ಬೆಳಗಾವಿ : ಕಾಂಗ್ರೆಸ್ ವಿರುದ್ಧ ಮಾಜಿ ಸಿಎಂ ಹೆಚ್ .ಡಿ .ಕುಮಾರಸ್ವಾಮಿ ಮಾಡಿದ ಆರೋಪಕ್ಕೆ ಶಾಸಕ ಸತೀಶ್ ಜಾರಕಿಹೊಳಿ ಶನಿವಾರ ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ.
ಕಾಂಗ್ರೆಸ್ ನವರ ಸಹವಾಸ ಮಾಡಿ ನಾವಿಂದು ಸರ್ವನಾಶವಾಗಿದ್ದೇವೆ. ಸಿದ್ದರಾಮಯ್ಯ ಅವರ ಪ್ರೀ ಪ್ಲ್ಯಾನ್ ಟ್ರ್ಯಾಪ್ ನಲ್ಲಿ ಸಿಲುಕಿ ಅಧಿಕಾರ ಕಳೆದುಕೊಂಡೆ ಎಂದು ಕುಮಾರಸ್ವಾಮಿ ಆರೋಪ ಮಾಡಿದ್ದರು.
ಈ ವಿಚಾರವಾಗಿ ಮಾತನಾಡಿ, ಈ ವಿಚಾರದ ಬಗ್ಗೆ ಅವರನ್ನೇ ಕೇಳಬೇಕು. ಅದೆಲ್ಲ ಮುಗಿದ ಹೋದ ಅಧ್ಯಾಯ. ಅದರ ಬಗ್ಗೆ ಮಾತನಾಡುವುದು ಅವಶ್ಯಕತೆ ಇಲ್ಲ ಎಂದಿದ್ದಾರೆ.
ಈಗ ಕುಮಾರಸ್ವಾಮಿ ಅವರು ಮಾತನಾಡುವುದು ಅವಶ್ಯವಿಲ್ಲ. ಚರ್ಚೆ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಅದರ ಸತ್ಯ ತಿಳಿಯಲು ಕಮೀಟಿ ಮಾಡಬೇಕಾಗುತ್ತದೆ. ಸತ್ಯ ಶೋಧನಾ ಕಮಿಟಿ ತರಾ ಎಂದು ವ್ಯಂಗ್ಯವಾಗಿದ್ದಾರೆ.
ಸಮೀಶ್ರ ಸರ್ಕಾರದಲ್ಲಿ ಅವರಿಗೆ, ನಮಗೆ ಏನಾಗಿದೆ ಅಂತಾ ಯಾರಿಗೆ ಗೊತ್ತು. ಈಗಾ ಅದು ಚರ್ಚೆ ಮಾಡೋದಿಲ್ಲ ಎಂದು ಹೇಳಿದರು.
Laxmi News 24×7