Breaking News

ಮೈಸೂರು ಅರಮನೆ ವಿದ್ಯುದ್ದೀಪ ಅಳವಡಿಸುವ ಕಾರ್ಯ ಶುರು

ಮೈಸೂರು :ಈ ಬಾರಿಯ ದಸರಾ ಕಾರ್ಯಕ್ರಮಗಳು ಅರಮನೆ ಆವರಣಗಷ್ಟೆ ಸೀಮಿತವಾಗಿರುವುದರಿಂದ ಅರಮನೆ ಸೇರಿದಂತೆ ಸುತ್ತಮುತ್ತ ಸಿದ್ಧತಾ ಕಾರ್ಯಗಳನ್ನು ಮಾಡಲಾಗುತ್ತಿದ್ದು, ಅರಮನೆಗೆ ಸುಣ್ಣ ಬಣ್ಣ ಬಳಿಯುವ ಮತ್ತು ಝಗಮಗಿಸಲು ವಿದ್ಯುತ್ ಬಲ್ಪ್ ಗಳನ್ನು ಅಳವಡಿಸುವ ಕಾರ್ಯವೂ ಸಮಾರೋಪಾದಿಯಲ್ಲಿ ಸಾಗುತ್ತಿದೆ. ಮೈಸೂರು ಅರಮನೆ ರಂಗು ತುಂಬುವುದೇ ವಿದ್ಯುತ್ ದೀಪಗಳು ಹಾಗಾಗಿ ದಸರಾ ಬರುತ್ತಿದ್ದಂತೆಯೇ ಅರಮನೆಗೆ ಅಳವಡಿಸಲಾಗಿರುವ ವಿದ್ಯುದ್ದೀಪಗಳನ್ನು ದುರಸ್ತಿ ಮಾಡುವ ಕಾರ್ಯ ನಡೆಯುತ್ತದೆ ಅದರಂತೆ ಈ ಬಾರಿಯೂ ನಡೆಯತ್ತಿದೆ. ಅರಮನೆ ದೀಪಾಲಂಕಾರ ದಸರಾದ …

Read More »

ಎಸ್‌ಟಿಪಿ ಸ್ಥಳಾಂತರ: ಲೋಕಾಯುಕ್ತ ತನಿಖೆಗೆ ಆದೇಶ

ಬೆಂಗಳೂರು: ಬೆಳಗಾವಿಯ ಅಲರವಾಡದಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ(ಎಸ್‌ಟಿಪಿ) ನಿರ್ಮಾಣಕ್ಕೆ ₹2 ಕೋಟಿ ವೆಚ್ಚ ಮಾಡಿದ ಬಳಿಕ ಬೇರೆಡೆಗೆ ಸ್ಥಳಾಂತರಿಸಲು ಮುಂದಾಗಿರುವ ಪ್ರಕರಣದ ಬಗ್ಗೆ ಲೋಕಾಯುಕ್ತ ತನಿಖೆಗೆ ಹೈಕೋರ್ಟ್‌ ಆದೇಶಿಸಿದೆ. ಬೆಳಗಾವಿ ನಿವಾಸಿಗಳಾದ ನಾರಾಯಣ ಬೈರು ಸಾವಂತ್ ಸೇರಿ ಐವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್‌ಚಂದ್ರ ಶರ್ಮಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿ ಈ ಆದೇಶ ನೀಡಿತು. ಬೆಳಗಾವಿ ಪಾಲಿಕೆ ಆಯುಕ್ತರು ಸಲ್ಲಿಸಿದ್ದ …

Read More »

ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಕಾಮಗಾರಿ ಪರಿಶೀಲಿಸಿದ ಜಗದೀಶ ಶೆಟ್ಟರ್

ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದ ವಿವಿಧೆಡೆ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿ ಪ್ರಗತಿಯನ್ನು ಶಾಸಕ ಜಗದೀಶ ಶೆಟ್ಟರ್ ಅವರು, ಮಂಗಳವಾರ ವೀಕ್ಷಿಸಿದರು‌. ಉಣಕಲ್ ಕೆರೆ, ಮಾರುಕಟ್ಟೆ ಹಾಗೂ ತೋಳನಕೆರೆಗೆ ಭೇಟಿ ನೀಡಿದ ಶೆಟ್ಟರ್, ಕಾಮಗಾರಿ ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಅಹ್ಮದ್, ಪಾಲಿಕೆ ಸದಸ್ಯ ರಾಮಣ್ಣ ಬಡಿಗೇರ, ಬಿಜೆಪಿ ಮುಖಂಡ ಮಹೇಶ ಬುರ್ಲಿ ಹಾಗೂ ಇತರರು ಇದ್ದರು.

Read More »

ಮುಖ್ಯಮಂತ್ರಿಯವರೇ ಮಂಗಳೂರಿನಲ್ಲಿರುವುದು ತಾಲಿಬಾನ್ ಸರ್ಕಾರವೇ?: ಸಿದ್ದರಾಮಯ್ಯ

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ನಲ್ಲಿ ನಡೆದ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮಂಗಳೂರಿನಲ್ಲ ತಾಲಿಬಾನ್ ಸರ್ಕಾರವಿದಯೇ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಸನ್ಮಾನ್ಯ ಮುಖ್ಯಮಂತ್ರಿಯವರೇ, ಮಂಗಳೂರಿನಲ್ಲಿ ಇರುವುದು ಬಿಜೆಪಿ ಸರ್ಕಾರನಾ? ತಾಲಿಬಾನ್ ಗಳದ್ದಾ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಏನಿದು ಪ್ರಕರಣ: ಒಂದೇ ವಾಹನದಲ್ಲಿ ಅನ್ಯ ಕೋಮಿನ ಯುವಕ ಯುವತಿಯರು …

Read More »

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಕ್ಟೋಬರ್ 11ರವರೆಗೂ ನೈಟ್ ಕರ್ಫ್ಯೂ ಮುಂದುವರಿಕೆ

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಕ್ಟೋಬರ್ 11ರವರೆಗೂ ನೈಟ್ ಕರ್ಫ್ಯೂ ಮುಂದುವರೆಯಲಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ. ಬೆಂಗಳೂರಿನಲ್ಲಿ ಇದೀಗ ನೈಟ್ ಕರ್ಫ್ಯೂ ಸರ್ಕಾರದ ಮಾರ್ಗಸೂಚಿ ಮೇರೆಗೆ ರಾತ್ರಿ 11 ಗಂಟೆಯಿಂದ ಮುಂಜಾನೆ 5 ಗಂಟೆವರೆಗೆ ಇರಲಿದೆ ಎಂದು ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ. ದಿನದಿಂದ ದಿನಕ್ಕೆ ಬೆಂಗಳೂರಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದ್ದು, ನಿನ್ನೆ ಒಂದೇ ದಿನ181 ಮಂದಿ ಸೋಂಕಿತ …

Read More »

ಎರಡು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ದಿನಾಂಕ ಘೋಷಣೆ

ಬೆಂಗಳೂರು: ಕೇಂದ್ರ ಚುನಾವಣಾ ಆಯೋಗ ಇಂದು ಕರ್ನಾಟಕದ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ದಿನಾಂಕ ಘೋಷಣೆ ಮಾಡಿದೆ. ಹಾನಗಲ್ ಹಾಗೂ ಸಿಂಧಗಿ ಕ್ಷೇತ್ರಕ್ಕೆ ಅಕ್ಟೋಬರ್ 30ರಂದು ಉಪಚುನಾವಣೆ ನಡೆಯಲಿದೆ. ಅಕ್ಟೋಬರ್ 1 ರಂದು ಅಧಿಸೂಚನೆ ಪ್ರಕಟವಾಗಲಿದೆ. ನವೆಂಬರ್ 2ರಂದು ಮತ ಎಣಿಕೆ ಕಾರ್ಯ ನಡೆಯಲಿದ್ದು, ಅಕ್ಟೋಬರ್ 8ರಂದು ನಾಮಪತ್ರ ಸಲ್ಲಿಕೆಗೆ ಕೊನೇ ದಿನವಾಗಿದೆ. ನವೆಂಬರ್ 2ರಂದು ಫಲಿತಾಂಶ ಪ್ರಕಟವಾಗಿದೆ. ಬಿಜೆಪಿ ಹಿರಿಯ ನಾಯಕ ಸಿ.ಎಂ ಉದಾಸಿ ನಿಧನದಿಂದ ಹಾನಗಲ್ ಕ್ಷೇತ್ರ …

Read More »

ಅಡುಗೆ ಅನಿಲ ಸಬ್ಸಿಡಿಯನ್ನು ಪುನರಾರಂಭಿಸುವ ಬಗ್ಗೆ ಸರಕಾರ ಚಿಂತನೆ..?

ಹೊಸದಿಲ್ಲಿ: ಅಡುಗೆ ಅನಿಲ ಸಬ್ಸಿಡಿಯನ್ನು ಪುನರಾರಂಭಿಸುವ ಬಗ್ಗೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಗಂಭೀರ ಚಿಂತನೆ ನಡೆಸಿದ್ದು, ಈ ಸಂಬಂಧ ಸಮೀಕ್ಷೆಯೊಂದನ್ನು ಕೈಗೊಳ್ಳುತ್ತಿದೆ ಎಂದು ಉನ್ನತ ಮೂಲಗಳು ವರದಿ ಮಾಡಿವೆ. ಸಬ್ಸಿಡಿಯನ್ನು ಉಜ್ವಲ ಯೋಜನೆಯ ಫ‌ಲಾನುಭವಿಗಳಿಗೆ ಸೀಮಿತಗೊಳಿಸುವ ಚಿಂತನೆಯೂ ಇದೆ ಎನ್ನಲಾಗಿದೆ. ಈ ಹಿಂದೆ ಎಲ್‌ಪಿಜಿ ದರ ಇಳಿಕೆಯಾಗಿದ್ದರಿಂದ 2020ರ ಮೇ ತಿಂಗಳಿ ನಲ್ಲಿ ಸರಕಾರವು ಎಲ್‌ಪಿಜಿ ಸಬ್ಸಿಡಿಯನ್ನು ಹಿಂದೆ ಗೆದುಕೊಂಡಿತ್ತು. ಆಗ ದಿಲ್ಲಿಯಲ್ಲಿ 14.2 ಕೆ.ಜಿ.ಯ ಅಡುಗೆ …

Read More »

ಪೆಟ್ರೋಲ್ ಡೀಸೆಲ್ ದರ ಇಂದು ಮತ್ತೆ ಏರಿಕೆಯತ್ತ ಮುಖ ಮಾಡಿದೆ.

ನವದೆಹಲಿ, ಸೆಪ್ಟೆಂಬರ್ 28: ಸತತ ಮೂರು ವಾರಗಳಿಂದ ಯಥಾಸ್ಥಿತಿ ಕಾಪಾಡಿಕೊಂಡಿದ್ದ ಪೆಟ್ರೋಲ್ ದರವನ್ನು ಇಂದು (ಸೆ.28) ಏರಿಕೆ ಮಾಡಲಾಗಿದ್ದು, ಅದೇ ರೀತಿ ಡೀಸೆಲ್ ದರ ಇಂದು ಮತ್ತೆ ಏರಿಕೆ ಕಂಡಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಇಂದು ಲೀಟರ್ ಪೆಟ್ರೋಲ್ ಬೆಲೆಯಲ್ಲಿ 20ರಿಂದ 25 ಪೈಸೆ ಹೆಚ್ಚಳ ಮಾಡಿದ್ದರೆ, ಕಳೆದ ಐದು ದಿನಗಳಲ್ಲಿ ನಾಲ್ಕನೇ ಬಾರಿಗೆ ಏರಿಕೆ ಕಾಣುತ್ತಿರುವ ಲೀಟರ್ ಡೀಸೆಲ್ ದರ 75 ಪೈಸೆ ಹೆಚ್ಚಳವಾಗಿದೆ. ಮಂಗಳವಾರದ ಇಂಧನ …

Read More »

ಬಡ್ಡಿ ಹಣ ಕೊಡಲಿಲ್ಲ ಎಂದು ಆಟೋ ಚಾಲಕನ ಕೊಲೆ

ಹುಬ್ಬಳ್ಳಿ: ಸಾಲ ನೀಡಿದ್ದ ಹಣಕ್ಕೆ ಸರಿಯಾಗಿ ಬಡ್ಡಿ ನೀಡಿಲ್ಲ ಅಂತ ಆಟೋ ಚಾಲಕನನ್ನು ಕೊಲೆಗೈದಿರುವ ಘಟನೆ ಹುಬ್ಬಳ್ಳಿಯ ನೇಕಾರ ನಗರದಲ್ಲಿ ನಡೆದಿದೆ. ಲೋಕೇಶ್ ಹತ್ಯೆಯಾದ ಆಟೋ ಚಾಲಕರಾಗಿದ್ದು, ಕೆಲ ದಿನಗಳ ಹಿಂದೆ ಲೋಕೇಶ್​​, ಮಾರುತಿ ಎನ್ನುವವನಿಂದ 5 ರೂಪಾಯಿ ಸಾಲ ಪಡೆದುಕೊಂಡಿದ್ದ. ಆದರೆ ಸಾಲದ ಬಡ್ಡಿ ಜೊತೆಗೆ ಆಟೋದ ನಿತ್ಯ 200 ರೂಪಾಯಿ ಕೊಡುವಂತೆ ಮಾರುತಿ ಪಿಡುಸುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ. ಇದೇ ವಿಚಾರಕ್ಕೆ ನಿನ್ನೆ ಸಂಜೆ ಮಾರುತಿ …

Read More »

ದಲ್ಲಾಳಿಯ ಪುತ್ರನಿಗೆ ಹಿಗ್ಗಾಮುಗ್ಗ ಥಳಿಸಿದ ವ್ಯಾಪಾರಿಗಳು

ಗದಗ: ಕ್ಷುಲ್ಲಕ ಕಾರಣಕ್ಕಾಗಿ ದಲ್ಲಾಳಿ ಹಾಗೂ ತರಕಾರಿ ಮಾರಾಟಗಾರರ ನಡುವೆ ಮಾರಾಮಾರಿ ನಡೆದಿದ್ದು ಗದಗ ಎಪಿಎಂಸಿ ಆವರಣ ರಣಾಂಗಣವಾಗಿ ಮಾರ್ಪಟ್ಟ ಘಟನೆ ನಡೆದಿದೆ. ಗದಗ ಎಪಿಎಂಸಿ ತರಕಾರಿ ಹೋಲ್ ಸೇಲ್ ಮಾರ್ಕೆಟ್​ನಲ್ಲಿ ಘಟನೆ ನಡೆದಿದ್ದು ದಲ್ಲಾಳಿ ಅಂಗಡಿಗೆ ನುಗ್ಗಿ ದಲ್ಲಾಳಿ ಪುತ್ರನಿಗೆ ವ್ಯಾಪಾರಿಗಳು ಹಿಗ್ಗಾಮುಗ್ಗ ಥಳಿಸಿದ್ದಾರೆ. ರೈತರ ತರಕಾರಿ ಖರೀದಿ ವಿಷಯದಲ್ಲಿ ದಲ್ಲಾಳಿ ಹಾಗೂ ವ್ಯಾಪಾರಸ್ಥರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವಾಗ್ವಾದ ವಿಕೋಪಕ್ಕೆ ತಿರುಗಿ ಹೊಎದಾಟ ನಡೆದಿದೆ …

Read More »