Breaking News

ಎನ್‌ಕೌಂಟರ್‌ನಲ್ಲಿ ಹಿಜ್ಬುಲ್ ಕಮಾಂಡರ್ ಸೇರಿ 3 ಉಗರ ಹತ್ಯೆ ………….

Spread the love

ಶ್ರೀನಗರ, ಜೂ.29-ಕಣಿವೆ ಪ್ರಾಂತ್ಯ ಕಾಶ್ಮೀರದಲ್ಲಿ ಭಯೋತ್ಪಾದಕರ ಉಪಟಳ ಮತ್ತು ವಿಧ್ಯಂಸಕ ಕೃತ್ಯಗಳ ಯತ್ನ ಮುಂದುವರಿದಿದ್ದು, ಇವರನ್ನು ನಿಗ್ರಹಿಸುವ ಕಾರ್ಯಾಚರಣೆಯನ್ನು ಭಾರತೀಯ ಭದ್ರತಾಪಡೆ ಮತ್ತಷ್ಟು ತೀವ್ರಗೊಳಿವೆ. ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ನಡೆದ ಮಹತ್ವದ ಕಾರ್ಯಾಚರಣೆಯೊಂದರಲ್ಲಿ ಹಿಜ್ಬುಲ್ ಉಗ್ರಗಾಮಿ (ಎಚ್‍ಎಂ) ಸಂಘಟನೆಯ ಕುಖ್ಯಾತ ಕಮಾಂಡರ್ ಸೇರಿದಂತೆ ಮೂವರು ಉಗ್ರಗಾಮಿಗಳನ್ನು ಭದ್ರತಾಪಡೆಗಳು ಹೊಡೆದುರುಳಿಸಿವೆ.

ಹಲವಾರು ಭಯೋತ್ಪಾದನೆ ಕೃತ್ಯಗಳಲ್ಲಿ ಶಾಮೀಲಾಗಿದ್ದ ಕಮಾಂಡರ್ ಮಸೂದ್ ಅಹಮದ್ ಭಟ್ ಹಾಗೂ ಲಷ್ಕರ್-ಎ-ತೈಬಾ ಉಗ್ರಗಾಮಿ ಸಂಘಟನೆಯ ಇನ್ನಿಬ್ಬರು ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲಾಗಿದೆ. ಅನಂತನಾಗ್ ಜಿಲ್ಲೆಯ ಛೆವಾ ಉಲ್ಲರ್ ಗ್ರಾಮದ ಕುಲ್ ಚೋಹರ್ ನಡೆದ ಗುಂಡಿನ ಕಾಳಗದಲ್ಲಿ ಮೂವರು ಉಗ್ರರನ್ನು ಯೋಧರು ಹತ್ಯೆ ಮಾಡಿದ್ದಾರೆ.

ಹತರಾದ ಆತಂಕವಾದಿಗಳಿಂದ ಶಸ್ತ್ರಾಸ್ತ್ರಗಳು, ಸ್ಫೋಟಕಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹತನಾದ ಹಿಜ್ಬುಲ್ ಕಮಾಂಡರ್ ಮಸೂದ್ ದೋಡಾ ಜಿಲ್ಲೆಯರಲ್ಲಿ ಅತ್ಯಾಚರ, ಭದ್ರತಾಪಡೆಗಳ ಮೇಲೆ ದಾಳಿ, ಶಸ್ತ್ರಾಸ್ತ್ರ ಕಳ್ಳಸಾಗಣೆ ಇತ್ಯಾದಿ ಕೃತ್ಯಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ.
ಮಸೂದ್‍ನನ್ನು ಎನ್‍ಕೌಂಟರ್‍ನಲ್ಲಿ ಹೊಡೆದುರುಳಿಸುವ ಕಾರ್ಯಾಚರಣೆಯೊಂದಿಗೆ ದೋಡಾ ಜಿಲ್ಲೆ ಭಯೋತ್ಪಾದಕರಿಂದ ಸಂಪೂರ್ಣ ಮುಕ್ತವಾಗಿದೆ ಎಂದು ಅವರು ತಿಳಿಸಿದ್ದಾರೆ.

ಕಳೆದ ವಾರವಷ್ಟೇ ತ್ರಾಲ್ ಪ್ರದೇಶವು ಉಗ್ರಗಾಮಿಗಳಿಂದ 30 ವರ್ಷಗಳ ಬಳಿಕ ಮುಕ್ತವಾಗಿತ್ತು. ತ್ರಾಲ್ ಪ್ರದೇಶದಲ್ಲಿ ಜೂನ್ 26ರಂದು ನಡೆದ ಎನ್‍ಕೌಂಟರ್‍ನಲ್ಲಿ ಮೂವರು ಉಗ್ರರನ್ನು ಗನ್‍ಫೈಟ್‍ನಲ್ಲಿ ಯೋಧರು ಹೊಡೆದುರುಳಿಸಿದ್ದರು. ಬಾರಾಮುಲ್ಲಾ ಜಿಲ್ಲೆಯ ಸೋಪೆರ್‍ನಲ್ಲಿ ಜೂನ್ 25ರಂದು ನಡೆದ ಗುಂಡಿನ ಕಾಳಗದಲ್ಲಿ ಮೂವರು ಉಗ್ರಗಾಮಿಗಳನ್ನು ಯೋಧರು ಹತ್ಯೆ ಮಾಡಿದ್ದರು.ಪುಲ್ಬಾಮಾ ಜಿಲ್ಲೆಯಲ್ಲಿ ಜೂ.24ರಂದು ನಡೆದ ಎನ್‍ಕೌಂಟರ್‍ನಲ್ಲಿ ಇಬ್ಬರು ಉಗ್ರಗಾಮಿಗಳನ್ನು ಭಾರತೀಯ ಯೋಧರು ಹೊಡೆದುರುಳಿಸಿದ್ದರು. ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಜೂನ್ 23ರಂದು ನಡೆದ ಎನ್‍ಕೌಂಟರ್‍ನಲ್ಲಿ ಇಬ್ಬರು ಉಗ್ರರು ಹತರಾಗಿದ್ದರು.


Spread the love

About Laxminews 24x7

Check Also

ವಿಶ್ವಕಪ್‌ನಲ್ಲಿಂದು 2ನೇ ಸೆಮಿ ಫೈನಲ್‌

Spread the love ಕೋಲ್ಕತ್ತಾ(ಪಶ್ಚಿಮ ಬಂಗಾಳ): ಕ್ರಿಕೆಟ್​ ಕಾಶಿ ಖ್ಯಾತಿಯ ಕೋಲ್ಕತ್ತಾದ ಈಡನ್​ ಗಾರ್ಡನ್ಸ್ ಸ್ಟೇಡಿಯಂನಲ್ಲಿ ಇಂದು ಆಸ್ಟ್ರೇಲಿಯಾ ಮತ್ತು ದಕ್ಷಿಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ