Breaking News

ತಂದೆಯ ಅಂತ್ಯ ಸಂಸ್ಕಾರ ನಡೆಯುತ್ತಿದ್ದರೆ, ಇತ್ತ ಮಂದೀಪ್ ಬ್ಯಾಟ್ ಬೀಸುತ್ತಿದ್ದಾರೆ

Spread the love

ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್​ನ ರೋಚಕ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧ ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡ 12 ರನ್​ಗಳ ಜಯ ಸಾಧಿಸಿದೆ.

ಆರಂಭದಲ್ಲಿ ಹೈದರಾಬಾದ್ ಕಡೆ ಗೆಲುವನ್ನು ಪಂಜಾಬ್ ತನ್ನೆಡೆ ಸೆಳೆದುಕೊಂಡಿತ್ತು.

ಈ ಮಧ್ಯೆ ಪಂಜಾಬ್ ತಂಡದಲ್ಲಿ ಓಪನರ್ ಆಗಿ ಇಳಿದಿದ್ದ ಮಂದೀಪ್ ನೋವಿನ ನಡುವೆಯೂ ಬ್ಯಾಟ್ ಬೀಸಿದ್ದಾರೆ! ಅತ್ತ ಮನೆಯಲ್ಲಿ ಅವರ ತಂದೆಯ ಅಂತ್ಯ ಸಂಸ್ಕಾರ ನಡೆಯುತ್ತಿದ್ದರೆ, ಇತ್ತ ಮಂದೀಪ್ ಬ್ಯಾಟ್ ಬೀಸುತ್ತಿದ್ದರು!

ಹೌದು, ಮಂದೀಪ್ ತಂದೆ ಹರ್ದೇವ್ ತಂದೆ ಶುಕ್ರವಾರ ರಾತ್ರಿ ಮೃತಪಟ್ಟಿದ್ದರು. ಆದಾಗ್ಯೂ ಮಂದೀಪ್ ಮನೆಗೆ ತೆರಳದೇ ಪಂಜಾಬ್ ಪರ ಓಪನರ್ ಆಗಿ ಆಡಿದ್ದಾರೆ.

ಮಂದೀಪ್ ಸಿಂಗ್ ಈ ಮೊದಲು ಮೂರು ಪಂದ್ಯಗಳನ್ನಾಡಿದ್ದಾರು. ಆದರೆ, ಅವರಿಂದ ಉತ್ತಮ ಪ್ರದರ್ಶನ ಬಂದಿರಲಿಲ್ಲ.


Spread the love

About Laxminews 24x7

Check Also

ಭಾರತದ ವಿರುದ್ಧ ಪಾಕ್‌ ಪಂದ್ಯವಾಡಲ್ಲ: ಶೆಹಾಬಾಜ್ ಷರೀಫ್

Spread the love ಇಸ್ಲಾಮಾಬಾದ್‌: ಭಾರತದ  ವಿರುದ್ಧ ಟಿ20 ವಿಶ್ವಕಪ್‌ ಕ್ರಿಕೆಟ್‌  ಪಂದ್ಯ ಆಡುವುದಿಲ್ಲ ಎಂದು ಪಾಕಿಸ್ತಾನ ಪ್ರಧಾನಿ ಶೆಹಾಬಾಜ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ