Breaking News

ಚಾಕುವಿನಿಂದ ಇರಿದು ಕಟ್ಟಡ ಕಾರ್ಮಿಕನ ಕೊಲೆ

Spread the love

ಬೆಂಗಳೂರು, ಏ.21- ನಿರ್ಮಾಣ ಹಂತದ ಕಟ್ಟಡ ಕಾರ್ಮಿಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ಹುಬ್ಬಳ್ಳಿ ನಿವಾಸಿ ಪ್ರಕಾಶ್ (25) ಕೊಲೆಯಾದ ಕಾರ್ಮಿಕ. ತಿಂಡ್ಲು ಸಮೀಪದ ಸಪ್ತಗಿರಿ ಲೇಔಟ್‍ನಲ್ಲಿ ನಿರ್ಮಾಣ ಹಂತದ ಕಟ್ಟಡ ಕಾಮಗಾರಿ ನಡೆಯುತ್ತಿದೆ. ಇಲ್ಲಿ ಪ್ರಕಾಶ್ ಗಾರೆ ಕೆಲಸ ಮಾಡಿಕೊಂಡು ಈ ಜಾಗದಲ್ಲೇ ನಿರ್ಮಿಸಲಾಗಿದ್ದ ಲೇಬರ್ ಶೆಡ್‍ನಲ್ಲಿ ನೆಲೆಸುತ್ತಿದ್ದನು.

ರಾತ್ರಿ ಪ್ರಕಾಶ್ ಹೊರಗೆ ಹೋಗಿ ಮನೆಗೆ ವಾಪಸಾಗುತ್ತಿದ್ದಾಗ ಶೆಡ್‍ನಿಂದ ಸ್ವಲ್ಪ ದೂರದಲ್ಲಿ ಯಾರೋ ಈತನ ಹೊಟ್ಟೆ, ಎದೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಇಂದು ಬೆಳಗ್ಗೆ ಈ ಮಾರ್ಗದಲ್ಲಿ ಹೋಗುತ್ತಿದ್ದವರು ಗಮನಿಸಿ ತಕ್ಷಣ ಪೊಲೀಸರಿಗೆ ತಿಳಿಸಿದ್ದಾರೆ. ಗಾರೆ ಕೆಲಸಗಾರ ಪ್ರಕಾಶ್ ಕೊಲೆಗೆ ಕಾರಣ ತಿಳಿದುಬಂದಿಲ್ಲ.

ಸ್ಥಳಕ್ಕಾಗಮಿಸಿದ vಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.


Spread the love

About Laxminews 24x7

Check Also

ನೀಟ್ ವ್ಯವಸ್ಥೆ ರಾಜ್ಯದಲ್ಲಿ ರದ್ದು ಮಾಡೋದಿಲ್ಲ: ಶರಣ ಪ್ರಕಾಶ್ ಪಾಟೀಲ್

Spread the loveಬೆಂಗಳೂರು: ಮೆಡಿಕಲ್ ಸೀಟು ಹಂಚಿಕೆಯಲ್ಲಿ ನೀಟ್ ವ್ಯವಸ್ಥೆ ರಾಜ್ಯದಲ್ಲಿ ರದ್ದು ಮಾಡೋದಿಲ್ಲ ಅಂತ ವೈದ್ಯಕೀಯ ಶಿಕ್ಷಣ ಸಚಿವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ