ನವದೆಹಲಿ: ಆರೋಗ್ಯ ವಿಮೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಪಾಲಿಸಿದಾರರಿಗೆ ಇರುವ ಕಾಯಿಲೆಗೆ ವೈದ್ಯಕೀಯ ವೆಚ್ಚ ಭರಿಸಲು ವಿಮೆ ಕಂಪನಿಗಳು ಮೆಡಿಕ್ಲೇಮ್ ನಿರಾಕರಿಸುವಂತಿಲ್ಲ ಎಂದು ಹೇಳಿದೆ. ಅನಿರೀಕ್ಷಿತವಾಗಿ ಅನಾರೋಗ್ಯ ಉಂಟಾದ ಸಂದರ್ಭದಲ್ಲಿ ಪರಿಹಾರದ ವ್ಯಾಪ್ತಿಯಿಂದ ಹೊರಗಿಡಬೇಕು ಎನ್ನುವ ಅಂಶ ಸರಿಯಲ್ಲ. ಆರೋಗ್ಯ ವಿಮೆ ನಿರಾಕರಣೆ ಸಲ್ಲದು ಎಂದು ಸುಪ್ರೀಂಕೋರ್ಟ್ ಹೇಳಿದೆ. ಆರೋಗ್ಯ ಅನಿರೀಕ್ಷಿತವಾಗಿ ಬರಬಹುದು. ಅನಿರೀಕ್ಷಿತ ಆರೋಗ್ಯಕ್ಕೆ ವಿಮೆ ಕ್ಲೇಮ್ ನಿರಾಕರಣೆ ಕುರಿತಂತೆ ಒಪ್ಪಂದದಲ್ಲಿ ಸ್ಪಷ್ಟನೆ ಇಲ್ಲದಿದ್ದರೆ, ಅದನ್ನು ತಿರಸ್ಕರಿಸುವಂತಿಲ್ಲ …
Read More »ತೀವ್ರ ಕುತೂಹಲ ಮೂಡಿಸಿದ ಮತ ಎಣಿಕೆ; 58 ನಗರ ಸ್ಥಳೀಯ ಸಂಸ್ಥೆ, 57 ಗ್ರಾಪಂ ಫಲಿತಾಂಶ ಪ್ರಕಟ
ರಾಜ್ಯದ 5 ನಗರಸಭೆ ಸೇರಿದಂತೆ ಅವಧಿ ಪೂರ್ಣಗೊಂಡಿರುವ 58 ನಗರ ಸ್ಥಳೀಯ ಸಂಸ್ಥೆಗಳು ಮತ್ತು 57 ಗ್ರಾಮಪಂಚಾಯಿತಿಗಳ ಮತ ಎಣಿಕೆ ಕಾರ್ಯ ಇಂದು ನಡೆಯಲಿದೆ. ಆಯಾ ನಗರ ಸ್ಥಳೀಯ ಸಂಸ್ಥೆಗಳ ಕೇಂದ್ರಸ್ಥಾನದಲ್ಲಿ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದೆ. ತುಮಕೂರು, ಚಿಕ್ಕಮಗಳೂರು, ಶಿರಾ, ಗದಗ-ಬೆಟಗೇರಿ, ಹೆಬ್ಬಗೋಡಿ, ಹೊಸಪೇಟೆ ನಗರಸಭೆ ಹಾಗೂ 19 ಪುರಸಭೆ, 34 ಪಟ್ಟಣ ಪಂಚಾಯಿತಿಗಳಿಗೆ ನಡೆದ ಮತದಾನದ ಮತ ಎಣಿಕೆ ಕಾರ್ಯ ನಡೆಯಲಿದೆ. ಇದರೊಂದಿಗೆ 1185 …
Read More »ಠಾಣೆಗೆ ನುಗ್ಗಿ ಡಿವೈಎಸ್‌ಪಿ ಮೇಲೆ ಹಲ್ಲೆ
ಚನ್ನರಾಯಪಟ್ಟಣ: ತಾಲೂಕಿನ ಹಿರೀಸಾವೆ ಹೋಬಳಿ ಕೇಂದ್ರದಲ್ಲಿನ ಠಾಣೆಗೆ ಭೇಟಿ ನೀಡಿದ ವೇಳೆ ಡಿವೈಎಸ್‌ಪಿ ಮುರಳೀಧರ್ ಮೇಲೆ ಹಲ್ಲೆ ಮಾಡಿರುವ ಘಟನೆ ಮಂಗಳವಾರ ನಡೆದಿದ್ದುಇದರ ವಿಡಿಯೋ ಜಾಲ ತಾಣದಲ್ಲಿ ವೈರಲ್ ಆಗಿದೆ. ಮಟ್ಟನವಿಲೆ ಗ್ರಾಮದಕೃಷ್ಣೇಗೌಡರ ಪುತ್ರ, ಎಐಟಿಯುಸಿ ಮುಖಂಡ ಕುಮಾರ್ ಹಾಗೂ ಇತರರಿಂದ ಡಿವೈಎಸ್‌ಪಿ ಮೇಲೆ ಹಲ್ಲೆ ಮಾಡಲಾಗಿದ್ದು ಕುಮಾರ್, ಸೇರಿದಂತೆಮೂವರು ಪುರುಷರು, ಇಬ್ಬರು ಮಹಿಳೆಯರನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಘಟನೆ ವಿವರ: ಹಿರೀಸಾವೆ ಠಾಣೆ ಮುಂದೆ ಕುಮಾರ್, ಇತರರು ಧರಣಿ …
Read More »ಮತಾಂತರ ಆರೋಪ: ಶಾಲೆ ಮಾನ್ಯತೆ ರದ್ದತಿಗೆ ಒತ್ತಾಯ
ಇಳಕಲ್ (ಬಾಗಲಕೋಟೆ ಜಿಲ್ಲೆ): ‘ಪಟ್ಟಣದ ಸೇಂಟ್ ಪಾಲ್ ಕಾನ್ವೆಂಟ್ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಆಮಿಷ ಒಡ್ಡಿ ಮತಾಂತರ ಮಾಡಲಾಗುತ್ತಿದ್ದು, ಕೂಡಲೇ ಶಾಲೆಯ ಮಾನ್ಯತೆ ರದ್ದುಪಡಿಸಿ, ಮತಾಂತರಕ್ಕೆ ಕುಮ್ಮಕ್ಕು ನೀಡಿದವರ ವಿರುದ್ಧ ಸರ್ಕಾರ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ಇಲ್ಲಿಯ ಬಿಜೆಪಿ ಹಾಗೂ ಆರ್‌ಎಸ್‍ಎಸ್ ಪ್ರಮುಖರು ಬುಧವಾರ ಪ್ರತಿಭಟನೆ ನಡೆಸಿದರು. ‘ಡಿ.25ರಂದು ಇಲ್ಲಿನ ಸೇಂಟ್ ಪಾಲ್ ಕಾನ್ವೆಂಟ್ ಶಾಲೆಯಲ್ಲಿ ಕ್ರಿಸ್‍ಮಸ್ ಆಚರಣೆ ನೆಪದಲ್ಲಿ ವಿದ್ಯಾರ್ಥಿಗಳು ಹಾಗೂ ಪಾಲಕರನ್ನು ಸೇರಿಸಿ, …
Read More »ಸಂತ್ರಸ್ತ ಕೊರಗ ಕುಟುಂಬದ ಮದುವೆಯಲ್ಲಿ ಸಚಿವ ಕೋಟ ಭಾಗಿ
ಉಡುಪಿ, ಡಿ.29: ಜಿಲ್ಲೆಯ ಬ್ರಹ್ಮಾವರ ತಾಲೂಕು ಕೋಟತಟ್ಟು ಗ್ರಾಪಂ ವ್ಯಾಪ್ತಿಯ ಕೊರಗರ ಕೇರಿಯ ಕುಟುಂಬವೊಂದರಲ್ಲಿ ನಡೆದ ಮೆಹಂದಿ ಕಾರ್ಯಕ್ರಮದಲ್ಲಿ ಪೊಲೀಸರ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ವಿವಾದಗಳು ನಡೆದು, ದೌರ್ಜನ್ಯವೆಸಗಿದ ಪೊಲೀಸ್ ಠಾಣೆಯ ಪಿಎಸ್‌ಐ ಅಮಾನತು ಸೇರಿದಂತೆ 5ಕ್ಕೂ ಹೆಚ್ಚು ಪೊಲೀಸರ ವರ್ಗಾವಣೆ ಮಾಡಿದ್ದು, ಮೇಲಾಧಿಕಾರಿಗಳಿಂದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಸಮಾಜ ಕಲ್ಯಾಣ ಹಾಗೂ ಹಿಂದು ಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ …
Read More »ಕನ್ನಡಪರ ಸಂಘಗಳ ಒಕ್ಕೂಟದಲ್ಲೇ ಅಪಸ್ವರ; ಬಂದ್ನಿಂದ ಹಿಂದೆ ಸರಿದ ಹಲವು ಬಣ
ಬೆಂಗಳೂರು: ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ನಿಷೇಧಕ್ಕೆ ಒತ್ತಾಯಿಸಿ ಕನ್ನಡ ಪರ ಸಂಘಟನೆಗಳ ಒಕ್ಕೂಟ ಶುಕ್ರವಾರ ಕರೆ ನೀಡಿರುವ ‘ಕರ್ನಾಟಕ ಬಂದ್’ಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಜತೆಗೆ ಕನ್ನಡಪರ ಸಂಘಟನೆಗಳಿಂದಲೇ ಅಪಸ್ವರ ವ್ಯಕ್ತವಾಗಿದ್ದು, ಬಂದ್ ರ್ಯಾಲಿಗೆ ಸೀಮಿತವಾಗುವ ಲಕ್ಷಣಗಳು ಗೋಚರಿಸಿವೆ. ಕರ್ನಾಟಕ ರಕ್ಷಣ ವೇದಿಕೆಯ ಟಿ.ಎ.ನಾರಾಯಣಗೌಡ, ಜಯ ಕರ್ನಾಟಕ ಅಧ್ಯಕ್ಷ ಜಗದೀಶ್, ಹೋಟೆಲ್ ಉದ್ಯಮ, ಕ್ಯಾಬ್ ಚಾಲಕರು ಸೇರಿ ಹಲವು ಸಂಘ-ಸಂಸ್ಥೆಗಳು ಕರ್ನಾಟಕ ಬಂದ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ರಾಜ್ಯ …
Read More »ಜನತಾ ತೀರ್ಪು: ಸ್ಥಳೀಯ ಸಂಸ್ಥೆಗಳ ಮತ ಎಣಿಕೆಗೆ ಕ್ಷಣಗಣನೆ -ಅಹಿತಕರ ಘಟನೆ ನಡೆಯದಂತೆ ಭಿಗಿ ಭದ್ರತೆ
ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತ ಎಣಿಕೆಗೆ ಕ್ಷಣಗಣನೆ ಆರಂಭಗೊಂಡಿದೆ. 5 ನಗರಸಭೆ, 19 ಪುರಸಭೆ & 34 ಪಟ್ಟಣ ಪಂಚಾಯತ್ಗಳ ಮತ ಎಣಿಕೆಗೆ ಆಯಾ ಜಿಲ್ಲಾಡಳಿತಗಳು ಸಿದ್ಧತೆ ಮಾಡಿಕೊಂಡಿವೆ. ಇಂದು ಬೆಳಗ್ಗೆ 8ಗಂಟೆಯಿಂದ ಮತ ಎಣಿಕೆ ಕಾರ್ಯ ಆರಂಭವಾಗಲಿದ್ದು, ಎಲ್ಲಾ ಮತ ಎಣಿಕೆ ಕೇಂದ್ರಗಳ ಸುತ್ತಾ ಬಿಗಿ ಪೊಲೀಸ್ ಭದ್ರತೆ ವ್ಯವಸ್ಥೆ ಮಾಡಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ.
Read More »ಎಚ್ಚರಿಕೆ ನೀಡಿದ ಅರುಣ್ ಸಿಂಗ್; ಓಡಿದ ರೇಣುಕಾಚಾರ್ಯ
ಹುಬ್ಬಳ್ಳಿ: ಶಾಸಕ ರೇಣುಕಾಚಾರ್ಯ ಇಲ್ಲಿ ಮಾಧ್ಯಮಗಳ ಮುಂದೆ ಮಾತನಾಡುವ ವೇಳೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸೂಕ್ಷ್ಮವಾಗಿ ಎಚ್ಚರಿಕೆ ನೀಡಿದರು. ಕ್ಯಾ ಚಲ್ ರಹಾ ಹೈ.. ರೇಣುಕಾಚಾರಿ ಎಂದು ಅರುಣ್ ಸಿಂಗ್ ಎನ್ನುತ್ತಿದ್ದಂತೆ ರೇಣುಕಾಚಾರ್ಯ ಮಾತನಾಡುವುದನ್ನು ಬಿಟ್ಟು ಅವರ ಹಿಂದೆ ಓಡಿಹೋದರು. ಅವರು ಹೋದ ಬಳಿಕ ಮತ್ತೆ ಮಾಧ್ಯಮದವರ ಜೊತೆ ಮಾತನಾಡಿದರು.
Read More »ಮುಂದಿನ ಅಸೆಂಬ್ಲಿ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಯಾಗಿ ಹಂಸಲೇಖ?
ಕೃಷ್ಣೈಕ್ಯರಾಗಿರುವ ಉಡುಪಿ ಪೇಜಾವರ ಮಠದ ಶ್ರೀಗಳ ಬಗ್ಗೆ ಹೇಳಿಕೆಯನ್ನು ನೀಡಿ, ಭಾರೀ ವಿವಾದವನ್ನೇ ಎದುರು ಹಾಕಿಕೊಂಡಿರುವ ಗಂಗರಾಜು ಆಲಿಯಾಸ್ ಹಂಸಲೇಖ ಅವರ ಬಗ್ಗೆ ಹೊಸ ಸುದ್ದಿಯೊಂದು ಗಿರಿಗಿಟ್ಲೆಯಾಡುತ್ತಿದೆ. ಅದು ರಾಜಕೀಯಕ್ಕೆ ಸಂಬಂಧ ಪಟ್ಟದ್ದು.. ತಮ್ಮ ಸೂಪರ್ ಹಿಟ್ ಸಂಗೀತ ಸಂಯೋಜನೆಯ ಮೂಲಕ ಚಿರಪಚಿತರಾಗಿರುವ ಹಂಸಲೇಖ ಅವರು ಪೇಜಾವರ ಶ್ರೀಗಳ ಬಗ್ಗೆ ನೀಡಿದ ಹೇಳಿಕೆಯ ನಂತರ ಮನೆಮಾತಾದರು. ಈಗ ಹರಿದಾಡುತ್ತಿರುವ ಸುದ್ದಿಯನ್ನು ಅವಲೋಕಿಸುವುದಾದರೆ, ರಾಜಕೀಯ ಪ್ರವೇಶಕ್ಕೆ ಮುನ್ನ ಇಂತಹದೊಂದು ಪೂರ್ವಭಾವಿ ಕಾಂಟ್ರವರ್ಸಿಯ …
Read More »ನೈಟ್ ಕರ್ಫ್ಯೂ ವೇಳೆ ಅನಗತ್ಯ ಓಡಾಟ: ಮೊದಲ ದಿನವೇ 39 ವಾಹನಗಳು ಸೀಜ್
ಬೆಂಗಳೂರು: ರಾಜ್ಯದಲ್ಲಿ ನಿನ್ನೆಯಿಂದ ನೈಟ್ ಕರ್ಫ್ಯೂ ಜಾರಿಯಾಗಿದ್ದು, ಪೊಲೀಸರು ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದಾರೆ. ನೈಟ್ ಕರ್ಫ್ಯೂ ವೇಳೆ ಅನಗತ್ಯವಾಗಿ ಓಡಾಟನ ನಡೆಸಿದ 39 ವಾಹನಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಮೊದಲು ವಾರ್ನಿಂಗ್ ನೀಡಿದರೂ ಮತ್ತೆ ರಸ್ತೆಗಿಳಿದವರ ಮೇಲೆ ಪೊಲೀಸರು ಗರಂ ಆಗಿದ್ದು, ಪಶ್ಚಿಮ ವಿಭಾಗದಲ್ಲಿ 37 ದ್ವಿಚಕ್ರ ವಾಹನಗಳು, 2 ಕಾರುಗಳನ್ನು ಜಪ್ತಿ ಮಾಡಿದ್ದಾರೆ. ಇನ್ನು ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿ ಹಿನ್ನೆಲೆಯಲ್ಲಿ ಇಂದಿನಿಂದ ಜಕ್ಕೂರು, ಕೆಆರ್ ಮಾರ್ಕೆಟ್ ಸೇರಿದಂತೆ ನಗರದ …
Read More »
Laxmi News 24×7