ಗೋಕಾಕ :ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ರಾಷ್ಟ್ರೀಯ ಆರೋಗ್ಯ ಅಭಿಯಾನದ ವೈದ್ಯಕೀಯ , ಅರೆ ವೈದ್ಯಕೀಯ ಮತ್ತು ಕಚೇರಿ ಸಿಬ್ಬಂದಿಗಳು ಸಮಾನ ಕೆಲಸಕ್ಕೆ ಸಮಾನ ವೇತನ, ಸೇವಾ ಭದ್ರತೆ, HR Policy ಮತ್ತು ಇತರೇ ಬೇಡಿಕೆಗಳ ಈಡೇರಿಕೆಗೆ ಇಂದು ತಹಸೀಲ್ದಾರ್ ಗೋಕಾಕ ಮತ್ತು ತಾಲೂಕಾ ಆರೋಗ್ಯ ಅಧಿಕಾರಗಳು ಇವರಿಗೂ ಸಹ ಮನವಿ ಪತ್ರ ನೀಡಿದರು
ಇನ್ನೂ ಮುಂದುವರೆದು, ಇಲಾಖೆ ಖಾಯಂ ನೌಕರರನ್ನು ಅವಲಂಬಿಸಿದೆ ಮತ್ತು ಎಲ್ಲಾ ಜಿಲ್ಲೆಯಲ್ಲಿ ಮುಷ್ಕರದ ಕುರಿತು Memorandum ಜಿಲ್ಲಾಧಿಕಾರಿಗಳಿಗೆ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿ. ಪಂ. ಮತ್ತು ಎಲ್ಲಾ ಜಿಲ್ಲಾ ಮಟ್ಟದ ಹಾಗೂ ಎಲ್ಲಾ ಹಂತದ ಅಧಿಕಾರಿಗಳಿಗೆ ನೀಡಲಾಗಿದೆ ಎಂಬುದಾಗಿ ತಿಳಿಸಿದ್ದಾರೆ.
ದಿ. 23.09.2020 ರಂದು ಬೇಡಿಕೆಗಳಿಗೆ ಆಗ್ರಹಿಸಿ ಸಂಕೇತವಾಗಿ ಬಿಡುವಿನ ವೇಳೆಯಲ್ಲಿ ಪ್ರತಿಭಟನೆ ನಡೆಸಲಾಗುವುದು. ನಮ್ಮ ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ದಿನಾಂಕ 24.09.2020 ರಿಂದ ಕೆಲಸ ಬಹಿಷ್ಕರಿಸಿ ಮುಷ್ಕರಕ್ಕೆ ಕರೆ ಕೊಡಲಾಗಿದೆ. ಎಲ್ಲರೂ ಕಡ್ಡಾಯವಾಗಿ 24 ರಿಂದ ಮನೆಯಲ್ಲಿಯೇ ಇದ್ದು ಮುಷ್ಕರದಲ್ಲಿ ಭಾಗವಹಿಸಿ, ನಮ್ಮ ಬೇಡಿಕೆಗಳನ್ನು ಈಡೇರಿಸಲು ಹೋರಾಡಲಾಗುತ್ತದೆ ಎಂಬುದಾಗಿ ತಿಳಿಸಿದ್ದಾರೆ.