Breaking News

ಮೈಸೂರು ಜಿಲ್ಲೆಯಾಧ್ಯಂತ 2ವಾರಗಳ ಕಾಲ 144 ಸೆಕ್ಷನ್ ಜಾರಿ

Spread the love

ಮೈಸೂರು, ಮಾ.17- ನಗರದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಕೋಳಿಗಳ ಮಾರಾಟ ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ತಿಳಿಸಿದ್ದಾರೆ. ನಗರದಲ್ಲಿ ಇತ್ತೀಚೆಗೆ ಪಕ್ಷಿಗಳು ಸಾವನ್ನಪ್ಪಿದ್ದವು. ಪರೀಕ್ಷೆಗಾಗಿ ಇವುಗಳ ಮೃತದೇಹ ಕಳುಹಿಸಲಾಗಿತ್ತು. ಈ ಹಕ್ಕಿಗಳು ಹಕ್ಕಿ ಜ್ವರದಿಂದಲೇ ಮೃತಪಟ್ಟಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಇದೀಗ ಮೈಸೂರಿನಲ್ಲಿ ಕೊಳಿ ಮಾಂಸ ಮಾರಾಟಕ್ಕೆ ಜಿಲ್ಲಾಡಳಿತ ನಿಷೇಧ ಹೇರಿದೆ.

ಕುಂಬಾರಕೊಪ್ಪಲಿನ ಸುತ್ತಮುತ್ತಲಿನ 10ಕಿ.ಮೀ. ವ್ಯಾಪ್ತಿಯಲ್ಲಿ ಇಂದಿನಿಂದ ಕೋಳಿ ಮಾಂಸ ಹಾಗೂ ಕೋಳಿ ಮಾರಾಟ ಬಂದ್‍ಗೆ ಸೂಚಿಸಿದ್ದು, 10ಕಿ.ಮೀ. ವ್ಯಾಪ್ತಿಯ ಒಳಗಿರುವ ಎಲ್ಲಾ ಕೋಳಿಗಳನ್ನೂ ಸಾಮೂಹಿಕವಾಗಿ ಕೊಲ್ಲುವಂತೆ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಇಂದು ಬೆಳಗ್ಗಿನಿಂದ ಕೋಳಿ ಸಾಕಾಣೆ ಹಾಗೂ ಹಕ್ಕಿ ಸಾಕುವವರನ್ನು ಗುರುತಿಸುವ ಕಾರ್ಯ ಆರಂಭವಾಗಿದೆ. ಅನಂತರ ಅವುಗಳನ್ನು ಕೊಲ್ಲಲು ಕ್ರಮ ವಹಿಸಲಾಗುತ್ತಿದೆ.

ಜಿಲ್ಲಾಡಳಿತ ಮೈಸೂರಿನಿಂದ ಹೊರ ರಾಜ್ಯ ಜಿಲ್ಲೆಗಳಿಗೆ ಕೋಳಿಯನ್ನು ಸಾಗಾಟ ಮಾಡದಂತೆ ಸೂಚಿಸಿ ನಗರದಲ್ಲಿ ತೆರೆಯಲಾಗಿರುವ ತನಿಖಾ ಕೇಂದ್ರದವರು ಯಾವುದೇ ವಾಹನಗಳಲ್ಲಿ ಕೋಳಿಗಳ ಸಾಗಾಟ ಮಾಡುವುದನ್ನು ಸ್ಥಗಿತಗೊಳಿಸಲು ಸೂಚಿಸಿದ್ದಾರೆ. ಹಕ್ಕಿ ಜ್ವರ ಮನುಷ್ಯನಿಗೆ ಹರಡುವುದಿಲ್ಲ. ಹಾಗಾಗಿ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. ಯಾವುದೇ ಮನೆಗಳಲ್ಲಿ ಕೋಳಿ-ಪಕ್ಷಿಗಳನ್ನು ಸಾಕಿದ್ದರೆ ಅಂತಹವರು ಮುನ್ನೆಚ್ಚರಿಕೆ ವಹಿಸಿ ಅವುಗಳನ್ನು ನಾಶ ಪಡಿಸುವಂತೆ ಸೂಚಿಸಿದರು.

óಷೇಧಾಜ್ಞಾ ಜಾರಿ: ಕೊರೋನಾ ವೈರಸ್ ಸೋಂಕು ಶಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಮೈಸೂರು ನಗರ ಹಾಗೂ ಜಿಲ್ಲೆಯಾಧ್ಯಂತ 144 ಸೆಕ್ಷನ್ ಜಾರಿಗೊಳಿಸಿ ಇಂದಿನಿಂದ 2 ವಾರಗಳ ಕಾಲ ನಿóಷೇಧಾಜ್ಞಾ ಜಾರಿಯಲ್ಲಿರಲಿದೆ ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ತಿಳಿಸಿದ್ದಾರೆ. 144 ಸೆಕ್ಷನ್ ಹಿನ್ನಲೆಯಲ್ಲಿ ಜಾತ್ರೆ, ಹಬ್ಬ ,ಧಾರ್ಮಿಕ ಆಚರಣೆಗಳಿಗೆ ನಿರ್ಬಂಧ ಹೇರಲಾಗಿದೆ. ಮೈಸೂರಿನಲ್ಲಿ ಯಾವುದೇ ಪ್ರಕರಣ ಪತ್ತೆಯಾಗಿಲ್ಲ. ಮುಂಜಾಗ್ರತಾ ಕ್ರಮವಾಗಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು. ಮೈಸೂರಿನಾದ್ಯಂತ 107 ಜನರ ಮೇಲೆ ನಿಗಾ ಇರಿಸಲಾಗಿದೆ. ಈ ಪೈಕಿ 58 ಮಂದಿಯನ್ನು ಮನೆಯಲ್ಲೆ ಇರಿಸಲಾಗಿದೆ.

8 ಜನರಿಗೆ ಕೊರೋನಾ ಪರೀಕ್ಷೆ ಮಾಡಲಾಗಿದೆ 7 ಜನರಿಗೆ ನೆಗಟಿವ್ ಬಂದಿದೆ. ಇನ್ನೊಬ್ಬರ ಫಲಿತಾಂಶ ಬರಬೇಕಿದೆ. ಹಾಗೆಯೇ ನಗರದಲ್ಲಿರುವ ಕೆಲವು ಯೋಗಾ ಸೆಂಟರ್‍ಗಳ ಮೇಲೆ ನಿಗಾ ಇಡಲಾಗಿದ್ದು, ಅಲ್ಲಿ ವಿದೇಶಿಗರು ಯೋಗ ಕಲಿಯುತ್ತಿರುವುದರಿಂದ ಅವರ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ. ನಗರಕ್ಕೆ ಆಗಮಿಸುವ ವಿದೇಶಿಗರ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ನೀಡುವಂತೆ ಹೋಟೇಲ್, ಲಾಡ್ಜ್ ರೆಸ್ಟೋರೆಂಟ್ ಮಾಲೀಕರಿಗೆ ಸೂಚಿಸಲಾಗಿದೆ ಎಂದರು.ಕೆಲವರು ಮಾಹಿತಿ ನೀಡುತ್ತಿಲ್ಲ. ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ಥರ್ಮಲ್ ಸ್ಕ್ರೀನ್ ತಪಾಸಣೆ : ಕೊರೋನಾ ವೈರಸ್ ಹರಡುತ್ತಿರುವ ಹಿನ್ನಲೆಯಲ್ಲಿ ಅದನ್ನು ತಡೆಗಟ್ಟಲು ಜಿಲ್ಲಾಡಳಿತ ಕೆಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಜಿಲ್ಲಾ ನ್ಯಾಯಾಲಯದಲ್ಲಿ ಥರ್ಮಲ್ ಸ್ಕ್ರೀನ್ ತಪಾಸಣೆ ನಡೆಸಲಾಯಿತು. ನ್ಯಾಯಲಯದಲ್ಲಿ ಬೆಳಗ್ಗೆ 11 ರಿಂದ ಕಲಾಪ ಆರಂಭವಾಗುವ ಹಿನ್ನಲೆಯಲ್ಲಿ ಬೆಳಗ್ಗೆ 8ರಿಂದಲೇ ನ್ಯಾಯಾಲಯಕ್ಕೆ ಆಗಮಿಸುವ ಸಿಬ್ಬಂದಿ ಮತ್ತು ಇತರರಿಗೆ ಥರ್ಮಲ್ ಸ್ಕ್ರೀನ್ ತಪಾಸಣೆ ನಡೆಸಿ ಒಳಬಿಡಲಾಯಿತು. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿv ನಗರ ಹಾಗೂ ಜಿಲ್ಲೆಯಾದ್ಯಂತ ಕೈಗೊಂಡಿದೆ.


Spread the love

About Laxminews 24x7

Check Also

*ಶ್ರೀ ಜಡಿಸಿದ್ದೇಶ್ವರ ದೇವಸ್ಥಾನದಲ್ಲಿ ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ*

Spread the loveಮೂಡಲಗಿ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ