ಹುಕ್ಕೇರಿ : ಹುಕ್ಕೇರಿ ನಗರ ಅಭಿವೃದ್ಧಿಗೆ ಶ್ರಮಿಸಲಾಗುವದು – ಸಚಿವ ಸತೀಶ ಜಾರಕಿಹೋಳಿ
ಹುಕ್ಕೇರಿ ನಗರ ಅಭಿವೃದ್ಧಿಗೆ ಉತ್ತೆಜನ ನೀಡಿ ಕಾರ್ಯ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೋಳಿ ಹೇಳಿದರು. ಶನಿವಾರ ಹುಕ್ಕೇರಿ ಪುರಸಭೆ ಸಭಾ ಭವನದಲ್ಲಿ ಜರುಗಿದ ಪ್ರಗತಿ ಪರಶೀಲನೆ ಸಭೆಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿ ನಗರದ ಅನಧಿಕೃತ ಬಡಾವಣೆಗಳ ಕುರಿತು ಚರ್ಚಿಸಿದರು,
ಪ್ರಮುಖವಾಗಿ ಸರ್ವೆ ನಂಬರ 116 ಸೇರಿದಂತೆ ಹೋಸ ಬಡಾವಣೆಗಳಲ್ಲಿ ಮನೆ ನಿರ್ಮಿಸಿ ಸಕಾ೮ರಿ ಸೌಲಭ್ಯಗಳನ್ನು ಪಡೆಯಲಾಗಿದೆ ಆದರೆ ಅನಧಿಕೃತ ವಾಗಿದ್ದರಿಂದ ಪುರಸಭೆಗೆ ಯಾವದೆ ಆದಾಯ ಪ್ರಯೋಜನೆ ಯಾಗುತ್ತಿಲ್ಲಾ ಇದರಿಂದ ಕೋಟ್ಯಾಂತರ ರೂಪಾಯಿ ಆದಾಯ ತಪ್ಪಿದೆ, ಅದಕ್ಕಾಗಿ ನ್ಯಾಯಾಲಯದ ಪ್ರಕರಣಗಳನ್ನು ತಕ್ಷಣ ಪರಿಹರಿಸಲು ಗಮನಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ರೇರಾ ಕಾಯಿದೆ ಉಲ್ಲಂಘೀಸಿ ನಿರ್ಮಿಸಿರುವ ಬಡಾವಣೆಗಳಿಗೆ ತಕ್ಷಣ ನೋಟಿಸ್ ಕೋಟ್ಟು ಮಾರಾಟಕ್ಕೆ ತಡೆಹಿಡಿಯಲು ಆದೇಶಿಸಿದರು. ಹುಕ್ಕೇರಿ ನಗರದ ಕೋರ್ಟ ಸರ್ಕಲ್ಬಳಿ ಇರುವ ಬೆಳವಿ ರಸ್ತೆಯ ಅತಿಕ್ರಮಣವನ್ನು ತೇರವು ಗೋಳಿಸಲು ನಿರ್ದೆಶಿಸಿದರು.
ಮುಖಂಡರಾದ ವಿಜಯ ರವದಿ, ರವಿ ಕರಾಳೆ, ಮೌನೇಶ ಪೋತದಾರ, ಸೋಮ ಮಠಪತಿ, ಚಂದು ಗಂಗಣ್ಣವರ, ತಮ್ಮನಗೌಡಾ ಪಾಟೀಲ ಮೋದಲಾದವರು ಮಾತನಾಡಿ ನಗರದ ಸಮಸ್ಯೇಗಳನ್ನು ಸಚಿವರ ಗಮನಕ್ಕೆ ತಂದರು.
ಈ ಸಂದರ್ಭದಲ್ಲಿ ಪುರಸಭೆ ಅದ್ಯಕ್ಷ ಇಮ್ರಾನ್ ಮೊಮಿನ, ಉಪಾದ್ಯಕ್ಷೆ ಜ್ಯೋತಿ ಬಡಿಗೇರ, ಸ್ಥಾಯಿ ಸಮಿತಿ ಅದ್ಯಕ್ಷ ಮಹಾಂತೇಶ ತಳವಾರ, ಮಹಾವೀರ ನಿಲಜಗಿ ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು.