Breaking News

ಈ ಸರ್ಕಾರಗಳು ಯಾವಾಗ ಇರುತ್ತೋ, ಯಾವಾಗ ಹೋಗುತ್ತೋ ಗೊತ್ತಿಲ್ಲ ಎಂದು ಆರಣ್ಯ ಸಚಿವ ಆನಂದ್ ಸಿಂಗ್ ಅಚ್ಚರಿ

Spread the love

ಬಳ್ಳಾರಿ: ಈ ಸರ್ಕಾರಗಳು ಯಾವಾಗ ಇರುತ್ತೋ, ಯಾವಾಗ ಹೋಗುತ್ತೋ ಗೊತ್ತಿಲ್ಲ ಎಂದು ಆರಣ್ಯ ಸಚಿವ ಆನಂದ್ ಸಿಂಗ್ ಅಚ್ಚರಿ ಹೇಳಿಕೆ ಕೊಟ್ಟಿದ್ದಾರೆ.

ಬಳ್ಳಾರಿಯ ಹೊಸಪೇಟೆ ತಾಲೂಕಿನ ಕಮಾಲಾಪುರದ ಅಟಲ್ ಬಿಹಾರಿ ವಾಜಪೇಯಿ ಝೂನಲ್ಲಿ 66ನೇ ವನ್ಯ ಜೀವಿ ಸಂರಕ್ಷಣಾ ಸಪ್ತಾಹದ ಅಂಗವಾಗಿ ಆಯೋಜನೆ ಮಾಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಸಪ್ತಾಹದಲ್ಲಿ ಪಾಲ್ಗೊಂಡಿರುವ ಎಲ್ಲಾ ಅಧಿಕಾರಿಗಳಿಗೆ ಹಾಗೇ ಅರಣ್ಯ ರಕ್ಷಣೆ ಮಾಡುವಂತಹ ಎಲ್ಲಾ ಯುವಕರಾಗಿರಲಿ, ನಾವೆಲ್ಲರೂ ಇವತ್ತಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೀವಿ. ಇವತ್ತು ಬೆಂಗಳೂರಲ್ಲಿ ಕಾರ್ಯಕ್ರಮವಿತ್ತು. ಆದರೆ ನಾನು ಸಚಿವನಾಗಿ ಇವತ್ತು, ನನ್ನ ಕ್ಷೇತ್ರದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿ ಕೆಲವರು ಸಲಹೆ ಕೊಟ್ಟರು. ಅದು ಸಣ್ಣ ಕಾರ್ಯಕ್ರಮವಾಗಿರಲಿ, ದೊಡ್ಡ ಕಾರ್ಯಕ್ರಮವಾಗಿರಲಿ ನಮಗೆ ಸಿಕ್ಕಿರೋ ಅವಕಾಶವನ್ನ ಇಲ್ಲಿಯೇ ಮಾಡೋಣ.

ಯಾಕಂದ್ರೆ ಈ ಸರ್ಕಾರಗಳು ಯಾವಾಗ ಇರುತ್ತೋ? ಯಾವಾಗ ಹೋಗುತ್ತೋ ಗೊತ್ತಿಲ್ಲ ಎಂದರು.

ಬ್ರೇಕಿಂಗ್ ನ್ಯೂಸ್ ಕೊಟ್ಟ ಬಿಜೆಪಿ ಅಧ್ಯಕ್ಷ: ಬಿಎಸ್‌ವೈ ಸಂಪುಟದ ಮೊದಲ ವಿಕೆಟ್ ಪತನ ಫಿಕ್ಸ್

ಬಳಿಕ ಎಚ್ಚೆತ್ತ ಸಚಿವರು ತಮ್ಮ ಹೇಳಿಕೆಗೆ ಸಮಜಾಯಿಷಿ ನೀಡಿದ್ದು, ನನ್ನ ಹೇಳಿಕೆಯನ್ನು ಯಾರೂ ಅನ್ಯತಾ ಭಾವಿಸಬೇಡಿ. ಖಂಡಿತ ಮೂರು ವರ್ಷ ಇರುತ್ತೆ. ಇದನ್ನ ಯಾರೂ ತಪ್ಪಾಗಿ ತೆಗೆದುಕೊಳ್ಳಬಾರದು. ಮೂರು ವರ್ಷ ನಮ್ಮ ಸರ್ಕಾರ ಇರುತ್ತೆ. ಈ ಬಗ್ಗೆ ಯಾವುದೇ ಸಂಶಯ ಇಲ್ಲ ಎಂದು ಸ್ಪಷ್ಟಪಡಿಸಿದರು.

ಆನಂದ್ ಸಿಂಗ್ ಅವರು ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹಗೊಂಡಿದ್ದರು. ಬಳಿಕ ಉಪಚುನಾವಣೆಯಲ್ಲಿ ಗೆದ್ದು ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾಗಿದ್ದಾರೆ.

ಇದೀಗ ಆನಂದ್ ಸಿಂಗ್ ಈ ರೀತಿ ಹೇಳಲು ಕಾರಣವೇನು? ಸರ್ಕಾರದಲ್ಲಿ ಅಭದ್ರತೆ ಏನಾದರೂ ಕಾಡುತ್ತಿದೆಯಾ? ಇದರ ಹಿಂದೆ ರಾಜಕೀಯ ತಂತ್ರಗಾರಿಕೆ ಇದೆಯಾ? ಅನ್ನೋ ಚರ್ಚೆಗಳು ಶುರುವಾಗಿವೆ.


Spread the love

About Laxminews 24x7

Check Also

ರಾಮತೀರ್ಥ ನಗರದಲ್ಲಿ ಸುರೇಶ ಯಾದವ ಫೌಂಡೇಶನ್ ದಿಂದ ಹೋಳಿ ಆಚರಣೆ

Spread the love ರಾಮತೀರ್ಥ ನಗರದಲ್ಲಿ ಸುರೇಶ ಯಾದವ ಫೌಂಡೇಶನ್ ದಿಂದ ಹೋಳಿ ಆಚರಣೆ ಬೆಳಗಾವಿಯ ರಾಮತೀರ್ಥ ನಗರದ ಸುರೇಶ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ