Breaking News

ಸಾಯೋರು ಎಲ್ಲಾದರೂ ಸಾಯಲಿ’ : ಶಾಸಕ ಚಂದ್ರಪ್ಪ

Spread the love

ಚಿತ್ರದುರ್ಗ : ತಾಲೂಕು ಆಸ್ಪತ್ರೆಯಲ್ಲಿ ಆಕ್ಸಿಜನ್ ಬೆಡ್ ನಿರ್ಮಾಣದ ವಿಚಾರವಾಗಿ ಹೊಳಲ್ಕೆರೆ ಬಿಜೆಪಿ‌ ಶಾಸಕ ಹಾಗೂ ಸಾರಿಗೆ ನಿಗಮ‌ ಅಧ್ಯಕ್ಷ ಎಂ.ಚಂದ್ರಪ್ಪ ಅವರು ಡಿಹೆಚ್‌ಓ ಡಾ.ಪಾಲಾಕ್ಷ ಜೊತೆ ಮಾತಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದ್ದು, ಇದರಲ್ಲಿ ಶಾಸಕರು, ‘ನಾನು ಇಲ್ಲಿ ಆಸ್ಪತ್ರೆ‌ ಮಾಡೋದಿಲ್ಲ‌, ಅದು ನನಗೆ ಅವಶ್ಯಕತೆ ಇಲ್ಲ, ಸಾಯೋರು ಎಲ್ಲಾದರೂ ಸಾಯಲಿ’ ಎಂದು ನುಡಿದಿದ್ದಾರೆ.

ಹೊಳಲ್ಕೆರೆ ಪಟ್ಟಣದ ಪ್ರವಾಸಿ ಮಂದಿರ ಬಳಿ ಶಾಸಕರು ಹಾಗೂ ಡಿಎಚ್‌ಒ ನಡುವೆ ಈ ವಾಗ್ವಾದ ನಡೆದಿದೆ.

ಯಾವ ವಿಚಾರಕ್ಕೆ ?

ಹೊಳಲ್ಕೆರೆ ತಾಲೂಕು ಆಸ್ಪತ್ರೆಯಲ್ಲಿ 50 ಆಕ್ಸಿಜನ್ ಬೆಡ್ ಕೊವಿಡ್ ವಾರ್ಡ್ ನಿರ್ಮಾಣ ಮಾಡುವಂತೆ ಸೂಚಿಸಲಾಗಿತ್ತು. ಆದರೆ, ಕೇವಲ 10 ಆಕ್ಸಿಜನ್ ಬೆಡ್ ನಿರ್ಮಾಣ ಮಾಡಿರುವುದಾಗಿ ಡಿಹೆಚ್‌ಓ ಮಾಹಿತಿ ನೀಡಿದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಶಾಸಕರು, 50 ಆಕ್ಸಿಜನ್ ಬೆಡ್ ನಿರ್ಮಿಸಿ ಇಲ್ಲವಾದರೆ ಏನೂ ಬೇಡ ಎಂದಿದ್ದಾರೆ.


Spread the love

About Laxminews 24x7

Check Also

ಅಸ್ಸಾಂ, ತಮಿಳುನಾಡು, ಕೇರಳಕ್ಕೆ ಏ.9 ರಂದು ಚುನಾವಣೆ – ಮೇ 4 ರಂದು ಫಲಿತಾಂಶ

Spread the loveನವದೆಹಲಿ: 4 ರಾಜ್ಯ  ಮತ್ತು 1 ಕೇಂದ್ರಾಡಳಿತ ಪ್ರದೇಶದ ಚುನಾವಣೆಗೆ ಮುಹೂರ್ತ ಫಿಕ್ಸ್‌ ಆಗಿದೆ. ಅಸ್ಸಾಂ, ತಮಿಳುನಾಡು,ಕೇರಳ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ