ಬೆಂಗಳೂರು: ಬರಗಾಲದಲ್ಲಿ ನೀರು ಕೊಡದಿರುವ ಸರ್ಕಾರ ಜನರಿಗೆ ಯಥೇಚ್ಛ ಸಾರಾಯಿ ಕುಡಿಸಲು ಮುಂದಾಗಿರುವುದು ದೊಡ್ಡ ದುರಂತ. ಇದು ಸಾರಾಯಿ ಗ್ಯಾರಂಟಿ (Arrack Guarantee) ಸರ್ಕಾರ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಆರೋಪಿಸಿದ್ದಾರೆ. ಗೃಹಲಕ್ಷ್ಮಿ ಯೋಜನೆಯ ಮೂಲಕ ಕೊಟ್ಟ ಹಣವನ್ನು ಇದರ ಮೂಲಕ ವಸೂಲಿ ಮಾಡಲು ಮುಂದಾಗಿದೆ ಎಂದಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ರಾಜ್ಯ ಸರ್ಕಾರ ಪಂಚಾಯತಿ ಮಟ್ಟದಲ್ಲಿ ಮದ್ಯದಂಗಡಿ (Arrack Shops at …
Read More »ಕಾಂಗ್ರೆಸ್ನವರಿಗೆ ಕರ್ನಾಟಕದ ಬಗ್ಗೆ ಚಿಂತೆಯಿಲ್ಲ, ಜೋಕರ್ನನ್ನು ಪ್ರಧಾನಿ ಮಾಡುವುದಷ್ಟೇ ಯತ್ನ; ಬಸನಗೌಡ ಪಾಟೀಲ್ ವಾಗ್ದಾಳಿ
ವಿಜಯಪುರ, ಸೆಪ್ಟೆಂಬರ್ 25: ಕರ್ನಾಟಕ ಕಾಂಗ್ರೆಸ್ ಸರ್ಕಾರದ (Congress Government) ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್(Basangouda Patil Yatnal), ಬರ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಹೇಳಿದ್ದಾರೆ. ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಬರಗಾಲ ಘೋಷಣೆ ಮಾಡಲು ತಯಾರಿಲ್ಲ. ಕಾವೇರಿ ನೀರನ್ನು ಅವ್ಯಾಹತವಾಗಿ ಬಿಡುತ್ತಿದ್ದಾರೆ. ಅವರಿಗೆ ಕರ್ನಾಟಕದ ಬಗ್ಗೆ ಚಿಂತನೆಯೇ ಇಲ್ಲ. ಅವರು ಕೇವಲ ಒಬ್ಬ ಜೋಕರ್ನನ್ನು ಪ್ರಧಾನಮಂತ್ರಿ ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ಹೇಳಿದ್ದಾರೆ. …
Read More »ಮುಖ್ಯಮಂತ್ರಿ ಚಂದ್ರು ಅವರಿಂದ ಸರ್ಕಾರಕ್ಕೆ ಐದು ಒತ್ತಾಯ
ತಮಿಳುನಾಡಿಗೆ ನೀರು ಹರಿಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಹೀಗಾಗಿ ರೈತರು, ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಸುಪ್ರೀಂ ಆದೇಶ ಹೊರ ಬಿದ್ದ ದಿನದಿಂದ ಪ್ರತಿ ದಿನ ರಸ್ತೆಗಿಳಿದು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಲಾಗುತ್ತಿದೆ. ರಾಜ್ಯದ ಪ್ರಸಕ್ತ ವಿದ್ಯಮಾನದ ಕ್ಷಣ ಕ್ಷಣದ ಮಾಹಿತಿಗಾಗಿ ಟಿವಿ9 ಡಿಜಿಟಲ್ ಫಾಲೋ ಮಾಡಿ.ಮುಂಗಾರು ಮಳೆ ಕೈ ಕೊಟ್ಟು ಸರಿಯಾದ ಸಮಯಕ್ಕೆ ಮಳೆ ಆಗದೆ ರಾಜ್ಯದಲ್ಲಿ ಬರದ ಛಾಯೆ ಆವರಿಸಿದೆ. ಇದರ ನಡುವೆ ತಮಿಳು ನಾಡಿಗೆ ಪ್ರತಿ …
Read More »ಬೆಳಗಾವಿಯಲ್ಲಿನ ಗಣಪತಿ ಮೊಬೈಲ್ ಬಳಕೆಯಿಂದ ಹೊರಬಂದು ಪುಸ್ತಕಗಳನ್ನು ಓದುವಂತೆ ಪ್ರೇರೇಪಿಸುತ್ತಿದ್ದಾರೆ.
ಬೆಳಗಾವಿ: ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿರುವ ಜನ ಕೌಟುಂಬಿಕ ಸಂಬಂಧಗಳನ್ನೇ ಮರೆಯುತ್ತಿದ್ದಾರೆ. ಮೊಬೈಲೇ ಎಲ್ಲವೂ ಆಗಿದ್ದು, ಸಮಾಜ ಎತ್ತ ಸಾಗುತ್ತಿದೆ ಎಂಬುದೇ ಯಕ್ಷಪ್ರಶ್ನೆಯಾಗಿದೆ. ಇದಕ್ಕೆಲ್ಲಾ ಪರಿಹಾರ ಸೂಚಿಸಬೇಕೆಂದು ಬೆಳಗಾವಿಯಲ್ಲಿ ವಿಘ್ನ ವಿನಾಶಕ ಗಣಪನು ಮೊಬೈಲ್ ಕಾರ್ಕೊಟಕ ವಿಷವಿದ್ದಂತೆ. ಅದರಿಂದ ಹೊರ ಬನ್ನಿ ಎಂದು ಭಕ್ತರಿಗೆ ಎಚ್ಚರಿಸುತ್ತಿದ್ದಾರೆ. ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಎದ್ದ ಕ್ಷಣದಿಂದ ಹಿಡಿದು ಮಲಗುವವರೆಗೂ ಪ್ರತಿಯೊಂದು ಸಂದರ್ಭದಲ್ಲೂ ಮೊಬೈಲ್ ಇಲ್ಲದ ಜೀವನ ಊಹಿಸಿಕೊಳ್ಳುವುದು ಕೂಡ …
Read More »ಚುನಾವಣೆ ವೇಳೆ ಕುಕ್ಕರ್ ಹಂಚಿಕೆ ಕುರಿತ ಹೇಳಿಕೆ: ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಪೊಲೀಸರಿಗೆ ದೂರು
ಮೈಸೂರು: ಚುನಾವಣೆ ಸಂದರ್ಭದಲ್ಲಿ ಕುಕ್ಕರ್ ಹಾಗೂ ಇಸ್ತ್ರಿ ಪೆಟ್ಟಿಗೆ ಹಂಚಿಕೆ ಮಾಡಿರುವ ಸಂಬಂಧ ಮಾಜಿ ಶಾಸಕ ಹಾಗೂ ವರುಣ ವಿಧಾನಸಭಾ ಕ್ಷೇತ್ರದ ಆಶ್ರಯ ಸಮಿತಿಯ ಅಧ್ಯಕ್ಷರೂ ಆಗಿರುವ ಯತಿಂದ್ರ ಸಿದ್ದರಾಮಯ್ಯ ನೀಡಿರುವ ಹೇಳಿಕೆಯ ಸಮಗ್ರ ತನಿಖೆ ನಡೆಸುವಂತೆ ಮೈಸೂರು ಜಿಲ್ಲಾ ಗ್ರಾಮಾಂತರ ಬಿಜೆಪಿ ಘಟಕ ಹಾಗೂ ಬಿಜೆಪಿ ಮುಖಂಡರಾದ ಭಾಸ್ಕರ್ ರಾವ್ ಅವರು ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ವರುಣ ವಿಧಾನಸಭಾ ಕ್ಷೇತ್ರದ …
Read More »ಭದ್ರಾ ನೀರಿಗಾಗಿ ದಾವಣಗೆರೆ ಬಂದ್;
ದಾವಣಗೆರೆ: ಭದ್ರಾ ನೀರು ಹರಿಸುವಂತೆ ಭಾರತೀಯ ರೈತ ಒಕ್ಕೂಟದಿಂದ ರೈತರು ಇಂದು ದಾವಣಗೆರೆ ಬಂದ್ ನಡೆಸುತ್ತಿದ್ದಾರೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಬಂದ್ ಜಾರಿಯಲ್ಲಿದ್ದು, ರೈತರು ಬೀದಿಗಿಳಿದು ಸರ್ಕಾರದ ವಿರುದ್ಧ ಘೋಷಣೆ ಹಾಕಿದರು. 100 ದಿನಗಳ ಕಾಲ ನಿರಂತರವಾಗಿ ಭದ್ರಾ ನೀರು ಬಿಡುವಂತೆ ಒತ್ತಾಯಿಸಿ ಹೋರಾಟ ನಡೆಸುತ್ತಿದ್ದ ರೈತರಿಗೆ ಬಿಜೆಪಿ ಜಿಲ್ಲಾ ಘಟಕ ಬೆಂಬಲ ನೀಡಿದೆ. ಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ತಕ್ಷಣವೇ ನೀರು ಹರಿಸುವಂತೆ ರೈತರು ಮನವಿ ಮಾಡಿದ್ದಾರೆ. …
Read More »ಸೆ.26 ರಂದು ಶಾಂತಿಯುತವಾಗಿ ಬೆಂಗಳೂರು ಬಂದ್
ಬೆಂಗಳೂರು : ಕಾವೇರಿ ನದಿ ವಿಚಾರವಾಗಿ ಸೆ.26ರಂದು ಬೆಳಗ್ಗೆ 6ಗಂಟೆಯಿಂದ ಸಂಜೆ 6 ಗಂಟೆವರೆಗೆ ಶಾಂತಿಯುತವಾಗಿ ಬಂದ್ ನಡೆಸುತ್ತೇವೆ. ನಗರದ ಟೌನ್‌ಹಾಲ್‌ನಿಂದ ಮೈಸೂರು ಬ್ಯಾಂಕ್ವರೆಗೆ ಮೆರವಣಿಗೆ ಮೂಲಕ ಸಾಗಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು. ಕಾವೇರಿ ನೀರು ನಿರ್ವಹಣಾ ಮಂಡಳಿ ಆದೇಶವನ್ನು ಖಂಡಿಸಿ ಸೆ.26ರಂದು ಕರೆ ನೀಡಲಾಗಿರುವ ಬೆಂಗಳೂರು ಬಂದ್ ವಿಚಾರವಾಗಿ ಮುಖ್ಯಮಂತ್ರಿ ಚಂದ್ರು ಹಾಗೂ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ …
Read More »ರಾಜಕಾರಣಿಗಳ ಜೊತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಬಾಲಿವುಡ್ ನಟಿಯರು ಇವರೇ
ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಮಾತ್ರವಲ್ಲದೇ, ರಾಜಕಾರಣಿಗಳ ಜೊತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಬಾಲಿವುಡ್ ನಟಿಯರು ಇವರೇ ನೋಡಿ.. ಪರಿಶುದ್ಧ ‘ಪ್ರೀತಿ’ಗೆ ಯಾವುದೇ ಮಿತಿಯಿಲ್ಲ. ಯಾವುದೇ ಷರತ್ತುಗಳಿಲ್ಲ. ಪ್ರೀತಿ ಯಾರಿಗೆ, ಯಾವಾಗ ಬೇಕಾದರೂ, ಯಾರೊಂದಿಗೂ ಆಗಬಹುದು. ಅದು ಎರಡು ಮನಸ್ಸುಗಳಿಗೆ ಸಂಬಂಧಪಟ್ಟಿರುವ ವಿಚಾರ. ಪ್ರೀತಿಗೆ ವೃತ್ತಿ, ಜಾತಿ, ಧರ್ಮ ಯಾವುದೂ ಮುಖ್ಯವಾಗಿರಲ್ಲ. ಇದೇ ರೀತಿ ಬಾಲಿವುಡ್ಗೂ ರಾಜಕೀಯಕ್ಕೂ ವಿಶೇಷವಾಗಿ ಪ್ರೀತಿಯ ನಂಟು ಇದೆ. ಹೌದು.., ಹಿಂದಿ ಚಿತ್ರರಂಗದ ಬ್ಯೂಟಿಫುಲ್ …
Read More »ರಾಯರಮಠದ ಪರ ಹೈಕೋರ್ಟ್ ತೀರ್ಪು
ಗಂಗಾವತಿ(ಕೊಪ್ಪಳ): ಆನೆಗೊಂದಿ ನವವೃಂದಾವನ ಗಡ್ಡೆಯಲ್ಲಿ ಯಾವುದೇ ಧಾರ್ಮಿಕ ಕಾರ್ಯಕ್ರಮ ಕೈಗೊಳ್ಳದಂತೆ ಧಾರವಾಡದ ಹೈಕೋರ್ಟ್ ಏಕಸದಸ್ಯ ಪೀಠ ನೀಡಿದ್ದ ಆದೇಶ ರದ್ದಾದ ಬೆನ್ನಲ್ಲೇ ಭಾನುವಾರ ರಾಯರಮಠದ ಅನುಯಾಯಿಗಳು ವಿವಿಧ ಧಾರ್ಮಿಕ ಕಾರ್ಯಕ್ರಮ ಏರ್ಪಡಿಸುವ ಮೂಲಕ ಸಂಭ್ರಮಿಸಿದರು. ರಾಘವೇಂದ್ರ ಸ್ವಾಮಿ ಮಂತ್ರಾಲಯದ ಪೀಠಾಧಿಪತಿ ಸುಭುಧೇಂದ್ರ ತೀರ್ಥರ ಸೂಚನೆ ಮೇರೆಗೆ ಭಾನುವಾರ ರಾಯರ ಮಠದ ಅನುಯಾಯಿಗಳು ನೂರಾರು ಸಂಖ್ಯೆಯಲ್ಲಿ ನೆರೆದು ಜಯತೀರ್ಥ ವೃಂದಾವನಕ್ಕೆ ಅಷ್ಟೋತ್ತರ ಕಾರ್ಯಕ್ರಮವನ್ನು ನೆರೆವೇರಿಸಿದರು. ಬೆಳಗ್ಗೆ ಬ್ರಾಹ್ಮಿ ಮೂಹೂರ್ತದಲ್ಲಿ ಸುಪ್ರಭಾತ, ಸಕಲ ಬೃಂದಾವನಗಳಿಗೆ …
Read More »ನಾಳೆ ಭಾರತಕ್ಕೆ ಚಿನ್ನದ ಕನಸು.. ವನಿತೆಯರ ಕ್ರಿಕೆಟ್ ತಂಡ ಲಂಕಾ ಮಣಿಸಿ ಗೆಲ್ಲುತ್ತಾ ಸ್ವರ್ಣ ಪದಕ?
ಹ್ಯಾಂಗ್‌ಝೌ (ಚೀನಾ): ಮೊದಲ ಬಾರಿಗೆ ಏಷ್ಯನ್ ಗೇಮ್ಸ್ನಲ್ಲಿ ಭಾರತ ತಂಡ ಆಡುತ್ತಿದೆ. ಈಗಾಗಲೇ ಭಾರತೀಯ ವನಿತೆಯರ ತಂಡ ಬಾಂಗ್ಲಾದೇಶವನ್ನು ಮಣಿಸಿ ಫೈನಲ್ಗೆ ಪ್ರವೇಶಿಸಿದೆ. ಎರಡನೇ ಸೆಮಿ ಫೈನಲ್ನಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡ ಮುಖಾಮುಖಿ ಆಗಿದ್ದವು. ಇದರಲ್ಲಿ ಪಾಕಿಸ್ತಾವನ್ನು ಮಣಿಸಿದ ಸಿಂಹಳದ ವನಿತಿಯರು ಅಂತಿಮ ಹಣಾಹಣಿಗೆ ಸಿದ್ಧರಾಗಿದ್ದಾರೆ. ನಾಳೆ ಚಿನ್ನಕ್ಕಾಗಿ ಭಾರತ ಮತ್ತು ಲಂಕಾ ನಡುವೆ ಪೈಪೋಟಿ ನಡೆಯಲಿದೆ. ಇಂದು ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾದೇಶವನ್ನು 51 ರನ್ಗೆ …
Read More »
Laxmi News 24×7