ಮಂಡ್ಯ :ರೈತರ ಉತ್ಪನ್ನಗಳಿಗೆ ಮಾರುಕಟ್ಟೆ ಇಲ್ಲದೆ ನಷ್ಟವಾಗಿರುವುದನ್ನು ತುಂಬಿಕೊಡಲು ರೈತರ ಸಂಪೂರ್ಣ ಸಾಲಮನ್ನ ಮತ್ತು ಬಡ್ಡಿರಹಿತ ಹೊಸಸಾಲ ನೀಡಬೇಕು ಎಂದು ಒತ್ತಾಯಿಸಿ ರೈತಸಂಘ ಪ್ರತಿಭಟನೆ.
ಮಂಡ್ಯ ಜಿಲ್ಲೆ ಪಾಂಡವಪುರ ಪಟ್ಟಣದ ಮಿನಿ ವಿಧಾನಸೌಧದ ಮುಂದೆ ಪ್ರತಿಭಟನೆ.
ಮಂಡ್ಯ ಮತ್ತು ಪಾಂಡವಪುರ ಕಾರ್ಖನೆಗಳನ್ನು ತಕ್ಷಣ ಪ್ರಾರಂಭಿಸಬೇಕು ಮತ್ತು ಬೇಬಿ ಬೆಟ್ಟದಲ್ಲಿ ಅಕ್ರಮವಾಗಿ ನೆಡೆಯುತ್ತಿರುವ ಗಣಿಗಾರಿಕೆಯನ್ನು ನಿಲ್ಲಿಸಿ ಕೆ ಆರ್ ಎಸ್ ಉಳಿಸಬೇಕೆಂದು ಒತ್ತಾಯಿಸಿ ರೈತಸಂಘದಿಂದ ಪ್ರತಿಭಟನೆ.
ಬಳಿಕ ತಹಸೀಲ್ದಾರ್ ಪ್ರಮೋದ್ ಎಲ್.ಪಾಟೀಲ್ ಅವರಿಗೆ ಮನವಿ ಪತ್ರ ಸಲ್ಲಿಸಿದ ಪ್ರತಿಭಟನಾನಿರತರು.
ಬಹುಪಾಲು ಗ್ರಾಮ ಪಂಚಾಯತಿ ಗಳ ಅಧಿಕಾರವಧಿ ಜೂನ್ ಮತ್ತು ಜುಲೈ ತಿಂಗಳಲ್ಲಿ ಮುಕ್ತಾಯವಾಗುತ್ತದೆ.
ಕೊರೊನಾ ವೈರಸ್ ಕಾರಣದಿಂದಾಗಿ ಚುನಾವಣೆಯನ್ನು ಮುಂದುಡಿ ಆಡಳಿತ ಸಮಿತಿಯನ್ನು ನೇಮಿಸಲು ಸರ್ಕಾರ ಹೊರಟಿದೆ. ಇಂತಹ ಸಂದರ್ಭದಲ್ಲಿ ಆಡೆಳಿತ ಸಮಿತಿಯನ್ನು ನೇಮಿಸುವ ಬದಲು ಹಾಲಿ ಇರುವ ಸದಸ್ಯರನ್ನೇ ಮುಂದಿನ ಚುನಾವಣೆವರೆಗೆ ಮುಂದುವರಿಸುವುದು ಸೂಕ್ತ ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರೈತಸಂಘದ ತಾಲೂಕು ಅಧ್ಯಕ್ಷ ಎ.ಎಲ್.ಕೆಂಪೂಗೌಡ, ಕಾರ್ಯದರ್ಶಿ ಕೆನ್ನಾಳು ವಿಜಯಕುಮಾರ್, ಮುಖಂಡರಾದ ವಿಜಯಕುಮಾರ್, ಅಮೃತಿ ರಾಜಶೇಖರ್, ವೈ.ಪಿ.ಮಂಜುನಾಥ, ರಘು, ಚಿಕ್ಕಾಡೆ ವಿಜಯೇಂದ್ರ, ತುಳಸೀದಾಸ್, ಡಾಮಡಹಳ್ಳಿ ಸ್ವಾಮಿಗೌಡ, ಗೋವಿಂದರಾಜು, ಕೆ.ಪಿ.ಮಹದೇವು ಇತರರು ನೇತೃತ್ವ ವಹಿಸಿದ್ದರು.