Breaking News

ಇಂದೇ ಸಿಎಂ ಆಯ್ಕೆ, ನಾಳೆ ಪ್ರಮಾಣವಚನ ಸ್ವೀಕಾರ ಸಾಧ್ಯತೆ

Spread the love

ಬೆಂಗಳೂರು: ಬಿ.ಎಸ್​.ಯಡಿಯೂರಪ್ಪ ಅವರ ರಾಜೀನಾಮೆಯಿಂದ ತೆರವಾದ ಮುಖ್ಯಮಂತ್ರಿ ಸ್ಥಾನಕ್ಕೆ ನೂತನ ಸಿಎಂ ಅನ್ನು ಆಯ್ಕೆ ಮಾಡುವ ಹಿನ್ನೆಲೆಯಲ್ಲಿ ರಾಜ್ಯ ರಾಜಧಾನಿಗೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ಕುಮಾರ್​ ಕಟೀಲ್​ ಆಗಮಿಸಿದ್ದು, ಇವರಿಬ್ಬರೂ ಕೆಲ ಕಾಲ ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ರಹಸ್ಯ ಮಾತುಕತೆ ನಡೆಸಿದರು.

ಇದೇ ವೇಳೆ ಬಿಜೆಪಿ‌ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅರುಣ್ ಸಿಂಗ್, ಧರ್ಮೇಂದ್ರ ಪ್ರಧಾನ್ ಮತ್ತು‌ ಕಿಶಾನ್ ರೆಡ್ಡಿ ಬರ್ತಿದ್ದಾರೆ. ಕೇಂದ್ರ ಸಂಸದೀಯ ಮಂಡಳಿ ವೀಕ್ಷಕರಿಗೆ ಜವಬ್ದಾರಿ ನೀಡಿದೆ. ಸಂಜೆ ಶಾಸಕಾಂಗ ಸಭೆ ನಡೆಯುತ್ತೆ. ಸಭೆಯ ಬಳಿಕ ತೀರ್ಮಾನ ಮಾಡ್ತೇವೆ ಎಂದರು. ಇಂದೇ ಸಿಎಂ ಆಯ್ಕೆ ಮಾಡ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅರುಣ್​ ಸಿಂಗ್​, ಹೌದು ಎಂಬ ರೀತಿಯಲ್ಲಿ ತಲೆ ಆಡಿಸಿದರು.

ಇಂದೇ ಸಿಎಂ ಯಾರೆಂದು ಆಯ್ಕೆ ಆದರೆ ನಾಳೆಯೇ ಪ್ರಮಾನವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಸಿಎಂ ರೇಸ್​ನಲ್ಲಿ ಹಲವರು ಹೆಸರು ಓಡಾಡುತ್ತಿದೆಯಾದರೂ ಹೈಕಮಾಂಡ್​ ಮಾತ್ರ ಯಾವ ಗುಟ್ಟನ್ನೂ ಬಿಟ್ಟುಕೊಟ್ಟಿಲ್ಲ.


Spread the love

About Laxminews 24x7

Check Also

ದಿಕ್ಕು ದೆಸೆಯಿಲ್ಲದ ಪ್ರಗತಿ ಶೂನ್ಯ ಬಜೆಟ್: ಬೊಮ್ಮಾಯಿ

Spread the love ಹಾವೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ರಾಜ್ಯ ಬಜೆಟ್ ದಿಕ್ಕು ದೆಸೆ ಇಲ್ಲದ ಪ್ರಗತಿ ಶೂನ್ಯ ಬಜೆಟ್ ಆಗಿದ್ದು, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ