Breaking News

ಕರ್ನಾಟಕದಲ್ಲಿ ಹೊಸದಾಗಿ 1,003 ಜನರಿಗೆ ಕೊರೊನಾ ದೃಢ; 18 ಮಂದಿ ಸಾವು

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಇಂದು (ಸೆಪ್ಟೆಂಬರ್ 17) ಹೊಸದಾಗಿ 1,003 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ. ಈ ಮೂಲಕ, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 29,66,194 ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 29,12,633 ಜನ ಗುಣಮುಖರಾಗಿ ಡಿಸ್ಚಾರ್ಜ್ ಹೊಂದಿದ್ದಾರೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 18 ಜನರ ಸಾವು ಸಂಭವಿಸಿದೆ. ಅದರಂತೆ, ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 37,573 ಜನ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ 15,960 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ. ಆರೋಗ್ಯ …

Read More »

ಜಿಎಸ್​ಟಿ ಮಂಡಳಿ ಸಭೆ: ಕೈಗೊಂಡ ಪ್ರಮುಖ ನಿರ್ಣಯಗಳು ಇಲ್ಲಿವೆ, ಓದಿ

    ದೆಹಲಿ: ಉತ್ತರ ಪ್ರದೇಶದ ಲಖನೌನಲ್ಲಿ 45ನೇ ಜಿಎಸ್‌ಟಿ ಮಂಡಳಿಯ ಸಭೆಯಲ್ಲಿ ಕೊರೊನಾ ಲಸಿಕೆ ಸಂಬಂಧಿತ ಔಷಧಗಳ ಮೇಲೆ ಜಿಎಸ್​ಟಿ ವಿನಾಯಿತಿಯನ್ನು ಡಿಸೆಂಬರ್ 31ರವರೆಗೆ  ಮುಂದುವರಿಸಲು ನಿರ್ಧರಿಸಲಾಯಿತು. ಕಬ್ಬಿಣ, ಮ್ಯಾಂಗನೀಸ್, ತಾಮ್ರ, ನಿಕಲ್, ಕೋಬಾಲ್ಟ್, ಅಲ್ಯೂಮಿನಿಯಂ, ಸೀಸ, ಸತು, ತವರ, ಕ್ರೋಮಿಯಂ – ಅದಿರು ಮೇಲಿನ ಜಿಎಸ್‌ಟಿ ದರವನ್ನು ಶೇಕಡಾ 5 ರಿಂದ ಶೇಕೆಡಾ 18 ಕ್ಕೆ ಹೆಚ್ಚಿಸಲು ಜಿಎಎಸ್​ಟಿ ಕೌನ್ಸಿಲ್ ಅನುಮೋದನೆ ನೀಡಿತು. ತೆಂಗಿನ ಎಣ್ಣೆ ಮೇಲೆ …

Read More »

ಪ್ರಿಯಾಂಕಾ ಜಾರಕಿಹೊಳಿ ನೇತೃತ್ವದಲ್ಲಿ ನಿರುದ್ಯೋಗ ದಿನ ಆಚರಣೆ; ರಸ್ತೆಯಲ್ಲೇ ಪಕೋಡಾ ತಯಾರಿಸಿ ಆಕ್ರೋಶ

    ಗೋಕಾಕ: ನಗರದಲ್ಲಿ ಇಂದು ಗೋಕಾಕ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಘಟಕದ ವತಿಯಿಂದ ಕಾಂಗ್ರೆಸ್ ಯುವ ನಾಯಕಿ ಪ್ರಿಯಾಂಕಾ ಜಾರಕಿಹೊಳಿಯವರ ನೇತೃತ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನದ ಬದಲು ‘ರಾಷ್ಟ್ರೀಯ ನಿರುದ್ಯೋಗ ದಿನ’ ಆಚರಿಸಿ, ಪ್ರತಿಭಟನೆ ನಡೆಸಲಾಯಿತು.   ಇಲ್ಲಿನ ಬಸವೇಶ್ವರ ಸರ್ಕಲ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ರಸ್ತೆ ಮಧ್ಯದಲ್ಲಿಯೇ ಪಕೋಡಾ (ಮಿರ್ಚಿ ಬಜಿ) ತಯಾರಿಸಿ, ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ …

Read More »

IPS Bhaskar Rao: ಎಡಿಜಿಪಿ ಭಾಸ್ಕರ್ ರಾವ್ ಸ್ವಯಂ ನಿವೃತ್ತಿ ಅರ್ಜಿಗೆ ಒಪ್ಪಿಗೆ ಸೂಚಿಸಿದ ಪ್ರವೀಣ್ ಸೂದ್

ಬೆಂಗಳೂರು: ಎಡಿಜಿಪಿ ಭಾಸ್ಕರ್ ರಾವ್ ಸ್ವಯಂ ನಿವೃತ್ತಿ ಅರ್ಜಿಗೆ ಪೊಲೀಸ್​​ ಮಹಾನಿರ್ದೇಶಕ ಪ್ರವೀಣ್ ಸೂದ್​ರಿಂದ ಒಪ್ಪಿಗೆ ಸಿಕ್ಕಿದೆ. ಭಾಸ್ಕರ್ ರಾವ್ ಸ್ವಯಂ ನಿವೃತ್ತಿ ಅರ್ಜಿಗೆ ಡಿಜಿ, ಐಜಿಪಿ ಒಪ್ಪಿಗೆ ಸೂಚಿಸಿದ್ದಾರೆ. ಕ್ಲಿಯರೆನ್ಸ್ ನೀಡಿ ರಾಜ್ಯ ಸರ್ಕಾರಕ್ಕೆ ಕಡತ ರವಾನೆ ಮಾಡಲಾಗಿದೆ. ಸರ್ಕಾರದ ಗೃಹ ಇಲಾಖೆಗೆ ಕಡತ ರವಾನಿಸಲಾಗಿದೆ. ಇನ್ನು ರಾಜ್ಯ ಸರ್ಕಾರದ ‌ಮಟ್ಟದಲ್ಲಿ ಒಪ್ಪಿಗೆ ಸೂಚಿಸುವುದು ಬಾಕಿ ಇದೆ. ರೈಲ್ವೇ ಪೊಲೀಸ್ ಆಗಿರುವ ಎಡಿಜಿಪಿ ಭಾಸ್ಕರ್ ರಾವ್ ಅವರು ಸೇವೆಯಿಂದ …

Read More »

ಬೆಂಗಳೂರಿನಲ್ಲಿ ಮಾಜಿ ಶಾಸಕರ ಪುತ್ರನಿಂದ ಉದ್ಯಮಿಯ ಪುತ್ರನ ಮೇಲೆ ಹಲ್ಲೆ

ಬೆಂಗಳೂರಿನಲ್ಲಿ ರಾಜಕಾರಣಿಯೊಬ್ಬರ ಪುತ್ರ ಉದ್ಯಮಿಯೊಬ್ಬರ ಪುತ್ರನ ಮೇಲೆ ಹಲ್ಲೆ ನಡೆಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಪಾರ್ಕಿಂಗ್ ವಿಚಾರವಾಗಿ ನಡೆದ ಗಲಾಟೆ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲು ಏರಿದೆ. ಮಾಜಿ ಶಾಸಕ, ಸದ್ಯ ಹಟ್ಟಿ ಗಣಿ ಅಧ್ಯಕ್ಷರಾಗಿರುವ ಮಾನಪ್ಪ ವಜ್ಜಲ್ ಅವರ ಪುತ್ರ ಆಂಜನೇಯ ವಜ್ಜಲ್ ಅವರ ವಿರುದ್ಧ ಈ ಹಲ್ಲೆ ಆರೋಪ ಕೇಳಿ ಬಂದಿದೆ. ಇನ್ನು ಬೆಂಗಳೂರಿನ ವಸಂತನಗರ ಎಂಬೆಸಿ ಅಪಾರ್ಟ್ಮೆಂಟ್ ಬಳಿ ಈ ಜಗಳ ನಡೆದಿದ್ದು, ಈ ಘಟನೆಯ …

Read More »

ಬೈಕ್ ಸವಾರನ ಎಡವ‌ಟ್ಟು: ಇನ್ನೊಬ್ಬ ಸವಾರನ ಕೈಮೇಲೆ ಹರಿದ ಲಾರಿ ಚಕ್ರ

ಚಿಕ್ಕಮಗಳೂರು: ಫೋನ್‌ನಲ್ಲಿ ಮಾತಾಡಿಕೊಂಡು ಬಂದ ಬೈಕ್ ಸವಾರನ ಎಡವಟ್ಟಿನಿಂದಾಗಿ ಎದುರಿಗೆ ಬರುತ್ತಿದ್ದ ಮತ್ತೊಂದು ಬೈಕ್‌ ಸವಾರನ ಕೈಮೇಲೆ ಲಾರಿ ಚಕ್ರ ಹರಿದು ಗಂಭೀರ ಗಾಯಗಳಾಗಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಏಕಮುಖ ಸಂಚಾರದಲ್ಲಿ ಫೋನ್ ನಲ್ಲಿ ಮಾತನಾಡಿಕೊಂಡು ಬರುತ್ತಿದ್ದ ಬೈಕ್ ಸವಾರ ಎದುರಿಗೆ ಬರುತ್ತಿದ್ದ ಮತ್ತೊಂದು ಬೈಕ್‌ ಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯಾಗುತ್ತಿದ್ದಂತೆ ಕೆಳಗೆ ಬಿದ್ದ ಮತ್ತೊಂದು ಬೈಕ್ ಸವಾರನ ಕೈಮೇಲೆ ಲಾರಿ ಚಕ್ರ ಹರಿದಿದ್ದು, ಸವಾರ ಸುಂದರ್ ಎಡಗೈಗೆ ಗಂಭೀರ ಗಾಯಗಳಾಗಿವೆ. …

Read More »

ನಾನು ಬದುಕುಳಿಯುವ ಹಾಗೆ ಕಾಣುತ್ತಿಲ್ಲ, ತುಂಬಾ ನರಳುತ್ತಿದ್ದೇನೆ; ನಾನು ಸತ್ತರೆ ಕಲಾವಿದರೇ ಕಾರಣ: ನಟಿ ವಿಜಯಲಕ್ಷ್ಮಿ

ಆಗಾಗ್ಗೆ ವಿಡಿಯೋಗಳನ್ನು ರಿಲೀಸ್ ಮಾಡುವ ಮೂಲಕ ಸುದ್ದಿಯಲ್ಲಿರುವ ನಟಿ ವಿಜಯಲಕ್ಷ್ಮೀ ಈಗ ಮತ್ತೊಂದು ಹೊಸ ವಿಡಿಯೋ ಹಂಚಿಕೊಂಡಿದ್ದಾರೆ, ನಾನು ಇನ್ನು ಬದುಕುವುದು ಅನುಮಾನ ಎಂದು ನಟಿ ವಿಜಯ ಲಕ್ಷ್ಮಿ ಆತಂಕದ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ನನಗೆ ಕೊರೊನಾ ಸೋಂಕು ಬಂದಿದೆ. ನಾನು ಉಳಿಯುವಂತೆ ಕಾಣುತ್ತಿಲ್ಲ. ದಯವಿಟ್ಟು ನನಗೆ ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ನನಗೆ ಕೋವಿಡ್ ಪಾಸಿಟಿವ್ ಆಗಿ ನ್ಯುಮೋನಿಯಾ ಆಗಿತ್ತು. ಆಸ್ಪತ್ರೆಯ ಖರ್ಚಿಗೂ …

Read More »

ನಾನು ಎಲ್ಲಿ ಚುನಾವಣೆ ಎದುರಿಸಬೇಕು ಎನ್ನುವುದನ್ನು ಹಿರಿಯರು ನಿರ್ಧರಿಸುತ್ತಾರೆ: ವಿಜಯೇಂದ್ರ

ಶಿವಮೊಗ್ಗ: ನಾನು ಭಾರತೀಯ ಪಕ್ಷದ ಕಾರ್ಯಕರ್ತ. ರಾಜ್ಯ ಉಪಾಧ್ಯಕ್ಷನಾಗಿ ನಾನು ನನ್ನ ಕೆಲಸ ಮಾಡುತ್ತಿದ್ದೇನೆ. ರಾಷ್ಟ್ರ ಹಾಗೂ ರಾಜ್ಯ ಮಟ್ಟದ ನಾಯಕರು ಯಾರಿಗೆ ಯಾವ ಸಂದರ್ಭದಲ್ಲಿ ಯಾರಿಗೆ ನೀಡಬೇಕು ಎಂಬುದನ್ನು ತೀರ್ಮಾನ ಮಾಡುತ್ತಾರೆ. ನಾನು ಯಾವುದೇ ಹುದ್ದೆಯ ನಿರೀಕ್ಷೆಯನ್ನಿಟ್ಟುಕೊಂಡು‌ ಕೆಲಸ ಮಾಡುತ್ತಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಎಲ್ಲಿ ಚುನಾವಣೆ ಎದುರಿಸಬೇಕು ಅಥವಾ ನಾನು‌ ಚುನಾವಣೆಗೆ ಸ್ಪರ್ಧಿಸಬೇಕೆ ಅಥವಾ ಬೇಡವೇ …

Read More »

ಮಧ್ಯಾಹ್ನದ ವೇಳೆಗೆ 1 ಕೋಟಿ ಜನರಿಗೆ ಲಸಿಕೆ; ದಾಖಲೆ ನಿರ್ಮಿಸಿದ ಭಾರತ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ಅಂಗವಾಗಿ ಇಂದು ದೇಶಾದ್ಯಂತ ಬೃಹತ್ ಕೋವಿಡ್ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಮಧ್ಯಾಹ್ನದ ವೇಳೆಗೆ ಬರೋಬ್ಬರಿ 1 ಕೋಟಿ ಜನರಿಗೆ ಲಸಿಕೆ ಹಾಕಲಾಗಿದೆ. ಈ ಮೂಲಕ ದೇಶದಲ್ಲಿ ಹೊಸ ದಾಖಲೆ ಬರೆಯಲಾಗಿದೆ. ಇಂದು ದೇಶಾದ್ಯಂತ 1 ಕೋಟಿ ಕೋವಿಡ್ ಲಸಿಕೆ ನೀಡಲಾಗಿದೆ. ಇದರೊಂದಿಗೆ ಭಾರತ ವಿಶ್ವದಲ್ಲೇ ಅತಿದೊಡ್ಡ ವ್ಯಾಕ್ಸಿನೇಷನ್ ಅಭಿಯಾನದ ಸಾಧನೆ ಮಾಡಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ತಿಳಿಸಿದ್ದಾರೆ. ಸಂಜೆವರೆಗೂ ಕೋವಿಡ್ …

Read More »

ಮಾಜಿ-ಹಾಲಿ ಶಾಸಕರ ನಡುವೆ ಜಟಾಪಟಿ; ಗ್ರಾಮದವರಿಗೆ ಕಲುಷಿತ ನೀರು ಕುಡಿಯುವ ಭಾಗ್ಯ

ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣ ನಿವಾಸಿಗಳು ಕಳೆದ ನಾಲ್ಕು ತಿಂಗಳಿಂದ ಕಲುಷಿತ ನೀರನ್ನ ಕುಡಿದು ಆಸ್ಪತ್ರೆ ಪಾಲಾಗುತ್ತಿದ್ದಾರಂತೆ. ಇಲ್ಲಿನ ನೀರು ಹೇಗಿದೆ ಅಂದ್ರೆ ನೀರು ಬಗೆ ಬಗೆ ಬಣ್ಣಕ್ಕೆ ತಿರುಗಿದೆ. ಕುಡಿಯುವ ಜಲವೂ ವಾಸನೆ ಬರುತ್ತಿದೆ. ದಾಹ ತಣಿಸುವ ಹನಿಯೆಲ್ಲವೂ, ಒಗರೊಗರು ರುಚಿ ಬರುತ್ತಿದೆ. ಶುದ್ಧ ನೀರಿನಲ್ಲಿ ಯಾವೆಲ್ಲ ಗುಣಗಳು ಇರಬಾರದೋ ಅದೆಲ್ಲವೂ ಈ ನೀರಿನಲ್ಲಿದೆ. ಅಷ್ಟಕ್ಕೂ ಇದಕ್ಕೆಲ್ಲ ಕಾರಣ, ಮಾಜಿ ಶಾಸಕ ಅಶೋಕ ಪಟ್ಟಣ, ಹಾಲಿ ಬಿಜೆಪಿ ಶಾಸಕ …

Read More »