ಬೆಂಗಳೂರು : ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸರ್ಕಾರಿ ಆಸ್ಪತ್ರೆಗಳ ಸ್ಥಾನಿಕ ವೈದ್ಯರು (Doctor) ಇಂದು ಹೊರ ರೋಗಿ ಸೇವೆ (OPD) ಬಹಿಷ್ಕರಿಸಿ ಮುಷ್ಕರ (Strike) ನಡೆಸಲಿದ್ದಾರೆ.
ಇಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಸ್ಥಾನಿಕ ವೈದ್ಯರು ಹಾಗೂ ಇಂಟರ್ನಿ ವೈದ್ಯರು ಮುಷ್ಕರ (Strike) ನಡೆಸಲಿದ್ದು, ಇದರಿಂದ ಸರ್ಕಾರಿ ಆಸ್ಪತ್ರೆಗಳ ಹೊರರೋಗಿಗಳ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.
ಕೊರೊನಾ ಅಪಾಯ ಭತ್ಯೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸ್ಥಾನಿಕ ವೈದ್ಯರು ಮತ್ತು ಇಂಟರ್ನಿ ವೈದ್ಯರು ಮಾತ್ರ ಪ್ರತಿಭಟನೆ ನಡೆಸಲಿದ್ದು, ಕೊರೊಣಾ ಚಿಕಿತ್ಸೆಯ ಮೇಲೆ ಸೇವಾ ಬಹಿಷ್ಕಾರ ಪರಿಣಾಮ ಬೀರದು. ಈ ಸೇವೆಯಲ್ಲಿರುವವರು ಎಂದಿನಂತೆ ಕಾರ್ಯನಿರ್ವಹಿಸಲಿದ್ದಾರೆ ಎಂದು ಕರ್ನಾಟಕ ಸ್ಥಾನಿಕ ವೈದ್ಯರ ಸಂಘ (Karnataka Doctors Association) ಸ್ಪಷ್ಟಪಡಿಸಿದೆ.