ಹುಕ್ಕೇರಿ : ನಿವೃತ್ತ ಶಿಕ್ಷಕನಿಂದ 80 ಸಾವಿರ ರೂಪಾಯಿ ಮೌಲ್ಯದ ಕಲಿಕಾ ಸಾಮಗ್ರಿ ದೇಣಿಗೆ
ಹುಕ್ಕೇರಿ ತಾಲೂಕಿನ ಕೋಟಬಾಗಿ ಸರಕಾರಿ ಪ್ರೌಢ ಶಾಲೆ ಶಿಕ್ಷಕ ಎಸ್ ಎನ್ ಉರಂಜಿಗೋಳ ತನ್ನ ನಿವೃತ್ತ ದಿನ ಶಾಲೆಗೆ ಸುಮಾರು 80 ಸಾವಿರ ರೂಪಾಯಿ ಮೌಲ್ಯದ ಇನಟ್ಯ್ರಾಕ್ಟಿವ್ ಪೇನಲ್ ಬೋರ್ಡ್ ದೇಣಿಗೆ ನೀಡುವ ಮೂಲಕ ಮಾದರಿ ಯಾಗಿದ್ದಾರೆ.
ಕಳೆದ ಜೂನ್ 30 ರಂದು ಕೋಟಬಾಗಿ ಸರಕಾರಿ ಶಾಲೆಯ ಶಿಕ್ಷಕ ಎಸ್ ಎನ್ ಉರಂಜಿಗೋಳ ಸೇವಾ ನಿವೃತ್ತಿ ಹೊಂದಿದ ಕಾರಣ ಶಾಲಾ ಆಡಳಿತ ಮಂಡಳಿ ಬಿಳ್ಕೊಡುವ ಸಮಾರಂಭ ಹಮ್ಮಿಕೊಂಡು ಆದರಿದಿಂದ ದಂಪತಿಗಳ ಸಮೇತ ಸತ್ಕರಿಸಿ ಅಭಿನಂದಿಸಲಾಯಿತು.
ನಂತರ ಶಿಕ್ಷಕ ಉರಂಜಿಗೋಳ ತಾನು ಸೇವೆ ಸಲ್ಲಿಸಿದ ಶಾಲೆಯ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳ ಜೋತೆಗೆ ಸುಮಾರು 80 ಸಾವಿರ ರೂಪಾಯಿ ಮೌಲ್ಯದ INTERACTIVE PANNEL BOARD ದೇಣಿಗೆಯಾಗಿ ಶಾಲಾ ಆಡಳಿತ ಮಂಡಳಿಗೆ ನೀಡಿದರು.
ಇವರ ಕಾರ್ಯ ಶಿಕ್ಷಣ ಇಲಾಖೆಗೆ ಮತ್ತು ಹುಟ್ಟೂರಾದ ಶಿಂದಿಕುರಬೇಟ ಗ್ರಾಮಕ್ಕೆ ಮಾದರಿಯಾಗಿದೆ ಎಂದು SDMC ಅಧ್ಯಕ್ಷರು ಹಾಗು ಉಪಾಧ್ಯಕ್ಷರು, ಸರ್ವ ಸದಸ್ಯರು, ಸಮಸ್ತ ಊರಿನ ಜನತೆ, ಪ್ರಧಾನ ಗುರುಗಳು ಹಾಗೂ ಶಿಕ್ಷಕ ಬಳಗ, ವಿದ್ಯಾರ್ಥಿ ಬಳಗ ಅಭಿನಂದಿಸಿದ್ದಾರೆ.