Breaking News

ರಸ್ತೆ ಸುಧಾರಣಾ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಶಾಸಕ ವಿಶ್ವಾಸ ವೈದ್ಯ

Spread the love

ಸವದತ್ತಿ: ೇತ್ರದ ಪ್ರತಿಯೊಂದು ರಸ್ತೆ ಅಭಿವೃದ್ಧಿಯ ಸಂಕಲ್ಪ ಕೈಗೊಂಡಿದ್ದು, ಸಾರ್ವಜನಿಕರಿಗೆ ಉತ್ತಮ ಸಂಚಾರ ಸೌಲಭ್ಯ ಒದಗಿಸುವುದು ಮುಖ್ಯ ಗುರಿಯಾಗಿದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಪಟ್ಟಣದ ರಾಜ್ಯ ಹೆದ್ದಾರಿ&201ರಿಂದ ಮಹಾಮುನಿ ಕೆರೆವರೆಗೆ ರಸ್ತೆ ಸುಧಾರಣಾ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಕರ್ನಾಟಕ ಸರ್ಕಾರ ಹಾಗೂ ಪಂಚಾಯಿತಿ ರಾಜ್​ ಇಂಜಿನಿಯರಿಂಗ್​ ಇಲಾಖೆಯ ವತಿಯಿಂದ 2025&26ನೇ ಸಾಲಿನ ಮುಖ್ಯಮಂತ್ರಿಗಳ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಯಡಿ 50 ಲ ರೂ. ವೆಚ್ಚದಲ್ಲಿ 800 ಕಿ.ಮೀ ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದೆ. ಮಹಾಮುನಿ ಕೆರೆ ರಸ್ತೆ ಪಟ್ಟಣದ ಪ್ರಮುಖ ಸಂಚಾರ ಮಾರ್ಗವಾಗಿದ್ದು, ಇದರ ಸುಧಾರಣೆಯಿಂದ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು. ಉದ್ಯಮಿ ಅಶ್ವತ ವೈದ್ಯ, ಪ್ರಭು ಪ್ರಭುನವರ, ಬಸವರಾಜ ಹಂಪಣ್ಣವರ, ಬಸವರಾಜ ಗುರನ್ನವರ, ಪ್ರವಿಣ ಪಟ್ಟಣಶೆಟ್ಟಿ, ಅಶೋಕ ಹಾದಿಮನಿ, ಶಿವಾನಂದ ಪಟ್ಟಣಶೆಟ್ಟಿ, ಗದಿಗೆಪ್ಪ ಕುರಿ, ಮಂಜುನಾಥ ಪಾಚಂಗಿ, ಆಸ್​ೀ ಭಾಗೋಜಿಕೊಪ್ಪ ಇತರರಿದ್ದರು.

Spread the love

About Laxminews 24x7

Check Also

ಶಿಕ್ಷಣ ಮತ್ತು ಡಿಜಿಟಲ್ ಸಬಲೀಕರಣಕ್ಕೆ ಆದ್ಯತೆ – ಅಂಗನವಾಡಿಗಳಿಗೆ ಟಿವಿ ವಿತರಣೆ 

Spread the loveಸವದತ್ತಿ ಮತ ಕ್ಷೇತ್ರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನೆಯಡಿ, ಇಂದಿನ ಆಧುನಿಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ