Breaking News

ಬಸ್ ಗಳಿಲ್ಲದೇ ವೃದ್ಧನ ಪರದಾಟ – ಹೃದಯಾಘಾತದಿಂದ ಸಾವು

Spread the love

ಬೆಂಗಳೂರು: 6ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರು ಬೆಳಿಗ್ಗೆಯಿಂದಲೇ ರಾಜ್ಯಾದ್ಯಂತ ಮುಷ್ಕರ ಆರಂಭಿಸಿದ್ದು, ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಖಾಸಗಿ ಬಸ್ ಗಳ ವ್ಯವಸ್ಥೆ ಮಾಡಲಾಗಿದೆಯಾದರೂ ದುಪ್ಪಟ್ಟು ಹಣ, ಬಸ್ ಸಂಚಾರ ಸಮರ್ಪಕವಾಗಿಲ್ಲದ ಕಾರಣ ಪ್ರಯಾಣಿಕರು ಪರದಾಡುತ್ತಿದ್ದಾರೆ.

ಈ ನಡುವೆ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಬಸ್ ಗಾಗಿ ಕಾಯುತ್ತಿದ್ದ ವೃದ್ಧ ಅಂಗವಿಕಲರೊಬ್ಬರು ಹೃದಾಯಾಘಾತದಿಂದ ಮೃತಪಟ್ಟಿರುವ ಧಾರುಣ ಘಟನೆ ನಡೆದಿದೆ.

!

ಜಿಗಣಿಯಿಂದ ಬಂದಿದ್ದ ಚೆನ್ನಪ್ಪ ಮೆಜೆಸ್ಟಿಕ್ ನಲ್ಲಿ ಟೀ ಕುಡಿದು ಬಿಎಂಟಿಸಿ ಬಸ್ ಗೆ ಕಾಯುತ್ತ ಕುಳಿತಿದ್ದರು. ಏಕಾಏಕಿ ಎದೆನೋವಿನಿಂದಾಗಿ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ. ಚೆನ್ನಪ್ಪ ಆನೆಕಲ್ ನ ಚಿಕ್ಕನಹಳ್ಳಿ ನಿವಾಸಿ ಎಂದು ತಿಳಿದುಬಂದಿದೆ.


Spread the love

About Laxminews 24x7

Check Also

ಕೃಷ್ಣಾ ನದಿ ನೀರು ವಿನಿಮಯ ಒಪ್ಪಂದಕ್ಕೆ ನಿರ್ಲಕ್ಷ್ಯ

Spread the love ಕೃಷ್ಣಾ ನದಿ ನೀರು ವಿನಿಮಯ ಒಪ್ಪಂದಕ್ಕೆ ನಿರ್ಲಕ್ಷ್ಯ ಕರ್ನಾಟಕ ಮಹಾರಾಷ್ಟ್ರ ಎರಡು ರಾಜ್ಯಗಳ‌ ಮಧ್ಯೆ ಬೇಕಿದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ