ಬೆಂಗಳೂರು: ಉಡುಪಿಯ ಅಭಿಜ್ಞಾ ರಾವ್ ಮತ್ತು ಬೆಂಗಳೂರಿನ ಪ್ರೇರಣಾ 600ಕ್ಕೆ 596 ಅಂಕ ಪಡೆಯುವ ಮೂಲಕ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಟಾಪರ್ ಆಗಿ ಹೊರ ಹೊಮ್ಮಿದ್ದಾರೆ.
ಈ ವರ್ಷ ವಿಜ್ಞಾನ ವಿಭಾಗದ ಪರೀಕ್ಷೆಗೆ 2,16,271 ಮಂದಿ ಹಾಜರಾಗಿದ್ದು, 1,64,794 ಮಂದಿ ಪಾಸ್ ಆಗುವ ಮೂಲಕ ಶೇ.76.2 ಫಲಿತಾಂಶ ದಾಖಲಾಗಿದೆ. ಮೂರು ವಿಭಾಗದದಲ್ಲಿ ಹೊಸಬರು ಒಟ್ಟು 5,56,267 ಮಂದಿ ಪರೀಕ್ಷೆ ಬರೆದಿದ್ದು, 3,84,947 ಮಂದಿ ತೇರ್ಗಡೆಯಾಗಿದ್ದಾರೆ. ಶೇ.69.20 ಫಲಿತಾಂಶ ಬಂದಿದೆ.
ವಿಜ್ಞಾನ ವಿಭಾಗ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು
1. ಅಭಿಜ್ಞಾ ರಾವ್ 596 ಅಂಕ, ವಿದ್ಯೋದಯ ಪಿಯು ಕಾಲೇಜು ಉಡುಪಿ
1. ಪ್ರೇರಣಾ ಎಂ.ಎನ್ 596 ಅಂಕ, ವಿದ್ಯಾಮಂದಿರ ಐಎನ್‍ಡಿಪಿ ಪಿಯು ಕಾಲೇಜು ಬೆಂಗಳೂರು
2. ಆಕಾಂಕ್ಷಾ ಎ ಪೈ 595 ಅಂಕ, ಆರ್ವಿ ಪಿಯು ಕಾಲೇಜು ಬೆಂಗಳೂರು
3. ಯಶಸ್ ಎಂ.ಎಸ್. 594 ಅಂಕ, ಗೋಪಾಲಸ್ವಾಮಿ ಎಸ್‍ವಿ ಪಿಯು ಮೈಸೂರು
3. ಶಿಫಾಲಿ ಎಂ.ಎಸ್. 594 ಅಂಕ, ಎಬಿಪಿ ಪಿಯು ಕಾಲೇಜು ಬೆಂಗಳೂರು
3. ಅಖಿಲಾ ಯು. ಹೆಗ್ಡೆ 594 ಅಂಕ, ಸರ್ಕಾರಿ ಪಿಯು ಕಾಲೇಜು ಶಿವಮೊಗ್ಗ
3. ಆಲ್ಮಾಸ್ ಬಾನು 594 ಅಂಕ, ಜ್ಞಾನಭಾರತಿ ಪಿಯು ಕಾಲೇಜು ತುಮಕೂರು
4. ಗ್ರೀಷ್ಮಾ ಕೆ 593 ಅಂಕ, ವಿದ್ಯೋದಯ ಪಿಯು ಕಾಲೇಜು ಉಡುಪಿ
4. ಮೇಧಾ ಎನ್ ಭಟ್ 593 ಅಂಕ, ಮಹಾತ್ಮಗಾಂಧಿ ಮೆಮೊ ಪಿಯು ಕಾಲೇಜು ಉಡುಪಿ
4. ದೀಪ್ತಿ ಎ 593 ಅಂಕ, ವಿದ್ಯಾನಿಧಿ ಐಎನ್‍ಡಿ ಪಿಯು ಕಾಲೇಜು ತುಮಕೂರು
4. ಧೀರಜ್ ಬಾಬಾ ಆರ್.ಎ 593 ಅಂಕ, ಮಂಗಳೂರು ಐಎನ್‍ಡಿಪಿ ಪಿಯು ಕಾಲೇಜು ಬೆಂಗಳೂರು
5. ವರ್ಷಿತಾ ವಿಶ್ವೇಶ್ ಮಾರ್ಗಸಹೇ 592 ಅಂಕ, ವಿವಿಎಸ್ ಸರ್ದಾರ್ ಪಟೇಲ್ ಪಿಯು ಕಾಲೇಜು ಬೆಂಗಳೂರು
5. ಸಹನ ಕೆ 592 ಅಂಕ, ಆದಿಚುಂಚನಗಿರಿ ಪಿಯು ಕಾಲೇಜು ಶಿವಮೊಗ್ಗ
5. ಪದ್ಮಿಕಾ ಕೆ. ಶೆಟ್ಟಿ 592 ಅಂಕ, ವಿದ್ಯೋದಯ ಪಿಯು ಕಾಲೇಜು ಉಡುಪಿ