ಬೆಂಗಳೂರು: ಆಯುರ್ವೇದ ಚಿಕಿತ್ಸಾ ಕ್ರಮವನ್ನು ರೋಗ ನಿರೋಧಕ ಶಕ್ತಿ ವರ್ಧನೆಗೆ ಬಳಕೆ ಮಾಡುವ ಸಂಬಂಧ ರಾಜ್ಯ ಸರ್ಕಾರದ ಅಂತಿಮ ನಿರ್ಧಾರ ಸೋಮವಾರ ಪ್ರಕಟವಾಗಲಿದೆ.
ಸಂಜೆ 4 ಗಂಟೆಗೆ ವಿಧಾನ ಸಭೆಯಲ್ಲಿ ಟಾಸ್ಕ್ ಫೋರ್ಸ್ ಸಭೆ ನಡೆಯಲಿದೆ. ಈ ವೇಳೆ ಕೊರೊನಾ ಸೋಂಕಿತರಿಗೆ ಆಯುರ್ವೇದ ಚಿಕಿತ್ಸಾ ಕ್ರಮವನ್ನು ರೋಗ ನಿರೋಧಕ ಶಕ್ತಿ ವರ್ಧನೆಗೆ ಬಳಕೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಕೋವಿಡ್ ನಿಯಂತ್ರಣಕ್ಕೆ ಮಾಡಿಕೊಂಡ ಸಿದ್ಧತಾ ಕ್ರಮ, ಲಾಕ್‌ಡೌನ್ ಸಾಧಕ ಬಾಧಕದ ಬಗ್ಗೆ ಚರ್ಚೆ ನಡೆಯಲಿದೆ.
ಹೋಂ ಐಸೋಲೇಷನ್ ನಿಂದ ಕೋವಿಡ್ ಕೇರ್ ಸೆಂಟರ್‌ಗಳಿಗೆ ದಾಖಲಿಸುವ ವಿಚಾರದಲ್ಲಿ ಈಗ ಗೊಂದಲ ಸೃಷ್ಟಿಯಾಗಿದೆ. ಈ ವಿಚಾರದ ಬಗ್ಗೆಯೂ ಸ್ಪಷ್ಟತೆ ಸಿಕ್ಕಿಲ್ಲ. ಈ ಎಲ್ಲ ವಿಚಾರದ ಬಗ್ಗೆ ಚರ್ಚೆ ನಡೆದು ಸರ್ಕಾರದ ನಿರ್ಧಾರ ಪ್ರಕಟವಾಗಲಿದೆ.