ಮಂಗಳೂರು: ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ವ್ಯಕ್ತಿಯೋರ್ವ ನೇತ್ರಾವತಿ ನದಿ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಎಂಬಲ್ಲಿ ನಡೆದಿದೆ. ಗೇರುಕಟ್ಟೆ ಪರಪ್ಪು ನಿವಾಸಿ ಮುತ್ತಪ್ಪ ಶೆಟ್ಟಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಎಂದು ತಿಳಿದು ಬಂದಿದೆ. ಗೇರುಕಟ್ಟೆಯಿಂದ ಉಪ್ಪಿನಂಗಡಿಗೆ ಕೆಎಸ್ಆರ್ಟಿಸಿ ಬಸ್ಸ್ನಲ್ಲಿ ಬಂದಿದ್ದ ಮುತ್ತಪ್ಪ ಶೆಟ್ಟಿ, ಸೇತುವೆ ಬಳಿ ಬಂದು ಬಳಿಕ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ನೇತ್ರಾವತಿ ಸೇತುವೆ ಮೇಲಿಂದ ನದಿಗೆ ಹಾರಿದ್ದಾರೆ. ಕಾರಿನಲ್ಲಿ ಸೇತುವೆ …
Read More »ಹಿಂದೂ ದೇಗುಲ ಕಟ್ಟಿಸಿ ಭಾವೈಕ್ಯತೆ ಮಂತ್ರ ಸಾರಿದ ಮುಸ್ಲಿಂ ವ್ಯಕ್ತಿ
ರಾಮನಗರ: ಕರ್ನಾಟಕ ಅಂದ್ರೆನೇ ಭಾವೈಕತೆಯ ತವರೂರು. ಹಿಂದೂ-ಮುಸ್ಲಿಂ ಬಾಂಧವರು ಸಾಮರಸ್ಯದಿಂದ ಬದುಕುತ್ತಿದ್ದಾರೆ. ಅದೇ ರೀತಿ ನಗರದ ಮುಸ್ಲಿಂ ಮುಖಂಡರೊಬ್ಬರು ಹಿಂದೂ ದೇಗುಲ ನಿರ್ಮಿಸಿ ಭಾವೈಕ್ಯತೆ ಮಂತ್ರ ಸಾರಿದ್ದಾರೆ. ಚನ್ನಪಟ್ಟಣ ಕ್ಷೇತ್ರದ ಸೈಯದ್ ಸಾದತ್ ಉಲ್ಲಾ ಸಕಾಫ್ ಎಂಬುವವರು ಹಿಂದೂ ದೇವಾಲಯಗಳನ್ನು ಕಟ್ಟಿಸಿ ಭಾವೈಕ್ಯತೆ ಸಾರಿದ್ದಾರೆ. ಲಾಕ್ ಡೌನ್ ಸಮಯದಲ್ಲೂ ಫುಡ್ ಕಿಟ್ ವಿತರಿಸುವ ಮೂಲಕ ನೆರವಾಗಿದ್ದ ಸಕಾಫ್, ಇದೀಗ ತಮ್ಮ ಸ್ವಂತ ಖರ್ಚಿನಲ್ಲಿ ದೇಗುಲ ನಿರ್ಮಾಣಕ್ಕೆ ಮುಂದಾಗಿದ್ದಾರೆ. …
Read More »ಅಗಲಿದ ಪತ್ನಿಯ ಫೋಟೋಗೆ ಹೂ ತರಲು ಬಂದ ಗಂಡನ ಪ್ರಾಣವನ್ನೂ ಹೊತ್ತೊಯ್ದ ಜವರಾಯ!
ಯಳಂದೂರು: ಅಗಲಿದ ಪತ್ನಿಯ ಫೋಟೋಗೆ ಹೂ ತರಲೆಂದು ಮನೆಯಿಂದ ಹೊರಬಂದ ಗಂಡನ ಮೇಲೆ ಟೆಂಪೋ ಹರಿದಿದ್ದು, ಆತ ಸ್ಥಳದಲ್ಲೇ ದುರಂತ ಅಂತ್ಯ ಕಂಡ ಹೃದಯ ವಿದ್ರಾವಕ ಘಟನೆ ಚಾಮರಾಜನಗರ ಜಿಲ್ಲೆ ಯಳಂದೂರು ಪಟ್ಟಣದಲ್ಲಿ ಸಂಭವಿಸಿದೆ. ಯರಗಂಬಳ್ಳಿ ಗ್ರಾಮದ ಮರಿಸ್ವಾಮಿ(40) ಮೃತರು. ಇವರ ಪತ್ನಿ ಇತ್ತೀಚಿಗೆ ಕರೊನಾ ಸೋಂಕಿಗೆ ಬಲಿಯಾಗಿದ್ದರು. ಮನೆಯಲ್ಲಿದ್ದ ಪತ್ನಿಯ ಫೋಟೋಗೆ ಹೂ ಹಾಕಲೆಂದು ಇಂದು ಬೆಳಗ್ಗೆ ಹೂ ಖರೀದಿಸಿ ತರಲು ಪಟ್ಟಣಕ್ಕೆ ಮರಿಸ್ವಾಮಿ ಬಂದಿದ್ದರು. ಯಳಂದೂರು ಪಟ್ಟಣದ …
Read More »ಕೆಎಸ್ಆರ್ಟಿಸಿ ಬಸ್ ಅನ್ನೇ ಖತರ್ನಾಕ್ ಖದೀಮರು ಕದ್ದೊಯ್ದು ಅಚ್ಚರಿ ಮೂಡಿಸಿದ್ದಾರೆ.
ತುಮಕೂರು: ಕಳ್ಳರು ಚಿನ್ನ, ಬೆಳ್ಳಿ, ಹಣ ಕದ್ದು ಪರಾರಿಯಾಗೋದು ಕಾಮನ್. ಆದರೆ ಇಲ್ಲಿ ಕೆಎಸ್ಆರ್ಟಿಸಿ ಬಸ್ ಅನ್ನೇ ಖತರ್ನಾಕ್ ಖದೀಮರು ಕದ್ದೊಯ್ದು ಅಚ್ಚರಿ ಮೂಡಿಸಿದ್ದಾರೆ. ಹೌದು.. ಜಿಲ್ಲೆಯ ಗುಬ್ಬಿ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್ ಅನ್ನ ಕದ್ದೊಯ್ದ ಕಳ್ಳರು, ಸಿ.ಎಸ್. ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಜನ್ನೇನಹಳ್ಳಿ ಗ್ರಾಮದ ಬಳಿ ಬಿಟ್ಟು ಪರಾರಾಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಬಸ್ಸಿನಲ್ಲಿದ್ದ ಡಿಸೇಲ್ ಕದ್ದು ಬಳಿಕ ಬಿಟ್ಟು ಹೋಗಿರುವ ಶಂಕೆಯನ್ನ ಪೊಲೀಸರು ವ್ಯಕ್ತಪಡಿಸಿದ್ದಾರೆ. …
Read More »ಕೇವಲ ₹500 ರೂ. ಹಣಕ್ಕಾಗಿ ವ್ಯಕ್ತಿ ಕೊಲೆ ಮಾಡಿ ಪರಾರಿಯಾದ ಖತರ್ನಾಕ್ ಗ್ಯಾಂಗ್..!
ವಿಜಯಪುರ: ಕೇವಲ ₹5,00 ರೂಪಾಯಿಗಾಗಿ ನಾಲ್ಕು ಜನರ ಗುಂಪೊಂದು ವ್ಯಕ್ತಿಯೋರ್ವನನ್ನು ಹತ್ಯೆಗೈದು ಪರಾರಿಯಾಗಿದೆ. ವಿಜಯಪುರದ ಜಾಡರ ಓಣಿಯಲ್ಲಿ ಘಟನೆ ನಡೆದಿದ್ದು, ನಿವಾಸಿ ಭೀಮ್ಸಿ ಪಾತ್ರೋಟಿ ಮೃತ ದುರ್ದೈವಿ ಎನ್ನಲಾಗಿದೆ. ನಾಲ್ವರು ಸೇರಿಕೊಂಡು ಭೀಮ್ಸಿ ಹತ್ಯೆಗೈದು ಪರಾರಿಯಾಗಿದ್ದಾರೆ. ಈ ಸಂಬಂಧ ಗೋಳಗುಮ್ಮಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳಿಗಾಗಿ ಪೊಲೀಸರು ಶೋಧಕಾರ್ಯ ಮುಂದುವರಿಸಿದ್ದಾರೆ.
Read More »ಟಿಕೆಟ್ ರಹಿತ ಪ್ರಯಾಣ – ನೈರುತ್ಯ ರೈಲ್ವೆ ವಲಯದಿಂದ 5.55 ಕೋಟಿ ದಂಡ ವಸೂಲಿ!
ಹುಬ್ಬಳ್ಳಿ: ನೈರುತ್ಯ ರೈಲ್ವೆ ವಲಯದ ವ್ಯಾಪ್ತಿಯಲ್ಲಿ 3 ತಿಂಗಳಲ್ಲಿ ಟಿಕೆಟ್ ರಹಿತ ಪ್ರಯಾಣಿಕರಿಂದ ಬರೋಬ್ಬರಿ 5.55 ಕೋಟಿ ದಂಡ ವಸೂಲಿ ಮಾಡಲಾಗಿದೆ. ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಒಟ್ಟು 1,16,521 ಜನ ಟಿಕೆಟ್ ರಹಿತ ಪ್ರಯಾಣಿಕರನ್ನು ಹಿಡಿಯಲಾಗಿದೆ. ಇವರಿಂದ 5.52 ಕೋಟಿ ದಂಡ ವಸೂಲಿ ಮಾಡಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 2435 ಪ್ರಕರಣಗಳನ್ನು ದಾಖಲಿಸಿ 13.74 ಲಕ್ಷ ದಂಡ ವಸೂಲಿ ಮಾಡಲಾಗಿತ್ತು. ಟಿಕೆಟ್ ತಪಾಸಣಾ ಸಿಬ್ಬಂದಿ ಕಾರ್ಯ ನಿರ್ವಹಣೆ ಈ ಸಲ …
Read More »ನೂತನ ಶಿಕ್ಷಣ ನೀತಿಯಲ್ಲಿ ಸ್ಥಳೀಯ ಭಾಷೆ ಕಲಿಕೆಗೆ ಆದ್ಯತೆ: ಗೆಹ್ಲೋಟ್
ಹುಬ್ಬಳ್ಳಿ: ಕೇಂದ್ರ ಸರ್ಕಾರದ ನೂತನ ಶಿಕ್ಷಣ ನೀತಿಯನ್ನು ರಾಷ್ಟ್ರದಲ್ಲಿ ಮಟ್ಟದಲ್ಲಿ ಅನುಷ್ಠಾನಕ್ಕೆ ತರಲಾಗುತ್ತಿದೆ. ಶಿಕ್ಷಣ ನೀತಿಯಲ್ಲಿ ಸ್ಥಳೀಯ ಭಾಷೆಯ ಕಲಿಕೆಗೂ ಆದ್ಯತೆಯನ್ನು ನೀಡಲಾಗಿದೆ ಎಂದು ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಹೇಳಿದ್ದಾರೆ. ನವನಗರದ ಕರ್ನಾಟಕ ರಾಜ್ಯ ಕಾನೂನು ವಿಶ್ವ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಜೊತೆ ರಾಜ್ಯಪಾಲರು ಸಂವಾದ ನಡೆಸಿದ್ದು ವಾರ್ತಾ ಇಲಾಖೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದೆ. ರಾಜ್ಯಪಾಲರು ಹೇಳಿದ್ದೇನು? ದೇಶದ ಸಂವಿಧಾನ ಹಾಗೂ ಕಾನೂನು ವ್ಯವಸ್ಥೆ ಜಗತ್ತಿನಲ್ಲಿಯೇ ಶ್ರೇಷ್ಠವಾದದು. …
Read More »ದುರಸ್ತಿಗೊಂಡು ಎರಡೇ ದಿನಕ್ಕೆ ಹಳೆ ಚಾಳಿಯನ್ನು ಮುಂದುವರಿಸಿದ ವಾಚ್ ಟವರ್
ದಾಂಡೇಲಿ : ನಗರದ ಶೋಭೆ ಹೆಚ್ಚಿಸುವ ದೃಷ್ಟಿಯಿಂದ ವೆಸ್ಟ್ ಕೊಸ್ಟ್ ಕಾಗದ ಕಾರ್ಖಾನೆಯ ಸಿ.ಎಸ್.ಆರ್ ಯೋಜನೆಯಡಿ ಜೆ.ಎನ್.ರಸ್ತೆಯಲ್ಲಿ ನಿರ್ಮಾಣ ಮಾಡಲಾದ ವಾಚ್ ಟವರ್ ಸರಿಯಿರುವುದಕ್ಕಿಂತ ಕೆಟ್ಟು ನಿಂತಿರುವುದೆ ಹೆಚ್ಚು ಎಂಬ ಮಾತು ನಗರದಲ್ಲಿ ಕೇಳಿ ಬರುತ್ತಿದೆ. ವಾಚ್ ಟವರ್ ದುರಸ್ತಿ ಬಗ್ಗೆ ಸಾಕಷ್ಟು ಬಾರಿ ನಗರ ಸಭೆಗೆ ಗಮನ ಸೆಳೆಯಲಾಗಿತ್ತು. ಪರಿಣಾಮವಾಗಿ ಕಳೆದೆರಡು ದಿನಗಳ ಹಿಂದೆ ನಗರ ಸಭೆಯವರು ಕಾಗದ ಕಾರ್ಖಾನೆಯ ಸಹಕಾರದಲ್ಲಿ ದುರಸ್ತಿ ಮಾಡಿದ್ದರು. ದುರಸ್ತಿ ಮಾಡಿ ಎರಡು …
Read More »B.S.Y. ಅವರ ಆಪ್ತನ ಮನೆಯ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿ ಭ್ರಷ್ಟಾಚಾರ ಬಯಲಿಗೆ ಎಳೆದರೂ ಬೊಮ್ಮಾಯಿ ಮೌನ ಯಾಕೆ?
ಮುಖ್ಯಮಂತ್ರಿ ಕಚೇರಿಯ ನೌಕರ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಪ್ತನ ಮನೆಯ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿ ಭ್ರಷ್ಟಾಚಾರ ಬಯಲಿಗೆ ಎಳೆದರೂ ಬಸವರಾಜ ಬೊಮ್ಮಾಯಿ ಅವರು ಯಾಕೆ ನೈತಿಕ ಹೊಣೆ ಹೊರಲಿಲ್ಲ ಎಂದು ಕಾಂಗ್ರೆಸ್ ವಕ್ತಾರ ಹಾಗೂ ಪರಿಷತ್ನ ಮಾಜಿ ಸದಸ್ಯ ರಮೇಶ್ ಬಾಬು ಪ್ರಶ್ನಿಸಿದ್ದಾರೆ. ವಿಜಯೇಂದ್ರ ಅವರನ್ನು ಹಣಿಯಲು ಬಿಜೆಪಿಯ ಮುಖಂಡರೇ ಈ ದಾಳಿಗೆ ಕಾರಣಕರ್ತರಾಗಿದ್ದು ದಾಳಿಯ ಸುಳಿವು ಮೊದಲೇ ಬಸವರಾಜ ಬೊಮ್ಮಾಯಿಯವರಿಗೆ ತಿಳಿದಿತ್ತು. …
Read More »ಕೇರಳದಲ್ಲಿ ಮಳೆ ಆರ್ಭಟ, ಮೃತರ ಸಂಖ್ಯೆ 38ಕ್ಕೆ ಏರಿಕೆ;
ತಿರುವನಂತಪುರ: ಕೇರಳದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಪ್ರವಾಹ ಮತ್ತು ಭೂಕುಸಿತ ಪರಿಣಾಮ ಮೃತರ ಸಂಖ್ಯೆ ಸೋಮವಾರ 38ಕ್ಕೆ ಏರಿದೆ. ಕೊಟ್ಟಾಯಂ ಜಿಲ್ಲೆಯ ಕೂಟ್ಟಿಕಲ್ ಪಂಚಾಯಿತಿಯ ಪ್ಲಾಪಲ್ಲಿಯಲ್ಲಿ ಭೂಕುಸಿತದ ಅವಶೇಷದಡಿಯಲ್ಲಿ ಏಳು ವರ್ಷದ ಬಾಲಕಿ ಸಹಿತ 13 ಶವಗಳು ಪತ್ತೆಯಾಗಿವೆ. ಮುಂಡಕಾಯಂನಲ್ಲಿ ಪ್ರವಾಹದ ರಭಸಕ್ಕೆ ಒಂದು ಮನೆ ಕೊಚ್ಚಿಕೊಂಡು ಹೋಗಿದೆ. ಇಡುಕ್ಕಿ ಜಿಲ್ಲೆಯ ಕೊಕ್ಕಾಯರ್ ಮತ್ತು ಪೆರುವನಂತಮ್ ಗ್ರಾಮಗಳಲ್ಲಿ ಎಂಟು ಮೃತದೇಹಗಳು ದೊರಕಿವೆ. ಈ ಮೂಲಕ ಸತ್ತವರ ಸಂಖ್ಯೆ 38ಕ್ಕೆ ಹೆಚ್ಚಳವಾಗಿದೆ. ಎರ್ನಾಕುಲಂನಲ್ಲಿ …
Read More »