Breaking News

ಶಾಸಕ ಸ್ಥಾನಕ್ಕೆ ರಾಜೀನಾಮೆ ಇಲ್ಲ; ರಮೇಶ್ ಜಾರಕಿಹೊಳಿ ಮುಂಬಯಿ ಪ್ರವಾಸ ರದ್ಧು: ಶೀಘ್ರದಲ್ಲೆ ನಿರ್ಧಾರ ಪ್ರಕಟ!

Spread the love

ಬೆಳಗಾವಿ: ಮತ್ತೆ ಸಂಪುಟಕ್ಕೆ ಸೇರಲು ಕೇಂದ್ರ ಬಿಜೆಪಿ ನಾಯಕರ ಮೇಲೆ ಒತ್ತಡ ಹೇರುವಲ್ಲಿ ವಿಫಲವಾಗಿರುವ ಜಲ ಸಂಪನ್ಮೂಲ ಖಾತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಲು ನಿರ್ಧರಿಸಿದ್ದರು.

ಆದರೆ ತಮ್ಮ ಸಹೋದರರ ಒತ್ತಡ ಮತ್ತು ಸಂಪುಟಕ್ಕೆ ಶೀಘ್ರವೇ ಸೇರಿಸಿಕೊಳ್ಳುವ ಭರವಸೆಯ ನಂತರ ರಮೇಶ್ ತಮ್ಮ ರಾಜಿನಾಮೆ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.

ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಅವರ ಭೇಟಿಗೂ ಮೊದಲು ಗೋಕಾಕ್ ಗೆ ತೆರಳಿ ತಮ್ಮ ಸಹೋದರರಾದ ಬಾಲಚಂದ್ರ ಜಾರಕಿಹೊಳಿ, ಲಖನ್ ಜಾರಕಿಹೊಳಿ ಮತ್ತು ಭಾವಮೈದುನ ಅಂಬಿರಾವ್ ಪಾಟೀಲ್ ಅವರೊಂದಿಗೆ ಮ್ಯಾರಥಾನ್ ಸಭೆ ನಡೆಸಿದರು, ಆದರೆ ಸಿಡಿ ಪ್ರಕರಣದಲ್ಲಿ ಕಾನೂನಾತ್ಮಕವಾಗಿ ಕ್ಲೀನ್ ಚಿಟ್ ಸಿಗುವವರೆಗೂ ಯಾವುದೇ ನಿರ್ಧಾರಕ್ಕೆ ಬಾರದಂತೆ ಸಹೋದರರು ಒತ್ತಡ ಹೇರಿದ್ದಾರೆ.

ಸೆಕ್ಸ್ ಸಿಡಿ ಪ್ರಕರಣ ಕೇಸ್ ಕ್ಲೋಸ್ ಅದ ಕೂಡಲೇ ಸಂಪುಟಕ್ಕೆ ಸೇರಿಸಿಕೊಳ್ಳುವುದಾಗಿ ಸಿಎಂ ಯಡಿಯೂರಪ್ಪ ಮತ್ತು ಬಿಜೆಪಿ ಹೈಕಮಾಂಡ್ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಕರಣದ ತನಿಖೆ ನಡೆಯುತ್ತಿದ್ದು, ಸರ್ಕಾರ ಬಿ ರಿಪೋರ್ಟ್ ಹಾಕಿ ಕೇಸ್ ಕ್ಲೋಸ್ ಮಾಡಲು ನಿರ್ಧರಿಸಿದೆ, ಸದ್ಯ ಕೇಸ್ ಕೋರ್ಟ್ ನಲ್ಲಿರುವ ಕಾರಣ ಕೆಲ ಸಮಯದವರೆಗೆ ಕಾದು ನೋಡುವಂತೆ ಜಾರಕಿಹೊಳಿ ಸಹೋದರರು ಸಲಹೆ ನೀಡಿದ್ದಾರೆ.

ಗೋಕಾಕ್ ನಲ್ಲಿ ಸಹೋದರರೊಂದಿಗಿನ ಸಭೆ ಅಂತ್ಯವಾದ ಕೂಡಲೇ ರಮೇಶ್ ಜಾರಕಿಹೊಳಿ ತಮ್ಮ ಮುಂಬಯಿ ಭೇಟಿ ರದ್ದುಗೊಳಿಸಿ ಬೆಂಗಳೂರಿಗೆ ತೆರಳಿದರು. ಶೀಘ್ರದಲ್ಲೇ ಮೂವರು ಸಹೋದರರ ಸುದ್ದಿಗೋಷ್ಠಿ ನಡೆಸಿ ತಮ್ಮ ಮುಂದಿನ ನಿರ್ಧಾರ ಪ್ರಕಟಿಸಲಿದ್ದಾರೆ, ಸಿಡಿ ಕೇಸ್ ಕ್ಲೋಸ್ ಆಗಲಿದ್ದು, ರಮೇಶ್ ಮತ್ತೆ ಸಂಪುಟಕ್ಕೆ ಸೇರಲಿದ್ದಾರೆ ಎಂಬ ಭರವಸೆಯಿದೆ, ಹಾಗೂ ಮತ್ತೆ ಜಲ ಸಂಪನ್ಮೂಲ ಖಾತೆ ಸಿಗುವ ವಿಶ್ವಾಸದಲ್ಲಿದ್ದಾರೆ.

ಜಾರಕಿಹೊಳಿ ಸಹೋದರರು ವಿಭಿನ್ನವಾದ ರಾಜಕೀಯ ಪಕ್ಷದಲ್ಲಿದ್ದಾರೆ, ಅದರಲ್ಲಿ ಒಬ್ಬರು ಕಳೆದ 15 ವರ್ಷಗಳಿಂದ ಯಾವ ಸರ್ಕಾರ ಅಧಿಕಾರಕ್ಕೆ ಬಂದರೂ ಅದರಲ್ಲಿ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ರಮೇಶ್ ಜಾರಕಿಹೊಳಿ ನಿರ್ಗಮನದೊಂದಿಗೆ ಸಹೋದರರು ಹತಾಶರಾಗಿದ್ದಾರೆ.


Spread the love

About Laxminews 24x7

Check Also

ಬೈಕ್ – ಹಾಲಿನ ವಾಹನ ನಡುವೆ ಡಿಕ್ಕಿ; ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಸಾವು

Spread the loveಶಿವಮೊಗ್ಗ: ಹಾಲಿನ ವಾಹನ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಶಿವಮೊಗ್ಗದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ