Breaking News

ಹುಬ್ಬಳ್ಳಿಯಿಂದ ವಿಮಾನಯಾನ ಸೇವೆ ಮತ್ತೆ ಆರಂಭ

Spread the love

ಹುಬ್ಬಳ್ಳಿ: ಲಾಕ್ ಡೌನ್ ವೇಳೆ ಹುಬ್ಬಳ್ಳಿಯಿಂದ ವಿವಿಧ ಮಹಾನಗರಗಳಿಗೆ ಸಂಪರ್ಕಿಸುವ ವಿಮಾನಯಾನ ಸೇವೆಯನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದ ಇಂಡಿಗೋ ಸಂಸ್ಥೆ ಜುಲೈ 1 ರಿಂದ ಮತ್ತೆ ವಿಮಾನಯಾನ ಸೇವೆ ಪುನರಾರಂಭ ಮಾಡುವುದಾಗಿ ತಿಳಿಸಿದೆ.

ಹುಬ್ಬಳ್ಳಿಯಿಂದ ಮುಂಬೈ, ಚೆನೈ, ಬೆಂಗಳೂರು, ಕಣ್ಣೂರು, ಕೊಚ್ಚಿ ಮಹಾನಗರಗಳಿಗೆ ವಿಮಾನಯಾನ ಸಂಪರ್ಕ ಸೇವೆ ಮತ್ತೆ ಆರಂಭಗೊಳ್ಳಲಿದೆ. ಜುಲೈ 9 ರಿಂದ ಹುಬ್ಬಳ್ಳಿ- ಹೈದ್ರಾಬಾದ್ ಅಲಯನ್ಸ್ ಏರ್ ವಿಮಾನ ಸೇವೆ ಆರಂಭವಾಗಲಿದೆ. ಅಗಸ್ಟ್ 2 ರಿಂದ ಹುಬ್ಬಳ್ಳಿ – ಅಹಮದಾಬಾದ್ ಇಂಡಿಗೋ ವಿಮಾನ ಸೇವೆ ಶುರುವಾಗಲಿದೆ.

ಈ ಸೇವೆ ಪುನರಾಂಭಿಸಿದ ಇಂಡಿಗೋ ಹಾಗೂ ಅಲಯೆನ್ಸ್ ಏರ್ ಸಂಸ್ಥೆಗಳಿಗೆ ಕೇಂದ್ರ ಸಂಸದೀಯ ಹಾಗೂ ಕಲ್ಲಿದ್ದಲು ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೇ ವಿಮಾನಯಾನ ಸೇವೆಯನ್ನ ಜನರು ಸದುಪಯೋಗಪಡಿಸಿಕೊಳ್ಳುವಂತೆ ಪ್ರಯಾಣಿಕರಲ್ಲಿ ಮನವಿ ಮಾಡಿದ್ದಾರೆ.


Spread the love

About Laxminews 24x7

Check Also

ಕಾಂಗ್ರೆಸ್ ಪಕ್ಷಕ್ಕೆ ಮುಜುಗರಕ್ಕಿಡಾಗಿಸಿದ ಬಿಜೆಪಿ; ನಾಟಿ ಕೋಳಿ ಸರ್ಕಾರದ ಘೋಷಣೆಗಳು* ನಾಟಿ ಕೋಳಿ ಸರ್ಕಾರಕ್ಕೆ ವಿಜಯಪುರದಲ್ಲಿ ಬಿಜೆಪಿ ಸೆಡ್ಡು!

Spread the love ಕಾಂಗ್ರೆಸ್ ಪಕ್ಷಕ್ಕೆ ಮುಜುಗರಕ್ಕಿಡಾಗಿಸಿದ ಬಿಜೆಪಿ; ನಾಟಿ ಕೋಳಿ ಸರ್ಕಾರದ ಘೋಷಣೆಗಳು* ನಾಟಿ ಕೋಳಿ ಸರ್ಕಾರಕ್ಕೆ ವಿಜಯಪುರದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ