ಜನಪ್ರಿಯ ಮಾಜಿ ಉಪಮುಖ್ಯಮಂತ್ರಿಗಳು, ಹಾಲಿ ಅಥಣಿ ವಿಧಾನಸಭಾ ಮತಕ್ಷೇತ್ರದ ಶಾಸಕರು ಶ್ರೀ ಮ್ಯಾನ ಲಕ್ಷ್ಮಣ ಸವದಿ ಸಾಹೇಬರು ಇಡೀ ಅಥಣಿ ತಾಲೂಕಿನಲ್ಲಿ ಬರುವ 98 ಪ್ರೌಡಶಾಲೆಗಳ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯವ ಎಲ್ಲಾ ವಿದ್ಯಾರ್ಥಿಗಳಿಗೆ ಎಕ್ಸಾಮ್ ಪ್ಯಾಡ್ ವಿತರಣೆ ಮಾಡಿರುವುದು ಮಾದರಿ ಹಾಗೂ ಸಂತೋಷದ ವಿಚಾರ, ಎಲ್ಲಾ ಶಾಲೆಗಳಲ್ಲೂ ವಿದ್ಯಾರ್ಥಿಗಳು ಸಮವಸ್ತ್ರ ಪಾಲನೆ ಮಾಡುವುದರ ಹಿಂದಿನ ಮಹತ್ತರವಾದ ಉದ್ದೇಶ ವಿದ್ಯಾರ್ಥಿಗಳಲ್ಲಿ ಮೇಲು ಕೀಳು,ಬಡವ ಶ್ರೀಮಂತ ಎನ್ನುವ ಭೇದ ಬಾವ ಮೂಡಬಾರದು ಅನ್ನುವ ಮನಸ್ಥಿತಿಗಾಗಿ ! ಹೀಗಿರುವಾಗ ಶಾಸಕರು ಶ್ರೀ ಲಕ್ಷ್ಮಣ ಸವದಿ ರಾಯಲಿಂಗೇಶ್ವರ ಪ್ರೌಢಶಾಲೆ ಕಕಮರಿಯಲ್ಲಿ ಓದುವ ವಿದ್ಯಾರ್ಥಿಗಳಿಗೆ ಎಸ್.ಎಸ್.ಎಲ್.ಸಿ ಎಕ್ಸಾಮ್ ಪ್ಯಾಡ್ ವಿತರಣೆ ಮಾಡದೇ ಇರುವುದು ವಿದ್ಯಾರ್ಥಿಗಳಲ್ಲಿ ಮಲತಾಯಿ ಧೋರಣೆ, ಮತ್ತು ಭೇದ ಭಾವದ ವಿಷ ಬೀಜ ಬಿತ್ತನೆ ಮಾಡಿದ ರೀತಿ ಆಗುತ್ತದೆ ರಾಜಕೀಯ ನಿಲುವುಗಳು, ನೀತಿಗಳು, ಎಷ್ಟೇ ವಿಭಿನ್ನ ಇದ್ದರೂ ಅದು ಎಳೆಯ ಮನಸ್ಸಿನ ವಿದ್ಯಾರ್ಥಿಗಳ ಮೇಲೆ ಗಾಢವಾದ ಪರಿಣಾಮ ಬೀಳುವುದು ? ಆ ಕಾರಣಕ್ಕಾಗಿ ಈ ಕ್ರಮ ಖಂಡನೀಯ, ಸಾಹುಕಾರ ಅನ್ನುವ ಬಿರುದ ಇರುವ ಶ್ರೀಯುತ ಲಕ್ಷ್ಮಣ ಸವದಿ ಅವರು ಅತೀ ಸಣ್ಣತನ ಮಾಡಿರುವುದು ಅವರ ಕೀಳುರಿಮೆ ಎತ್ತಿ ತೋರಿಸುತ್ತದೆ ಅವರು ರಾಯಲಿಂಗೇಶ್ವರ ಪ್ರೌಢಶಾಲೆಗೆ ಕಕಮರಿಗೆ ಹೋಗದೆ ಇದ್ದರೂ ಅವರ ಕಛೇರಿ ಸಿಬ್ಬಂದಿಗಳ ಹತ್ತಿರ ಕೊಟ್ಟು ಕಳುಹಿಸಿದರು ಮಾದರಿ ಆಗ್ತಾ ಇದ್ದರು ವಿದ್ಯಾರ್ಥಿಗಳಲ್ಲಿ ಭೇದ ಭಾವ ಮಾಡಿದ ಕಾರಣಕ್ಕೆ ಸಮಸ್ತ ಅಥಣಿ ತಾಲೂಕಿನ ನಾಗರಿಕರೂ ಹಾಗೂ ವಿದ್ಯಾರ್ಥಿಗಳು ಶಾಸಕರ ಈ ನಡೆಯನ್ನು ವಿರೋಧಪಡಿಸಿದರು, ಮುಂದಿನ ದಿನಗಳಲ್ಲಿ ಈ ಅಚಾತುರ್ಯ ಆಗದೇ ಇರುವ ರೀತಿ ಭೇದ-ಬಾವ ಮೂಡದ ರೀತಿ ತಾರತಮ್ಯ ಧೋರಣೆ ಅನುಸರಿಸದೇ ರೀತಿ ಎಲ್ಲಾ ವಿದ್ಯಾರ್ಥಿಗಳನ್ನು ಸಮಾನ ದೃಷ್ಟಿಯಿಂದ ನೋಡಬೇಕೆನ್ನುವುದೇ ಅಥಣಿ ತಾಲೂಕಿನ ವಿದ್ಯಾರ್ಥಿಗಳ,
ನಾಗರಿಕರು ಒಕ್ಕೊರಲ ಅಭಿಪ್ರಾಯವಾಗಿದೆ.
ಶಾಸಕರ ಮಲತಾಯಿ ಧೋರಣೆ ಅರಿತ ಶ್ರೀ ಸದ್ಗುರು ಅಭಿನವ ಗುರುಲಿಂಗಜಂಗಮ ಮಹಾಸ್ವಾಮಿಜಿಯವರ ವಿದ್ಯಾರ್ಥಿಗಳು ಭೇದ ಭಾವ, ತ್ಯಾರತಮ ಧೋರಣೆ ಹೋಗಲಾಡಿಸಲು ರಾಯಲಿಂಗೇಶ್ವರ ಪ್ರೌಢಶಾಲೆ ಎಸ್.ಎಸ.ಎಲ್. ಸಿ ಪರೀಕ್ಷೆ ಬರುವ ಸುಮಾರು 126 ಹೆಚ್ಚು ವಿದ್ಯಾರ್ಥಿಗಳಿಗೂ ಎಕ್ಸಾಮ್ ಪ್ಯಾಡ್ ದಿನಾಂಕ 15.03.2026ರಂದು ಪುಣ್ಯಾರಾಧನೆ ಜ್ಞಾನಯಜ್ಞ ಸಪ್ತಾಹ ಕಾರ್ಯಕ್ರಮದಲ್ಲಿ ಕಕಮರಿ ಗ್ರಾಮದ ಗುರುಹಿರಿಯರ ಸಮ್ಮುಖದಲ್ಲಿ ವಿತರಣೆ ಮಾಡಿ ತಾಯ್ತಾನ ಮೆರೆದರು, ಗುರುಗಳ ಹೃದಯ ಶ್ರೀಮಂತಿಕಗೆ ಎಲ್ಲರೂ ಖುಷಿಪಟ್ಟರು
Laxmi News 24×7