Breaking News

ಬೆಂಗಳೂರು ಲಾಕ್‌ಡೌನ್ : ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ, ಏನುರುತ್ತೆ..? ಏನಿರಲ್ಲ..? ಇಲ್ಲಿದೆ ಡೀಟೇಲ್ಸ್

Spread the love

ಬೆಂಗಳೂರು-ರಾಜ್ಯವನ್ನೇ ತಲ್ಲಣಗೊಳಿಸಿರುವ ಮಹಾಮಾರಿ ಕೊರೊನಾ ನಿಯಂತ್ರಣಕ್ಕಾಗಿ ನಾಳೆಯಿಂದ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆ ಸಂಪೂರ್ಣವಾಗಿ ಸ್ತಬ್ಧಗೊಳ್ಳಲಿದ್ದು, ಅದಕ್ಕಾಗಿ ರಾಜ್ಯ ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟಗೊಂಡಿವೆ.

ಕಂಟೈನ್‍ಮೆಂಟ್ ಝೋನ್ ಹೊರತುಪಡಿಸಿ ಉಳಿದು ಭಾಗಗಳಲ್ಲಿ ಕೆಲವು ವಿನಾಯ್ತಿಗಳನ್ನು ಸರ್ಕಾರ ನೀಡಿದೆ. ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಎರಡೂ ಜಿಲ್ಲೆಗಳಲ್ಲಿ ಲಾಕ್ ಡೌನ್ ಘೋಷಣೆ ಮಾಡಲಾಗಿದೆ.

ಈ ಜಿಲ್ಲೆಗಳಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ನಿಯಂತ್ರಣಕ್ಕಾಗಿ ಲಾಕ್ ಡೌನ್ ವಿಧಿಸಲಾಗಿದೆ. ಈ ಒಂದು ವಾರದೊಳಗೆ ವ್ಯವಸ್ಥೆಗಳನ್ನು ಸರಿಪಡಿಸಿಕೊಂಡು, ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸ್ಪಷ್ಟವಾಗಿ ಸೂಚಿಸಿದ್ದಾರೆ.ಜುಲೈ 14ರ ಮಂಗಳವಾರ ರಾತ್ರಿ 8 ಗಂಟೆಯಿಂದ ಜುಲೈ 22ರ ಸಂಜೆ 5 ಗಂಟೆ ತನಕ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಲಾಕ್ ಡೌನ್ ಜಾರಿಯಲ್ಲಿರುತ್ತದೆ. ಸರ್ಕಾರದ ಎಲ್ಲಾ ಕಚೇರಿಗಳು ಸಹ ಈ ಅವಧಿಯಲ್ಲಿ ಬಾಗಿಲು ಮುಚ್ಚಿರಲಿವೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಲಾಕ್ ಡೌನ್‌ನಿಂದ ಆರೋಗ್ಯ, ವೈದ್ಯಕೀಯ ಶಿಕ್ಷಣ, ಪೊಲೀಸ್, ಹೋಂ ಗಾರ್ಡ್, ಸಿವಿಲ್ ಡಿಫೆನ್ಸ್, ಅಗ್ನಿ ಶಾಮಕ, ತುರ್ತು ಸೇವೆಗಳು, ಬಿಬಿಎಂಪಿ ಮತ್ತು ಕಾರಾಗೃಹ ಇಲಾಖೆಗೆ ವಿನಾಯಿತಿ ನೀಡಲಾಗಿದೆ. ಬಿಬಿಎಂಪಿ ಸೇರಿದಂತೆ ಇತರ ಸರ್ಕಾರಿ ಕಚೇರಿಗಳಿಗೆ ವಿನಾಯಿತಿ ಇದೆ.

ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್​ ಸಂಚಾರ ಸಂಪೂರ್ಣವಾಗಿ ಬಂದ್​ ಆಗಲಿದ್ದು, ಮಾಲ್​, ಶಾಪಿಂಗ್​ ಮಾಲ್​​ ತೆರೆಯುವಂತಿಲ್ಲ. ಬಾರ್​-ವೈನ್​ ಶಾಪ್​ ಬಂದ್​ ಆಗಲಿವೆ.ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಹೊಸ ಮಾರ್ಗಸೂಚಿ ಪ್ರಕಾರ, ಆರೋಗ್ಯ, ವೈದ್ಯಕೀಯ ಸೇವೆ ಲಭ್ಯವಿರಲಿದೆ.

ಬ್ಯಾಂಕ್​, ಎಟಿಎಂ, ಪೆಟ್ರೋಲ್​ ಪಂಪ್​ ಕಾರ್ಯ ನಿರ್ವಹಣೆ ಮಾಡಲಿವೆ. ವಾಣಿಜ್ಯ, ಖಾಸಗಿ ಸಂಸ್ಥೆ ಸಂಪೂರ್ಣವಾಗಿ ಮುಚ್ಚಲಿವೆ. ಹೊಟೇಲ್​ ಬಂದ್​ ಆಗಲಿದ್ದು, ಪಾರ್ಸೆಲ್​ಗಳಿಗೆ ಅವಕಾಶ ಸಿಗಲಿದೆ.

ರಾಜ್ಯ ಸರ್ಕಾರದ ಕಚೇರಿ ಮತ್ತು ಅವುಗಳ ಸ್ವಾಯತ್ತ ಸಂಸ್ಥೆಗಳು ಮುಚ್ಚಲಿವೆ.ಟ್ಯಾಕ್ಸಿ ಮತ್ತು ಆಟೋ ರಿಕ್ಷಾ ಪ್ರಯಾಣ ಅನುಮತಿ ಇರಲಿದ್ದು, ಹೊಸ ವಿಮಾನ, ರೈಲು ಸಂಚಾರಕ್ಕೆ ಅವಕಾಶ ನೀಡಿಲ್ಲ.

ಶಾಲೆ- ಕಾಲೇಜ್​, ಶಿಕ್ಷಣ/ಕೋಚಿಂಗ್​ ಸಂಸ್ಥೆಗಳು ಬಂದ್​ ಆಗಲಿದ್ದು, ರೆಸ್ಟೋರೆಂಟ್​​ ಸಂಪೂರ್ಣವಾಗಿ ಮುಚ್ಚಲಿವೆ.ಸಿನಿಮಾ ಮಂದಿರ, ಶಾಪಿಂಗ್​ ಮಾಲ್​, ಜಿಮ್​, ಸ್ಟೇಡಿಯಂಗಳು, ಮನರಂಜನಾ ಉದ್ಯಾನಗಳು, ರಂಗಮಂದಿರ, ಬಾರ್​​ಗಳು, ಧಾರ್ಮಿಕ ಸ್ಥಳಗಳು ಬಂದ್​ ಆಗಲಿವೆ.

ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ವಿಧಿಸಲಾಗಿರುವ 1 ವಾರದ ಲಾಕ್ ಡೌನ್ ಅನ್ನು ವಿಸ್ತರಿಸುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ. ಜನರು ಆತಂಕಪಡದೆ, ವದಂತಿಗಳಿಗೆ ಕಿವಿಗೊಡದೆ, ಸಹಕರಿಸಬೇಕೆಂದು ಸಿಎಂ ಕೋರಿದ್ದಾರೆ.

ಇದೇ ವೇಳೆ ಧಾರವಾಡದಲ್ಲಿ ಹತ್ತು ದಿನ ಹಾಗೂ ದಕ್ಷೀನ ಕನ್ನಡದಲ್ಲಿ ಒಂದು ವಾರ ಲಾಕ್‌ಡೌನ್‌ ಅನ್ನು ಸ್ಥಳೀಯಾಡಳಿತ ಹೇರಿದೆ.

# ಏನೇನಿರುತ್ತೆ ..?
ಎಲ್ಲಾ ರೀತಿಯ ಕೃಷಿ ಚಟುವಟಿಕೆಗಳಿಗೆ ಅವಕಾಶ, ಕೃಷಿ ಏಜೆನ್ಸಿ, ರಸಗೊಬ್ಬರ ಮಾರುಕಟ್ಟೆ, ಕೃಷಿ ಗೊಬ್ಬರ, ಹಣ್ಣು ತರಕಾರಿ ಮಾರುಕಟ್ಟೆಗೆ ಅವಕಾಶ, ಮೀನುಗಾರಿಕೆ ಹಾಗೂ ಪಶುಸಂಗೋಪನೆ ಚಟುವಟಿಕೆಗೆ ಅವಕಾಶ, ಸರಕು ಸಾಗಾಟದ ವಾಹನಗಳಿಗೆ ಅವಕಾಶ, ಈಗಾಗಲೇ ವಿಮಾನ ಅಥವಾ ರೈಲು ಟಿಕೆಟ್ ನ್ನು ಮುಂಗಡವಾಗಿ ಬುಕ್ ಮಾಡಿದ್ರೆ ಆ ಟಿಕೆಟ್ ನ್ನು ತೋರಿಸಿ ಪ್ರಯಾಣಿಕರು ಪ್ರಯಾಣ ಮಾಡಬಹುದು, ಆದರೆ ಇನ್ನುಮುಂದೆ ಟಿಕೆಟ್ ಬುಕ್ಕಿಂಗ್ ಅವಕಾಶ ಇಲ್ಲ

ನಿಗದಿತ ದಿನಾಂಕದಂದೆ ಪರೀಕ್ಷೆ ನಡೆಯಲಿದೆ, ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಪಾರ್ಸೆಲ್ ಗೆ ಮಾತ್ರ ಅವಕಾಶ, ಎಲ್ಲಾ ವೈದ್ಯಕೀಯ ಸೇವೆ, ಮೆಡಿಕಲ್ ಶಾಪ್ ಓಪನ್, ಬೀಜ ಗೊಬ್ಬರ ಅಂಗಡಿಗಳು ಓಪನ್, ) ಕೊರೊನಾ ವಾರಿಯರ್ಸ್ ಗಳಿಗೆ ಮಾತ್ರ ಓಡಾಟಕ್ಕೆ ಅವಕಾಶ. ಜನರು ಕರ್ನಾಟಕದ ಹೊರಗೆ ಹೋಗಬೇಕಾದರೆ ಸೇವಾ ಸಿಂಧು ಮೂಲಕ ಪಾಸ್ ಪಡೆಯಬೇಕು.

# ಏನೇನಿರಲ್ಲ :
ಮೆಟ್ರೋ, ಆಟೋ ಕ್ಯಾಬ್, ಟಾಕ್ಸಿ ಇಲ್ಲ, ಜಿಮ್, ಸ್ಟೇಡಿಯಂ, ಕಾಂಪ್ಲೆಕ್ಸ್, ಸಮುದಾಯ ಭವನ ಬಂದ್, ಥಿಯೇಟರ್, ಬಾರ್, ಬಂದ್, ಎಲ್ಲಾ ಧಾರ್ಮಿಕ, ರಾಜಕೀಯ, ಸಭೆ ಸಮಾರಂಭ ಬಂದ್, ಧಾರ್ಮಿಕ ಸ್ಥಳ, ಪೂಜಾ ಸ್ಥಳ, ಮಂದಿರ ಬಂದ್, ಧಾರ್ಮಿಕ ಪೂಜೆಗಳು ಬಂದ್

ವಾಣಿಜ್ಯ ಖಾಸಗಿ ಸಂಸ್ಥೆಗಳು ಬಂದ್, ಕೆ ಎಸ್ ಆರ್ ಟಿಸಿ ಹಾಗೂ ಬಿಎಂಟಿಸಿ ಬಸ್ ಹಾಗೂ ಖಾಸಗಿ ಬಸ್ ಗಳು ರಸ್ತೆಗಿಳಿಯೋಲ್ಲ, ಕೇಂದ್ರ ಕಚೇರಿಗಳು ಬಂದ್, ಎಲ್ಲಾ ವೈದ್ಯಕೀಯ ಸೇವೆ, ತುರ್ತು ಸೇವೆ, ರೋಗಿಗಳಿಗೆ, ಆಂಬುಲೆನ್ಸ್ ಗೆ ಮುಕ್ತ ಅವಕಾಶ,

ಬೈಕ್, ಕಾರು ಸಂಚಾರ ಇಲ್ಲ , ) ಸಾರ್ವಜನಿಕ ಸಾರಿಗೆ ಇಲ್ಲ , ಮೊಬೈಲ್ ಶಾಪ್, ಎಲೆಕ್ಟ್ರಿಲ್ ಶಾಪ್, ಇಲ್ಲ, ) ಮದುವೆ ಇನ್ನಿತರ ಕಾರ್ಯಕ್ರಮಕ್ಕೆ ಅವಕಾಶ ಪಡೆಯಬೇಕು, ) ವಿಕಾಸಸೌಧ ಹಾಗೂ ವಿಧಾನಸೌಧದಲ್ಲಿ 50 ಪರ್ಸೆಂಟ್ ಸಿಬ್ಬಂದಿ ಮಾತ್ರ ಕೆಲಸ ಮಾಡಲು ಅನುಮತಿ,  ಕರ್ನಾಟಕದ ಹೊರಗೆ ಹೋಗಬೇಕಾದರೆ ಸೇವಾ ಸಿಂಧು ಮೂಲಕ ಪಾಸ್ ಪಡೆಯಬೇಕು, ವಾಣಿಜ್ಯ, ಖಾಸಗಿ ಸಂಸ್ಥೆ ಬಂದ್

 


Spread the love

About Laxminews 24x7

Check Also

ವೀರಶೈವ-ಲಿಂಗಾಯತ ಒಬಿಸಿ ಸೇರ್ಪಡೆಗೆ ಒತ್ತಾಯ

Spread the love ಬೆಂಗಳೂರು: ಜಾತಿ ಗಣತಿ (ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ) ವರದಿಯನ್ನು ಮುಂದಿನ ಸಚಿವ ಸಂಪುಟದಲ್ಲಿ ಕೈಗೆತ್ತಿಕೊಳ್ಳಲು ಸರಕಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ