Breaking News

ಅಜ್ಜಿ ಅಸ್ಥಿ ವಿಸರ್ಜನೆಗೆ ನದಿಗಿಳಿದಿದ್ದ ಮೊಮ್ಮಗ ನೀರುಪಾಲಾಗಿರುವ

Spread the love

ಮಂಡ್ಯ: ಅಜ್ಜಿ ಅಸ್ಥಿ ವಿಸರ್ಜನೆಗೆ ನದಿಗಿಳಿದಿದ್ದ ಮೊಮ್ಮಗ ನೀರುಪಾಲಾಗಿರುವ ಘಟನೆ ಶ್ರೀರಂಗಪಟ್ಟಣದ ಗೋಸಾಯ್ ಘಾಟ್ ಬಳಿ ನಡೆದಿದೆ. ಶ್ರೀಪ್ರಸಾದ್(32) ಕಾವೇರಿ ನದಿಯಲ್ಲಿ ಕೊಚ್ಚಿಹೋದ ವ್ಯಕ್ತಿ.

3 ದಿನದ ಹಿಂದೆ ನಿಧನರಾಗಿದ್ದ ಅಜ್ಜಿಯ ಅಸ್ಥಿ ವಿಸರ್ಜನೆಗಾಗಿ ಶ್ರೀಪ್ರಸಾದ್ ಮತ್ತು ಕುಟುಂಬಸ್ಥರು ಬೆಂಗಳೂರಿನಿಂದ ಶ್ರೀರಂಗಪಟ್ಟಣಕ್ಕೆ ಬಂದಿದ್ದರು. ಹೀಗಾಗಿ ಗೋಸಾಯ್ ಘಾಟ್ ಬಳಿ ವಿಧಿ ವಿಧಾನ ಮುಗಿಸಿ ಕುಟುಂಬದ ಮೂವರು ಅಸ್ಥಿ ವಿಸರ್ಜನೆಗೆ ಕಾವೇರಿ ನದಿಗೆ ಇಳಿದಿದ್ದರು. ಈ ವೇಳೆ ಶ್ರೀಪ್ರಸಾದ್ ನೀರಿನಲ್ಲಿ ಕೊಚ್ಚಿಹೋಗಿದ್ದಾರೆ. ಹಾಗೂ ಉಳಿದ ಇಬ್ಬರನ್ನು ಸ್ಥಳೀಯರು ರಕ್ಷಿಸಿದ್ದಾರೆ.

ಇನ್ನು ಇದೇ ನದಿ ಅಂಚಿನ ಕೃಷಿ ಭೂಮಿಯಲ್ಲಿ ಶೆಡ್ ಹಾಕಿಕೊಂಡು ಅಕ್ರಮವಾಗಿ ಅಸ್ಥಿ ವಿಸರ್ಜನೆ ದಂಧೆ ನಡೆಸುತ್ತಿರುವ ಆರೋಪ ಕೇಳಿ ಬಂದಿದೆ.

ಆದರೆ ಈ ಬಗ್ಗೆ ಅಧಿಕಾರಿಗಳು ಮೌನ ಧರಿಸಿದ್ದಾರೆ. ಸದ್ಯ ಯುವಕನ‌ ಮೃತದೇಹಕ್ಕಾಗಿ ಶೋಧಕಾರ್ಯ ನಡೆಯುತ್ತಿದೆ. ಅಜ್ಜಿ ಸಾವಿನ ಜೊತೆಗೆ ಮೊಮ್ಮಗನ ಸಾವಾಗಿದ್ದು, ಕುಟುಂಬಸ್ಥರಿಗೆ ಕಣ್ಣೀರೆ ನದಿಯಂತೆ ಹರಿದಿದೆ. ಶ್ರೀರಂಗಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಹೇಳೋರು ಕೇಳೋರು ಇಲ್ವೇ? ಐತಿಹಾಸಿಕ ಕೋಟೆ ಕಲ್ಲು ಕೆಡವಿ ಅನಧಿಕೃತ ಶೆಡ್ ನಿರ್ಮಾಣ!

  


Spread the love

About Laxminews 24x7

Check Also

ಬಸವನಾಡು ವಿಜಯಪುರ ಜಿಲ್ಲೆ ಐತಿಹಾಸಿಕವಾಗಿ, ತೋಟಗಾರಿಕೆ ಬೆಳೆಗಳಿಗೆ ವಿಶ್ವ ವಿಖ್ಯಾತಿ ಪಡೆದಿದೆ.

Spread the loveಬಸವನಾಡು ವಿಜಯಪುರ ಜಿಲ್ಲೆ ಐತಿಹಾಸಿಕವಾಗಿ, ತೋಟಗಾರಿಕೆ ಬೆಳೆಗಳಿಗೆ ವಿಶ್ವ ವಿಖ್ಯಾತಿ ಪಡೆದಿದೆ. ಇದರೆಲ್ಲರ ನಡುವೆ ಇಲ್ಲಿಯ ಕೆಲ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ