ದೇಶದ ಜನರ ಸುರಕ್ಷೆ, ಕೋವಿಡ್ ತಡೆಯ ದೃಷ್ಟಿಯಿಂದ ಕೇಂದ್ರ ಸರ್ಕಾರ ದೇಶದ ಜನರಿಗೆ ಉಚಿತವಾಗಿ ಕೈಬಿಟ್ಟು ಲಸಿಕೆಯನ್ನು ಕೊಡುತ್ತಿದೆ.ಆದ್ರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ ಕೊರೊನಾ ಲಸಿಕೆಗಳನ್ನು ಕೊಡದೇ ಇದ್ದರೂ ಕೋವಿಡ್ ಪ್ರಮಾಣ ಪತ್ರಗಳನ್ನು ಕೊಡುತ್ತಿರುವ ಗಂಭೀರ ಆರೋಪ ಕೇಳಿಬಂದಿದೆ. ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಿಬ್ಬಂದಿಗಳು ಕಳೆದ ಎರಡು ತಿಂಗಳಿನಿಂದ ಸಾರ್ವಜನಿಕರಿಗೆ ಕೋವಿಡ್ ಲಸಿಕೆ ನೀಡದ್ದಿದ್ದರೂ ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಚೆನ್ನಮ್ಮ ಕೊಳಚಿ ಎಂಬುವವರು ಮೊದಲ ಮತ್ತು ಎರಡನೇ ಡೋಸ್ …
Read More »ಚುನಾವಣಾ ಪ್ರಕ್ರಿಯೆಗಳ ಮಧ್ಯೆಯೂ ವಿಧಾನಮಂಡಲದ ಚಳಿಗಾಲ ಅಧಿವೇಶನ ಕೆಲಸಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು.
ಈ ಬಾರಿ ಕೋವಿಡ್ ಸೋಂಕು ಹರಡುವಿಕೆ ಭೀತಿ ಹಾಗೂ ಚುನಾವಣಾ ಪ್ರಕ್ರಿಯೆಗಳ ಮಧ್ಯೆಯೂ ವಿಧಾನಮಂಡಲದ ಚಳಿಗಾಲ ಅಧಿವೇಶನ ಕೆಲಸಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಕೋವಿಡ್ ಮಾರ್ಗಸೂಚಿ ಪಾಲಿಸುವ ಮೂಲಕ ಸಮರ್ಪಕ ವಸತಿ, ಸಾರಿಗೆ ಹಾಗೂ ಊಟೋಪಾಹಾರ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ಕಟ್ಟುನಿಟ್ಟಿನ ಸೂಚನೆ ನೀಡಿದರು. ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಬುಧವಾರ ಜರುಗಿದ ಗಣ್ಯರು, ಉನ್ನತ ಅಧಿಕಾರಿಗಳು ಮತ್ತು ಹೋಟೆಲ್ ಗಳ ಸಂಪರ್ಕಾಧಿಕಾರಿಗಳ (ಲೈಸನ್ ಅಧಿಕಾರಿಗಳ) ಸಭೆಯ ಅಧ್ಯಕ್ಷತೆ ವಹಿಸಿ …
Read More »ಬೆಳಗಾವಿಯಲ್ಲಿ ಎಬಿವಿಪಿಯಿಂದ ಜನರಲ್ ಬಿಪಿನ್ ರಾವತ್‍ಗೆ ಶ್ರದ್ಧಾಂಜಲಿ
ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ ಭಾರತೀಯ ಸೇನಾಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಅವರಿಗೆ ಬೆಳಗಾವಿಯಲ್ಲಿ ಎಬಿವಿಪಿ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ತಮಿಳುನಾಡಿನ ಕುನೂರ್ ಅರಣ್ಯಪ್ರದೇಶದಲ್ಲಿ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಸಿಡಿಎಸ್ ಬಿಪಿನ್ ರಾವತ್ ಸೇರಿ 13 ಜನರು ನಿಧನ ಹೊಂದಿದ್ದಾರೆ. ಹೀಗಾಗಿ ಇಡೀ ದೇಶಾಧ್ಯಂತ ಶೋಕದ ವಾತಾವರಣ ನಿರ್ಮಾಣವಾಗಿದೆ. ಇದರಿಂದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‍ನ ಬೆಳಗಾವಿ ಮಹಾನಗರ ಘಟಕದ ವತಿಯಿಂದ ನಗರದ ರಾಜ್ ಲಖಮಗೌಡ ಕಾಲೇಜು ಎದುರಿಗೆ ಶ್ರದ್ಧಾಂಜಲಿ …
Read More »ಲೇಡೀಸ್ ಕ್ಲಬ್ ವತಿಯಿಂದ ಮಹೇಶ್ವರಿ ಅಂಧ ಮಕ್ಕಳ ಶಾಲೆಯ ವಿದ್ಯಾರ್ಥಿನಿಯರಿಗೆ ಹೈಜೆನಿಕ್ ಕಿಟ್‍ಗಳನ್ನು ವಿತರಣೆ
ಬೆಳಗಾವಿಯ ಮೈತ್ರಿ ಆಫೀಸರ್ ಲೇಡೀಸ್ ಕ್ಲಬ್ ವತಿಯಿಂದ ಮಹೇಶ್ವರಿ ಅಂಧ ಮಕ್ಕಳ ಶಾಲೆಯ ವಿದ್ಯಾರ್ಥಿನಿಯರಿಗೆ ಹೈಜೆನಿಕ್ ಕಿಟ್‍ಗಳನ್ನು ವಿತರಣೆ ಮಾಡಿದರು. ಬುಧವಾರ ಬೆಳಗಾವಿಯ ಮಹೇಶ್ವರಿ ಅಂಧ ಮಕ್ಕಳ ಶಾಲೆಗೆ ಆಗಮಿಸಿದ ಬೆಳಗಾವಿಯ ಮೈತ್ರಿ ಆಫೀಸರ್ ಲೇಡೀಸ್ ಕ್ಲಬ್ ಅಧ್ಯಕ್ಷರಾದ ಮೈತ್ರಾಯೀ ಬಿಸ್ವಾಸ್ ಅವರು 30 ವಿದ್ಯಾರ್ಥಿನಿಯರಿಗೆ ಹೈಜೆನಿಕ್ ಕಿಟ್‍ಗಳನ್ನು ವಿತರಣೆ ಮಾಡಿದರು. ಇದೇ ವೇಳೆ ಮುಂಬೈನಿಂದ ಬಂದಿದ್ದ ರಮನ್ ದೇವದಾರ್ ಅವರ ಹೇರ್ ಡ್ರೆಸಸ್‍ನಿಂದ ಸುಮಾರು 90 ವಿದ್ಯಾರ್ಥಿಗಳಿಗೆ ಉಚಿತವಾಗಿ …
Read More »ಮತ ಸೆಳೆಯಲು ತಿರುಪತಿ ಲಡ್ಡು ಜೊತೆಗೆ 7500 ರೂ. ಹಣ.! ಖಾತ್ರಿಗಾಗಿ ದೇವರ ಫೋಟೋ ಮುಟ್ಟಿ ಆಣೆ ಪ್ರಮಾಣ
ಚಿಕ್ಕಬಳ್ಳಾಪುರ : ರಾಜ್ಯದಲ್ಲಿ ವಿಧಾನಪರಿಷತ್ ಚುನಾವಣೆಯ ಕಣ ರಂಗೇರಿದೆ. ಅಭ್ಯರ್ಥಿಗಳು ಗೆಲ್ಲಲು ಹರಸಾಹಸ ಪಡುತ್ತಿದ್ದಾರೆ. ಚಿಂತಕರ ಚಾವಡಿ ಎಂದೇ ಕರೆಯಿಸಿಕೊಳ್ಳುವ ವಿಧಾನ ಪರಿಷತ್ ಚುನಾವಣೆಯಲ್ಲಿ ಸದ್ಯ ಹಣದ ಹೊಳೆಯೇ ಹರಿಯುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಸಿಕ್ಕಿದೆ. ಅಭ್ಯರ್ಥಿಗಳು ಹಣ ನೀಡಿ ಮತ ಚಲಾಯಿಸುವಂತೆ ಮನವಿ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ, ಪಡೆದ ಹಣಕ್ಕೆ ಮೋಸ ಮಾಡಬಾರದು ಎಂದು ದೇವರ ಮೇಲೆ ಆಣೆ ಮಾಡಿಸಿಕೊಳ್ಳುತ್ತಿದ್ದಾರೆ. ಈ ಘಟನೆ …
Read More »ಹೆಲಿಕಾಪ್ಟರ್ ದುರಂತದಲ್ಲಿ ಬದುಕಿ ಉಳಿದ ಏಕೈಕ ಅಧಿಕಾರಿ ವರುಣ್ ಸಿಂಗ್
ಹೆಲಿಕಾಪ್ಟರ್ ದುರಂತದಲ್ಲಿ ಐಎಎಫ್ ನ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಮಾತ್ರವೇ ಬದುಕುಳಿದಿದ್ದಾರೆ. ಅವರಿಗೆ ತಮಿಳುನಾಡಿನ ನೀಲಗಿರಿ ಜಿಲ್ಲೆಯ ವೆಲ್ಲಿಂಗ್ಟನ್‌ನಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರು ಈ ಹಿಂದೆಯೂ ಒಮ್ಮೆ ಪ್ರಾಣಾಪಾಯದಿಂದ ಪಾರಾಗಿದ್ದರು. ಅವರಿಗೆ ಆ.15ರಂದು ಶೌರ್ಯಚಕ್ರ ಪ್ರಶಸ್ತಿ ಕೊಟ್ಟು ಗೌರ ವಿಸಲಾಗಿತ್ತು. ವರುಣ್ ಸಿಂಗ್ ಅವರು 2020 ಅ. 12ರಂದು ಯುದ್ಧವಿಮಾನವೊಂದರ ಪರೀ ಕ್ಷಾರ್ಥ ಹಾರಾಟ ನಡೆಸುತ್ತಿದ್ದರು. ತಾಂತ್ರಿಕ ಸಮಸ್ಯೆ ಕಂಡುಬಂದ ಹಿನ್ನೆಲೆಯಲ್ಲಿ ಅದನ್ನು ಸುರಕ್ಷಿತವಾಗಿ ಇಳಿಸುವ ಪ್ರಯತ್ನದಲ್ಲಿದ್ದ …
Read More »ಭೂಮಿ ಖರೀದಿಸುವವರಿಗೆ ಸಿಹಿ ಸುದ್ದಿ: ಒಂದೇ ದಿನದಲ್ಲಿ ಭೂ ಪರಿವರ್ತನೆ
ಬೆಂಗಳೂರು: ಭೂಮಿ ಖರೀದಿಸಿ ಭೂಪರಿವರ್ತನೆ ಮಾಡಿಸಿಕೊಳ್ಳಲು ಇನ್ನು ಮುಂದೆ ತಿಂಗಳಗಟ್ಟಲೆ ಕಾಯಬೇಕಿಲ್ಲ. ಇದಕ್ಕಾಗಿ ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡುವ ಅಗತ್ಯವೂ ಇಲ್ಲ. ನಿಯಮವನ್ನು ಸರಳೀಕರಣಗೊಳಿಸಿ ಬೇಗನೆ ಅನುಮತಿ ನೀಡುವ ವ್ಯವಸ್ಥೆಯನ್ನು ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ. ಕಂದಾಯ ಸಚಿವ ಆರ್. ಅಶೋಕ್ ಈ ಬಗ್ಗೆ ಮಾಹಿತಿ ನೀಡಿದ್ದು, ಒಂದೇ ದಿನದಲ್ಲಿ ಭೂಪರಿವರ್ತನೆ ಮಾಡಿಕೊಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಭೂ ಪರಿವರ್ತನೆಗಾಗಿ ಹಲವು ಪ್ರಾಧಿಕಾರಗಳ ಅನುಮತಿ ಪಡೆಯಬೇಕಿತ್ತು. ಅಲ್ಲದೆ ಸಂಕೀರ್ಣ …
Read More »ದುಬೈನಿಂದ ಬಂದು ಕೊಲೆಯಾದ, ಬೆತ್ತಲೆ ಮೃತದೇಹ ಪತ್ತೆ; ಅನೈತಿಕ ಸಂಬಂಧಕ್ಕೆ ಕೊಲೆ ಶಂಕೆ
ಕಲಬುರ್ಗಿ: ಆತ ಮೂರು ಮಕ್ಕಳ ತಂದೆ ಕೆಲಸ ಅರಸಿ ದೂರದ ದುಬೈಗೆ ಹೋಗಿದ್ದ. ಆದ್ರೆ ಕರೋನಾ ಸಂದರ್ಭದಲ್ಲಿ ಮತ್ತೆ ತನ್ನೂರಿಗೆ ವಾಪಸ್ ಬಂದಿದ್ದ. ಅಲ್ಲಿಂದ ಬಂದ ಮೇಲೆ ತಾನಾಯ್ತು ತನ್ನ ಕೆಲಸ ಆಯ್ತು ಅಂತ ಊರ ಪಕ್ಕದಲ್ಲಿರೋ ಸತ್ಯ ಸಾಯಿ ವಿವಿ ಯಲ್ಲಿ ಲ್ಯಾಬ್ ಟೆಕ್ನೀಷನ್ ಆಗಿ ಕೆಲ್ಸಾ ಮಾಡ್ತಿದ್ದ ಆದ್ರೆ. ಆದ್ರೆ ಅದೇನಾಯ್ತೊ ಗೊತ್ತಿಲ್ಲ ನಿನ್ನೆ ಕೆಲ್ಸಾ ಮುಗಿಸಿ ಮನೆಗೆ ಹೋಗೊದಾಗಿ ಹೇಳಿ ಅಲ್ಲಿಂದ ಬಂದಿದ್ದ. ಆದ್ರೆ ಮಾರ್ಗಮಧ್ಯದಲ್ಲಿ ತನ್ನೂರಿಗೆ …
Read More »12ರ ಬಾಲಕಿಯೊಬ್ಬಳು 14 ವರ್ಷದ ಬಾಲಕನೊಬ್ಬನಿಂದ ಗರ್ಭಿಣಿ
12ರ ಬಾಲಕಿಯೊಬ್ಬಳು 14 ವರ್ಷದ ಬಾಲಕನೊಬ್ಬನಿಂದ ಗರ್ಭಿಣಿಯಾಗಿರುವ ಘಟನೆ ಹಾಸನದ ಹೊಳೆನರಸೀಪುರದಲ್ಲಿ ತಡವಾಗಿ ಬೆಳೆಕಿಗೆ ಬಂದಿದೆ. 6ನೇ ತರಗತಿ ಓದುತ್ತಿರುವ ಬಾಲಕಿಗೆ ಮನೆ ಸಮೀಪವೇ ಇದ್ದ ಕೂಲಿ ಕಾರ್ಮಿಕನ 14 ವರ್ಷದ ಪುತ್ರನ ಜತೆ ಪ್ರೇಮಾಂಕುರವಾಗಿತ್ತು ಎನ್ನಲಾಗಿದೆ. ಈಚೆಗೆ ತೀವ್ರ ವಾಂತಿಯಾಗಿ ಅಸ್ವಸ್ಥಗೊಂಡಿದ್ದ ಬಾಲಕಿಯನ್ನು ಆಕೆಯ ತಾಯಿ ಆಸ್ಪತ್ರೆಗೆ ಕರೆದೊಯ್ದಾಗ ಆಕೆ ಗರ್ಭಿಣಿಯಾಗಿರುವುದು ದೃಢವಾಗಿದೆ. ಇದರಿಂದ ಕಂಗಾಲಾದ ಪೋಷಕರು ಪೊಲೀಸರ ಮೊರೆ ಹೋಗಿದ್ದಾರೆ. ಈ ವೇಳೆ ಸಂತ್ರಸ್ತ ಬಾಲಕಿ ಮನೆಯಲ್ಲಿ …
Read More »ಮರಕ್ಕೆ ಡಿಕ್ಕಿ ಹೊಡೆದ ಸೇನಾ ಹೆಲಿಕಾಪ್ಟರ್; ಬೆಂಕಿ ಹೊತ್ತಿಕೊಂಡು ಉರಿಯುತ್ತಲೇ ಕೆಳಗೆ ಬಿದ್ದ ಜನ; ಭಯಾನಕ ದೃಶ್ಯ ವಿವರಿಸಿದ ಪ್ರತ್ಯಕ್ಷದರ್ಶಿ
ಚೆನ್ನೈ: ಸಿಡಿಎಸ್ ಬಿಪಿನ್ ರಾವತ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನ ದುರಂತದಲ್ಲಿ 13 ಜನರು ಮೃತಪಟ್ಟಿದ್ದು, ಓರ್ವ ಗಾಯಾಳು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ 14 ಜನರು ಪ್ರಯಾಣಿಸುತ್ತಿದ್ದ MI-17V5 ಹೆಲಿಕಾಪ್ಟರ್ ತಮಿಳುನಾಡಿನ ಕುನ್ನೂರು ಬಳಿಯ ದುರ್ಗಮ ಪ್ರದೇಶದಲ್ಲಿ ದುರಂತಕ್ಕೀಡಾಗಿದ್ದು, ಸೇನಾ ಹೆಲಿಕಾಪ್ಟರ್ ಪತನದ ಭಯಂಕರ ಸನ್ನಿವೇಶವನ್ನು ಪ್ರತ್ಯಕ್ಷದರ್ಶಿ ಕೃಷ್ಣಸ್ವಾಮಿ ವಿವರಿಸಿದ್ದಾರೆ. ಮಧ್ಯಾಹ್ನ 12:20ರ ಸುಮಾರಿಗೆ ಹೆಲಿಕಾಪ್ಟರ್ ವೊಂದು ಮರಕ್ಕೆ ಅಪ್ಪಳಿಸಿದ್ದು, …
Read More »
Laxmi News 24×7