ನು ಕಾಣುವುದೇ ಬೇಡ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ನಳಿನ್‌ಕುಮಾರ್‌ ಕಟೀಲ್‌ ತಿಳಿಸಿದರು. ಧರ್ಮಸ್ಥಳದಲ್ಲಿ ಶನಿವಾರ 161ನೇ ಬೂತ್‌ ಸಮಿತಿಯ ಅಧ್ಯಕ್ಷರ ಮನೆಗೆ ಬಿಜೆಪಿ ನಾಮಫಲಕ ಅಳವಡಿಸಿದ ಬಳಿಕ ಅವರು ಮಾತನಾಡಿದರು. ರಾಜ್ಯ ಸರಕಾರ ಎಲ್ಲರನ್ನೂ ಒಳಗೊಂಡ ಸಮಗ್ರ ಅಭಿವೃದ್ಧಿಯ ಗುರಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಇಂತಹ ಕಾರ್ಯಗಳು ಬಿಜೆಪಿಯಲ್ಲಿ ಮಾತ್ರ ಕಾಣಲು ಸಾಧ್ಯ ಎಂದರು. ಬೆಳ್ತಂಗಡಿಯಲ್ಲಿ ಕಾಂಗ್ರೆಸ್‌ ನಡೆಸಿಕೊಂಡು ಬಂದಿದ್ದ ಕೀಳುಮಟ್ಟದ …

Read More »

ಸ್ಮಾರ್ಟ್‌ ಸಿಟಿ ಕಾಮಗಾರಿ ವರ್ಷದಲ್ಲಿ ಪೂರ್ಣ: ಗೋವಿಂದ ಕಾರಜೋಳ

ಬೆಳಗಾವಿ: ‘ನಗರದಲ್ಲಿ ಸ್ಮಾರ್ಟ್‌ ಸಿಟಿ ಕೆಲಸಗಳನ್ನು ಇನ್ನೊಂದು ವರ್ಷದಲ್ಲಿ ಪೂರ್ಣಗೊಳಿಸಿ ಜನರಿಗೆ ಅನುಕೂಲ ಮಾಡಿಕೊಡಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ತಿಳಿಸಿದರು. ‘ಕೇಂದ್ರ ಮತ್ತು ರಾಜ್ಯದಲ್ಲಿನ ನಮ್ಮ ಸರ್ಕಾರವು ಅನೇಕ ಜನಪರ ಯೋಜನೆಗಳಿಂದ ಜನರ ವಿಶ್ವಾಸ ಗಳಿಸಿದೆ. ರಾಜ್ಯದಲ್ಲಿ ಹಿಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಾರಿಗೊಳಿಸಿದ ಅಭಿವೃದ್ಧಿ ಕಾರ್ಯಗಳು, ಇಲ್ಲಿನ ಎಲ್ಲ ನಾಯಕರು ಒಗ್ಗೂಡಿ ಶ್ರಮ ವಹಿಸಿದ ಪ್ರತಿಫಲದಿಂದ ಮಹಾನಗರಪಾಲಿಕೆಯಲ್ಲಿ ಬಿಜೆಪಿ ಸ್ಪಷ್ಟ …

Read More »

ಒಂದೇ ಸಮುದಾಯದ 70 ಮಂದಿಗೆ ಎಫ್​ಡಿಎ ಅರ್ಹತೆ?; ಕೆಪಿಎಸ್​ಸಿಯಲ್ಲಿ ಮತ್ತೆ ಅಕ್ರಮ ಶಂಕೆ, ಒಂದೇ ಕೇಂದ್ರದಲ್ಲಿ ಪರೀಕ್ಷೆ ಬರೆದವರಿಗೆ ಜಾಕ್​ಪಾಟ್

ಬೆಂಗಳೂರು: ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ ಸುದ್ದಿಯಲ್ಲಿದ್ದ ಪ್ರಥಮ ದರ್ಜೆ ಸಹಾಯಕ (ಎಫ್​ಡಿಎ) ಹುದ್ದೆಗಳ ಪರೀಕ್ಷೆಯ ಅರ್ಹತಾ ಪಟ್ಟಿಯನ್ನು ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್​ಸಿ) ಬಿಡುಗಡೆ ಮಾಡಿದ್ದು, ಒಂದೇ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳು ಬಹುಸಂಖ್ಯೆಯಲ್ಲಿ ಆಯ್ಕೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕೆಪಿಎಸ್​ಸಿ ಬಿಡುಗಡೆ ಮಾಡಿದ ಎಫ್​ಡಿಎ ಅರ್ಹತಾ ಪಟ್ಟಿಯಲ್ಲಿ 5241, 42, 43 ನೋಂದಣಿ ಸಂಖ್ಯೆಯಲ್ಲಿರುವ ಒಂದೇ ಸಮುದಾಯದ (ನಾಯ್್ಕ ಸುಮಾರು 70ಕ್ಕೂ ಹೆಚ್ಚು ಅಭ್ಯರ್ಥಿಗಳಿದ್ದಾರೆ. ಈ ಎಲ್ಲ ಅಭ್ಯರ್ಥಿಗಳು ಒಂದೇ …

Read More »

ಮಧ್ಯಾಹ್ನದ ಬಿಸಿ ಊಟದ ಯೋಜನೆ ಆಡಿಟ್ ಮಾಡು ಕೇಂದ್ರ ಸರ್ಕಾರ ನಿರ್ಧಾರ

ನವದೆಹಲಿ: ಕೊರೋನಾದಿಂದಾಗಿ ಮಾರ್ಚ್, 2020 ರಿಂದ ಶಾಲೆಗಳು ಬಂದ್ ಆಗಿದ್ದು, ಮಧ್ಯಾಹ್ನದ ಬಿಸಿ ಊಟದ ಯೋಜನೆಯ ವಿವರವಾದ ಲೆಕ್ಕಪರಿಶೋಧನೆ ಮತ್ತು ಪರಿಶೀಲನೆ ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಅದರ ಅಡಿಯಲ್ಲಿ ಆಹಾರ ಭದ್ರತೆ ಭತ್ಯೆಯ ಭಾಗವಾಗಿ ಮಕ್ಕಳಿಗೆ ಆಹಾರ ಧಾನ್ಯಗಳು ಮತ್ತು ಅಡುಗೆ ವೆಚ್ಚವನ್ನು ರಾಜ್ಯಗಳಿಗೆ ನೀಡಲಾಗುತ್ತದೆ. ಕಳೆದ ಒಂದೂವರೆ ವರ್ಷದಲ್ಲಿ ಕೇಂದ್ರವು ಯೋಜನೆಯ ಫಲಾನುಭವಿಗಳಾದ ಸರ್ಕಾರಿ ಶಾಲೆಗಳಲ್ಲಿ 1 ರಿಂದ 8 ನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳಿಗೆ ತಲಾ 100 …

Read More »

ಮಹಿಳಾ ಉದ್ಯೋಗಿಗೆ ಮತ್ತು ಬರಿಸಿ ಚಲಿಸುವ ಕಾರ್ ನಲ್ಲೇ ಗ್ಯಾಂಗ್ ರೇಪ್; ಐವರು ಅರೆಸ್ಟ್

ಚೆನ್ನೈ: ತಮಿಳುನಾಡಿನ ಕಾಂಚೀಪುರಂ ಪೊಲೀಸರು ಚಲಿಸುತ್ತಿದ್ದ ಕಾರ್ ನಲ್ಲಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಐದು ಮಂದಿಯನ್ನು ಬಂಧಿಸಿದ್ದಾರೆ. ಮೊಬೈಲ್ ಫೋನ್ ಅಂಗಡಿಯೊಂದರಲ್ಲಿ ಉದ್ಯೋಗಿಯಾಗಿರುವ 20 ವರ್ಷದ ಮಹಿಳೆ ಪರಿಚಯಸ್ಥ ವ್ಯಕ್ತಿಯನ್ನು ಭೇಟಿಯಾಗಲು ತೆರಳಿದ್ದು, ಈ ವೇಳೆ ಆಕೆಗೆ ಮತ್ತು ಬರುವ ಪಾನೀಯ ನೀಡಿದ ಪರಿಚಯಸ್ಥ ತನ್ನ ಸ್ನೇಹಿತರೊಂದಿಗೆ ಸೇರಿ ಚಲಿಸುವ ಕಾರ್ ನಲ್ಲಿ ಅತ್ಯಾಚಾರ ಎಸಗಿದ್ದಾನೆ. ಕಾಂಚಿಪುರಂ ನಗರದ ರಸ್ತೆಗಳಲ್ಲಿ ಆರೋಪಿಗಳು ಆಕೆಯ ಮೇಲೆ ಕಾರ್ ನಲ್ಲೇ ಸಾಮೂಹಿಕ …

Read More »

ಮೈಸೂರಿನಲ್ಲಿ ದೇವಾಲಯಗಳ ನೆಲಸಮಕ್ಕೆ ಜನತೆ ಆಕ್ರೋಶ : ಜಿಲ್ಲಾಡಳಿತದ ಲಿಸ್ಟ್ ನಲ್ಲಿ ಯಾವ ಯಾವ ದೇವಸ್ಥಾನಗಳಿವೆ ಗೊತ್ತ..?

ಮೈಸೂರು : ಅರಮನೆ ನಗರಿ ಮೈಸೂರಿನಲ್ಲಿ ಹಲವು ದೇವಾಲಯಗಳ ನೆಲಸಮಕ್ಕೆ ಜಿಲ್ಲಾಡಳಿತ ಮುಂದಾಗಿದ್ದು, ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸುಪ್ರೀಂಕೋರ್ಟ್ ನ ನಿಯಮದಂತೆ ಜಿಲ್ಲಾಡಳಿತ ಮೈಸೂರಿನಲ್ಲಿರುವ ಸುಮಾರು 93 ದೇವಾಲಯಗಳನ್ನು ತೆರವು ಮಾಡಲು ಪಾಲಿಕೆ ಪಟ್ಟಿ ಮಾಡಿದೆ. ಹಿಂದೂ ದೇವಾಲಯಗಳನ್ನೇ ‘ಟಾರ್ಗೆಟ್’ ಮಾಡುತ್ತಿರುವುದು ಏಕೆ..? : ಮೈಸೂರು ಜಿಲ್ಲಾಡಳಿತದ ವಿರುದ್ಧ ಪ್ರತಾಪ್ ಸಿಂಹ ಸಿಡಿಮಿಡಿ ಸುಪ್ರೀಂಕೋರ್ಟ್ ನ ಅನಧಿಕೃತ ಧಾರ್ಮಿಕ ಕೇಂದ್ರಗಳ ತೆರವು ನಿಯಮದ ಅನ್ವಯ ಮೈಸೂರು ಜಿಲ್ಲಾಡಳಿತದ ಲಿಸ್ಟ್ …

Read More »