ಧಾರವಾಡ: ಮಾತು ಬಾರದ, ಕಿವಿ ಕೇಳದ ವಿಶೇಷ ಜೋಡಿ ಮದುವೆಯಲ್ಲಿ ಮಾಸ್ಕ್ ಬದಲಿಸಿಕೊಂಡು ದಾಂಪತ್ಯಜೀನಕ್ಕೆ ಕಾಲಿಡುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

ಸತ್ತೂರಿನ ಕುಮಾರ, ಧಾರವಾಡದ ಸಾರಸ್ವತಪುರದ ಶ್ವೇತಾ ವಿಶೇಷ ಚೇತನರಾಗಿದ್ದಾರೆ. ವಧುಗೆ ವರ ಮಾಸ್ಕ್ ಹಾಕುವುದು, ವರನಿಗೆ ವಧು ಮಾಸ್ಕ್ ಹಾಕುವ ಮೂಲಕ ಹಾರ ಬದಲಾಯಿಸಿದಂತೆ ಮಾಸ್ಕ್ ಬದಲಾಯಿಸಿ, ಬಳಿಕ ಸಂಪ್ರಾಯದಂತೆ ಅಕ್ಷತೆಯನ್ನೂ ಹಾಕಿ ನಡೆದ ಮದುವೆಯಾಗಿದ್ದಾರೆ. ಎರಡೂ ಮನೆ ಕಡೆಯವರ ಉಪಸ್ಥಿತಿಯಲ್ಲಿ ಸರಳವಾಗಿ ವಿವಾಹ ಸಮಾರಂಭ ನಡೆಯಿತು
ವಿದ್ಯಾಕಾಶಿ ಧಾರವಾಡದಲ್ಲಿ ಲಾಕ್‍ಡೌನ್ ಬಳಿಕ ಜಿಲ್ಲಾಡಳಿತ ಅನುಮತಿ ಪಡೆದು ನಡೆದ ಮೊದಲ ವಿವಾಹ ಇದಾಗಿದೆ. ಈ ಮದುವೆಯ ವಿಶೇಷ ಏನು ಅಂದ್ರೆ, ಸತಿ-ಪತಿಗಳಾದ ಈ ನವ ಜೋಡಿಗೆ ಮಾತು ಬಾರದು, ಕಿವಿಯೂ ಕೇಳದು.

ಸತ್ತೂರಿನ ಕುಮಾರನಿಗೆ ಬಾಲ್ಯದಿಂದಲೂ ಕಿವಿಯೂ ಕೇಳದು, ಮಾತು ಸಹ ಬರುವುದಿಲ್ಲ. ಮನೆಯಲ್ಲಿ ಈತನೇ ಹಿರಿ ಮಗ, ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಕುಮಾರನಿಗೆ ಇವನಂತೆಯೇ ಇರುವ ಹುಡುಗಿಯನ್ನು ಹುಡುಕುತ್ತಾ ಇದ್ದರು. ಸಾರಸ್ವತಪುರದ ಶ್ವೇತಾಳನ್ನು ನೋಡಿಯೂ ಬಂದಿದ್ದರು. ಆಗ ಕುಮಾರ ಕೂಡಾ ಇಷ್ಟಪಟ್ಟಿದ್ದನು. ಶ್ವೇತಾ ಮನೆಯಲ್ಲೇ ಇದ್ದು, ಕಸೂತಿ ಕಲೆಯ ಕೆಲಸ ಮಾಡಬಲ್ಲವಳಾಗಿದ್ದು, ಕಿವಿ ಕೇಳದ ಮತ್ತು ಮಾತು ಬಾರದವರ ಸಂವೇದನೆಯ ಭಾಷೆಯನ್ನೂ ಬಲ್ಲವಳಾಗಿದ್ದಾಳೆ.
Laxmi News 24×7