ಉತ್ತರಕನ್ನಡ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಹೆಚ್ಚಾಗಿದ್ದು, ದಿನೇದಿನೆ ಸೋಂಕಿತರ ಸಂಖ್ಯೆ ಏರುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ನಾಳೆ ಬೆಳಗ್ಗೆ 10 ಗಂಟೆಯಿಂದ ಸೀಲ್ಡೌನ್ ಜಾರಿ ಮಾಡಲಾಗುವುದು ಎಂದು ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ತಿಳಿಸಿದ್ದಾರೆ.
ಉತ್ತರಕನ್ನಡದ ಸಿದ್ದಾಪುರ, ಶಿರಸಿ, ಯಲ್ಲಾಪುರ ಮತ್ತು ಮುಂಡಗೋಡು ಪಟ್ಟಣಗಳು ನಾಳೆಯಿಂದ ಮೇ 24ರ ಸಂಜೆಯವರೆಗೆ ಸೀಲ್ಡೌನ್ ಆಗಲಿವೆ. ಇನ್ನು ಉಳಿದ ಎಲ್ಲ ತಾಲೂಕುಗಳು ಶನಿವಾರ ಮತ್ತು ಭಾನುವಾರ ಮಾತ್ರ ಸೀಲ್ಡೌನ್ ಆಗಲಿವೆ ಎಂದು ಹೆಬ್ಬಾರರು ಹೇಳಿದ್ದಾರೆ.
ನಾಲ್ಕು ತಾಲೂಕುಗಳ ಜನರು ನಾಳೆ ಬೆಳಗ್ಗೆ 10ಗಂಟೆಯೊಳಗೆ ನಾಲ್ಕೈದು ದಿನಗಳಿಗಾಗುವಷ್ಟು ಅಗತ್ಯ ವಸ್ತುಗಳನ್ನು ಖರೀದಿ ಮಾಡಿಕೊಳ್ಳಬೇಕು. ಮೇ 24ರವರೆಗೂ ಸೀಲ್ಡೌನ್ ಮುಂದುವರಿಯಲಿದ್ದು, ಅದರ ನಂತರ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಇನ್ನು ತರಕಾರಿ, ಹಣ್ಣುಹಂಪಲು, ಹೂವು, ಹಾಲನ್ನು ಪ್ರತಿದಿನ ಬೆಳಗ್ಗೆ 10 ಗಂಟೆಯೊಳಗೆ ತಳ್ಳುವ ಗಾಡಿ ಮೂಲಕ ಪೂರೈಸಲು ಅವಕಾಶ ಮಾಡಿಕೊಡಲಾಗುತ್ತದೆ. ದಿನಸಿ ಸಾಮಗ್ರಿಗಳನ್ನು ಅಗತ್ಯವಿರುವಷ್ಟನ್ನು ನಾಳೆಯೇ ಖರೀದಿಸಬೇಕು. ಕೊರೊನಾ ನಿಯಂತ್ರಣಕ್ಕೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಶಿವರಾಮ ಹೆಬ್ಬಾರ್ ಮನವಿ ಮಾಡಿದ್ದಾರೆ.
Laxmi News 24×7