Breaking News

ರಾತ್ರಿ ಸರಣಿ ಕಳ್ಳತನ ಮಾಡುವಾಗ ಗ್ರಾಮಸ್ಥರ ಕೈಯಲ್ಲಿ ಸಿಕ್ಕಿಬಿದ್ದ ಕಳ್ಳ ಖದೀಮರು.

Spread the love

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬಂಬಲವಾಡ ಗ್ರಾಮದಲ್ಲಿ ರಾತ್ರಿ ಸರಣಿ ಕಳ್ಳತನ ಮಾಡುವಾಗ ಗ್ರಾಮಸ್ಥರ ಕೈಯಲ್ಲಿ ಸಿಕ್ಕಿಬಿದ್ದ ಕಳ್ಳ ಖದೀಮರು.

ಚಿಕ್ಕೋಡಿ ತಾಲೂಕಿನ ಬಂಬಲವಾಡ ಗ್ರಾಮದಲ್ಲಿ ನೆನ್ನೆ ರಾತ್ರಿ ಒಂದು ಮಹಿಳೆಯ ಸಮೇತ ನಾಲ್ಕು ಜನರು ಮಹಾರಾಷ್ಟ್ರ ಮೂಲದ ನೀಲಿ ಕಲರ ಇಂಡಿಕಾ ವಾಹನದ ಸಂಖ್ಯೆ MH 06 AF 4072 ಸಂಖ್ಯೆಯ ವಾಹನದಲ್ಲಿ ಬಂದು ಬಂಬಲವಾಡ ಗ್ರಾಮದಲ್ಲಿ ಕಳ್ಳತನ ನಡೆಸಿದ್ದರು.

ಬಂಬಲವಾಡ ಗ್ರಾಮದ ಹನುಮಾನ ಮಂದಿರ ಸೇರಿದಂತೆ ರಾಜು ಕುಂದರಗಿ ಎಂಬುವರ ಔಷಧ ಅಂಗಡಿ ಹಾಗೂ ಮನೆಗಳ ಕಳ್ಳತನಕ್ಕೆ ಕೈ ಹಾಕಿದ್ದರು.

ಆದರೆ ಈ ಕಳ್ಳರು ಬರುವ ಹೊತ್ತಿಗೆ ಹನುಮಾನ ದೇವರು ಕಣ್ಣು ಬಿಟ್ಟು ಇವರು ಬರುವ ದಾರಿಯನ್ನೇ ಕಾದು ಕುಳಿತು ಭಕ್ತರ ಮೂಲಕ ಕೇಡ್ಡಾಗೆ ಕೆಡವಿದ ಭಜರಂಗ ಬಲಿ ಎನ್ನುವಂತಿತ್ತು.

ಈ ಕಳ್ಳತನ ನಡೆಯುವಷ್ಟರಲ್ಲಿ ರಾಜು ಕುಂದರಗಿ ಮನೆಯವರಿಗೆ ಎಚ್ಚರವಾಗಿದೆ ಮನೆಯವರು ಎದ್ದು ನೋಡಿದಾಗ ದೇವಸ್ಥಾನದ ಬೀಗ ಮುರಿದಿದ್ದನ್ನು ಕಂಡು ಗಾಬರಿಗೊಂಡಿದ್ದಾರೆ. ನಂತರ ಗ್ರಾಮಸ್ಥರೂ ಒಟ್ಟುಗೂಡಿ ಇಬ್ಬರು ಕಳ್ಳರನ್ನು ಹಿಡಿದು ಹಿಗ್ಗಾ ಮುಗ್ಗಾ ತಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಈ ಕುರಿತು ಚಿಕ್ಕೋಡಿ ಪೊಲೀಸ್ ಠಾಣೆಯ ಪಿ.ಎಸ್.ಐ ಯಮನಪ್ಪ ಮಾಂಗ ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

 


Spread the love

About Laxminews 24x7

Check Also

ಫ್ರಾನ್ಸ್ ಕೈಟ್ ಉತ್ಸವದಲ್ಲಿ ಮಂಗಳೂರಿನ ಗಾಳಿಪಟ: ಫ್ರೆಂಚರ ನಾಡಿನಲ್ಲಿ ಹಾರಲಿದೆ ‘ಕುಡ್ಲದ ತೇರು

Spread the love ಮಂಗಳೂರು: ಬಾನಾಡಿಯಲ್ಲಿ ಹಕ್ಕಿಗಳಂತೆ ಹಾರಾಡುವ ಗಾಳಿಪಟ ಈಗ ಅಂತಾರಾಷ್ಟ್ರೀಯ ಹಬ್ಬವಾಗಿದೆ. ಈ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಸೆಪ್ಟಂಬರ್​ನಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ