ಬೆಂಗಳೂರು, ಆ.2- ಕೊರೊನಾ ಸೋಂಕಿನಿಂದ ಪೊಲೀಸರು ಸಾಕಷ್ಟು ಸಂಖ್ಯೆಯಲ್ಲಿ ಗುಣಮುಖರಾಗುತ್ತಿದ್ದಾರೆ ಮತ್ತು ಅವರು ಪ್ಲಾಸ್ಮಾ ಥೆರಪಿಗೆ ಸಹಕರಿಸಿ ಮಾನವೀಯತೆ ಮೆರೆಯುತ್ತಿದ್ದಾರೆ. ಇದಕ್ಕೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಹೇಳಿದ್ದಾರೆ.
ಸಮಾಜದ ಜವಾಬ್ದಾರಿ ಅರಿತು ಇತರರಿಗೆ ಮಾದರಿಯಾಗಿ ಪ್ಲಾಸ್ಮಾ ಚಿಕಿತ್ಸೆಯಿಂದ ಇತರರು ಗುಣಮುಖರಾಗಲಿ ಎಂಬ ಸದುದ್ದೇಶದಿಂದ ರಕ್ತದಾನ ಮಾಡಿ ಮಾನವೀಯ ಗುಣಗಳನ್ನು ತೋರುತ್ತಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಟ್ವಿಟ್ಟರ್‍ನಲ್ಲಿ ಸಂತಸ ಹಂಚಿಕೊಂಡಿರುವ ಅವರು, ಕೋವಿಡ್-19 ಸೋಂಕು ಹರಡದಂತೆ ಪೊಲೀಸ್ ಪಡೆ ನಿಸ್ವಾರ್ಥ ಸೇವೆ ಸಲ್ಲಿಸಿದೆ. ಕಷ್ಟದ ಸಂದರ್ಭದಲ್ಲಿ ಜನತೆಗೆ ಸ್ಪಂದಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.