Breaking News

ಬೆಂಗಳೂರಿಗರೇ 15 ದಿನಗಳ ಅಜ್ಞಾತವಾಸಕ್ಕೆ ಸಿದ್ಧರಾಗಿ..?!

Spread the love

ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದು ಹೀಗೆ ಮುಂದುವರಿದ್ರೆ ಬೆಂಗಳೂರು ಕೊರೊನಾ ಕೂಪವಾಗುವುದರಲ್ಲಿ ಸಂಶಯವೇ ಇಲ್ಲ. ಈ ಮಧ್ಯೆ ತಜ್ಞರು ಕೂಡ ಕೊರೊನಾಗೆ ಬ್ರೇಕ್ ಹಾಕಲು ಬೆಂಗಳೂರಲ್ಲಿ ಕನಿಷ್ಠ 10 ದಿನ ಲಾಕ್ ಡೌನ್ ಮಾಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಿಎಂ ಬಿಎಸ್ ಯಡಿಯೂರಪ್ಪ ಅವರು ಕೂಡ ನಿನ್ನೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, 20 ರ ನಂತರ ಮತ್ತೊಮ್ಮೆ ಸಭೆ ನಡೆಸಿ ಮುಂದಿನ ಕ್ರಮಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಈ ಮಧ್ಯೆ ಏಪ್ರಿಲ್ 20 ರ ನಂತರ ಬೆಂಗಳೂರು ಲಾಕ್ ಆಗುತ್ತಾ ಅನ್ನೋ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ನಗರದಲ್ಲಿ ಮಂಗಳವಾರದಿಂದ ಹೊಸ ರೂಲ್ಸ್ ಆಗುವ ಸಾಧ್ಯತೆಗಳಿವೆ. ಕೊರೊನಾ ಹುಚ್ಚು ಕುದುರೆ ಕಟ್ಟಿಹಾಕಲು ಸರ್ಕಾರ ಮಂಗಳವಾರದಿಂದ ಕಠಿಣ ನಿಯಮಗಳನ್ನ ಜಾರಿ ಮಾಡುವ ಸಾಧ್ಯತೆಗಳಿವೆ.

ಮೂಲಗಳ ಪ್ರಕಾರ 15 ದಿನಗಳ ಬೆಂಗಳೂರು ಲಾಕ್ ಆಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಆದ್ರೆ ಸಿಎಂ ಬಿಎಸ್ ವೈ ಸಂಪೂರ್ಣ ಬೆಂಗಳೂರು ಲಾಕ್ ಮಾಡದೇ 144 ಸೆಕ್ಷನ್, ನೈಟ್ ಕಫ್ರ್ಯೂ ಸಮಯದಲ್ಲಿ ಬದಲಾವಣೆ, ವಿಕೆಂಡ್ ಲಾಕ್ ಡೌನ್ ಸೇರಿದಂತೆ ಹಲವು ಕಠಿಣ ನಿಮಯಗಳನ್ನ ಜಾರಿ ಮಾಡುವ ಚಿಂತನೆಯಲ್ಲಿದ್ದಾರೆ ಅನ್ನೋ ಮಾತುಗಳು ಕೂಡ ಕೇಳಿಬಂದಿದೆ.

ಅಲ್ಲದೆ ಸಿಎಂ ಅವರಿಗೆ ಈಗ ಕೊರೊನಾ ದೃಢಪಟ್ಟಿದ್ದು, ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವವರಿಗೆ ಲಾಕ್ ಡೌನ್ ನಿರ್ಧಾರ ಕೈಕೊಳ್ಳುವ ಸಾಧ್ಯತೆ ಕಡಿಮೆ ಇದೆ.


Spread the love

About Laxminews 24x7

Check Also

ನೀಟ್ ವ್ಯವಸ್ಥೆ ರಾಜ್ಯದಲ್ಲಿ ರದ್ದು ಮಾಡೋದಿಲ್ಲ: ಶರಣ ಪ್ರಕಾಶ್ ಪಾಟೀಲ್

Spread the loveಬೆಂಗಳೂರು: ಮೆಡಿಕಲ್ ಸೀಟು ಹಂಚಿಕೆಯಲ್ಲಿ ನೀಟ್ ವ್ಯವಸ್ಥೆ ರಾಜ್ಯದಲ್ಲಿ ರದ್ದು ಮಾಡೋದಿಲ್ಲ ಅಂತ ವೈದ್ಯಕೀಯ ಶಿಕ್ಷಣ ಸಚಿವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ