Breaking News

ಗುಡಿಸಲು ಕಟ್ಟಲು ವೇಸ್ಟ್ ಬ್ಯಾನರ್ ಕೊಡಿ ಎಂದ ಅಜ್ಜ-ಅಜ್ಜಿಗೆ 2 ಲಕ್ಷದ ಮನೆಯನ್ನೇ ನಿರ್ಮಿಸಿಕೊಟ್ಟ ಕಾರ್ಪೊರೇಟರ್

ದಾವಣಗೆರೆ: ನಗರದ ಶೇಖರಪ್ಪ ಬಡಾವಣೆ ವಾರ್ಡ್ ನಂ 19 ರಲ್ಲಿ ಪಾಲಿಕೆ ಸದಸ್ಯರೋರ್ವರು ವಯಸ್ಸಾದ ಅಜ್ಜ ಅಜ್ಜಿಗೆ ಮನೆಯನ್ನ ಗಿಫ್ಟ್ ನೀಡಿದ ಮಾನವೀಯ ಘಟನೆ ನಡೆದಿದೆ. ಕಳೆದ 15 ವರ್ಷಗಳಿಂದ ಅಜ್ಜ ಅಜ್ಜಿ ಮನೆಯಿಲ್ಲದೇ ಪರದಾಡುತ್ತಿದ್ದರು. ಇದ್ದ ಮಕ್ಕಳು ತೀರಿಹೋದ ನಂತರ ಸೊಸೆಯಂದಿರು ಅಜ್ಜ ಅಜ್ಜಿಯನ್ನ ಮನೆಯಿಂದ ಹೊರಹಾಕಿದ್ದರು ಎನ್ನಲಾಗಿದೆ. ಹೀಗಾಗಿ ಕಾರ್ಪೊರೇಟರ್ ಬಳಿ ಗುಡಿಸಲು ನಿರ್ಮಿಸಲು ವೇಸ್ಟ್ ಬ್ಯಾನರ್ ಕೊಡಿ ಎಂದು ಅಜ್ಜಿ ಕೇಳಿದ್ದರಂತೆ. ಈ ವೇಳೆ ಅಜ್ಜಿ …

Read More »

ಬೆದರಿದ ಎತ್ತುಗಳು..ಕೆಳಗೆ ಬಿದ್ದ ಕಾಂಗ್ರೆಸ್ ನಾಯಕರು

ಬೆಂಗಳೂರು, ಸೆ.13- ಇಂಧನ, ಅಡುಗೆ ಅನಿಲ ದರ ಏರಿಕೆ ಖಂಡಿಸಿ ಇಂದು ಕಾಂಗ್ರೆಸ್ ಪಕ್ಷದ ವತಿಯಿಂದ ವಿಧಾನಸೌಧಕ್ಕೆ ಎತ್ತಿನ ಗಾಡಿಗಳಲ್ಲಿ ಮುತ್ತಿಗೆ ಹಾಕಿ ಪ್ರತಿಭಟಿಸಿದ ವೇಳೆ ಎತ್ತುಗಳು ಬೆದರಿಕೊಂಡು ಓಡಾಡಿದ್ದರಿಂದ ಗಾಡಿಯಲ್ಲಿದ್ದ ಶಾಸಕರು ಕೆಳಗೆ ಬಿದ್ಧ ಘಟನೆ ನಡೆದಿದೆ. ಶಾಸಕ ವೆಂಕಟರಮಣಯ್ಯ ಮತ್ತು ಸಂಗಮೇಶ್ ಇದ್ದ ಎತ್ತಿನ ಗಾಡಿಯ ಎತ್ತುಗಳು ಹೆದರಿಕೊಂಡು ಅಡ್ಡಾದಿಡ್ಡಿ ಒಡಾಡಿದ್ದರಿಂದ ಆಯಾತಪ್ಪಿ ಅವರು ಕೆಳಗೆ ಬಿದ್ದಿದ್ದಾರೆ. ಇಂದು ಬೆಳಗ್ಗೆ ಬೆಲೆ ಏರಿಕೆ ವಿರೋಧಿಸಿ ಎತ್ತಿನ ಗಾಡಿಗಳಲ್ಲಿ …

Read More »

ಹುಬ್ಬಳ್ಳಿ: ಪಬ್ ನಲ್ಲಿ ರೇಡಿಯೋ ಜಾಕಿಯ ಸ್ನೇಹಿತರಿಂದ ಗಲಾಟೆ

ಹುಬ್ಬಳ್ಳಿ: ಕುಡಿದ ಅಮಲಿನಲ್ಲಿ ರೇಡಿಯೋ ಜಾಕಿಯ ಸ್ನೇಹಿತರು ಗಲಾಟೆ ಮಾಡಿಕೊಂಡಿರುವ ಘಟನೆ ನಗರದ ಗೋಕುಲ ರಸ್ತೆಯಲ್ಲಿರುವ ಐಸ್ ಕ್ಯೂಬ್ ಪಬ್ ನಲ್ಲಿ ನಡೆದಿದೆ. ಆರ್​ಜೆ ಮೇಘಾ ಮತ್ತು ಆಕೆಯ ಸ್ನೇಹಿತರಾದ ಪ್ರವೀಣ, ಕೃತಿಕಾ, ಹರ್ಷ, ಶ್ರೀನಿವಾಸ, ಶರಣ್ಯ, ಶೈಲೇಶ್ ಎಂಬುವವರು ಭಾನುವಾರ ರಾತ್ರಿ ಐಸ್ ಕ್ಯೂ ಪಬ್​ಗೆ ತೆರಳಿದ್ದರು. ಈ ವೇಳೆ ಪ್ಲೇಟ್​ನಲ್ಲಿ ಸಾಸ್​ ಹಾಕಿದ ವಿಚಾರಕ್ಕೆ ಸ್ನೇಹಿತರ ನಡುವೆ ಜಗಳ ಶುರುವಾಗಿದೆ. ಜಗಳ ತಾರಕ್ಕೇರಿದ್ದು ಕುಡಿದ ನಶೆಯಲ್ಲಿ ಬಾಟಲಿ …

Read More »

ಹೇಯ ಕೃತ್ಯ; ಮಹಿಳೆಯನ್ನು ಸಂಪೂರ್ಣ ಬೆತ್ತಲಾಗಿಸಿ ವಿಡಿಯೋ ಮಾಡಿ ಕಾಮುಕರು ವಿಕೃತಿ

ಯಾದಗಿರಿ: ರಾಜ್ಯದಲ್ಲೊಂದು ಬಿಹಾರ್​​ ಮಾದರಿಯಲ್ಲಿ ಹೇಯ ಕೃತ್ಯವೊಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಹಿಳೆಯೊಬ್ಬರನ್ನು ಸಂಪೂರ್ಣ ಬೆತ್ತಲಾಗಿಸಿದ ಕಿಡಿಗೇಡಿಗಳ ಗುಂಪೊಂದು ವಿಡಿಯೋ ಮಾಡಿ ವಿಕೃತಿ ಮೆರೆದಿದೆ. ನಿಮ್ಮ ಕಾಲು ಮುಗಿತೀನಿ ಬಿಡಿ ಎಂದರೂ ಕ್ಯಾರೇ ಎನ್ನದೆ ಮಹಿಳೆಯನ್ನು ನಗ್ನಗೊಳಿಸಿ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಂಗಾಗ ಮುಟ್ಟಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಯಾವುದೋ ಮಾರ್ಗ ಮಧ್ಯೆ ಖಾಲಿ ಜಮೀನೊಂದರಲ್ಲಿ ಕಗ್ಗತ್ತಲಲ್ಲಿ ಮಹಿಳೆಯನ್ನು ಥಳಿಸಿ ವಿಡಿಯೋ ಮಾಡಲಾಗಿದೆ. ಹಲ್ಲೆಕೋರರ ಗುಂಪೇ …

Read More »

ವಿಧಾನಸೌಧದ ರೂಮ್​ ನಂಬರ್​ 208ರ ಪಕ್ಕದಲ್ಲಿ ಮಧ್ಯದ ಬಾಟಲಿಗಳು

ಬೆಂಗಳೂರು: ವಿಧಾನಸೌಧದ ರೂಮ್​ ನಂಬರ್​ 208ರ ಪಕ್ಕದಲ್ಲಿ ಮಧ್ಯದ ಬಾಟಲಿಗಳು ಕಂಡು ಬಂದಿವೆ. ಹೀಗಾಗಿ ವಿಧಾನಸೌಧದಲ್ಲಿ ಎಣ್ಣೆ ಪಾರ್ಟಿ ನಡಿತಿದ್ಯಾ ಎಂಬ ಶಂಕೆ ವ್ಯಕ್ತವಾಗಿದೆ. ಅಧಿವೇಶನದ ಹೊತ್ತಲ್ಲಿ, ಅಷ್ಟೊಂದು ಬಿಗಿ ಭದ್ರೆತಯ ನಡವೆಯೂ ಬಿಯರ್​ ಬಾಟಲಿಗಳು ವಿಧಾನಸೌಧ ಪ್ರವೇಶಿಸಿದ್ದು ಹೇಗೆ ಎಂಬ ಕೂತೂಹಲ ಎಲ್ಲರಲ್ಲಿ ಮೂಡಿದೆ. ರಾತ್ರಿಯಾಗಿ ಬೆಳಗಾಗುವ ಹೊತ್ತಿಗೆ 208 ರೂಂ ಪಕ್ಕದ ವಾಟರ್ ಟ್ಯಾಂಕ್ ಬಳಿ 2 ಬಿಯರ್ ಬಾಟಲ್ ಗಳು ಪತ್ತೆಯಾಗಿದೆ. ಸದ್ಯ ವಿಧಾನಸೌಧದಲ್ಲಿ ಬಿಯರ್ …

Read More »

ಬಾಲಕಿಗೆ ಲೈಂಗಿಕ ಕಿರುಕುಳ: ಆರೋ‍ಪಿ ಸೆರೆಹಿಡಿದ ಸ್ಥಳೀಯರು

ಮಂಗಳೂರು: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ದಲ್ಲಿ ಬೆಂಗಳೂರು ಕಲಾಸಿಪಾಳ್ಯದ ಆರೀಫ್ ಪಾಷಾ(30) ಎಂಬಾತನನ್ನು ಇಲ್ಲಿನ ಕಲ್ಕಟ್ಟದಲ್ಲಿ ಭಾನುವಾರ ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ಫೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ. ಬಂಧಿತನು ಕೂಲಿ ಕಾರ್ಮಿಕ ನಾಗಿದ್ದು, ತಿನಿಸು ನೀಡುವುದಾಗಿ ಹೇಳಿ ಪರಿಚಿತ ವ್ಯಕ್ತಿಯೊಬ್ಬರ ಮಗಳನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದನು. ಆತನ ಕೃತ್ಯಕ್ಕೆ ಹೆದರಿ ಬಾಲಕಿ ಓಡಿ ಬಂದಿದ್ದು, ಅದೇ ದಾರಿಯಲ್ಲಿ ಬರುತ್ತಿದ್ದ ಸಾಮಾಜಿಕ ಕಾರ್ಯಕರ್ತ ತಲಪಾಡಿಯ ಯಶು ಪಕಳ …

Read More »

‘RSS ಮೂಲಕ ಬಿಜೆಪಿ ಸಂಘಟನೆ ಮಾಡ್ತಿದೆ.. ದೇಶ ಸಂಪೂರ್ಣ ನಾಶವಾಗುವ ದಿನಗಳು ದೂರವಿಲ್ಲ’- ಹೆಚ್​ಡಿಕೆ

ಬೆಂಗಳೂರು: ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಮಾತನಾಡಿ ಪಕ್ಷವನ್ನು ಉಳಿಸಿಕೊಳ್ಳಲು ಈ ಹಿಂದೆ ಬಿಜೆಪಿ ಜೊತೆ ಅನಿವಾರ್ಯವಾಗಿ ಹೋಗಬೇಕಾಯಿತು ಎಂದಿದ್ದಾರೆ. ಕಳೆದ 2004ರಲ್ಲಿ ಯಾವ ಪಕ್ಷಕ್ಕೂ ಬಹುಮತ ಬಂದಿರಲಿಲ್ಲ. ಹಲವಾರು ರೀತಿಯ ಒತ್ತಡಗಳನ್ನು ಹಾಕಿದ್ರೂ ಬಿಜೆಪಿ ಜೊತೆ ಹೋಗಿರಲಿಲ್ಲ. ನಂತರ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ರಚನೆ ಆಗಿತ್ತು. ಆದರೆ ಕಾಂಗ್ರೆಸ್ ಪಕ್ಷದ ನಾಯಕರನ್ನು ಬೇರ್ಪಡಿಸುವ ಕುತಂತ್ರಗಳನ್ನು ಕಾಂಗ್ರೆಸ್ ಮಾಡಿತು. ಹಾಗಾಗಿ ಪಕ್ಷವನ್ನು ಉಳಿಸಿಕೊಳ್ಳಲು ಬಿಜೆಪಿ ಜೊತೆ ಅನಿವಾರ್ಯವಾಗಿ ಹೋಗಬೇಕಾಯಿತು. …

Read More »

ನಿಯಂತ್ರಣ ತಪ್ಪಿ ಪಲ್ಟಿಯಾದ ಸಾರಿಗೆ ಸಂಸ್ಥೆಯ ಬಸ್​- ಅದೃಷ್ಟವಶಾತ್ 30 ಕ್ಕೂ ಹೆಚ್ಚು ಪ್ರಯಾಣಿಕರು ಬಚಾವ್

ಗದಗ: ಚಾಲಕನ ನಿಯಂತ್ರಣ ತಪ್ಪಿ ಸಾರಿಗೆ ಸಂಸ್ಥೆಯ ಬಸ್​ ಪಲ್ಟಿಯಾದ ಘಟನೆ ಜಿಲ್ಲೆಯ ನರಗುಂದ ತಾಲೂಕಿನ ಕಲಕೇರಿ ಗ್ರಾಮದ ಬಳಿ ನಡೆದಿದೆ.   ಹುಬ್ಬಳ್ಳಿ-ಇಳಕಲ್ ಮಾರ್ಗದ ಸಾರಿಗೆ ಸಂಸ್ಥೆಯ ಬಸ್ ಮಾರ್ಗ ಮಧ್ಯೆ ಚಾಲಕನ ನಿಯಂತ್ರಣ ತಪ್ಪಿದ್ದು, ಏಕಾಏಕಿ ಪಲ್ಟಿಯಾಗಿದೆ. ಅದೃಷ್ಟವಶಾತ್​ ಬಸ್​ನಲ್ಲಿದ್ದ 30 ಕ್ಕೂ ಹೆಚ್ಚು ಪ್ರಯಾಣಿಕರು ಬಚಾವ್ ಆಗಿದ್ದಾರೆ. ಬಸ್ ಪಲ್ಟಿಯಾದ ಮೇಲೆ ಗ್ಲಾಸ್ ಒಡೆದು ಹೊರಗಡೆ ಬಂದ್ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಘಟನೆಯಲ್ಲಿ ಕೆಲ ಪ್ರಯಾಣಿಕರಿಗೆ ಸಣ್ಣ …

Read More »

700 ಅಡಿಕೆ ಮರಗಳನ್ನು ಕಡಿದು ಹಾಕಿದ್ದ ಆರೋಪಿಯನ್ನ 5 ಗಂಟೆಗಳಲ್ಲಿ ಬಂಧಿಸಿದ ಪೊಲೀಸ್

ಹಾವೇರಿ: ತಾಲೂಕಿನ ಬಾಳಂಬೀಡ ಗ್ರಾಮದಲ್ಲಿ ಬರೋಬ್ಬರಿ 700 ಅಡಿಕೆ ಮರಗಳನ್ನು ಕತ್ತರಿಸಿದ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ನಡೆದ ಐದು ಗಂಟೆಯಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ರೈತ ಸಹೋದರರ ಮನೆಯಲ್ಲಿ ಬಾಡಿಗೆ ಇದ್ದವನೇ ಗಿಡಗಳನ್ನು ಕಡಿದಿರುವ ಆರೋಪಿ ಎನ್ನಲಾಗಿದೆ. ರಾಜಾಸಬ ಹೊಸಮನಿ ಎಂಬಾತನನ್ನು ಬಂಧಿಸಲಾಗಿದ್ದು ಈತ ತೋಟದಲ್ಲಿ ಬಂದ ಫಸಲಲ್ಲಿ ಶೇರ್ ಕೊಡುವಂತೆ ಕೇಳಿದ್ದನಂತೆ. ಈ ವಿಚಾರಕ್ಕೆ ರೈತರು ಹಾಗೂ ಆರೋಪಿ ನಡುವೆ ಜಗಳವಾಗಿತ್ತು.. ಈ ಹಿನ್ನಲೆ ರಾಜಾಸಾಬ ಹೊಸಮನಿಯನ್ನ ಮನೆ …

Read More »

ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರದಾನ: ಕನ್ನಡಕ್ಕೆ ಆದ್ಯತೆ: ಸುನಿಲ್‌ ಕುಮಾರ್‌

ಬೆಂಗಳೂರು: ರಾಜ್ಯ ಸರಕಾರ ಕನ್ನಡಕ್ಕೆ ವಿಶೇಷ ಆದ್ಯತೆ ನೀಡಿದ್ದು, ಎಲ್ಲೆಲ್ಲಿ ಕನ್ನಡವನ್ನು ಪ್ರಧಾನವಾಗಿ ತೆಗೆದುಕೊಂಡು ಬರಲು ಸಾಧ್ಯವೋ, ಅದೆಲ್ಲವನ್ನು ಮಾಡಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್‌ಕುಮಾರ್‌ ಹೇಳಿದ್ದಾರೆ. ಕನ್ನಡ ಸಾಹಿತ್ಯ ಅಕಾಡೆಮಿ ರವಿವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 2020ನೇ ಸಾಲಿನ ಗೌರವ ಪ್ರಶಸ್ತಿ 2019-20ನೇ ಸಾಲಿನ ಸಾಹಿತ್ಯಶ್ರೀ ಮತ್ತು 2018-19ನೇ ಸಾಲಿನ ಪುಸ್ತಕ ಬಹುಮಾನ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಮುಂದಿನ ರಾಜ್ಯೋತ್ಸವವನ್ನು …

Read More »