Breaking News

ಹುಬ್ಬಳ್ಳಿಯಲ್ಲಿರುವ ಶ್ರೀಗಳ ಐಕ್ಯಸ್ಥಳಕ್ಕೆ ಸಿಕ್ಕಿದಷ್ಟು ಮನ್ನಣೆ ಅವರ ಹುಟ್ಟೂರು ಚಳಕಾಪುರಕ್ಕೆ ಸಿಕ್ಕಿಲ್ಲ.

Spread the love

ಬೀದರ್; ಕರ್ನಾಟಕದ ಪ್ರಸಿದ್ಧ ಮಠಗಳಲ್ಲಿ ಹುಬ್ಬಳ್ಳಿಯ ಸಿದ್ಧಾರೂಢ ಮಠ ಕೂಡ ಒಂದು. ಕೇವಲ ರಾಜ್ಯದಲ್ಲಷ್ಟೇ ಅಲ್ಲ, ದೇಶ- ವಿದೇಶಗಳಲ್ಲೂ ಈ ಮಠದ ಭಕ್ತರಿದ್ಧಾರೆ. ಸಿದ್ಧಾರೂಢ ಸ್ವಾಮೀಜಿಗಳ ಐಕ್ಯಸ್ಥಳವಾದ ಹುಬ್ಬಳ್ಳಿಯ ಸಿದ್ಧಾರೂಢ ಮಠಕ್ಕೆ ಕೋಟ್ಯಾಂತರ ಜನರು ಭಕ್ತರಿದ್ದು, ಸಾವಿರಾರು ಕೋಟಿ ಆಸ್ತಿ ಇದೆ. ಆದರೆ ಈ ಪವಾಡ ಪುರುಷನ ಹುಟ್ಟೂರು ಯಾವುದು ಅಂತ ಅದೇಷ್ಟೋ ಭಕ್ತರಿಗೆ ಗೊತ್ತಿಲ್ಲ.

ಬೀದರ್ ಜಿಲ್ಲೆಯಲ್ಲಿ ಹುಟ್ಟಿದ ಸಿದ್ಧಾರೂಢರು ಹುಬ್ಬಳ್ಳಿಯಲ್ಲಿ ನೆಲೆನಿಂತು ಕೋಟ್ಯಾಂತರ ಭಕ್ತರನ್ನು ಹೊಂದಿರುವ ಪವಾಡ ಪುರುಷರು. ಹೌದು ಅವರ ಜನ್ಮ ಸ್ಥಳ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಚಳಕಾಪುರ ಗ್ರಾಮ. ಸಿದ್ದಾರೂಢರು ತಮ್ಮ ಏಳನೇಯ ವಯಸ್ಸಿನಲ್ಲಿಯೇ ಮನೆ ಬಿಟ್ಟು ಲೋಕ ಕಲ್ಯಾಣಕ್ಕಾಗಿ ದೇಶ ಸಂಚಾರ ಕೈಗೊಂಡರು. ಸುಮಾರು 35 ವರ್ಷಗಳ ಕಾಲ ದೇಶ ಸಂಚಾರ ಮಾಡಿದ ಸಿದ್ದಾರೂಢರು ತಮ್ಮ 42 ನೇ ವಯಸ್ಸಿಗೆ ಅಂದರೆ 1877ರಲ್ಲಿ ಹುಬ್ಬಳ್ಳಿಗೆ ಬಂದು ನೆಲೆಯೂರಿದರು. ಅಲ್ಲಿ ಸಾಕಷ್ಟು ಪವಾಡಗಳನ್ನು ಮಾಡುತ್ತಾ ಕಷ್ಟ ಅಂತಾ ಬಂದ ಭಕ್ತರ ಕಷ್ಟಗಳನ್ನ ನೇರವೇರಿಸುತ್ತಾ ನೆಲೆ ನಿಂತರು. ರಾಜ್ಯ, ದೇಶ ಸೇರಿದಂತೆ ವಿದೇಶದಲ್ಲಿಯೂ ಲಕ್ಷಾಂತರ ಭಕ್ತರನ್ನು ಸಿದ್ದಾರೂಢರು ಹೊಂದಿದ್ದಾರೆ. ಆದರೆ ಅವರ ಹುಟ್ಟು ಮಾತ್ರ ಅದೆಷ್ಟೋ ಜನರಿಗೆ ಗೊತ್ತಿಲ್ಲ.


Spread the love

About Laxminews 24x7

Check Also

ಸಿಎಂ ಫೋನ್ ಮಾಡಿ ಸಮಾಧಾನಪಡಿಸಿದ ಬಳಿಕ ಕರ್ತವ್ಯಕ್ಕೆ ಹಾಜರಾದ ASP ಭರಮನಿ

Spread the loveಧಾರವಾಡ/ಬೆಂಗಳೂರು: ಸ್ವಯಂ ನಿವೃತ್ತಿಗೆ ಕೋರಿಕೆ ಸಲ್ಲಿಸಿದ್ದ ಧಾರವಾಡ ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ವಿ.ಭರಮನಿ ಅವರು ಸಿಎಂ ಸಮಾಧಾನಪಡಿಸಿದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ