Breaking News

ಪವರ್‌ ಸ್ಟಾರ್‌ ಅಪ್ಪು ʼಗಂಧದ ಗುಡಿʼ ಓಟಿಟಿ ಎಂಟ್ರಿಗೆ ಡೇಟ್‌ ಫಿಕ್ಸ್

ಬೆಂಗಳೂರು: ಪವರ್‌ ಸ್ಟಾರ್‌ ಡಾ.ಪುನೀತ್‌ ರಾಜ್‌ ಕುಮಾರ್‌ ಕನಸಿನ ಪ್ರಾಜೆಕ್ಟ್‌ ʼಗಂಧದ ಗುಡಿʼ ಓಟಿಟಿ ಪ್ರಿಮಿಯರ್‌ ಗೆ ದಿನಾಂಕ ನಿಗದಿಯಾಗಿದೆ. ಕರ್ನಾಟಕದ ವನ್ಯಜೀವನ ಯಾನವನ್ನು ಸುಂದರವಾಗಿ ಕಟ್ಟಿಕೊಟ್ಟ ʼಗಂಧದ ಗುಡಿʼ ಯಲ್ಲಿ ಅಮೋಘ ವರ್ಷ, ಅಪ್ಪು ಅವರ ಪ್ರವಾಸಿ ಪಯಣದ ಕನಸಿಗೆ ಜೊತೆಯಾಗಿದ್ದರು. ʼಗಂಧದ ಗುಡಿʼ ಯಲ್ಲಿ ಅಪ್ಪು ಕರುನಾಡಿನ ಪ್ರಾಣಿ ಸಂಕುಲದ ಪರಿಸರದಲ್ಲಿ ಸರಳವಾಗಿ ಸಂಚರಿಸಿದ್ದರು. ಥಿಯೇಟರ್‌ ನಲ್ಲಿ 2022 ರ ಅಕ್ಟೋಬರ್‌ 28 ಬಿಡುಗಡೆಯಾದ ಸಾಕ್ಷ್ಯಚಿತ್ರಕ್ಕೆ ಅದ್ದೂರಿ ರೆಸ್ಪಾನ್ಸ್‌ …

Read More »

ಕಾಂಗ್ರೆಸ್‌ ತೆಕ್ಕೆಗೆ ‘ಆಪರೇಷನ್‌ ಕಮಲ’ ರೂವಾರಿ ಕದಲೂರು ಉದಯ್‌ಗೌಡ

ಬೆಂಗಳೂರು: ‘ಆಪರೇಷನ್‌ ಕಮಲ’ದ ಮೂಲಕ ಕಾಂಗ್ರೆಸ್‌- ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಉರುಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ‌ ಉದ್ಯಮಿ, ಮದ್ದೂರು ವಿಧಾನಸಭೆ ಕ್ಷೇತ್ರದ ಮುಖಂಡ ಕದಲೂರು ಉದಯ್‌ಗೌಡ ಅವರು ತಮ್ಮ ಬೆಂಬಲಿಗರ ಜೊತೆ ಸೋಮವಾರ ಕಾಂಗ್ರೆಸ್‌ ಸೇರಿದರು.   ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಕಾಂಗ್ರೆಸ್‌ ಮುಖಂಡರಾದ ಚಲುವರಾಯಸ್ವಾಮಿ, ನರೇಂದ್ರಸ್ವಾಮಿ ಅವರು ಉದಯ್ ಗೌಡ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್‌, ‘ಉದಯ್ ಯಾವುದೇ ಷರತ್ತು ಇಲ್ಲದೆ ಪಕ್ಷ …

Read More »

ಮಾರ್ಚ್ 17ರ ಮಧ್ಯರಾತ್ರಿಯಿಂದ ಲಾರಿ ಮಾಲೀಕರ ಮುಷ್ಕರ

ಬೆಂಗಳೂರು: ವಾಣಿಜ್ಯ ವಾಹನಗಳ ಎಫ್‌.ಸಿ ನವೀಕರಣಕ್ಕೆ ಕ್ಯೂಆರ್‌ ಕೋಡ್‌ ಇರುವ ರೆಟ್ರೋ ರಿಫ್ಲೆಕ್ಟರ್‌ ಟೇಪ್ ಅಳವಡಿಸಿಕೊಂಡು ಬರುವಂತೆ ಸರ್ಕಾರ ಹೊರಡಿಸಿರುವ ಆದೇಶಕ್ಕೆ ಕರ್ನಾಟಕ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘಗಳ ಒಕ್ಕೂಟ ವಿರೋಧ ವ್ಯಕ್ತಪಡಿಸಿದೆ.   ‘ಬೆಂಗಳೂರು ನಗರದಲ್ಲಿ ಸರಕು-ಸಾಗಣೆ ವಾಹನಗಳ ಪ್ರವೇಶ ರದ್ದು ಪಡಿಸಿರುವುದನ್ನು ಖಂಡಿಸಿ ಇದೇ 17ರ ಮಧ್ಯರಾತ್ರಿಯಿಂದ ಅಗತ್ಯ ವಸ್ತುಗಳ ಪೂರೈಕೆಯನ್ನು ಸ್ಥಗಿತಗೊಳಿಸಿ ಪ್ರತಿಭಟನೆ ಮಾಡಲಾಗುವುದು’ ಎಂದು ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಜಿ.ಆರ್. ಷಣ್ಮುಖಪ್ಪ, …

Read More »

ಕಾಳ್ಗಿಚ್ಚು ನಿಯಂತ್ರಣಕ್ಕೆ ಪರಿಸರ ತಜ್ಞರಿಂದ ಮುಖ್ಯಮಂತ್ರಿಗೆ ಪತ್ರ

ಶಿರಸಿ: ಮಲೆನಾಡು ಹಾಗೂ ಕರಾವಳಿಯಲ್ಲಿ‌ ವ್ಯಾಪಕವಾಗಿ ಹಬ್ಬುತ್ತಿರುವ ಕಾಳ್ಗಿಚ್ಚು ನಿಯಂತ್ರಿಸಲು ಜಿಲ್ಲೆಯ ಪರಿಸರ ಹಾಗೂ ಜೀವಶಾಸ್ತ್ರ ತಜ್ಞರು ಕೆಲವು ನಿಯಂತ್ರಣಾ ಕ್ರಮಗಳ ಬಗ್ಗೆ ಮುಖ್ಯಮಂತ್ರಿಗೆ ಪತ್ರ ಬರೆದಿದ್ದು, ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.   ಪರಿಸರ ತಜ್ಞರಾದ ಅನಂತ ಹೆಗಡೆ ಅಶೀಸರ, ಪ್ರೊ. ಬಿ.ಎಂ.ಕುಮಾರಸ್ವಾಮಿ, ಬಿ.ಎಚ್.ರಾಘವೇಂದ್ರ, ವೆಂಕಟೇಶ ವರದಾಮೂಲ, ಡಾ. ಕೇಶವ ಎಚ್. ಕೊರ್ಸೆ, ನಾರಾಯಣ ಗಡಿಕೈ, ಡಾ. ಪ್ರಕಾಶ ಮೇಸ್ತ, ಡಾ. ಮಹಾಬಲೇಶ್ವರ ಸಾಯಿಮನೆ, ಗಣಪತಿ ಬಿಸಲಕೊಪ್ಪ ಅವರನ್ನು …

Read More »

ಶಿರಸಿ-ಸಿದ್ದಾಪುರ ಕ್ಷೇತ್ರಕ್ಕೆ ನಾನೇ ಅಭ್ಯರ್ಥಿ: ಕಾಗೇರಿ

ಶಿರಸಿ: ‘ಶಿರಸಿ-ಸಿದ್ದಾಪುರ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿಯಿಂದ ನಾನೇ ಅಭ್ಯರ್ಥಿ. ಯಾರಿಗೂ ಅನುಮಾನ ಬೇಡ’ ಎಂದು ವಿಧಾನಸಭಾಧ್ಯಕ್ಷ ಹಾಗೂ ಸ್ಥಳೀಯ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು. ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಸಿದ್ದಾಪುರದಲ್ಲಿ ಕೆಲವರಿಂದ ವಿರೋಧ ವ್ಯಕ್ತವಾದರೂ ಅದು ಸಾಮಾನ್ಯ. ಅದನ್ನು ಶಮನ ಮಾಡು ವುದು ನನಗೆ ತಿಳಿದಿದೆ’ ಎಂದು ಹೇಳಿದರು. ‘ವಿಧಾನಸಭಾಧ್ಯಕ್ಷನಾದ ನಂತರ ಪಕ್ಷದ ಚಟುವಟಿಕೆಯಿಂದ ದೂರ ಉಳಿದಿದ್ದೆ. ಇದರಿಂದ ಕ್ಷೇತ್ರದಲ್ಲಿ ಹೆಚ್ಚಿನ ವ್ಯತ್ಯಾಸ ಆಗದಿದ್ದರೂ ಪಕ್ಷದ ವಲಯದಲ್ಲಿ …

Read More »

ಕೊಪ್ಪಳ | ಅಂಜನಾದ್ರಿ ಅಭಿವೃದ್ಧಿಗೆ ಮುಖ್ಯಮಂತ್ರಿ ‌ಭೂಮಿಪೂಜೆ ಇಂದು

ಅಂಜನಾದ್ರಿ (ಗಂಗಾವತಿ): ಹನುಮ‌ ಜನಿಸಿದ‌ ನಾಡು ಎಂದು ಹೆಸರಾದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ಭೂಮಿ ಪೂಜೆ ನೆರವೇರಿಸುವರು. ಇದಕ್ಕಾಗಿ ಸರ್ಕಾರ ₹120 ಕೋಟಿ ಮೀಸಲಿಟ್ಟಿದೆ.   ಬಳಿಕ ಗಂಗಾವತಿಯ ತಾಲ್ಲೂಕು ಕ್ರೀಡಾಂಗಣದಲ್ಲಿ ಬೊಮ್ಮಾಯಿ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಫಲಾನುಭವಿಗಳ ಸಮ್ಮೇಳನಕ್ಕೆ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ಪೆಂಡಾಲ್, ಬೃಹತ್ ವೇದಿಕೆ, ಗಣ್ಯವ್ಯಕ್ತಿಗಳ ಆಸನ ಸೇರಿ 30 ಸಾವಿರ ಜನ ಕುಳಿತುಕೊಳ್ಳಲು ವ್ಯವಸ್ಥೆ …

Read More »

ಚುನಾವಣಾ ಆಯೋಗದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

ಬೆಳಗಾವಿ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ರಚಿಸಲಾಗಿರುವ ತಂಡಗಳು ಕಾರ್ಯೋನ್ಮುಖರಾಗಿ ಚುರುಕಿನಿಂದ ಕೆಲಸ ಮಾಡಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು. ಮುಂಬರುವ ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ (ಮಾ.13) ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗಡಿಭಾಗದ ಚೆಕ್ ಪೋಸ್ಟ್ ಗಳಲ್ಲಿ ಈಗಾಗಲೇ ನಿಯೋಜಿಸಲಾಗಿರುವ ತಂಡಗಳು ಪ್ರತಿಯೊಂದು ವಾಹನಗಳ ಮೇಲೆ ನಿಗಾ ವಹಿಸಬೇಕು. ಪ್ರತಿಯೊಂದು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ …

Read More »

ವಿಜಯಪುರದ ಉಪ್ಪಲಿ ಬುರಜ್ ಮೇಲಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ

ವಿಜಯಪುರ:ನಗರದ ಐತಿಹಾಸಿಕ ಸ್ಮಾರಕ ಉಪ್ಪಲಿ ಬುರಜ್ ಮೇಲಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ನಡೆದಿದೆ. ವಿಜಯಪುರದ ಚಂದಾಬಾವಡಿ ನಿವಾಸಿ ಖಾಜಾ ನದಾಫ್ ಮೃತಪಟ್ಟಿರುವ ವ್ಯಕ್ತಿ.   ಖಾಜಾ ನದಾಫ್ ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಕಾರಣ ತಿಳಿದು ಬಂದಿಲ್ಲ. ಈ ಘಟನೆಯ ಬಳಿಕ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ನಗರದ ಗಾಂಧಿಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Read More »

1 ಕೆ.ಜಿ ಮರದ ಬೆಲೆ 8 ಲಕ್ಷ ರೂ.; ಅತ್ಯಂತ ದುಬಾರಿ ಮರ ಯಾವುದು ಗೊತ್ತಾ?

ನವದೆಹಲಿ: ಅತ್ಯಂತ ದುಬಾರಿ ಮರ ಯಾವುದು ಎಂದರೆ ಅನೇಕರು ಶ್ರೀಗಂಧ ಅಂತಾರೆ. ವಿಶ್ವದಾದ್ಯಂತ ವಿವಿಧ ಬಗೆಯ ದುಬಾರಿ ಮರಗಳಿವೆ. ಈ ಮರಕ್ಕೆ 1 ಕೆಜಿಗೆ ಲಕ್ಷಗಟ್ಟಲೆ ಬೆಲೆಯನ್ನು ಹೊಂದಿದೆ. ಯಾವ ಮರ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ… ಶ್ರೀಗಂಧಕ್ಕೆ ಸರಾಸರಿ 7 ರಿಂದ 8 ಸಾವಿರದವರೆಗೆ ಲಭ್ಯವಿದೆ. ಆದ್ರೆ, ಈ ದುಬಾರಿ ಬೆಲೆ ಬಾಳುವ ಈ ಮರದ ಹೆಸರು ‘ಆಫ್ರಿಕನ್ ಬ್ಲ್ಯಾಕ್‌ವುಡ್’. ಈ ಮರದ ಬೆಲೆ 8 ಸಾವಿರ ಪೌಂಡ್ …

Read More »

18 ತಿಂಗಳಿಂದ ‘DA ಬಾಕಿ’ಗಾಗಿ ಕಾದು ಕುಳಿತಿರುವ ‘ಸರ್ಕಾರಿ ನೌಕರರು-ಪಿಂಚಣಿದಾರ’ರಿಗೆ ಕೇಂದ್ರ ಸರ್ಕಾರದಿಂದ ಬಿಗ್ ಶಾಕ್

ನವದೆಹಲಿ : ಸಂಸತ್ತಿನ ಬಜೆಟ್ ಅಧಿವೇಶನದ ಎರಡನೇ ಹಂತದ ಆರಂಭದೊಂದಿಗೆ ಕೇಂದ್ರ ನೌಕರರು ಮತ್ತು ಪಿಂಚಣಿದಾರರ 18 ತಿಂಗಳ ಬಾಕಿ ಸಮಸ್ಯೆ ಲೋಕಸಭೆಯಲ್ಲಿ ಉದ್ಭವಿಸಿದೆ. ಪ್ರಶ್ನೋತ್ತರ ವೇಳೆಯಲ್ಲಿ ತುಟ್ಟಿಭತ್ಯೆ ಕುರಿತು ಕೇಂದ್ರ ಸರ್ಕಾರಕ್ಕೆ ಪ್ರಶ್ನೆ ಕೇಳಲಾಗಿದ್ದು, ಕರೋನಾ ಅವಧಿಯಲ್ಲಿ ಸ್ಥಗಿತಗೊಂಡಿರುವ ಕೇಂದ್ರ ನೌಕರರು ಮತ್ತು ಪಿಂಚಣಿದಾರರ 18 ತಿಂಗಳ ತುಟ್ಟಿಭತ್ಯೆಯನ್ನ ಬಿಡುಗಡೆ ಮಾಡುವ ಉದ್ದೇಶವಿದೆಯೇ ಎಂದು ಕೇಳಲಾಯಿತು. ಈ ಪ್ರಶ್ನೆಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಡಿಎ ಬಾಕಿ ನೀಡುವ …

Read More »