Breaking News

ಕಿಸ್ಸಿಂಗ್ ಬಾಬಾ’ ಮುತ್ತಿನ ಮಹಿಮೆ; 24 ಮಂದಿಗೆ ಕೊರೊನಾ ಗಿಫ್ಟ್ ಕೊಟ್ಟು ತಾನೂ ಬಲಿಯಾದ

Spread the love

ಭೋಪಾಲ್: ಕೊರೊನಾದಿಂದಾಗಿ ಕೆಲ ಢೋಂಗಿಗಳ ಅಸಲೀಯತ್ತು ಕೂಡಾ ಬಯಲಿಗೆ ಬರ್ತಿದೆ. ಮಧ್ಯಪ್ರದೇಶದ ಕಿಸ್ಸಿಂಗ್ ಬಾಬಾ ಅಲಿಯಾಸ್ ಅಸ್ಲಮ್ ಬಾಬಾ , ಕಳೆದ ವಾರ ಕೊರೊನಾ ಸೋಂಕಿನಿಂದಲೇ ಮೃತಪಟ್ಟಿದ್ದಾರೆ. ದುರಾದೃಷ್ಟವಶಾತ್‌ ತನ್ನಿಂದ ಕಿಸ್​ ಪಡೆದಿದ್ದ 24 ಮಂದಿಗೆ ಕೊರೊನಾ ಹರಡಲು ಕಾರಣನಾಗಿದ್ದಾನೆ.

ಮಧ್ಯಪ್ರದೇಶದ ರತ್ಲಾಮ್ ಜಿಲ್ಲೆಯಲ್ಲಿದ್ದ ಅಸ್ಲಮ್ ಬಾಬಾ, ತನ್ನ ಬಳಿ ಕೊರೊನಾ ಗುಣಪಡಿಸಲು ಮದ್ದಿದೆ. ಆ ಮದ್ದೇ ತನ್ನಿಂದ ಕಿಸ್​ ಪಡೆಯುವುದು..! ಹೌದು, ನನ್ನ ಕಿಸ್​ನಲ್ಲಿ ಅಂಥ ಶಕ್ತಿ ಇದೆ.. ಬನ್ನಿ ಕಿಸ್​ ಕೊಡ್ತೀನಿ ಅಂತಾ ಹೇಳ್ತಿದ್ದ ಅಸ್ಲಂ, ತನ್ನ ಬಳಿ ಬಂದವರ ಕೈಗೆ ಮುತ್ತು ಕೊಡ್ತಿದ್ದ. ಕೊರೊನಾ ಗುಣಪಡಿಸಲು ಹೀಗೆ ಕೈಗಳಿಗೆ ಮುತ್ತು ಕೊಡ್ತಿದ್ದ ಅಸ್ಲಂಗೇ ಕಳೆದ ವಾರ ಕೊರೊನಾ ಸೋಂಕು ತಗುಲಿತ್ತು. ಅಷ್ಟೇ ಅಲ್ಲ, ಚಿಕಿತ್ಸೆ ಫಲಿಸದೇ ಕೊನೆಗೆ ಸಾವನ್ನೂ ಅಪ್ಪಿದ. ಹೀಗೆ ಸಾವನ್ನಪ್ಪಿದ್ದ ಅಸ್ಲಂ ನಿಧನರಾದಾಗ ಸಹ ಹಲವರು ಜೊತೆಗಿದ್ದರು. ಈಗ ಬಾಬಾನ ಮುತ್ತಿನ ಮದ್ದು ಪಡೆದಿದ್ದ 24 ಮಂದಿ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಗಂಭೀರ ಸಂಗತಿಯೆಂದರೆ ಸದ್ಯ ರತ್ಲಾಮ್ ಜಿಲ್ಲೆಯಲ್ಲಿ ಸುಮಾರು 85 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರಲ್ಲಿ ಒಟ್ಟು 24 ಮಂದಿ ಕಿಸ್ಸಿಂಗ್‌ ಬಾಬಾನ ಸಂಪರ್ಕದಲ್ಲಿದ್ದವರು. ಅಸ್ಲಂ ತನ್ನ ಭಕ್ತರ ಕೈಗೆ ಮುತ್ತನ್ನು ನೀಡುತ್ತಿದ್ದ. ಹೀಗಾಗಿ ಇವರೆಲ್ಲರಿಗೂ ಕೊರೊನಾ ಸೋಂಕು ಬಂದಿದೆ ಅನ್ನೋದನ್ನ ನೋಡಲ್ ಅಧಿಕಾರಿ ಡಾ. ಪ್ರಮೋದ್ ಪ್ರಜಾಪತಿ ದೃಢಪಡಿಸಿದ್ದಾರೆ


Spread the love

About Laxminews 24x7

Check Also

ಮಿರಜ್‌ನಲ್ಲಿ 1 ಕೋಟಿ ರೂಪಾಯಿ ಮೌಲ್ಯದ ನಕಲಿ ನೋಟುಗಳ ಜಪ್ತಿ

Spread the love ಚಿಕ್ಕೋಡಿ:ಮಹಾರಾಷ್ಟ್ರ- ಕರ್ನಾಟಕ ಗಡಿ ಭಾಗದಲ್ಲಿ ಇತ್ತಿಚಿಗೆ ವಿಶೇಷ ಕಾರ್ಯಾಚರಣೆ ನಡೆಸಿದ ಮಹಾರಾಷ್ಟ್ರ ಪೊಲೀಸರು, ಬರೋಬ್ಬರಿ 1 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ