Breaking News

ಸಿಎಂ ಬದಲಾವಣೆ ಬಿಜೆಪಿ ಆಂತರಿಕವಿಚಾರ: ಬಸವ ಜಯ ಮೃತ್ಯುಂಜಯ ಸ್ವಾಮೀಜಿ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಬದಲಾಯಿಸುವುದು ಬಿಜೆಪಿಯ ಆಂತರಿಕ ವಿಚಾರವಾಗಿದೆ ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಎಲ್ಲಿಯವರೆಗೆ ಬೊಮ್ಮಾಯಿಯವರು ಸಿಎಂ ಆಗಿರುತ್ತಾರೋ ಅಲ್ಲಿಯವರೆಗೆ ಬೆಂಬಲ ಇದ್ದೇ ಇರುತ್ತದೆ. 2023ರ ವರೆಗೆ ಅವರೇ ಮುಂದುವರೆಯುತ್ತಾರೆ. ಅಲ್ಲಿಯವರೆಗೂ ನಮ್ಮ ಬೆಂಬಲವಿದೆ. ನಾಯಕತ್ವ ಬದಲಾವಣೆ ಅವರ ಪಕ್ಷದ ಆಂತರಿಕ ವಿಚಾರ. ಅದರ ಬಗ್ಗೆ ಮಾತನಾಡುವುದು ಅಷ್ಟು ಸಮಂಜಸವಲ್ಲ. ಯಡಿಯೂರಪ್ಪನವರು ಪಂಚಮಸಾಲಿ ಮೀಸಲಾತಿ …

Read More »

ಉಡುಪಿ; ಕನ್ನಡ ಶಾಲೆಯಲ್ಲಿ ಮಕ್ಕಳಿದ್ದರೂ ಶಿಕ್ಷಕರಿಲ್ಲ!

ಉಡುಪಿ, ಡಿಸೆಂಬರ್ 28; ಸರ್ಕಾರಿ ಶಾಲೆ ಅದು ಊರಿನ ನೆನಪಿದ ಬುತ್ತಿ. ಜ್ಞಾನ ನೀಡುವ ಅಕ್ಷರ ಧಾಮ. ಸರ್ವ ಧರ್ಮಗಳ ಮಂದಿರ. ಇಂತಹ ಸರ್ಕಾರಿಗಳು ಇಂದು, ವಿದ್ಯಾರ್ಥಿಗಳಿಲ್ಲದೇ ಸೊರಗಿ, ಶಿಕ್ಷರಿಲ್ಲದೇ ಬಾಗಿಲು ಮುಚ್ಚುತ್ತಿವೆ. ಆದರೆ ಬುದ್ಧಿವಂತರ ಜಿಲ್ಲೆಯ ಶಾಲೆಯೊಂದರಲ್ಲಿ ಕನ್ನಡ ಕಲಿಯಬೇಕು ಅಂತ ಬಂದಿರುವ ವಿದ್ಯಾರ್ಥಿಗಳಿದ್ದರೂ, ಖಾಯಂ ಶಿಕ್ಷಕರಿಲ್ಲದೇ ಮುಚ್ಚುವ ಹಂತಕ್ಕೆ ಬಂದಿದೆ. ತಾಯಂದಿರು, ಖಾಯಂ ಶಿಕ್ಷಕರನ್ನು ನೇಮಿಸಿ ಶಾಲೆ ಉಳಿಸಿ ಎನ್ನುವ ಹೋರಾಟಕ್ಕೆ ಮುಂದಾಗಿದ್ದಾರೆ. “ಐಸಿಯುನಲ್ಲಿ ಪೇಶೆಂಟ್ ಇಲ್ಲಾ …

Read More »

25 ವರ್ಷಗಳ ವಿವಾದಕ್ಕೆ ತೆರೆ ಎಳೆದ ಬಸವಧರ್ಮ ಪೀಠ..!

ಬಾಗಲಕೋಟೆ (ಡಿ. 28): 25 ವರ್ಷ ಗಳ ಹಿಂದಿನ ವಚನಗಳ ಅಂಕಿತ ನಾಮ ವಿವಾದಕ್ಕೆ ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ (Mate Gangadevi) ಇತಿಶ್ರೀ ಹಾಡಿದ್ದಾರೆ. ಬಾಗಲಕೋಟೆ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇನ್ಮುಂದೆ ವಚನಗಳಲ್ಲಿ ಲಿಂಗದೇವ (Lingadeva) ಬದಲಾಗಿ ಕೂಡಲ ಸಂಗಮದೇವ (Kudala Sangamadeva) ವಚನಾಂಕಿತ ಬಳಸಲು ನಿರ್ಧಾರ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಹಲವು ಸ್ವಾಮೀಜಿಗಳ ವಿರೋಧದ ಮಧ್ಯೆ ಈ ವಿವಾದ 25 ವಷ೯ಗಳ ಹಿಂದೆ …

Read More »

ಪೊಲೀಸರೊಂದಿಗೆ ರಂಪಾಟ ನಡೆಸಿದ ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್

ಬೆಂಗಳೂರು: ಎಂ.ಜಿ.ರಸ್ತೆಯಲ್ಲಿ ಓಡಾಡುತ್ತಿದ್ದ ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್ ಅವರಿಗೆ ಮನೆಗೆ ತೆರಳಿ ಎಂದು ಹೇಳಿದ್ದಕ್ಕೆ ಪೊಲೀಸರೊಂದಿಗೆ ರಂಪಾಟ ನಡೆಸಿರುವ ಆರೋಪ ಕೇಳಿಬಂದಿದೆ.‌ ಕರ್ಫ್ಯೂ ಇದೆ ಮನೆಗೆ ಹೋಗಿ ಎಂದಿದ್ದಕ್ಕೆ ಪುಂಡಾಟ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.‌ ಮತ್ತೊಂದೆಡೆ ಮಾಧ್ಯಮವೊಂದರ ಕ್ಯಾಮೆರಾ ಹೊಡೆದು ಹಾಕುವುದಾಗಿಯೂ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಲಾಂಗ್ ಡ್ರೈವ್ ಹೊರಟಿದ್ದವನ ಕಾರು ಸೀಜ್ : ನೈಟ್ ಕರ್ಫ್ಯೂ ಇದ್ದರೂ ವ್ಯಕ್ತಿಯೊಬ್ಬ ಚಾಲನೆ ಮಾಡುತ್ತಿದ್ದ ಹುಂಡೈ ಕ್ರೇಟಾ ಕಾರನ್ನು …

Read More »

ನೀಟ್​-ಪಿಜಿ ಕೌನ್ಸೆಲಿಂಗ್‌ ವಿಳಂಬ: ಸಚಿವರ ಭರವಸೆಗೆ ಅತೃಪ್ತಿ, ಪ್ರತಿಭಟನೆ ಮುಂದುವರೆಸಿದ ಸ್ಥಾನಿಕ ವೈದ್ಯರು

ನವದೆಹಲಿ: ಫೆಡರೇಶನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ (FORDA) ನಿಯೋಗ ಮತ್ತು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ನಡುವಿನ ಸಭೆ ಇಲ್ಲಿನ ನಿರ್ಮಾಣ್ ಭವನದಲ್ಲಿ ನಿನ್ನೆ ನಡೆಯಿತು. ಆದರೆ ಈ ಸಭೆ ವೈದ್ಯರ ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ. ನೀಟ್-ಪಿಜಿ 2021 ಕೌನ್ಸೆ​ಲಿಂಗ್ ವಿಳಂಬದ ಕುರಿತು ದೆಹಲಿಯಲ್ಲಿ ಫೆಡರೇಷನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ ​​ನೇತೃತ್ವದಲ್ಲಿ ನಡೆದ ವೈದ್ಯರ ಪ್ರತಿಭಟನೆ ನಾಟಕೀಯ ತಿರುವು ಪಡೆದುಕೊಂಡಿತ್ತು. ಇದು ವೈದ್ಯರು ಮತ್ತು ಪೊಲೀಸ್ ಸಿಬ್ಬಂದಿ …

Read More »

ರಾಜ್ಯದಲ್ಲಿ ಯಾವುದೇ ರೀತಿಯಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲ: ಯತ್ನಾಳ

ರಾಜ್ಯದಲ್ಲಿ ಯಾವುದೇ ರೀತಿಯಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲ. ಯಾರಾದರೂ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಮಾತನಾಡಿದರೇ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವ ಎಚ್ಚರಿಕೆಯನ್ನು ಕೇಂದ್ರ ಸಚಿವರು ಹಾಗೂ ಉಸ್ತುವಾರಿ ಅರುಣಸಿಂಗ್ ಅವರು ನೀಡಿದ್ದಾರೆ ಎಂದು ಶಾಸಕ ಬಸನಗೌಡ ಯತ್ನಾಳ ಪಾಟೀಲ ಹೇಳಿದರು. ಹುಬ್ಬಳ್ಳಿ ನಗರದಲ್ಲಿಂದು ಸಭೆಯ ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಯಾರೇ ಮಾತನಾಡಿದರು. ಅವರ ವಿರುದ್ಧ ಸೂಕ್ತ ಕ್ರಮಗಳನ್ನು ಜರುಗಿಸುವ ಬಗ್ಗೆ ಕೇಂದ್ರ ಸಚಿವರಾದ ಪ್ರಹ್ಲಾದ …

Read More »

ಡಿ.31ರಂದು ಕರ್ನಾಟಕ ಬಂದ್‍ಗೆ ಬೆಳಗಾವಿ ಜಿಲ್ಲೆಯ ಕನ್ನಡಪರ ಸಂಘಟನೆಗಳು ವಿರೋಧ

ನಾಡದ್ರೋಹಿ ಎಂಇಎಸ್ ನಿμÉೀಧಕ್ಕೆ ಆಗ್ರಹಿಸಿ ಡಿ.31ರಂದು ಕರ್ನಾಟಕ ಬಂದ್‍ಗೆ ಬೆಳಗಾವಿ ಜಿಲ್ಲೆಯ ಕನ್ನಡಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.ಹೌದು ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಾಡದ್ರೋಹಿ ಎಂಇಎಸ್ ಸಂಘಟನೆಯನ್ನು ನಿಷೇಧಿಸುವಂತೆ ಆಗ್ರಹಿಸಿ ಕನ್ನಡ ಹಿರಿಯ ಹೋರಾಟಗಾರ ವಾಟಾಳ್ ನಾಗರಾಜ್ ಸೇರಿದಂತೆ ಇನ್ನಿತರ ಕನ್ನಡ ಹೋರಾಟಗಾರರು ಡಿ.31ರಂದು ಕರ್ನಾಟಕ ಬಂದ್‍ಗೆ ಕರೆ ನೀಡಿದ್ದಾರೆ. ಆದರೆ ಈ ಬಂದ್‍ಗೆ ಪರ-ವಿರೋಧ ಚರ್ಚೆಯಾಗುತ್ತಿದೆ. ಈ ನಡುವೆ ಬೆಳಗಾವಿಯ ವಿವಿಧ ಕನ್ನಡಪರ ಸಂಘಟನೆಗಳು ಬೆಂಬಲ ಸೂಚಿಸಿಲ್ಲ. …

Read More »

ನಗರದಲ್ಲಿ ಆಯೋಜನೆಯಾಗಿರುವ ಎರಡು ದಿನಗಳ ಬಿಜೆಪಿ ಕಾರ್ಯಕಾರಿಣಿ ಸಭೆ ಮಂಗಳವಾರ ಮಧ್ಯಾಹ್ನ ಆರಂಭವಾಯಿತು.

ಬೆಳಿಗ್ಗೆ 11 ಗಂಟೆಗೆ ಉದ್ಘಾಟನೆಯಾಗಬೇಕಿದ್ದ ಸಮಾರಂಭ, ಮುಖ್ಯಮಂತ್ರಿ ಬಸವರಾಜ ‌ಬೊಮ್ಮಾಯಿ ಅವರು ಬರುವುದು ವಿಳಂಬವಾದ್ದರಿಂದ ಮಧ್ಯಾಹ್ನ ಉದ್ಘಾಟನೆಗೊಂಡಿತು.ಕಾರ್ಯಕಾರಿಣಿಗೆ ಚಾಲನೆಗೂ ಮುನ್ನ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ‌ ಗೋಪೂಜೆ, ಧ್ವಜಾರೋಹಣ ನೆರವೇರಿಸಿದರು.ಬಿಜೆಪಿ ರಾಜ್ಯ ಉಸ್ತುವಾರಿ ಅರುಣಸಿಂಗ್‌. ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ. ರಾಷ್ಟ್ರೀಯ ಉಪಾಧ್ಯಕ್ಷೆ ಅರುಣಾ, ಸಚಿವರಾದ ಆರ್. ಅಶೋಕ್. ಎಸ್ ಟಿ ಸೋಮಶೇಖರ್, ಡಾ. …

Read More »

ಹುಬ್ಬಳ್ಳಿಯಲ್ಲಿ ಎತ್ತುಗಳ ಹುಟ್ಟುಹಬ್ಬ ಆಚರಿಸಿದ ರೈತ; ಕೇಕ್ ಕತ್ತರಿಸಿ ಸಂಭ್ರಮಿಸಿದ ಗ್ರಾಮಸ್ಥರು

ಹುಬ್ಬಳ್ಳಿ: ಸಾಮಾನ್ಯವಾಗಿ ಜನರು ತಮ್ಮ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಾರೆ. ಕೆಲವರು ಅದ್ದೂರಿಗಾಗಿ ಆಚರಿಸಿಕೊಂಡರೆ, ಇನ್ನು ಕೆಲವರು ಸಿಂಪಲ್ ಆಗಿ ಸೆಲೆಬ್ರೇಟ್ ಮಾಡಿಕೊಳ್ಳುತ್ತಾರೆ. ಇತ್ತೀಚೆಗೆ ಪ್ರೀತಿಯಿಂದ ಸಾಕಿದ ಶ್ವಾನಗಳಿಗೆ ಬರ್ತ್ ಡೇ ಮಾಡಿರುವುದು ಕೇಳಿದ್ದೇವೆ. ಆದರೆ ಜಿಲ್ಲೆಯಲ್ಲಿ ರೈತರೊಬ್ಬರು ತಾನು ಸಾಕಿದ ಎರಡು ಎತ್ತುಗಳ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಹುಬ್ಬಳ್ಳಿ ತಾಲೂಕಿನ ಸುಳ್ಳ ಗ್ರಾಮದಲ್ಲಿ ಎತ್ತುಗಳ ಜನ್ಮದಿನ ಆಚರಿಸುವ ಮೂಲಕ ರೈತ ಗಮನ ಸೆಳೆದಿದ್ದಾರೆ. ಸುಳ್ಳ ಗ್ರಾಮದಲ್ಲಿ ರೈತ ಕಲ್ಲಪ್ಪ ಐಹೊಳೆ ಎಂಬುವವರು …

Read More »

ವಾಣಿಜ್ಯನಗರಿ ಹುಬ್ಬಳ್ಳಿ ಗಾರ್ಬೇಜ್ ಸಿಟಿಯಾಗಿದೆ’ ಪಾಲಿಕೆಯ ಆವರಣದಲ್ಲಿ ಕಸ ಸುರಿದು ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ

ಹುಬ್ಬಳ್ಳಿ: ‘ವಾಣಿಜ್ಯನಗರಿ ಹುಬ್ಬಳ್ಳಿ ಗಾರ್ಬೇಜ್ ಸಿಟಿಯಾಗಿದೆ’ ಎಂದು ಆರೋಪಿಸಿ ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಪಕ್ಷ ಪ್ರತಿಭಟನೆಗೆ ಇಳಿದಿದೆ. ಮಹಾನಗರ ಪಾಲಿಕೆಯ ಆವರಣದಲ್ಲಿ ಲೋಡ್‌ಗಟ್ಟಲೆ ಕಸವನ್ನು ಸುರಿದು ತೀವ್ರ ಆಕ್ರೋಶ ಹೊರ ಹಾಕಿದೆ. ಹುಬ್ಬಳ್ಳಿಯಲ್ಲಿ ಒಂದು ಕಡೆ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯುತ್ತಿದೆ ಮತ್ತೊಂದೆಡೆ ಪಾಲಿಕೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ. ಹುಬ್ಬಳ್ಳಿ: ‘ವಾಣಿಜ್ಯನಗರಿ ಹುಬ್ಬಳ್ಳಿ ಗಾರ್ಬೇಜ್ ಸಿಟಿಯಾಗಿದೆ’ ಎಂದು ಆರೋಪಿಸಿ ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಪಕ್ಷ ಪ್ರತಿಭಟನೆಗೆ ಇಳಿದಿದೆ. ಮಹಾನಗರ ಪಾಲಿಕೆಯ ಆವರಣದಲ್ಲಿ …

Read More »