Breaking News

ಚಿಕ್ಕ-ಪುಟ್ಟ ಅಪರಾಧಗಳಿಗೆ ಬಂಧಿಸ್ಬೇಡಿ, ಜೈಲಿನಲ್ಲಿ ಜನದಟ್ಟಣೆ ಆಗ್ತಿದೆ : ಪೊಲೀಸರಿಗೆ ಸುಪ್ರೀಂ ಸೂಚನೆ

Spread the love

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ತೀವ್ರವಾಗಿ ಹೆಚ್ಚಳವಾಗ್ತಿವೆ. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ ಜನದಟ್ಟಣೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಆದೇಶ ಹೊರಡಿಸಿದೆ.

ಆಗತ್ಯವಿದ್ದರೇ ಮಾತ್ರ ಬಂಧಿಸಿ ಎಂದು ಪೊಲೀಸರಿಗೆ ಸೂಚಿಸಿರುವ ಸುಪ್ರೀಂಕೋರ್ಟ್‌, ಅಗತ್ಯವಿಲ್ಲದಿದ್ರೆ 7 ವರ್ಷಕ್ಕಿಂತ ಕಡಿಮೆ ಶಿಕ್ಷೆ ಉಳ್ಳ ಅಪರಾಧಗಳಲ್ಲಿ ಆರೋಪಿಗಳನ್ನ ಬಂಧಿಸಬೇಡಿ. ಇನ್ನು ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ರಚಿಸಿರುವ ಉನ್ನತ ಸಮಿತಿಗಳಿಗೆ ಸೋಂಕಿಗೆ ಒಳಪಡುವ ಅಪಾಯವಿರುವ ಕೈದಿಗಳನ್ನ ಗುರುತಿಸಿ ಎಂದಿದೆ. ಇನ್ನು ಇದಷ್ಟೇ ಅಲ್ಲದೇ ಕಳೆದ ವರ್ಷ ಕೊರೊನಾ ಅಲೆ ಎದ್ದಾಗ ಮಾರ್ಚ್​​ನಲ್ಲಿ ಪರೋಲ್​ ಮೇಲೆ ಬಿಡುಗಡೆಯಾಗಿದ್ದ ಕೈದಿಗಳಿಗೆ ಮತ್ತೆ 90 ದಿನಗಳ ಅವಧಿಗೆ ಶಿಕ್ಷೆಯಿಂದ ತಾತ್ಕಾಲಿಕ ವಿನಾಯಿತಿ ನೀಡಬೇಕು ಎಂದು ಸೂಚಿಸಿದೆ.

ಅದ್ರಂತೆ, ಉನ್ನತ ಸಮಿತಿಗಳು ಹೊಸದಾಗಿ ಬಿಡುಗಡೆ ಮಾಡಲು ಕೈದಿಗಳನ್ನ ಗುರುತಿಸುವ ಕಾರ್ಯ ಶುರು ಮಾಡಿ. ಮಾರ್ಚ್​ 23, 2020 ರ ಆದೇಶದನುಸಾರ ಬಿಡುಗಡೆ ಮಾಡಲಾಗಿದ್ದವರಿಗೆಲ್ಲ ಸೂಕ್ತ ಷರತ್ತುಗಳನ್ನು ವಿಧಿಸಿ, ಕೂಡಲೇ ಬಿಡುಗಡೆ ಮಾಡಿ’ ಎಂದು ಕೋರ್ಟ್​ ಹೇಳಿದೆ.


Spread the love

About Laxminews 24x7

Check Also

ಕೆಎಸ್ಆರ್​ಟಿಸಿಯಲ್ಲಿ ಲಂಚಾವತಾರಗೂಗಲ್ ಪೇ, ಫೋನ್ ಪೇ ಮೂಲಕ ಲಂಚ ಪಡೆದ ಅಧಿಕಾರಿಗಳು!

Spread the loveಬೆಂಗಳೂರು, ಆಗಸ್ಟ್ 25: ಈ ಹಿಂದೆ ಬಿಎಂಟಿಸಿಯಲ್ಲಿ ಕರ್ತವ್ಯ ವಹಿಸಲು ಅಧಿಕಾರಿಗಳು ಚಾಲಕ, ನಿರ್ವಾಹಕರಿಂದ ಲಕ್ಷಾಂತರ ರೂಪಾಯಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ