ಶಿವಮೊಗ್ಗ: ನಾವು ರಾಜೀನಾಮೆ ನೀಡಿ ಬಿಜೆಪಿ ಬರದಿದ್ದರೆ ಸಚಿವರಾಗುತ್ತಿರಲಿಲ್ಲಎಂದು ಸಚಿವ ಬಿ.ಸಿ. ಪಾಟೀಲ್ ಅವರು ಹೇಳಿದರು. ಈಸೂರು ಹುತಾತ್ಮರ ಸ್ಮಾರಕ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯಡಿಯೂರಪ್ಪ ಅವರು ನಮ್ಮ ಜೊತೆ ಗಟ್ಟಿಯಾಗಿ ನಿಂತಿದ್ದರಿಂದಲೇ ನಾವು ಬಿಜೆಪಿಗೆ ಬಂದಿದ್ದು. ನಂಬಿದವರಿಗೆ ಒಳ್ಳೆಯದನ್ನು ಮಾಡಲು ತಮ್ಮ ಸ್ಥಾನ ಬಿಡಲೂ ಯಡಿಯೂರಪ್ಪ ಅಂಜುವುದಿಲ್ಲ. ಯಡಿಯೂರಪ್ಪ ಅವರು ಜಾತ್ಯಾತೀತ ನಾಯಕ. ನಾವು ಕಾಂಗ್ರೆಸ್ ನಿಂದ ಬಿಜೆಪಿಗೆ ಬಂದ 17 ಜನರಲ್ಲಿ ಇಬ್ಬರು …
Read More »ಯಡಿಯೂರಪ್ಪ ಲೂಟಿ ಹೊಡೆಯುದನ್ನು ಬಿಟ್ಟು ಬೇರೇನೂ ಮಾಡಿಲ್ಲ: ಸಿದ್ದರಾಮಯ್ಯ
ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ರಾಜಾಹುಲಿಯಂತೆ, ಇಂದಿರಾ ಕ್ಯಾಂಟಿನ್ ಮುಚ್ಚಿದಕ್ಕೆ ಅವರು ರಾಜಾಹುಲಿಯಾ? ಅತ್ಯುತ್ತಮ ಶಾಸಕನಂತೆ, ಯಡಿಯೂರಪ್ಪ ಎರಡು ವರ್ಷ ಸಿಎಂ ಆಗಿದ್ದರು. ಲೂಟಿ ಹೊಡೆಯುವುದನ್ನು ಬಿಟ್ಟರೆ ಬೇರೆ ಏನು ಮಾಡಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಸಂಜಯನಗರದ ಕುವೆಂಪು ಆಟದ ಮೈದಾನದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಏಳು ಕೆಜಿ ಅಕ್ಕಿ ಉಚಿತವಾಗಿ ಕೊಟ್ಟಿದ್ದೆ, ಕುಮಾರಸ್ವಾಮಿ ಅಕ್ಕಿ ಕೊಟ್ಟಿದ್ದರೆ ಹೇಳಿ? ಯಡಿಯೂರಪ್ಪ ಕೊಟ್ಟಿದ್ದರೇ? ಈಗ ಬೊಮ್ಮಾಯಿ …
Read More »ಗಂಗಾವತಿ : ಭತ್ತದ ಗದ್ದೆಗೆ ನುಗ್ಗಿದ ಕಲ್ಯಾಣ ಕರ್ನಾಟಕ ಸಾರಿಗೆ ಬಸ್
ಗಂಗಾವತಿ : ಗಂಗಾವತಿ ಹುಲಿಗಿ ಮುನಿರಾಬಾದ್ ಸಂಚರಿಸುವ ಕಲ್ಯಾಣ ಕರ್ನಾಟಕ ಸಾರಿಗೆ ಬಸ್ಸು ಇಂದು ತಾಲ್ಲೂಕಿನ ಬಸಾಪುರ ಹತ್ತಿರ ಭತ್ತ ಗದ್ದೆಗೆ ನುಗ್ಗಿ ಅಪಘಾತಕ್ಕೀಡಾಗಿದೆ . ಗಂಗಾವತಿಯಿಂದ ಹುಲಿಗಿಯ ಕಡೆ ಹೊರಟಿದ್ದ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ಸು ಅಪಘಾತಕ್ಕೀಡಾಗಿದೆ ಎದುರಿಗೆ ಬಂದ ವಾಹನಕ್ಕೆ ಆಗುವ ಅಪಘಾತವನ್ನು ತಪ್ಪಿಸಲು ಬಸ್ ಚಾಲಕ ಸ್ಟೇರಿಂಗ್ ಅನ್ನು ತಿರುಗಿಸಿದ್ದರಿಂದ ಸ್ಟೇರಿಂಗ್ ಮುರಿದು ಬಸ್ಸು ಭತ್ತದ ಗದ್ದೆಗೆ ನುಗ್ಗಿ ಗದ್ದೆಯ ಬದುವಿಗೆ ನಿಂತುಕೊಂಡಿದೆ .ಯಾವುದೇ …
Read More »1.27 ಕೋಟಿ ರೂ. ವೆಚ್ಚದ ಹೊಸ ಸರ್ಕಾರಿ ಪ್ರೌಢ ಶಾಲೆ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಬಾಲಚಂದ್ರ ಜಾರಕಿಹೊಳಿ
ಮೂಡಲಗಿ : ಗ್ರಾಮಸ್ಥರ ಒಗ್ಗಟ್ಟಿನ ಹೋರಾಟದಿಂದ ಮಂಜೂರಾಗಿ ರದ್ದಾಗಿದ್ದ ಸರ್ಕಾರಿ ಪ್ರೌಢ ಶಾಲೆಯನ್ನು ಮರಳಿ ಮಂಜೂರಾತಿ ಪಡೆದು ಗ್ರಾಮೀಣ ಪ್ರದೇಶದ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಟ್ಟ ತಿಗಡಿ ಗ್ರಾಮಸ್ಥರನ್ನು ಅರಭಾವಿ ಶಾಸಕರೂ ಆಗಿರುವ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಅಭಿನಂದಿಸಿದರು. ತಾಲೂಕಿನ ತಿಗಡಿ ಗ್ರಾಮದಲ್ಲಿ ಶನಿವಾರದಂದು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆಯಡಿ 1.27 ಕೋಟಿ ರೂ. ವೆಚ್ಚದ ಸರ್ಕಾರಿ ಪ್ರೌಢ ಶಾಲೆಯ ನೂತನ ಕಟ್ಟಡಕ್ಕೆ ಗುದ್ದಲಿ …
Read More »ಒಂದು ಲಕ್ಷ ರುಪಾಯಿ ಮೊತ್ತದ ಪರಿಹಾರ ಚೆಕ್ ನ್ನು ಪತ್ರಕರ್ತ ಯಲ್ಲಪ್ಪ ಕಾನಾರ ಅವರ ಕುಟುಂಬಕ್ಕೆ ವಿತರಿಸಿದ ಬೊಮ್ಮಾಯಿ
ಬೆಳಗಾವಿ – ಇತ್ತೀಚೆಗೆ ಅಕಾಲಿಕವಾಗಿ ಮರಣಹೊಂದಿದ ಖಾನಾಪುರದ ಪತ್ರಕರ್ತ ಯಲ್ಲಪ್ಪ ಕಾನಾರ ಅವರ ಕುಟುಂಬಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಒಂದು ಲಕ್ಷ ರುಪಾಯಿ ಮೊತ್ತದ ಪರಿಹಾರ ಚೆಕ್ ನ್ನು ಬೆಳಗಾವಿಯಲ್ಲಿ ವಿತರಿಸಿದರು. ಲೋಂಡಾದ ಯಲ್ಲಪ್ಪ ಕಾನಾರ ಕೊರೋನಾದಿಂದಾಗಿ ಈಚೆಗೆ ನಿಧನರಾಗಿದ್ದಾರೆ. ಸುಂಮಾರು 25 ವರ್ಷಗಳ ಕಾಲ ಯಲ್ಲಪ್ಪ ಪತ್ರಿಕಾ ವರದಿಗಾರರಾಗಿ, ಫೋಟೋಗ್ರಾಫರ್ ಆಗಿ ಕೆಲಸ ಮಾಡಿದ್ದರು. ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಉಪಸ್ಥಿತರಿದ್ದರು.
Read More »ವಿಶೇಷಚೇತನ ಮಕ್ಕಳಿಗಾಗಿ ವಿನೂತನವಾಗಿ ನಿರ್ಮಿಸಲಾಗಿರುವ ಮಹಾತ್ಮ ಫುಲೆ ಉದ್ಯಾನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾನುವಾರ ಲೋಕಾರ್ಪಣೆಗೊಳಿಸಿದರು.
ಬೆಳಗಾವಿ: ಕುಂದಾ ನಗರಿ ಬೆಳಗಾವಿ ಜಿಲ್ಲೆಯ ಎರಡು ದಿನಗಳ ಪ್ರವಾಸದಲ್ಲಿರುವ ಸಿಎಂ ಬಸವರಾಜ್ ಬೊಮ್ಮಾಯಿ, ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಇಲ್ಲಿನ ಟಿಳಕವಾಡಿಯಲ್ಲಿ ವಿಶೇಷಚೇತನ ಮಕ್ಕಳಿಗಾಗಿ ವಿನೂತನವಾಗಿ ನಿರ್ಮಿಸಲಾಗಿರುವ ಮಹಾತ್ಮ ಫುಲೆ ಉದ್ಯಾನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾನುವಾರ ಲೋಕಾರ್ಪಣೆಗೊಳಿಸಿದರು. ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ, ಸಚಿವರಾದ ಉಮೇಶ್ ಕತ್ತಿ, ಸಂಸದ ಅಣ್ಣಾಸಾಹೇಬ್ ಜೊಲ್ಲೆ, ಶಾಸಕರಾದ ಅಭಯ್ ಪಾಟೀಲ, ಮಹಾದೇವಪ್ಪ ಯಾದವಾಡ ಮತ್ತಿತರರು ಉಪಸ್ಥಿತರಿದ್ದರು.
Read More »ಜಾತಿ ಸಮೀಕ್ಷೆ ಪ್ರಚಾರಕ್ಕೆ ಸೀಮಿತ: ಸಿದ್ದರಾಮಯ್ಯ ವಿರುದ್ಧ ಎಚ್‌ಡಿಕೆ ವಾಗ್ದಾಳಿ
ರಾಮನಗರ: ‘ಜಾತಿ ಸಮೀಕ್ಷೆ ಬಗ್ಗೆ ಸದನದಲ್ಲಿ ಮಾತನಾಡುವುದನ್ನು ಬಿಟ್ಟು ಬೀದಿಯಲ್ಲಿ ಮಾತನಾಡುವುದು ಅವರ ಇಬ್ಬಗೆಯ ನೀತಿಯನ್ನು ತೋರಿಸುತ್ತದೆ’ ಎಂದು ಸಿದ್ದರಾಮಯ್ಯ ವಿರುದ್ಧ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು. ಬಿಡದಿಯ ತೋಟದ ಮನೆಯಲ್ಲಿ ಭಾನುವಾರ ಪತ್ರಕರ್ತರಿಗೆ ಅವರು ಪ್ರತಿಕ್ರಿಯೆ ನೀಡಿದರು. ಹತ್ತು ದಿನಗಳ ಕಾಲ ಸದನ ನಡೆದಿತ್ತು. ಸದನದಲ್ಲಿ ನಿಯಮ 69ರಲ್ಲಿ ಈ ವಿಚಾರವನ್ನು ಚರ್ಚೆಗೆ ತರಬಹುದಿತ್ತು. ಈ ಮೂಲಕ ರಾಜ್ಯದ ಜನತೆ ಮುಂದೆ ಸತ್ಯ ತೆರೆದಿಡಬಹುದಿತ್ತು. …
Read More »ತುಂಬಿದ ಸಭೆಯಲ್ಲಿ ಬೊಮ್ಮಾಯಿಗೆ ‘ಬಾದಾಮಿ ಹಾಲು’ ಕೊಟ್ಟು ‘CM ಮಾಡಿದ್ದು ನಾನೇ’ ಎಂದ ಅಭಿಮಾನಿ..!
ಬೆಳಗಾವಿ: ಅಭಿಮಾನಿಯೋರ್ವ ಸಿಎಂ ಬಸವರಾಜ್ ಬೊಮ್ಮಾಯಿಗೆ ಬಾದಾಮಿ ಹಾಲು ನೀಡಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ವಿಶೇಷ ಗೆಟಪ್ನಲ್ಲಿ ಆಗಮಿಸಿ ಅಭಿಮಾನಿ ಬಾದಾಮಿ ಹಾಲು ನೀಡಿದ್ದಾನೆ. ಅಭಿಮಾನಿಯನ್ನ ತಡೆಯಲು ಪೊಲೀಸರು ಮುಂದಾಗಿದ್ದಾರೆ. ಈ ವೇಳೆ ಅವನನ್ನು ಬಿಡಿ ಎಂದು ಸಿಎಂ ಹಾಲು ಸ್ವೀಕರಿಸಿದ್ದಾರೆ. ಎಲ್ಲಿ ಹೋದರೂ ಅವನು ಏನನ್ನಾದರು ಕೊಟ್ಟೇ ಕೊಡುತ್ತಾನೆ. ಇಂದು ಬಾದಾಮಿ ಹಾಲು ಕೊಟ್ಟಿದ್ದಾನೆ ಎಂದಿದ್ದಾರೆ ಸಿಎಂ ಬೊಮ್ಮಾಯಿ. ಬಾದಾಮಿ ಹಾಲು ನೀಡಿದ ಬಳಿಕ ಬೊಮ್ಮಾಯಿ ಅವರನ್ನ ಸಿಎಂ …
Read More »ಬೆಳಗಾವಿ: ಐದು ಭಾಷೆಯ ಡಿಜಿಟಲ್ ಗ್ರಂಥಾಲಯವನ್ನು ಲೋಕಾರ್ಪಣೆ ಮಾಡಲಿರುವ ಸಿಎಂ!
ಬೆಳಗಾವಿ: ಎರಡು ದಿನ ಜಿಲ್ಲಾ ಪ್ರವಾಸ ನಡೆಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇಂದು ಬೆಳಗಾವಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಅಡಿಯಲ್ಲಿ 2. 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಆಗಿರೋ 5 ಭಾಷೆಯ ರವೀಂದ್ರ ಕೌಶಿಕ್ ಡಿಜಿಟಲ್ ಗ್ರಂಥಾಯಲದ ಉದ್ಘಾಟನೆ ಮಾಡಿ ಲೋಕಾರ್ಪಣೆ ಆಗಲಿದೆ. ಇದೇ ರೀತಿ 2.7 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗಿರುವಟ ರಾಜ್ಯದ ಮೊದಲ ಬುದ್ಧಿಮಾಂದ್ಯತೆ ಮಕ್ಕಳ ಪಾರ್ಕ್ ನ ಉದ್ಘಾಟನೆಯನ್ನು ಸಿಎಂ …
Read More »ಬೆಂಗಳೂರು: ಚರ್ಚ್ ಸ್ಟ್ರೀಟ್ ಯೋಜನೆ ನಗರದ ಇನ್ನೂ ಮೂರು ರಸ್ತೆಗಳಿಗೆ ವಿಸ್ತರಣೆ
ಬೆಂಗಳೂರು: ಚರ್ಚ್ ಸ್ಟ್ರೀಟ್ ರಸ್ತೆ ನಿರ್ಮಾಣ ಯೋಜನೆಗೆ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾದ ಹಿನ್ನೆಲೆಯಲ್ಲಿ ನಗರ ಮತ್ತು ಭೂ ಸಾರಿಗೆ ಇಲಾಖೆ(Department of Urban and Land Transport) ಅದೇ ಮಾದರಿಯ ಯೋಜನೆಯನ್ನು ನಗರದ ಮೂರು ರಸ್ತೆಗಳಿಗೆ ವಿಸ್ತರಿಸುವ ನಿರ್ಧಾರ ಕೈಗೊಂಡಿದೆ. ಮಲ್ಲೇಶ್ವರಂ 8ನೇ ಕ್ರಾಸ್, ಜಯನಗರ 10ನೇ ಮುಖ್ಯರಸ್ತೆ ಮತ್ತು ಗಾಂಧಿ ಬಜಾರ್ ರಸ್ತೆಗಳನ್ನು ಚರ್ಚ್ ಸ್ಟ್ರೀಟ್ ಮಾದರಿಯಲ್ಲಿ ಉನ್ನತ ದರ್ಜೆಗೆ ಏರಿಸಲಾಗುವುದು. ಇದೇ ವೇಳೆ ನಗರ …
Read More »