Breaking News

ದಲಿತರ ವಿರುದ್ಧ ಸಿದ್ದರಾಮಯ್ಯ ಹೇಳಿಕೆ: ಬಿಜೆಪಿ ಪ್ರತಿಭಟನೆ

ಶಿವಮೊಗ್ಗ: ‘ದಲಿತರು ಹೊಟ್ಟೆಪಾಡಿಗಾಗಿ ಬಿಜೆಪಿಗೆ ಹೋಗಿದ್ದಾರೆ’ ಎಂಬ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಹೇಳಿಕೆ ಖಂಡಿಸಿ ಬಿಜೆಪಿ ಎಸ್ಸಿ ಮೋರ್ಚಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಬಿಜೆಪಿಯ ನಾಯಕರ ಬಗ್ಗೆ ಅವಹೇಳನಕಾರಿ ಮಾತುಗಳಾಡುವುದನ್ನೇ ಸಿದ್ದರಾಮಯ್ಯ ವೃತ್ತಿಯಾಗಿಸಿಕೊಂಡಿದ್ದಾರೆ. ಕಾಂಗ್ರೆಸ್‌ನಲ್ಲಿ ದಲಿತರೊಬ್ಬರು ಮುಖ್ಯಮಂತ್ರಿಯಾಗುವ ಅವಕಾಶವನ್ನು ಸಿದ್ಧರಾಮಯ್ಯ ತಪ್ಪಿಸಿದರು. ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬಂದು ಬ್ಲ್ಯಾಕ್‌ ಮೇಲ್ ಮಾಡಿ ಮುಖ್ಯಮಂತ್ರಿಯಾದರು. ಅವರೊಬ್ಬ ಕಪಟ ರಾಜಕಾರಣಿ. 2006 ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಕೇವಲ 257 ಮತಗಳ ಅಂತರದಲ್ಲಿ …

Read More »

6 ಗಂಟೆಗೆ ಅವರು ಸವದತ್ತಿಗೆ ಆಗಮಿಸಿ ಯಲ್ಲಮ್ಮ ದೇವಿಯ ದರ್ಶನ ಪಡೆಯಲಿದ್ದಾರೆ ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇನ್ನು ಕೆಲವೇ ಕ್ಷಣಗಳಲ್ಲಿ ಸವದತ್ತಿಗೆ ಭೇಟಿ ನೀಡಲಿದ್ದಾರೆ. ಸಂಜೆ 6 ಗಂಟೆಗೆ ಅವರು ಸವದತ್ತಿಗೆ ಆಗಮಿಸಿ ಯಲ್ಲಮ್ಮ ದೇವಿಯ ದರ್ಶನ ಪಡೆಯಲಿದ್ದಾರೆ. ಹುಬ್ಬಳ್ಳಿಯಿಂದ ಆಗಮಿಸಲಿರುವ ಬೊಮ್ಮಾಯಿ ದೀಪಾವಳಿ ಹಿನ್ನೆಲೆಯಲ್ಲಿ ಯಲ್ಲಮ್ಮ ದೇವಿಯ ದರ್ಶನ ಪಡೆಯಲಿದ್ದಾರೆ. ನಂತರ ಶಾಸಕ, ವಿಧಾನಸಭೆ ಉಪಾಧ್ಯಕ್ಷ ಆನಂದ ಮಾಮನಿ ಅವರ ಮನೆಗೆ ಭೇಟಿ ನೀಡಿ ಹುಬ್ಬಳ್ಳಿಗೆ ವಾಪಸ್ಸಾಗಲಿದ್ದಾರೆ.

Read More »

ಮನೆ ಮನೆಗೆ ತೆರಳಿ ಕರೋನ ಲಸಿಕೆ ಹಾಕಿ: ಜಿಲ್ಲಾಧಿಕಾರಿಗಳ ಸಭೆಯಲ್ಲಿ ಖಡಕ್‌ ಎಚ್ಚರಿಕೆ ನೀಡಿದ ಪ್ರಧಾನಿ ಮೋದಿ

ನವದೆಹಲಿ: ಮನೆ ಮನೆಗೆ ತೆರಳಿ ಕರೋನ ಲಸಿಕೆಯನ್ನು ಹಾಕಿ ಅಂತ ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ. ಅವರು ಇಂದು ಕೋವಿಡ್-19 ಲಸಿಕೆ ವ್ಯಾಪ್ತಿಯಲ್ಲಿ ಹಿಂದುಳಿದಿರುವ 40ಕ್ಕೂ ಹೆಚ್ಚು ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ನಡೆದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಈ ಬಗ್ಗೆ ತಿಳಿಸಿದರು. ಇದೇ ವೇಳೆ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವ್ರು ಬುಧವಾರ ಕೋವಿಡ್-19 ಲಸಿಕೆಯ ಎರಡನೇ ಡೋಸ್ ತೆಗೆದುಕೊಳ್ಳುವ ಅಗತ್ಯವನ್ನ ಒತ್ತಿ ಹೇಳಿದರು. ಇನ್ನು ಈ ಸಡಿಲತೆ …

Read More »

ಸೋಲಿಗೆ ನಾನೊಬ್ಬನೇ ಕಾರಣ ಅಲ್ಲ; ಸಾಮೂಹಿಕ ನಾಯಕತ್ವದ ಜಪಕ್ಕಿಳಿದ, ಕಾಂಗ್ರೆಸ್ ಅಭ್ಯರ್ಥಿ ಒಳ್ಳೆ ಕೆಲಸ ಮಾಡಿದ್ದರು:: ಬೊಮ್ಮಾಯಿ

ಹುಬ್ಬಳ್ಳಿ: ಹಾನಗಲ್ ಉಪ ಚುನಾವಣೆಯಲ್ಲಿ(Hangal By Election) ಬಿಜೆಪಿ(BJP) ಅಭ್ಯರ್ಥಿ ಶಿವರಾಜ ಸಜ್ಜನ್ ಸೋಲನುಭವಿಸಿದ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraja Bommai )ಸಾಮೂಹಿಕ ನಾಯಕತ್ವದ ಜಪ ಮಾಡಲಾರಂಭಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah), ಮುಂದಿನ ಸಾರ್ವತ್ರಿಕ ಚುನಾವಣೆಯನ್ನು ಬೊಮ್ಮಾಯಿ ನೇತೃತ್ವದಲ್ಲಿಯೇ ನಡೆಸೋದಾಗಿ ತಿಳಿಸಿದಾಗ, ಬೊಮ್ಮಾಯಿ ಒಳಗೊಳಗೆ ಬೀಗಿದ್ದರು. ಆದರೆ ಹಾನಗಲ್ ನಲ್ಲಿಯೇ ಬೀಡು ಬಿಟ್ಟು, ಅರ್ಧ ಡಜನ್ ಗೂ ಹೆಚ್ಚು ಸಚಿವರನ್ನು ಸೇರಿಸಿಕೊಂಡು ರಣತಂತ್ರ …

Read More »

ಸಮಸ್ತ ಕರ್ನಾಟಕದ ಜನತೆಗೆ ದೀಪಾವಳಿ ಹಬ್ಬದ ಶುಭ ಕೋರಿದ ಸಂತೋಷ್ ಜಾರಕಿಹೊಳಿ ಯವರು..

ಗೋಕಾಕ:ಗೋಕಾಕ ಹಾಗೂ ನಾಡಿನ ಜನತೆಗೆ ಶ್ರೀ ಸಂತೋಷ್ ಜಾರಕಿಹೊಳಿ ಅವರು ದೀಪಾವಳಿ ಹಬ್ಬದ ಶುಭಾಶಯಗಳನ್ನ ಕೋರಿದ್ದಾರೆ ತಮ್ಮ ಕಾರ್ಖಾನೆಯ ಹಾಗೂ ಸ್ನೇಹಿತರ ಬಳಗದೊಂದಿಗೆ ಸಿಹಿ ಹಂಚಿ ನಮ್ಮ ವಾಹಿನಿಯ ಜೊತೆ ಮಾತನಾಡಿ ದೀಪಾವಳಿಯ ಬಗ್ಗೆ ಕೆಲವು ವಿಷಯ ಗಳನ್ನ ಕೂಡ ಹೇಳಿದ್ದಾರೆ. ದೀಪಾವಳಿ (ದೀಪಗಳ ಸಾಲು) ದೀಪಗಳಿಂದ ದೀಪಗಳನ್ನು ಹಚ್ಚುವ ಹಬ್ಬ. ಇದನ್ನು ವಿಕ್ರಮಶಕೆಯ ವರ್ಷದ ಕೊನೆಯಲ್ಲಿ ಆಚರಿಸಲಾಗುತ್ತದೆ. ವಿಕ್ರಮಶಕೆ ಉತ್ತರ ಭಾರತದಲ್ಲಿ ಉಪಯೋಗಿಸಲ್ಪಡುವುದರಿಂದ ಅಲ್ಲಿ ದೀಪಾವಳಿ ಹೊಸ ವರ್ಷದ …

Read More »

ಸಮಸ್ತ ನಾಡಿನ ಜನತೆಗೆ ದೀಪಾವಳಿಯ ಶುಭಾಶಯ ಕೋರಿದ ಲಖನ್ ಜಾರಕಿಹೊಳಿ

ಗೋಕಾಕ: ದೀಪಾವಳಿ ಎಂದರೆ ಸನಾತನ ಧರ್ಮದ ನಾಡಿನ ಹಬ್ಬ ನಮ್ಮ ಕರ್ನಾಟಕದಲ್ಲಿ ಅಂತೂ ತುಂಬಾ ಅದ್ಧೂರಿಯಾಗಿ ಆಚರಣೆ ಮಾಡುತ್ತಾರೆ , ಮನೆ ಮನೆ ಗಳಲ್ಲಿ ದೀಪ ಹಚ್ಚುವ ಮೂಲಕ ಆಚರಣೆ ಮಾಡುತ್ತಾರೆ. ಗೋಕಾಕ ಸಾಹುಕಾರ ಇಂದು ನಮ್ಮ ವಾಹಿನಿಯ ಜೊತೆ ಮಾತನಾಡಿ ದೀಪಾವಳಿ ಹಬ್ಬದ ಶುಭಾಶಯಗಳನ್ನ ಕೋರಿದ್ದಾರೆ ದೀಪವನ್ನು ಹಚ್ಚಿ ಹಳೆಯ ಹಾಗೂ ಕಹಿಯ ನೆನಪುಗಳಿಂದ ಮುಕ್ತಿ ಹೊಂದಿ ಬಾಳಿನಲ್ಲಿ ಹೊಸ ಬೆಳಕು ಹೊರಬರಲಿ ಹಾಗೂ ಎಲ್ಲ ಕಷ್ಟ ನಷ್ಟ …

Read More »

5 ವರ್ಷದ ಕಂದಮ್ಮನ ಮೇಲೆ ಅತ್ಯಾಚಾರ

ಕೊಪ್ಪಳ: 5 ವರ್ಷದ ಕಂದಮ್ಮನ ಮೇಲೆ ಕಾಮಾಂಧನೊಬ್ಬ ಅತ್ಯಾಚಾರವೆಸಗಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆದಿದೆ. ಅ.31ರಂದು ನಡೆದಿದ್ದ ಗಟನೆ ತಡವಾಗಿ ಬೆಳಕಿಗೆ ಬಂದಿದ್ದು, ಬಾಲಕಿ ತಾಯಿ ಗಂಗಾವತಿ ಠಾಣೆಗೆ ದೂರು ನೀಡಿದ್ದಾರೆ. ಆರೋಪಿ ಸುರೇಶ್ ಅಲಿಯಾಸ್ ಸೂರಿ ವಿರುದ್ಧ ಪೋಕ್ಸೊ ಕಾಯ್ದೆಯಡಿ ದೂರು ದಾಖಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಲಕಿಯನ್ನು ಹೊತ್ತೊಯ್ದ ಆರೋಪಿ ಕುತ್ಯವೆಸಗಿದ್ದಾನೆ ಎನ್ನಲಾಗಿದೆ. ಆರೋಪಿ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Read More »

ಒಂದು ಕ್ಷೇತ್ರ ಗೆದ್ದು ದೇಶ ಆಳ್ತಿವಿ ಅನ್ನೋದು ಮೂರ್ಖತನ : ಬಿಜೆಪಿ ಪಂಚ್

ಬೆಂಗಳೂರು,ನ.3- ಸಿಂಧಗಿ ಮತ್ತು ಹಾನಗಲ್ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ರಾಜಕೀಯ ಪಕ್ಷಗಳು ಈ ಕುರಿತು ಟ್ವೀಟ್ ವಾರ್ ಮುಂದುವರಿದಿದೆ. ಹಾನಗಲ್ ಉಪಚುನಾವಣೆ ಫಲಿತಾಂಶದ ಕಾಂಗ್ರೆಸ್ ಹೇಳಿಕೆಗೆ ಬಿಜೆಪಿ ಕಿಡಿಕಾರಿದೆ. ಈ ಸಂಬಂಧ ಟ್ವೀಟ್ ಮಾದ್ದು, ಸಿದ್ದರಾಮಯ್ಯ ಅವರೇ, ಕಳೆದ ಎರಡು ವರ್ಷದ ಅವಧಿಯಲ್ಲಿ ಎದುರಾದ ಉಪಚುನಾವಣೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಫಲಿತಾಂಶ ಗಮನಿಸಿದ್ದೀರಾ? ನಿಮಗೆ ಮರೆವಿನ ಸಮಸ್ಯೆ ಇಲ್ಲ ಎಂದಾದರೆ ನಾವು ಅಂಕಿ-ಸಂಖ್ಯೆ ನೀಡುವುದಿಲ್ಲ. ಇಲ್ಲವಾದರೆ …

Read More »

ಕೆಆರ್‌ಎಸ್‌ ಅಣೆಕಟ್ಟು ಆಧುನೀಕರಣ ಅಗತ್ಯ : ಸಿಎಂ ಬೊಮ್ಮಾಯಿ

ಮಂಡ್ಯ, ನ.3- ವಿಶ್ವವಿಖ್ಯಾತ ಕೃಷ್ಣರಾಜಸಾಗರ ಅಣೆಕಟ್ಟೆಯನ್ನು ಮುಂದಿನ ನೂರು ವರ್ಷಗಳವರೆಗೆ ಬಳಕೆಯಾಗುವಂತೆ ರಕ್ಷಣೆ ಮತ್ತು ಸಂಪೂರ್ಣ ಆಧುನೀಕರಣಗೊಳಿಸುವ ಅವಶ್ಯಕತೆ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಜಲಸಂಪನ್ಮೂಲ ಇಲಾಖೆ ಮತ್ತು ಕಾವೇರಿ ನೀರಾ ವರಿ ನಿಗಮದ ವತಿಯಿಂದ ತಾಲೂಕಿನ ಕೃಷ್ಣರಾಜಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿ, ಕಾವೇರಿ ಮಾತೆಗೆ ಪೂಜೆ ಸಲ್ಲಿಸಿದ ಬಳಿಕ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು ಕೆಆರ್‌ಎಸ್‌ ಅಣೆಕಟ್ಟಿಗೆ ಒಂದು ಇತಿಹಾಸವಿದೆ. ಒಂದು ವೇಳೆ ನಾಲ್ವಡಿ ಕೃಷ್ಣರಾಜ …

Read More »

Face recognition ವ್ಯವಸ್ಥೆಯನ್ನು ಸ್ಥಗಿತಗೊಳಿಸಲಿರುವ ಫೇಸ್ಬುಕ್ : ಒಂದು ಬಿಲಿಯನ್ ಜನರ Face Print delete

ನ್ಯೂಯಾರ್ಕ್:ಫೇಸ್‌ಬುಕ್ ತನ್ನ ಮುಖ ಗುರುತಿಸುವಿಕೆ (face recognition) ವ್ಯವಸ್ಥೆಯನ್ನು ಸ್ಥಗಿತಗೊಳಿಸುವುದಾಗಿ ಮತ್ತು 1 ಬಿಲಿಯನ್‌ಗಿಂತಲೂ ಹೆಚ್ಚು ಜನರ ಫೇಸ್‌ಪ್ರಿಂಟ್‌ಗಳನ್ನು ಅಳಿಸುವುದಾಗಿ ಹೇಳಿದೆ. ‘ಈ ಬದಲಾವಣೆಯು ತಂತ್ರಜ್ಞಾನದ ಇತಿಹಾಸದಲ್ಲಿ ಮುಖದ ಗುರುತಿಸುವಿಕೆ ಬಳಕೆಯಲ್ಲಿನ ಅತಿದೊಡ್ಡ ಬದಲಾವಣೆಗಳಲ್ಲಿ ಒಂದಾಗಿದೆ’ ಎಂದು ಫೇಸ್‌ಬುಕ್‌ನ ಹೊಸ ಪೋಷಕ ಕಂಪನಿ ಮೆಟಾದ ಕೃತಕ ಬುದ್ಧಿಮತ್ತೆಯ ಉಪಾಧ್ಯಕ್ಷ ಜೆರೋಮ್ ಪೆಸೆಂಟಿ ಅವರು ಹೇಳಿದ್ದಾರೆ.   ‘ಫೇಸ್‌ಬುಕ್‌ನ ದೈನಂದಿನ ಸಕ್ರಿಯ ಬಳಕೆದಾರರಲ್ಲಿ ಮೂರನೇ ಒಂದು ಜನರು ನಮ್ಮ ಮುಖ ಗುರುತಿಸುವಿಕೆ …

Read More »